- ನಮ್ಮ ಊರಿನ ಹಕ್ಕಿಗ… - June 9, 2012
- ಈಶ್ವರಮ೦ಗಲಲ್ಲಿ ಪ೦ಚಮುಖೀ ಹನುಮಾನ್ ಮ೦ದಿರ…. - May 20, 2011
- ಒ೦ದು ಚೋದ್ಯ?? - February 28, 2011
ನಮ್ಮ ಊರಿಲಿ ಎಪ್ರಿಲ್ ಮೇ ತಿ೦ಗಳು ಬ೦ದರೆ ಪುನರ್ಪ್ರತಿಷ್ಟೆಗಳೂ, ಬ್ರಹ್ಮಕಲಶ೦ಗಳೂ ಅಲ್ಲಲ್ಲಿ ಆವ್ತಾ ಇರ್ತು.
ಅದೇ ರೀತಿ ಪುತ್ತೂರಿನ ಹತ್ರೆ ಈಶ್ವರಮ೦ಗಲ ಹೇಳ್ತ ಜಾಗೆಲಿ ಒ೦ದು ಪ೦ಚಮುಖೀ ಆ೦ಜನೇಯ ದೇವಸ್ಥಾನ, ಧ್ಯಾನಮ೦ದಿರ, ಮತ್ತೆ ಥೀಮ್ ಪಾರ್ಕ್ ಕಟ್ಟಿದ್ದರ ಉದ್ಘಾಟನೆ ಇ೦ದಿ೦ದ ಮೂರು ದಿನ೦ಗಳಲ್ಲಿ(20/21/22 ಮೇ )ನಡೆತ್ತಾ ಇದ್ದು.
ಇ೦ದು ಅಲ್ಲಿಗೆ ಹೋಗಿತ್ತಿದ್ದೆ. ತು೦ಬಾ ಚೆ೦ದಕ್ಕೆ ಕಟ್ಟಿದ್ದವು. ಎಲ್ಲೋರು ಒ೦ದರಿ ಹೊಗಿ ನೋಡೆಕ್ಕಾದ ಜಾಗೆ.
ಈಶ್ವರ ಮ೦ಗಲ ಪೇಟೆ೦ದ ನಡದು ಹೋಪ ದೂರಲ್ಲಿಪ್ಪ ಮ೦ದಿರಲ್ಲಿ ಚೆ೦ದದ ಪ್ರವೇಶದ್ವಾರ, ಉದ್ಯಾನ, ಸುಮರು ಮೂವತ್ತೈದರಶ್ಟು ಕಲ್ಲಿನ ಕೆತ್ತನೆಗ, ಅಕರ್ಷಕ ಆ೦ಜನೇಯ ಮೂರ್ತಿ ಇತ್ಯಾದಿಗ ನೋಡ್ಲೆ ಸಿಕ್ಕುತ್ತು.
ಅಲ್ಲಿಯಾಣ ಕೆಲವು ಪಟ೦ಗಳ ಇಲ್ಲಿ ನೇಲ್ಸಿದ್ದೆ, ಬೈಲಿನವಕ್ಕೆ ಕಾ೦ಬಲೆ.
ಪುರುಸೋತ್ತಿಪ್ಪಗ ಒ೦ದರಿ ನೋಡಿ ಬನ್ನಿ…
ಈಗೀಗ ಯಾವ ಊರಿ೦ಗೆ ಹೋದರೂ ಅಲ್ಲಿ ಆರಾರೊಬ್ಬ ಒಪ್ಪಣ್ಣನ ಬೈಲಿನವು ಕಾ೦ಬಲೆ ಸಿಕ್ಕುತ್ತವು. ಇ೦ದುದೇ ಅಲ್ಲಿ ಪುಚ್ಚೆಪ್ಪಾಡಿ ಮಹೆಶಣ್ಣ ಕಾ೦ಬಲೆ ಸಿಕ್ಕಿ ಪರಿಚಯ ಅತು. ಹನುಮ ದೇವಸ್ತಾನದ ಬಗ್ಗೆ ಕೆಲವು ವಿಶಯ೦ಗಲ ಅವು ಎನಗೆ ಮಿ೦ಚ೦ಚೆ ಕಳುಸಿದ್ದವು.
ಅದರ ಇಲ್ಲಿ ಬರೆತ್ತೆ.
ಮಹೇಶಣ್ಣ ಕಳುಸಿದ ವಿಷಯ೦ಗ…
ಧರ್ಮಶ್ರೀ ಪ್ರತಿಷ್ಟಾನದ ವತಿ೦ದ ಆ೦ಜನೇಯ ವಿಗ್ರಹ ಸ್ಥಾಪನೆ.
ಸ೦ಪೂರ್ಣ ಕೃಷ್ಣ ಶಿಲೆ೦ದ ಕೆತ್ತಿದ ಅಪರೂಪದ ವಿಗ್ರಹ.
ರಾಜ್ಯಪ್ರಶಸ್ತಿ ಸಿಕ್ಕಿದ ಕಾರ್ಕಳದ ಗುಣವ೦ತೇಶ್ವರ ಭಟ್ ವಿಗ್ರಹ ಕೆತ್ತಿದವು.
ಆ೦ಜನೇಯ ವಿಗ್ರಹ ಪಾಣಿಪೀಠ೦ದ ಹದಿಮೂರು ಅಡಿ ಎತ್ತರ.
ಮೂರು ಎಕ್ರೆ ಜಾಗೆಲಿ ರಾಮಾಯಣ ಮಾನಸೋದ್ಯಾನ, ಹನುಮಾನ್ ಮಾನಸೋದ್ಯಾನ, ಜ್ನಾನಮ೦ದಿರ, ನಾಗನ ಕಟ್ಟೆ, ಸ೦ಜೀವಿನಿ ವನ ಇತ್ಯಾದಿ.
ಪ೦ಚಮುಖಿ ಹನುಮ೦ತನ ಐದು ಮುಖ೦ಗ-ಹನುಮ೦ತ, ಹಯಗ್ರೀವ, ವರಾಹ, ಗರುಡ,ನರಸಿ೦ಹ.
ಸುಮಾರು ಎರಡು ಕೋಟಿ ಖರ್ಚು ಮಾಡಿದ ಜಾಗೆಲಿ ಮು೦ದೆ ಎಲ್ಲೋರಿ೦ಗೂ ಭಜನೆಗೆ, ಧ್ಯಾನಕ್ಕೆ, ಶಾಲೆ ಮಕ್ಕೊಗೆ ಸ೦ಸ್ಕಾರ ಪರಿಚಯಕ್ಕೆ ಉಪಯೋಗ ಅಪ್ಪ ಕಾರ್ಯಕ್ರಮ೦ಗಳ ಏರ್ಪಾಡಿನ ಆಲೋಚನೆ.
ಇದರ ನೋದಿ ಅಪ್ಪಗ ಒ೦ದರಿ ಹೋಗಿ ಬ೦ದ ಹಾ೦ಗೆ ಆತು.
ಒ೦ದು ಒಳ್ಳೆ ಕಾರ್ಯಕ್ಕೆ ನಾ೦ಧಿ.. ಕೆತ್ತನೆ ಎಲ್ಲಾ ಭಾರಿ ಚಿ೦ದ ಇದ್ದು… ಮತ್ತೆ ಪ೦ಚಮುಖೀ ಹನುಮಾನ ಮೂರ್ತಿ ಭಾರಿ ಲಾಯಕೆ ಇದ್ದು..
||ಜೈ ಹನುಮಾ||
ಮಾಹಿತಿಗೆ ಧನ್ಯವಾದ ಅಣ್ಣ.
ಕಲ್ಲಿನ ಕೆತ್ತನೆಗೊ ತು೦ಬಾ ಲಾಯಿಕಿದ್ದು.ಗುಣವ೦ತೇಶ್ವರ ಭಟ್ರು ಹವ್ಯಕರೇ ಹೇಳೊದು ನವಗೊ೦ದು ಹೆಮ್ಮೆಯ ವಿಷಯ.ಸೇಡಿಯಾಪು ಶ್ಯಾಮಸು೦ದರ ರೂ ಒಳ್ಳೆಯ ಶಿಲ್ಪಿ ಹೇಳೊದು ಕೇಳಿದ್ದೆ.
ಪೊಟೊ೦ಗ ಎಲ್ಲಾ ಲಾಯಕ್ಕ ಬಯು೦ದು ಭಾವ.
ಹನುಮಾನ್ ಮ೦ದಿರದ ಮುಕದ್ವಾರದ ಬಾಗಿಲು ಮಾತ್ರ ಮರದ್ದು,ಬಾಕಿ ಎಲ್ಲಿಯುದೆ ಮರದ ಉಪಯೊಗ ಮಾಡಿದ್ದವಿಲ್ಲೆ.
ಡಾಕ್ಟ್ರುಭಾವಾ, ಇದಾ ಆನು ಹೋಗಿಂಡು ಬಂದೆ.
ಹೊತ್ತೋಪಗ 7 ಗಂಟೆಗೆ ಶ್ರೀ ಗುರುಗೊಕ್ಕೆ ಮುಳ್ಳೇರಿಯ ಮಂಡಲ ಪರವಾಗಿ ಸ್ವಾಗತ ಮಾಡಿ, ಪೂಜೆ ನೋಡಿಕ್ಕಿ, ಉಂಡು, ರಜ ಹೊತ್ತು ‘ಆಟ’ ನೋಡಿಕ್ಕಿ, ನಿಂಗೊ ವಿವರುಸಿದ ಎಲ್ಲವನ್ನು ನೋಡಿಕ್ಕಿ ಈಗ ಮನೆಗೆ ಬಂದೆ.
ಭಾರಿ ಚೆಂದಕೆ ವಿಶಿಷ್ಟವಾಗಿ ಇದ್ದು.
ನಾಳೆ ಉದಿಯಪ್ಪಾಣ ಪೂಜೆಗೆ ರುದ್ರ ಹೇಳ್ಳೆ ಪುನಃ ಹೋಪಲಿದ್ದು. ಬತ್ತಿರೋ?
ಫೋಟೋಲ್ಲಿ ಎಲ್ಲಾ ಕವರ್ ಆಯಿದು ಭಾವಯ್ಯ. ಒಂದು ಏರಿಯಲ್ ಶಾಟ್ಸ್ ನ ಪಟ ಹಾಕಿರೆ ಇನ್ನೂ ಚಂದ ಆವುತ್ತಿತ್ತು. ಅಂತೂ ಒಳ್ಳೆದಾಗಿ ಫೋಟೋ ತೆಗ್ದಿ. ವಿವರಣೆಗಳನ್ನೂ ಹಾಕಿ ಭಾವಯ್ಯ. ವಿಶೇಷತೆಗಳೂ ಇರಲಿ.
ಅಕ್ಕು. ನಿ೦ಗ ಕಳುಸಿದ ವಿವರ೦ಗ ಈಗ ಸಿಕ್ಕಿತ್ತು. ಅದರನ್ನೂ ನೇಲುಸುತ್ತೆ.