- ತೆಂಕಲಾಗಿಂದ ಹೇಳಿಕೆ ಬಂತು - November 5, 2012
- ಮಡಿಕೇರಿ ಆಕಾಶವಾಣಿಲಿ “ಇರ್ತಲೆ” ಬಗ್ಗೆ ಸುಭಗಣ್ಣನ ಸಂದರ್ಶನ - October 8, 2012
- ಈ ಪದ್ಯದ ಛಂದಸ್ಸು, ಆಶಯ ಗುರುತುಸಿ!! - February 29, 2012
ನಮ್ಮ ಪರಮಪೂಜ್ಯ ಗುರುಗೊಕ್ಕೆ ಅತ್ಯಂತ ಪ್ರೀತಿಪಾತ್ರ ಆಗಿದ್ದ ಮಹಾನಂದಿ ಯ ಶುದ್ದಿ ಅವನ ದೇಹಾಂತ್ಯ ಆದ ಸಂದರ್ಭಲ್ಲಿ ಗುರಿಕ್ಕಾರ್ರು ಬರದಿತ್ತಿದ್ದವು. ಗೋಸೇವಾ ಆಂದೋಲನಕ್ಕೆ ಶ್ರೀಗುರುಗಳಿಂಗೆ ಮೂಲಪ್ರೇರಣೆ ಕೊಟ್ಟ ಆ ಮಹಾಚೇತನಕ್ಕೆ ಶಾಶ್ವತ ಗೌರವ ಒದಗುಸುಲೆ ಬೇಕಾಗಿ ನಮ್ಮ ಹೊಸನಗರ ಮಠಲ್ಲಿಪ್ಪ ವಿಶ್ವಖ್ಯಾತಿಯ ಗೋಶಾಲೆಗೆ ಶ್ರೀಗುರುಗೊ ಮಹಾನಂದಿ ಗೋಶಾಲೆ ಹೇಳಿ ನಾಮಕರಣ ಮಾಡಿದ್ದವು. ಅಲ್ಲಿ ಈ ಸಂತವೃಷಭನ ಸಮಾಧಿ ನಿರ್ಮಾಣಕ್ಕೂ ಶ್ರೀಗುರುಗೊ ನಿರ್ದೇಶನ ಮಾಡಿದ್ದವು.
ಅಷ್ಟೇ ಅಲ್ಲ; ಈ ಚಾತುರ್ಮಾಸ್ಯಂದ ಇನ್ನಾಣ ಚಾತುರ್ಮಾಸ್ಯದ ವರೆಗೆ ಇಪ್ಪ ಒಂದು ವರ್ಷ ಅವಧಿಯ ವಿವಿಧ ರೀತಿಯ ಗೋಸೇವಾ ಚಟುವಟಿಕೆಗಳ ಮೂಲಕ ಮಹಾನಂದಿ ವರ್ಷ ಹೇಳಿ ಆಚರುಸಲೆ ಶ್ರೀ ಗುರುಗೊ ಆದೇಶ ಕೊಟ್ಟಿದವು. ಇದರಲ್ಲಿ ಸುರೂವಾಣ ಕಾರ್ಯಕ್ರಮ ‘ಮಹಾನಂದಿ ಸಂಸ್ಮರಣೆ’. ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ ಮಹಾನಂದಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಪ್ರವಚನ, ಸಂದೇಶ ವಾಚನ, ಗೋಸೇವಾ ಪ್ರತಿಜ್ಞೆ ಬೋಧನೆ, ಗವ್ಯೋತ್ಪನ್ನ ಮಾರಾಟ ಕೇಂದ್ರದ ಆರಂಭ- ಹೀಂಗಿರ್ತ ಹಲವು ವಿಷಯಂಗಳ ಸಂಯೋಜನೆ ಮಾಡಿ ಸಾರ್ವಜನಿಕ ಸಂಘ ಸಂಸ್ಠೆಗಳ ಸಹಯೋಗಲ್ಲಿ ನಮ್ಮ ಎಲ್ಲಾ ಹವ್ಯಕ ಮಂಡಲ/ವಲಯಂಗೊ ಕಾರ್ಯೋನ್ಮುಖರಾಯೆಕ್ಕು ಹೇಳುದು ಶ್ರೀಗುರುಗಳ ನಿರ್ದೇಶನ.
ಆ ಪ್ರಕಾರ ನಮ್ಮ ಮಂಗಳೂರು, ಉಪ್ಪಿನಂಗಡಿ, ಮುಳ್ಳೇರಿಯ ಮಂಡಲಂಗಳ ಕೆಲವು ವಲಯಂಗಳಲ್ಲಿ ನೆಡದ ಕಾರ್ಯಕ್ರಮಂಗಳ ಪಟಂಗೊ ಇಲ್ಲಿದ್ದು.
ಒಳ್ಳೆಯ ಕಾರ್ಯಕ್ರಮಂಗೊ.
ಮುರಳಿಕೃಷ್ಣಣ್ಣಾ, ನಿಂಗಳ ಅನುಭವ ನಿರೂಪಣೆ ಒಳ್ಳೆದಾಯಿದು.
ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಗೋ ಹತ್ಯೆಯ ವಿರೋಧಿಸಿ ಊರಿನ ಒಳುಶೆಕ್ಕು.
kasaragodscience.blogspot.com ನೋಡಿ
ಶುದ್ದಿ ತುಂಬಾ ಕುಶಿ ಕೊಟ್ಟತ್ತು. ಮಹಾನಂದಿಗೆ ನಮ್ಮದು ಪ್ರಣಾಮಂಗೊ. ಹರೇ ರಾಮ.
ಶುದ್ದಿ ಓದಿ ಕೊಶಿ ಆತು.ಮಹಾನಂದಿಗೆ ಪ್ರಣಾಮಂಗೋ…ಹರೇರಾಮ
ಒಳ್ಳೆ ನಿರೂಪಣೆ, ಚಿತ್ರಂಗೊ:)
ಮಹಾನಂದಿಯ ಸಂಸ್ಮರಣೆಲಿ ಒಂದು ಒಳ್ಳೆ ಕೆಲಸಕ್ಕೆ ನಾಂದಿ ಹಾಕಿದ ಶುದ್ದಿ ಲಾಯಕಲ್ಲಿ ಬಯಿಂದು.
ಹರೇ ರಾಮ.
ಎಂದೆಂದೂ ನಂದದ ನಂದಾದ ದೀಪಕ್ಕೆ ನಾಂದಿ ಹಾಡಿದ ಈ ನಂದಿ ನಿಜಕ್ಕೂ ಮಹಾನಂದಿ
ಶುದ್ದಿ ಓದಿ ಖುಶೀ ಆತು. ಫಟ ಅಂತೂ ….. ಹರೇ ರಾಮ.