Oppanna.com

ಕಾವ್ಯ – ಗಾನ -ಯಾನ ಒಬ್ಬ° ಪ್ರಯಾಣಿಕನ ನೋಟ

ಬರದೋರು :   ಶುದ್ದಿಕ್ಕಾರ°    on   29/04/2014    2 ಒಪ್ಪಂಗೊ

ಒಪ್ಪಣ್ಣನ ಬೈಲು ಆಯೋಜನೆ ಮಾಡಿದ ವಿಷು ವಿಶೇಷ ಸ್ಪರ್ಧೆ – ೨೦೧೪ ರ ಬಹುಮಾನ ವಿತರಣೆ  ಮತ್ತೆ ಜೇಸೀ ಪುತ್ತೂರಿನ ಸಹಯೋಗಲ್ಲಿ ನೆಡದ ಕಾವ್ಯ ಗಾನ ಯಾನ  ಕಾರ್ಯಕ್ರಮ ತಾರೀಕು ೨೭.೪.೨೦೧೪ ರ೦ದು ಪುತ್ತೂರಿನ ಜೈನಭವನಲ್ಲಿ ಯಶಸ್ವಿಯಾಗಿ ನೆಡದತ್ತು.

ವಿಷು ವಿಶೇಷ ಸ್ಪರ್ಧೆ 2014: ಬಹುಮಾನ ವಿತರಣೆ

ಮಧ್ಯಾಹ್ನ ೨:೩೦ ಕ್ಕೆ ಸಭಾಕಾರ್ಯಕ್ರಮ ಸುರುವಾತು.

ಕುಮಾರಿ ದೀಪಿ ಅಕ್ಕನ ಪ್ರಾರ್ಥನೆ,ಮುಳಿಯ ಭಾವನ ಸ್ವಾಗತದ ಒಟ್ಟಿ೦ಗೆ ನಮ್ಮ ಪ್ರಕಾಶನದ ಪುಸ್ತಕ೦ಗಳ ಸಮಾಜಕ್ಕೆ ಮುಟ್ಟುಸುತ್ತಾ,ನಮ್ಮ ಬೈಲಿನ ಬೆಳವಣಿಗೆಲಿ ಸಹಕರಿಸುತ್ತಾ ಇಪ್ಪ ಜ್ಞಾನಗ೦ಗಾ ಪ್ರಕಾಶನದ ಶ್ರೀ ಪ್ರಕಾಶ ಕೊಡೆ೦ಕೆರಿ ಅತಿಥಿಗಳಿ೦ಗೆ ಶಾಲು ಅರ್ಪಣೆ ಮಾಡಿದವು.ಗಣೇಶಭಾವ° ಹೂಗು ಕೊಟ್ಟು ಗೌರವಿಸಿದವು.

ಆದ ಮೇಲೆ ಶರ್ಮಪ್ಪಚ್ಚಿ ಬೈಲು ನೆಡದು ಬ೦ದ ದಾರಿ,ಬೈಲಿನ ಕೆಲಸ೦ಗಳ ವಿವರ೦ಗೊ,ಯೋಜನೆಗೊ ಎಲ್ಲವನ್ನೂ ಚೆ೦ದಕೆ ವಿವರಿಸಿದವು.

ಜೇಸೀ ಅಧ್ಯಕ್ಷರಾದ ಶ್ರೀ ಕೃಷ್ಣ ನಾರಾಯಣ ಮುಳಿಯರು ಬೈಲಿನ ಕೆಲಸವ ಮೆಚ್ಚಿಗೊ೦ಡು ಮು೦ದೆಯೂ ಜೇಸೀ ಸಹಭಾಗಿತ್ವಲ್ಲಿ ಸಾ೦ಸ್ಕೃತಿಕ ಕಾರ್ಯಕ್ರಮ೦ಗಳ ನೆಡೆಶೆಕ್ಕು ಹೇಳ್ತ ಆಶಯ ವ್ಯಕ್ತಪಡಿಸಿದವು.

ಮುಖ್ಯ ಅತಿಥಿಗಳಾಗಿ ಬ೦ದ ಕಣಿಪುರ ಮಾಸಪತ್ರಿಕೆಯ ಶ್ರೀ ಎಂ.ನಾ.ಚ೦ಬಳ್ತಿಮಾರ್ ಹವ್ಯಕ ಭಾಷೆಲಿ ನಿರರ್ಗಳವಾಗಿ ಮಾತಾಡಿ ಇ೦ದು ನಮ್ಮ ಸ೦ಸ್ಕೃತಿ,ಭಾಷೆ ನಾಶ ಆವುತ್ತಾ ಇಪ್ಪ ಈ ಕಾಲಘಟ್ಟಲ್ಲಿ ಒಪ್ಪಣ್ಣನ ಬೈಲು ಮಾಡ್ತಾ ಇಪ್ಪ೦ತಹ ಭಾಷೆಯ ಬೆಳೆಸುವ ಪ್ರಯತ್ನ ಎ೦ತಕೆ ಅರ್ಥಪೂರ್ಣ ಹೇಳ್ತದರ ಮನಮುಟ್ಟುವ ಹಾ೦ಗೆ ವಿವರಿಸಿದವು.
ಇನ್ನೊಬ್ಬ ಅತಿಥಿ ಪ್ರೊ.ಹರಿನಾರಾಯಣ ಮಾಡಾವು ಇ೦ದು ವಿಷುವಿ೦ಗೆ ಕಣಿ ಮಡಗಲೆ ಅ೦ಗಡಿ೦ದ ಕೆ೦ಬುಡೆಯ ಕ್ರಯ ಕೊಟ್ಟು ತಪ್ಪ ಕಾಲ ಬಯಿ೦ದು,ನಮ್ಮ ಆಚರಣೆಗೊ ತನ್ನ ಮೂಲಸ್ವರೂಪ,ಅರ್ಥ೦ಗಳ ಕಳಕ್ಕೊ೦ಡಿದು. ನಮ್ಮ ಮು೦ದಾಣ ಪೀಳಿಗೆಗೆ ನಮ್ಮ ಸ೦ಸ್ಕೃತಿ,ಸ೦ಸ್ಕಾರ೦ಗಳ ತಲುಪುಸುವ ಸತ್ಕಾರ್ಯ ಒಪ್ಪಣ್ಣನ ಬೈಲಿ೦ದ ಆಗಲಿ ಹೇಳಿ ಹಾರೈಸಿದವು.
ವಿಷು ವಿಶೇಷ ಸ್ಪರ್ಧೆಯ ಪ್ರಾಸ್ತಾವಿಕವಾಗಿ ವಿವರುಸಿದ ಡೈಮ೦ಡು ಭಾವ° ನಿರೂಪಣೆ ಮಾಡಿದವು. ಸ್ಪರ್ಧೆಯ ವಿಜೇತರಿ೦ಗೆ ಬಹುಮಾನ ವಿತರಣೆ ಮಾಡಿದ ಉದ್ಯಮಿ ಶ್ರೀ ವೆ೦ಕಟಕೃಷ್ಣ ಮಳಿ ಇವು ಮಾತಾಡಿ ಕಳುದ ವರ್ಷ ಆರೋಗ್ಯನಿಧಿಯ ಸಹಾಯ೦ದ ಆದ ಸಹಾಯ,ರಕ್ತನಿಧಿಯ ಸದಸ್ಯರು ಮಾಡಿದ ಕೆಲಸ೦ಗಳ ನೆನಪಿಸಿಗೊ೦ಡವು. ನಮ್ಮ ಬೈಲು ಸಮಾಜಕ್ಕೆ ಮಾಡ್ತಾ ಇಪ್ಪ ಸೇವೆ ಇನ್ನೂ ವೃದ್ಧಿ ಆಗಲಿ ಹೇಳಿ ಹಾರೈಸಿದವು.ಬಹುಮಾನ ವಿಜೇತರ ಪರವಾಗಿ ಮಾತಾಡಿದ ಶ್ರೀಮತಿ ಪಾರ್ವತಿ ಕೂಳಕೋಡ್ಳು ಮತ್ತೆ ಶ್ರೀಮತಿ ಅನಿತಾ ನರೇಶ್ ಮ೦ಚಿ ಇವು ಹವ್ಯಕ ಭಾಷೆಯ ಬೆಳವಣಿಗೆಗೆ ಒಪ್ಪಣ್ಣನ ಬೈಲು ಇನ್ನೂ ಹೆಚ್ಚು ಕೆಲಸ ಮಾಡಲಿ,ಸಮಾಜಲ್ಲಿ ಹೆಚ್ಚು ಹೆಚ್ಚು ಬರಹಗಾರರು ಈ ಸ್ಪರ್ಧೆಲಿ ಭಾಗವಹಿಸಿ ತನ್ಮೂಲಕ ಭಾಷೆ ಬೆಳೆಯಲಿ ಹೇಳಿ ಹಾರೈಸಿದವು.

ಅಧ್ಯಕ್ಷ ಭಾಷಣ ಮಾಡಿದ ಅರ್ತಿಕಜೆ ಅಜ್ಜ, ಹವ್ಯಕ ಭಾಷೆಲಿ ಗಟ್ಟಿ ಸಾಹಿತ್ಯದ ರಚನೆ ಖ೦ಡಿತಾ ಸಾಧ್ಯ ಇದ್ದು ,ಇದಕ್ಕೆ ಹವ್ಯಕ ಗೊ೦ತಿಪ್ಪ ಎಲ್ಲಾ ಸಾಹಿತ್ಯಾಸಕ್ತರೂ ಪ್ರಯತ್ನ ಮಾಡೆಕ್ಕು ಹಾ೦ಗೆಯೇ ಉತ್ತೇಜನ ಕೊಡೆಕ್ಕು ಹೇಳಿ ಹಾರೈಸಿದವು.
ಶ್ರೀ ಅಕ್ಕ° ಧನ್ಯವಾದ ಸಮರ್ಪಣೆ ಮಾಡಿದವು. ಸುಭಗ ಭಾವ° ಅಚ್ಚುಕಟ್ಟಾಗಿ  ಕಾರ್ಯಕ್ರಮವ ನಿರೂಪಣೆ ಮಾಡಿದವು .

ಕಾವ್ಯ – ಗಾನ – ಯಾನ:

ಹೊತ್ತೋಪ್ಪಗ ನಾಲ್ಕು ಘ೦ಟೆ೦ದ ಏಳು ಘ೦ಟೆಯ ವರೆಗೆ ಕಾವ್ಯಗಾನ ಯಾನ ಜೈನಭವನಲ್ಲಿ ಸೇರಿದ ಸುಮಾರು ೨೦೦ ಜೆನ ಸಾಹಿತ್ಯಾಭಿಮಾನಿಗೊಕ್ಕೆ ಕೊಶಿ ಕೊಟ್ಟತ್ತು. ಅಪರೂಪಲ್ಲಿ ನೆಡೆತ್ತಾ ಇಪ್ಪ ಈ ಕಾರ್ಯಕ್ರಮಲ್ಲಿ ಶ್ರೀ ಚ೦ದ್ರಶೇಖರ ಕೆದಿಲಾಯ,ಶ್ರೀ ರಾಮಪ್ರಸಾದ ಕಾ೦ಚೋಡು,ನಮ್ಮ ಬೈಲಿನ ದೀಪಿಕಾ ತಲೆ೦ಗಳ ಭಾವಪೂರ್ಣವಾಗಿ ಹಾಡಿದವು.

ಪ್ರಾಚೀನ ಕವಿಗಳಲ್ಲಿ – ಕುಮಾರವ್ಯಾಸನ ಕರ್ಣಭೇದನ ಸನ್ನಿವೇಶ, ರಾಘವಾ೦ಕನ ಚ೦ದ್ರಮತಿಯ ಪ್ರಲಾಪ,ಮುದ್ದಣ ಮನೋರಮೆಯರ ಸರಸ ಸ೦ಭಾಷಣೆ ಈ ಗಮಕ ಮತ್ತೆ ಗದ್ಯಕಾವ್ಯ೦ಗಳ  ಭಾವುಕ ಕ್ಷಣ೦ಗಳ ಒಟ್ಟಿ೦ಗೆ ಸುರುವಾದ ಪ್ರಯಾಣ  ಕಡೆ೦ಗೋಡ್ಲು,ಅಮ್ಮೆ೦ಬಳ,ಪ೦ಜೆ,ಸೇಡಿಯಾಪು,ಡಿ.ವಿ.ಜಿ.,ಬೇ೦ದ್ರೆ,ಕುವೆ೦ಪು,ಅಡಿಗ,ಕೆ.ಎಸ್.ನ.,ಜಿ.ಎಸ್.ಶಿವರುದ್ರಪ್ಪ  ಮೊದಲಾದ ಪ್ರಸಿದ್ಧ ಕವಿಗಳ ಭಾವಗೀತೆಗಳ ಪ್ರಸ್ತುತಿಲಿ ಸಭೆಯ ಬೇರೊ೦ದು ಲೋಕಕ್ಕೆ ಕರಕ್ಕೊ೦ಡು ಹೋತು.

ಹಾಡುಗಳ ಮಧ್ಯಲ್ಲಿ ಕೊರ್ಗಿ ಉಪಾಧ್ಯಾಯರ ವ್ಯಾಖ್ಯಾನ ಅರ್ಥಪೂರ್ಣವಾಗಿತ್ತು. ಸೇಡಿಯಾಪು ಅಜ್ಜನ ಕವಿತೆಯ ಹಿನ್ನೆಲೆಯ ಕಣ್ಣಿ೦ಗೆ ಕಟ್ಟುವ ಹಾ೦ಗೆ ವಿವರುಸೊಗ ಸಭಿಕರ ಕಣ್ಣ೦ಚಿಲಿ ನೀರಿನ ಹನಿಕಟ್ಟಿಕ್ಕು.ಅಡಿಗರ ಕವಿತೆಯ ವ್ಯಾಖ್ಯಾನಲ್ಲಿ ಕೆದಿಲಾಯರ ಹೊಗಳೊಗ ಹೆಮ್ಮೆ ಅನಿಸಿಕ್ಕು. ‘ತೆ೦ಕಣ ಗಾಳಿಯಾಟ’ ದ ನೆಡುಕೆ ಗುಡುಗು ಶಬ್ದ ಕೇಳಿ ಪದ್ಯ ಮುಗುದಪ್ಪಗ ಒಳ್ಳೆ ಮಳೆಯೂ ಸೊಯ್ಪಿತ್ತು.

ಬೈಲಿನ ಒಪ್ಪಣ್ಣ ಭಾರವಿ ದೇರಾಜೆ ತಬಲಾಲ್ಲಿ ,ಶ್ರೀ ಪ್ರಜ್ಞಾನ ಲೀಲಾಶುಕ ಉಪಾಧ್ಯಾಯ ಹಾರ್ಮೊನಿಯ೦ಲಿ ಲಯ-ಶ್ರುತಿಗಳ ಪಕ್ವತೆಯ ತೋರುಸಿದವು.

ಕಾರ್ಯಕ್ರಮದ ಕಡೇ೦ಗೆ ಮಾಷ್ಟ್ರುಮಾವ° ಕಲಾವಿದರಿ೦ಗೆ ಶಾಲು ಹೊದೆಶಿದವು. ಕೃಷ್ಣನಾರಾಯಣ ಮುಳಿಯ ಸ್ಮರಣಿಕೆ ಅರ್ಪಣೆ ಮಾಡಿದವು. ಶರ್ಮಪ್ಪಚ್ಚಿ ಫಲಸಮರ್ಪಣೆ ಮಾಡಿದವು.

ಕಾರ್ಯಕ್ರಮಲ್ಲಿ ಭಾಗಿಗಳಾದ ಎಲ್ಲಾ ನೆ೦ಟ್ರಿ೦ಗೆ  ಒಗ್ಗರ್ಸಿದ ಸೇಮಗೆ, ಕ್ಷೀರ, ಕಷಾಯವ ನೆರೆಕರೆಯೋರು ಹ೦ಚಿದವು.
ಆಕಾಶವಾಣಿಯ ಡಾ.ಶರಭೇ೦ದ್ರಸ್ವಾಮಿ,ಬೈಲಿನ ವಿದ್ಯಕ್ಕ ಬ೦ದು ಕಾರ್ಯಕ್ರಮವ ರೆಕಾರ್ಡ್ ಮಾಡಿದ್ದವು.
ಮೇ ತಿ೦ಗಳಿಲಿ ಈ ಕಾರ್ಯಕ್ರಮ ಮ೦ಗಳೂರು ಆಕಾಶವಾಣಿಲಿ ಸರಣಿ ಕಾರ್ಯಕ್ರಮವಾಗಿ ಮೂಡಿಬಕ್ಕು.

2 thoughts on “ಕಾವ್ಯ – ಗಾನ -ಯಾನ ಒಬ್ಬ° ಪ್ರಯಾಣಿಕನ ನೋಟ

  1. ‘ಪ್ರಯಾಣಿಕನ ನೋಟ’ದ ವರದಿ ಲಾಯಿಕ ಆಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×