ಬರದೋರು :   ಸುಬ್ಬಣ್ಣ ಭಟ್ಟ, ಬಾಳಿಕೆ    on   13/10/2012    2 ಒಪ್ಪಂಗೊ

ಸುಬ್ಬಣ್ಣ ಭಟ್ಟ, ಬಾಳಿಕೆ
Latest posts by ಸುಬ್ಬಣ್ಣ ಭಟ್ಟ, ಬಾಳಿಕೆ (see all)

ಮನೆಲ್ಲಿಪ್ಪಗ ಎನ್ನ ಮಕ್ಕಳ ಅಬ್ಬಗೂ ಎನಗೂ ಒಂದಲ್ಲದ್ದರೆ ಒಂದು ವಿಷಯಲ್ಲಿ ಚರ್ಚೆ ಆಗುತ್ತಾ ಇರುತ್ತು.
ಕೆಲಸ ಎಲ್ಲ ಆಗಿ ಅವಕ್ಕೆ ವಿರಾಮ ಸಿಕ್ಕುವದು ಕಸ್ತಲೆ ಆದ ಮೇಲೆಯೇ ಅಲ್ಲದೋ? ಹಗಲು ನಾವೆಲ್ಲಿಯಾದರು ಹೆರ ಹೋದರೆ ಮನೆಲ್ಲೇ ಇಪ್ಪೋವಕ್ಕೆ ಕೆಲಸಲ್ಲೇ ಹೊತ್ತು ಹೋವುತ್ತು. ಕೆಲಸ ಮಾಡಿ  ಬಚ್ಚಿಪ್ಪಗ ವಿಶ್ರಾಂತಿ ಸಿಕ್ಕುವದೂ ಇರುಳೇ ಅಲ್ಲದೋ?
ಕೋಪವ ಎಲ್ಲ ನಮ್ಮ ಮೇಲೆ ತೋರುಸುವದು ಕ್ರಮ. ನಾವು ಮಾಂತ್ರ ಅಲ್ಲ ಕೂಲಿ ಕೆಲಸಕ್ಕೆ ಹೋಪೋವುದೇ ಹಗಲಿಡೀ ಗೆಂಡನ ಕಾಣದ್ದೆ ಕಸ್ತಲೆ ಅಪ್ಪಗ ಬಂದ ಕೂಡ್ಳೇ ಏನಾದರೊಂದು ಹೇಳಿ ಮಾತಾಡುಸುವದು ಕ್ರಮ! ಎಂಗಳ ಮನೆಗೆ ಕೆಲಸಕ್ಕೆ ಬಂದೊಂಡಿದ್ದ, ಆಳಿಂಗೆ ಬಚ್ಚಿಗೊಂಡು ಮನೆಗೆ ಎತ್ತುವಗ ಹೆಂಡತ್ತಿ ಉಪಚಾರ ಜೋರಿತ್ತು.
ಆ ಹೊತ್ತಿಂಗೆ ಗೆದ್ದೆ ಕರೆಲ್ಲಿ ನಾವು ಹೋವುತ್ತಿದ್ದರೆ ಕೇಳುಗು ಗಲಾಟೆ. ಗೆಂಡುಗೊ ಬಚ್ಚೆಲು ಹೋಪಲೆ ರಜ ಕಳಿಯೋ, ಶರಾಬೋ ಕುಡುಕ್ಕೊಳ್ಳುತ್ತವು. ಸಿಕ್ಕಿದ ಸಂಬಳ ಅಲ್ಲೇ ಮುಗಿತ್ತು. ಮನೆಗೆ ಹೋಪಗ ಕೈ ಖಾಲಿ.

“ಏಕೆ ಅಕ್ಕಿ ತಯಿಂದಿಲ್ಲೆ? ಅಕ್ಕಿ ತಾರದ್ದೆ ಇರುಳು ಉಂಬದೆಂತರ ? ಅಂಗ್ಡಿಂದ ಅಕ್ಕಿ ತರೆಕ್ಕು ಹೇಳಿದ್ದಲ್ಲದಾ? ಏಕೆ ತಯಿಂದಿಲ್ಲೆ? ನಿಂಗೊ ಆದರೆ ಹೊಟ್ಟೆ ತುಂಬ ಕುಡುದಿಕ್ಕಿ ಬತ್ತಿ. ಎಂಗೊ ಎಲ್ಲಿಗೆ ಹೋಯೆಕ್ಕು? ಹೀಂಗೆ ಪ್ರಶ್ನೆಗಳ ಸರಮಾಲೆಯನ್ನೇ ಕೇಳಿಗೊಂಗು. ಉತ್ತರ ಕೊಡುಲೂ ಗೆಂಡುಗೊಕ್ಕೆ ಅಮಲು ಇಳುದ್ದಿಲ್ಲೆ. ಅಂಬಗ ಕೋಪ ತಡೆಯದ್ದೆ ಹೆಂಡತ್ತಿ ಹಿಡಿಸೂಡಿ ತೆಗದು ಗೆಂಡಂಗೆ ಬಡಿಗಡೊ. ಪೆಟ್ಟು ತಿಂದಪ್ಪಗ ರಜಾ ಅಮಲು ಇಳಿಗು. ಫಕ್ಕನೆ ಹೆರ ದಾರಿ ಹೋಪೋರು ಎಂಗಳ ಜಗಳ ಕೇಳುಲೆ ಆಗ ಹೇಳಿಯೋ ಅಥವಾ ಹೆಂಡತ್ತಿ ಬಡುದ್ದಲ್ಲ. ತಾನೇ ಹೆಂಡತ್ತಿಗೆ ಬಡುದ್ದು ಹೇಳಿ ಆಯೆಕ್ಕು ಹೇಳ್ಯೋ ಕೇಳುವದಡೊ. “ಸಾಕೊ ನಿನಗೆ, ಅಲ್ಲ ಇನ್ನೂ ಬೇಕೋ?ನೀನು ಹಾಂಗೆ ಮಾಡಿದ್ದೆಂತಗೆ? ಮತ್ತೆ ಎಷ್ಟು ನಿನ್ನ ಹಾರಾಟ? ಸುಮ್ಮನೆ ಕೂಪಲವುತ್ತಿಲ್ಲೆಯೋ? ಹೇಳಿ ಎಲ್ಲ ಗೆಂಡನೇ ಬಯಿವದಡೊ.
ಹೆರ ದಾರಿಲ್ಲಿ ಹೋಪೋರು ಗೆಂಡ ಹೆಂಡತ್ತಿಗೆ ಬಡಿವದು. ಹೇಳಿ ಗ್ರೇಶೆಕ್ಕು. ಹೆಂಡತ್ತಿ ಬಡುದ್ದು ಹೇಳಿ ಆದರೆ ಅವನ  ಮರ್ಯಾದೆ ಪೂರ್ತಿ ಹೋವುತ್ತಿಲ್ಲೆಯೋ.

ಎಂಗಳ ಮನೆಲ್ಲಿ ಎಂಗಳೊಳದಿಕ್ಕೆ ಹಾಂಗಲ್ಲ ಬೇರೊಂದು ಕಾರಣಕ್ಕೆ. ಅಂತೂ ಒಂದು ರೀತಿಲ್ಲಿ ತಾನು ಹೇಳಿದಾಂಗೆ ಗೆಂಡ ಕೇಳುತ್ತ ಹೇಳಿ ಆಯೆಕ್ಕು.
ಎಲ್ಲೋರ ಮನೆಯ ದೋಸೆಗಳೂ ತೂತೇ ಅಲ್ಲದೋ? ಒಂದು ದಿನ ಹೀಂಗೆ ಮಾತಾಡುವಗ ಇದೆಂತ ಹೀಂಗೆ ಮೂಗು ಸಂಬಳದೋನ ಹಾಂಗೆ ಮಾಡುತ್ತೆ  ಹೇಳಿ ಕೇಳಿದೆ. ಅದೆಂತರ ಮೂಗು ಸಂಬಳ ಹೇಳಿರೆ? ಹೇಳಿ ಕೇಳಿತ್ತು. ಅದೋ ಹೇಳುತ್ತೆ ಕೇಳು ಹೇಳಿ ಕತೆ ಹೇಳುಲೆ ಶುರು ಮಾಡಿದೆ. ಹೇಂಗಾದರೂ ಕೋಪ ತಣಿಶೆಕ್ಕನ್ನೆ.  ಕತೆ ಕೇಳಿಗೊಂಡಿಪ್ಪಗ ಒರಕ್ಕು ಬತ್ತು. ಎಂತಾದರೂ ಕೋಪ ಇದ್ದರೆ ಮರದು ಹೋವುತ್ತು.
ಮದಲು ಒಬ್ಬ ಒಬ್ಬ ಹಳ್ಳಿಯೋನು ಕಲ್ತು ವಕೀಲ ಆದ.
ವಕೀಲ ಪೇಟೆಗೆ ಹೋಗಿ ಕೂರೆಕ್ಕನ್ನೆ. ಮದುವೆಯೂ ಆಗಿತ್ತು. ಹೆಂಡತ್ತಿಗೆ ಮನೆಯ ಉದ್ದಿ, ಉಡುಗಿ ಮಾಡುವ ಕೆಲಸಕ್ಕೆ ಒಂದು ಆಳು ಬೇಕು ಹೇಳಿ ಆತು. ಮಾತು ಕೇಳದ್ದರೆ ಹೆಂಡತ್ತಿ ಬಿಡುತ್ತೋ? ಮರದಿನಂದ ಬಂದ ಕಕ್ಷಿಗಾರರ ಹತ್ತತ್ರೆ ಒಂದು ಸಂಬಳಕ್ಕೆ ಜನ ಕಳುಸೆಕ್ಕು ಹೇಳಿದ. ಬಂದೋವೆಲ್ಲ ಸರಿಯಿಲ್ಲೆ ಹೇಳಿ ಹಿಂದೆ ಕಳುಸಿಯೂ ಆತು. ಸಂಬಳ ಕೊಡದ್ದರೆ ಅವು ನಿಲ್ಲುತ್ತವೋ? ಹೀಮ್ಗಿಪ್ಪಗ ಹೊಸತಾಗಿ ಒಬ್ಬ ಬಂದಡೊ. ವಕೀಲನ ಸಂಗ ಗೊಂತಿದ್ದ ಅವ ರಜ ಬುದ್ಧಿವಂತಡೊ. ನಿನ್ನ ಹೆಸರೆಂತ ಕೇಳಿದ್ದಕ್ಕೆ ಉಳಪ್ಪ ಹೇಳಿದನಡ. ಮತ್ತೆ ಇವನೂ ಓಡಿ ಹೋಪದು ಬೇಡ ಹೇಳಿ ವಕೀಲ ಒಂದು ಶರತ್ತು ಮಾಡುಗಿ ಅವನತ್ರೆ ಒಪ್ಪಂದವ ಬರದು ದಸ್ಕತ್ತು ತೆಕ್ಕೊಂಡೂ ಆತು.
ಶರತ್ತು ಎಂತ ಕೇಳಿರೆ ಕೆಲಸದೋನಾಗಿಯೇ ಆನು ಇಲ್ಲಿಂದ ಹೋವುತ್ತೆ ಹೇಳಿ ಬೊಡುದು ಹೋದರೆ ಅವಂಗೆ ಸಂಬಳ ಕೊಡುಲೆ ಇಲ್ಲೆ.
ಆದರೆ ವಕೀಲನೇ” ನೀನು ಒಂದಾರಿ ಹೋಗು ಹೇಲಿ ಕೆಲಸದ್ನ ಹೋಪಲೆ ಹೇಳಿದರೆ ಹತ್ತು ಸಾವಿರ ರುಪಾಯಿಯೂ ಒಂದು ಮೂಗೂ ಕೊಡೆಕ್ಕು ಹೇಳಿ ಶರತ ಇತ್ತಡೊ.

ವಕೀಲಂಗೆ ಬುದ್ಧಿ ಕಲಿಶೆಕ್ಕು ಹೇಳಿಯೇ ಅವ ಬಂದದು.ಎರಡು ದಿನ ಕಳುದಪ್ಪಗ ವಕೀಲನ ಹೆಂಡತ್ತಿ ಮುಟ್ಟಾಗಿ ಅಡಿಗೆ ಮಾಡುಲೆ, ಮುಖ್ಯವಗಿ ಅಂದು ಒಲೆಲ್ಲಿಪ್ಪ ಅಶನವ ತೆಗವಲೆ ವಕೀಲ ಕೋರ್ಟಿಂಗೆ ಹೋಯಿದ. ಎಂತ ಮಾದುವದು? ಕೆಲಸದೋನತ್ರೆ ಹೋಗಿ ಅವರ ಬಪ್ಪಲೆ ಹೇಳು ಹೇಳಿತ್ತಡೊ ಹೆಂಡತ್ತಿ. ಇವ ಓಡಿ ಹೋಗಿ ಇದಾ ನಿಂಗಳ ಹೆಂಡತ್ತಿಗೆ ಮುಟ್ಟುಲಾಗಡೊ. ಅಶನ ಒಲೆಲ್ಲಿಪ್ಪದರ ತೆಗೆವಲೆ ಹೋಯೆಕ್ಕಡೊ ಹೇಳಿ ದೊಡ್ಡಕ್ಕೆ ಹೇಳಿದನಡ. ವಕೀಲನ ಮರ್ಯಾದೆ ಎಂತಾಗೆಡ ಎಲ್ಲೋರ ಎದು ಹಾಂಗೆ ಹೇಳಿದ್ದಕ್ಕೆ ಕೋಪುಸಿ ನೀನು ವಕೀಲನ ಆಳು. ಹೀಂಗೆ ಒಬ್ಬ ಸಾಮಾನ್ಯನ ಹಾಂಗೆ ಬಪ್ಪದೋ? ರಜ ಮೈ ಮೋರೆ ಎಲ್ಲ ತೊಳಕ್ಕೊಂಡು ಒಳ್ಳೆ ಅಂಗಿ ಹಾಕಿಗೊಂಡು, ಎನ್ನ ಹತ್ತರೆ ಬಂದು, ಗುಟ್ಟಿಲ್ಲಿ ಹೇಳೆಡದೋ. ಎನ್ನ ಮರ್ಯಾದೆ ಹೋತನ್ನೆ ಹೇಳಿದ್ದಕ್ಕೆ ಇಂದ್ರಾಣದ್ದು ಕಳುತ್ತನ್ನೆ.ಆತು ಇನ್ನು ಹಾಂಗೇ ಮಾಡುತ್ತೆ ಹೇಳಿದನಡ.

ಮತ್ತೊಂದು ತಿಂಗಳು ಕಳುತ್ತು. ಮತ್ತೊಂದು ದಿನ ಬೆಶಿನೀರು ಕಾಸುವ ಕೊಟ್ಟಗ್ಗೆ ಕಿಚ್ಚು ಹಿಡುತ್ತಡ. ಹೋಗಿ ವಕೀಲರ ಹತ್ತರೆ ಹೇಳಿ ಬಾ ಹೇಳಿದ್ದಕ್ಕೆ ಸರಿ ರಜ ಎಣ್ಣೆ ಕೊಡಿ, ಸಾಬೂನು ಕೊಡಿ ಒಳ್ಳೆ ಅಂಗಿ ಇದ್ದರೆ ಕೊಡಿ ಹೇಳಿ ತಂದು ಕೊಡುಲೆ ಹೇಳಿದನಡ. ಮಿಂದು ಒಳ್ಳೆ ಅಂಗಿ ಹಾಯ್ಕೊಂಡು ಕೋರ್ಟಿಂಗೆ ಹೋಗಿ ವಕೀಲ ತನ್ನ ನೋಡುವ ವರೆಗೆ ಸುಮ್ಮನೆ ನಿಂದು, ನಿಧಾನಕ್ಕೆ ವಕೀಲ ತಿರುಗಿ ನೋಡುವಗ ಮೆಲ್ಲಂಗೆ, ಹತ್ತರೆ ಹೋಗಿ ಗುಟ್ಟಿಲ್ಲಿ, “ಬೆಶಿ ನೀರ ಕೊಟ್ಟಗ್ಗೆ ಕಿಚ್ಚುಹಿಡುದ್ದು. ನಿಂಗೊ ಮನೆಗೆ ಹೋಯೆಕ್ಕಡ, ಹೇಳಿದನಡ”. ವಕೀಲಂಗೆ ಹೇಂಗೆ ಆಗೆಡ ಕೋಪ ಬತ್ತಿದ್ದರೂ ತಡಕ್ಕೊಂಡು ಮನೆಗೆ ಓಡಿಹೋಗಿ ನೋಡುವಗ ಕೊಟ್ಟಗೆ ಎಲ್ಲ ಹೊತ್ತಿ ಮುಗುದ್ದಡೊ.

ಇಷ್ಟೆಲ್ಲ ಆದಮೇಲೆ ಇವನ ಮಡಿಕ್ಕೊಂಬದು ಆಪತ್ತು ಹೇಳಿ ಕಂಡತ್ತು ವಕೀಲಂಗೆ. ಗೆಂಡ- ಹೆಂಡತ್ತಿ ಆಲೋಚನೆ ಮಾಡಿ ಅವ ಹೋಯೆಕ್ಕಾರೆ ರುಪಾಯಿ ಆದರೂ ತೊಂದರೆ ಇಲ್ಲೆ ಕೊಡುಲಕ್ಕು. ಮೂಗಿಂಗೆಂತ ಮಾಡುವದು? ವಕೀಲ ಆಗಿಪ್ಪ ಕಾರಣ ಶರತಕ್ಕೆ ತಪ್ಪುಲೆ ಗೊಂತಿಲ್ಲೆನ್ನೆ.
ಎಂತ ಮಾಡುವದು ಹೇಳಿ ಯೋಚನೆ ಮಾಡಿ,ಕಡೆಂಗೆ  “ಅಯ್ಯಯ್ಯೊ ಉಳಪ್ಪ” ಹೇಳುವ ಒಂದು ಮದ್ದಿನ ಕಾಡಿಂಗೆ ಹೋಗಿ ಅಗತ್ಯ ತರೆಕ್ಕು ಹೇಳಿ ಹೇಳಿದರೆ, ಹಾಂಗಿಪ್ಪ ಮದ್ದು ಇಲ್ಲದ್ದ ಕಾರಣ ಅವಂಗೆ ತಪ್ಪಲೆಡಿಯ. ಸೋಲುತ್ತ ಅವಂಗೆ ತಂದುಕೊಡುಲೆಡಿಯದ್ದರೆ ಸೋತ ಹಾಂಗೆ ಅಲ್ಲದೋ? ಮತ್ತೆ ಏನೂ ಸಂಬಳ ಕೊಡದ್ದೆ ಅವನ ಅಟ್ಟುಲೆಡಿಗು ಹೇಳಿ ಗ್ರೇಶಿದನಡ.
ಮಗಂಗೆ ” ಅಯ್ಯಯ್ಯೊ ಉಳಪ್ಪ” ಹೇಳುವ ಮದ್ದು ತಂದು ಕೊಡೆಕ್ಕು ಹೇಳಿ ಡಾಕ್ಟ್ರ ಹೇಳಿದ್ದ ಬೇಗ ಹೋಗಿ ತಂದು ಕೊಡು ಹೇಳಿದನಡ ಮದ್ದು ಅಗತ್ಯ ಇದ್ದು ಬೇಗ ತಂದುಕೊಡು ಹೇಳಿ ಕಳಿಸಿದನಡ. ಹಾಂಗಿಪ್ಪ ಮದ್ದು ಇಲ್ಲೆ ಹೇಳುವದು ಕೆಲಸದೋವಂಗೂ ಗೊಂತಿದ್ದಾದರೂ ವಕೀಲನ ಸೋಲುಸೆಕ್ಕನ್ನೆ. ಬುದ್ಧಿ ಕಲಿಶೆಕ್ಕು ಹೇಳಿ ಒಪ್ಪಿಗೊಂಡು ಕಾಡಿಂಗೆ ಹೋದನಡ. ಕಾಡಿಲ್ಲಿ ಅವಂಗೊಂದು ಕೂಡೆಲು ಪಟ್ಟು ಕಂಡತ್ತಡೊ. ಅದರ ಹಿಡಿಯೆಕ್ಕಾರೆ ಇರುಳೇ ಆಯೆಕ್ಕಷ್ಟೆ. ಇರುಳು ಅವಕ್ಕೆ ಕಣ್ಣು ಕಾಣುತ್ತಿಲ್ಲೆಡೊ. ಹಾಂಗೆ ಅಂದು ಇರುಳೇ ಅದರ ಹಿಡುದು ಒಂದು ಗೋಣಿಲ್ಲಿ ಕಟ್ಟಿ ತಂದನಡ. ವಕೀಲನ ಮನೆಗೆ ಬಂದು ಅವರತ್ರೆ “ಇದಾ ಇದರ ಒಂದು ಕೋಣೆಲ್ಲೇ ಬಾಯಿ ಬಿಡುಸೆಕ್ಕಷ್ಟೆ. ನಿಂಗೊ ಎಲ್ಲೋರೂ ಕೋಣೆಯೊಳದಿಕ್ಕೆ ಹೋಗಿ ಒಳಂದ ಬಾಗಿಲು ಹಾಯ್ಕೊಂಡು ಗೋಣಿ ಬಿಡುಸೆಕ್ಕು ಹೇಳಿದನಡ. ಸರಿ ವಕೀಲ,ಅವನ ಹೆಂಡತ್ತಿ ಮಕ್ಕೊ ಎಲ್ಲ ಒಳ ಕೂದು ಗೋಣಿ ಬಯಿ ಬಿಡುಸಿದವು. ಅಂಬಗ ಕೇಳೆಕ್ಕೂ! ಒಳದಿಕ್ಕಿದ್ದ ಹುಳುಗೊ ಇವಕ್ಕೆ ಕುಟ್ಟುಲೆ ಶುರು ಮಾಡಿದವು. ಬಾಗಿಲು ಹೆರಂದ ಇವ ಹಾಕಿತ್ತಿದ್ದ. ಎಲ್ಲೋರಿಂಗೂ ಹುಳುಗೊ ಕಚ್ಚಿ,ಮೋರೆ ಮೈಯೆಲ್ಲ ಬೀಗಿತ್ತಡೊ.ಬೇನೆ ತಡೆಯದ್ದೆ “ಅಯ್ಯಯ್ಯೋ ಉಳಪ್ಪ” ಹೇಳಿಬೊಬ್ಬೆ ಹಾಕಿದವು.

ಒಂದಾರಿ ಬಾಗಿಲು ತೆಗೆ ಹೇಳಿ ಕೆಲಸದೋನ ಬೇಡಿಗೊಂಡವು. ಮಾಂತ್ರ ಅಲ್ಲ ನಿನ್ನ ಕೆಲಸ ಸಾಕು ಇಲ್ಲಿಂದ ಬಿಟ್ತಿಕ್ಕಿ ಹೋಗು ಹೇಳಿಯೂ ಹೇಳಿದವಡ.
ಆದರೆ ಶರತ ಇದ್ದನ್ನೆ, ಮೂಗುದೇ ಪೈಸೆಯೂ ಕೊಡಿ ಹೇಳಿದನಡ. ಕೆಲಸದೋನು. ಹೆಂಡತ್ತಿ ಮಕ್ಕಳತ್ರೆ ಆಲೋಚನೆ ಮಾಡಿವಕೀಲ ಮೂಗು ಕೊಟ್ಟರೆ ಮೂಗಿಲ್ಲದ್ದೆ ಕೋರ್ಟಿಂಗೆ ಹೋಪದು ಹೇಂಗೆ? ಅದಕ್ಕೆ ಹೆಂಡತ್ತಿ ಮೂಗು ಕೊಡುವದು ಹೇಳಿ ತುಂಡು ಮಾಡಿ ಕೊಡುವಗ ಶರತಲ್ಲಿ ಹೆಮ್ಮಕ್ಕಳ ಮೂಗು ಹೇಳುತ್ತಿಲ್ಲೆ
ಎನಗೆ ಗೆಂಡು ಮಕ್ಕಳದ್ದೇ ಆಯೆಕ್ಕು ಹೇಳಿದನಡ.ಒಂದು ಮೂಗು ಧರ್ಮಕ್ಕೆ ಹೋತನ್ನೆ. ಇನ್ನು ಎಂತ ಮಾಡುವದಪ್ಪ ಹೇಳಿ ಮಗನ ಮೂಗು ತುಂಡು ಮಾದಿ ಕೊಡುವಗ ಮಕ್ಕಳದ್ದಾಗ ಹೇಳಿದನಡ.,

ಮತ್ತೆ ಹೇಂಗಾದರೂ ಈ ಪ್ರಾಣಿ ಹೋಯೆಕ್ಕನ್ನೆ ಹೇಳಿ ಅವನ ಮೂಗಿನನ್ನೇ ತುಂಡು ಮಾಡಿ ಕೊಟ್ಟನಡ.
ಅಂತೂ ಮೂರು ಜನರ ಮೂಗೂ ಹೋತು. ಇದಕ್ಕೆ ಮದಲು ವಕೀಲ ಬೇರೆ ಜನಂಗೊಕ್ಕೆ ಸಂಬಳ ಕೊಡದ್ದೆ ಕೆಲಸ ಮಾಡುಸಿತ್ತಿದ್ದ ಹೇಳಿ ಗೊಂತಿದ್ದೇ ಈ ಉಪಯ ಮಾಡಿದ್ದು ವಕೀಲಂಗೆ ಬುದ್ಧಿ ಕಲಿಶುಲೆ ಬೇಕಾಗಿ. ಹಾಂಗೆ ಮೂಗು ಸಂಬಳ ಹೇಳಿರೆ ಆ ಕೆಲಸದೋನ ಹಾಂಗೆ ಮಾಡಿದರೆ ಅಂತ್ರೋರ ಕೈಂದ ಬುದ್ಧಿ ಕಲಿಯೆಕ್ಕಷ್ಟೆ ಹೇಳುವದು ಮಾತಿನ ಅರ್ಥ ಹೇಳಿ ಎನ್ನ ಹೆಂಡತ್ತಿಗೆ ವಿವರುಸಿದೆ.

ಕೊಟ್ಟಗ್ಗೆ ಕಿಚ್ಚು ಹಿಡುದ ಶುದ್ದಿ ಹೇಳುಲೆ ಹೇಳಿದ್ದಕ್ಕೆ ಎಣ್ಣೆ ಕಿಟ್ಟಿಮಿಂದು ಕೋರ್ಟಿಂಗೆ ಹೋದ್ದುದೇ ಬುದ್ಧಿ ಕಲಿಶುಲೇ ಅಲ್ಲದೋ?
ವಕೀಲಂಗೆ ಅವನ ಬುದ್ಧಿವಂತಿಕೆಯೇ ತಿರುಗುಬಾಣವಾತಿಲ್ಲೆಯೋ?
ಅದಕ್ಕೆ ಮಲಯಾಳಲ್ಲಿ ಒಂದು ಗಾದೆ ಇದ್ದಡೊ. “ಏರೆ ಬೆಳೆಂಞಂಗ್ಲಿ ಬಿತ್ತಿನಿ ಕೇಡು” ಹೆಚ್ಚು ಬೆಳದರೂ ಅದು ಬಿತ್ತಿಂಗಾಗ ಹೇಳುತ್ತವಲ್ಲದೋ?
ಕೋರ್ಟಿಲ್ಲಿ ತೋರುಸೆಕ್ಕಾದ ಬುದ್ಧಿವಂತಿಕೆಯ ಸಾಮಾನ್ಯ ಕೆಲಸದೋರ ಮೇಲೆ ತೋರುಸಿದ್ದಕ್ಕೆ ವಕೀಲ ಬುದ್ಧಿ ಕಲ್ತ. ಗುಡ್ಡೆಗೆ ಗುಡ್ಡೆ ಅಡ್ಡಡೊ!
ಆದರೆ ನಮ್ಮ ಹಿಮಾಲಯಕ್ಕೆ ಸರಿಯಾದ ಗುಡ್ಡೆ ಬೇರೆಲ್ಲಿಯೂ ಇಲ್ಲೆಡೊ.

2 thoughts on “ಮೂಗು ಸಂಬಳ

  1. ಇದು ಭಾರೀ ಪಷ್ಟಾಯಿದು.. ಸಣ್ಣಾಗಿಪ್ಪಗ ಕೇಳಿದ ನೆ೦ಪಿದ್ದು..

  2. ಹೋ… ಕಥೆ ಪಷ್ಟಾಯ್ದು. ಕಥೆ ಹೇಳುವದು ಈಗಳೂ ನಡೆತ್ತೋ!! ಹಿಮಾಲಯಕ್ಕೆ ಸರಿಯಾದ ಗುಡ್ಡೆ ಬೇರೆಲ್ಲಿಯೂ ಇಲ್ಲೆಡೋ ಹೇಳಿ ಹೇಳಿದ್ದು ನೋಡಿರೆ…. ಉಮ್ಮ… ಬಿಡುವೋ ಎಲ್ಲಾರ ಮನೆಯ ದೋಸೆಯು ತೂತೇ.!

    ಮಾವನ ಇನ್ನಾಣ ಶುದ್ಧಿ ಎಂತಾದಿಕ್ಕಪ್ಪಾ….!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×