- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಬೈಲಿಂಗೆ ನಮಸ್ಕಾರ!
ಎಲ್ಲೋರಿಂಗೂ ಗೊಂತಿದ್ದ ನಮುನೆಲಿ, ದಶಂಬ್ರ ಇಪ್ಪತ್ತೈದು!
ಇಂದು ಓಜುಪೇಯಿ ಅಜ್ಜನ ಹುಟ್ಟಿ ಎಂಬತ್ತೇಳ್ನೇ ಸರ್ತಿ ಬತ್ತಾ ಇಪ್ಪದು!
ದೇಶದ ಆಧುನಿಕ ರೂಪಕ್ಕೆ ಹೊಸ ಸ್ವರೂಪ ಕೊಟ್ಟ ವೆಗ್ತಿತ್ವಲ್ಲಿ ಅವುದೇ ಒಬ್ಬರು.
ಕಳುದೊರಿಶ ಈ ಶುದ್ದಿಯ ಒಪ್ಪಣ್ಣ ಹೇಳಿದ್ದ, ಓದಿದ್ದಿರಲ್ಲದೋ?:
ಪರಮಾಣು ಹೊಟ್ಟುಸಿ ಪರಮಾಪ್ತ ಆದವ°..!
ಅವರ ಹೆಸರು ಅಟಲು ಬಿಹಾರಿ ವಾಜುಪೇಯಿ. ಹೆಚ್ಚುಕಮ್ಮಿ ಶಂಬಜ್ಜನ ಕಾಲಲ್ಲಿ ಹುಟ್ಟಿದವು. ನವಗೆಲ್ಲ ಓಜುಪೇಯಿ ಅಜ್ಜ°..!
1924ರಲ್ಲಿ ಮಧ್ಯಪ್ರದೇಶದ ಗ್ವಾಲಿಯರು ಹೇಳ್ತಲ್ಲಿ ಹುಟ್ಟಿ, ಕಾನುಪುರಲ್ಲಿ ಕಲ್ತು, ರಾಜಸ್ತಾನ, ಮದ್ಯಪ್ರದೇಶ, ದೆಲ್ಲಿ – ಹೀಂಗೆಲ್ಲ ಓಡಾಡಿ, ಮುಂದೆ ದೇಶಕ್ಕೇ ಪರಿಚಿತ ಆದ ಆಜನ್ಮ ಬ್ರಹ್ಮಚಾರಿ. ಬೆಳಿಕಚ್ಚೆ, ಬೆಳಿ ಅಂಗಿ, ಅದರ ಮೇಗೆ ಕಂದು ಚಳಿಅಂಗಿ (ಸ್ವೆಟರು)! ಉರುಟು ಮೋರೆ, ಅರ್ದ ಮುಚ್ಚಿದ ಕಣ್ಣು, ಹಲ್ಲು ಕಾಣದ್ದ ಹಾಂಗೆ ಮುಚ್ಚಿದ ತೊಡಿ, ಮುಗ್ಧ ನೆಗೆ, ನಿಧಾನ ನಡಿಗೆ, ಕೈಕರಣದ ಮಾತುಗೊ, ವಿಶ್ವಾಸದ ನಿಲುವು,ಸ್ವತಃ ಕವಿ…. ಎಲ್ಲವೂ ಒಟ್ಟಾಗಿ ಓಜುಪೇಯಿ ಅಜ್ಜ°!
ಇಂದ್ರಾಣ ವಿಶೇಷದ ಲೆಕ್ಕಲ್ಲಿ ಬೈಲಿಂಗೆ ಒಂದು ಪಟ ತೋರುಸುತ್ತಾ ಇದ್ದೆ.
ಅಂದು ಉಡುಪಿಗೆ ವಾಜಪೇಯಿಅಜ್ಜ° ಬಂದಿಪ್ಪಗ ನಮ್ಮ ಗುರುಗಳ ಭೇಟಿ ಆದ್ಸು.
ಅಪುರೂಪದ ಪಟ ನಮ್ಮ ಅಕ್ಷರದಣ್ಣನ ಕಪಾಟಿಲಿ ಪಟದಪುಟಲ್ಲಿ ಇತ್ತು.
– ಬೈಲಿಂಗೆ ತೋರುಸುವನೋ ಹೇಳುವಗ ಸಂತೋಷಲ್ಲಿ ಕೊಟ್ಟವು. ಅವಕ್ಕೆ ವಂದನೆಗೊ.
ನೋಡಿ, ತೆಗದು ಮಡಿಕ್ಕೊಳಿ – ಅಪುರೂಪದ ಪಟ, ಅಲ್ಲದೋ?
ಓಜುಪೇಯಿಅಜ್ಜನ ಹಾಂಗಿರ್ತವು ಇನ್ನುದೇ ಸಾವಿರ ದೇಶಭಕ್ತರು ಬರಳಿ, ಭಾರತಮಾತೆ ಬೆಳಗಲಿ.
ಹರೇರಾಮ!
~
ಶುದ್ದಿಕ್ಕಾರ°
ಒಳ್ಳೆದಾಯಿದು.ವಾಜಪೇಯಿ ಇನ್ನೂ ಹಲವು ವರ್ಷ ಆರಾಮವಾಗಿ ಇರಲಿ ಹೇಳಿ ಹಾರೈಕೆ.
🙂
ಅಜಾತ ಶತ್ರು “ವಾಜಪೇಯಿ” ಬಗ್ಗೆ ಅವರ ಜನ್ಮದಿನದ ಈ ಲೇಖನ ಸಕಾಲಿಕ.
ದೇವರು ಅವಕ್ಕೆ ಆಯುರಾರೋಗ್ಯ ಕೊಟ್ಟು ನೂರ್ಕಾಲ ಬಾಳಲಿ.
ದೇಶದ ಹಿರಿಯ ಮುತ್ಸದ್ದಿಗೆ ನಮೋ ನಮಃ
ಶುದ್ದಿಕ್ಕಾರೋ, ಲೋಕಲ್ಲಿ ಎಲ್ಲೋರೂ ಶಾಂತಿದೂತನ ಅವತಾರ ಆದ ದಿನ ಹೇಳಿ ಆರಾಧನೆ ಮಾಡಿಗೊಂಡಿಪ್ಪ ದಿನಲ್ಲಿ, ನಮ್ಮ ದೇಶಲ್ಲಿದೆ ಒಂದು ಅನರ್ಘ್ಯ ರತ್ನ ಜನ್ಮ ಎತ್ತಿದ್ದು ಅಲ್ಲದಾ? ಎಂಬತ್ತೇಳು ವರ್ಷ ಅನುಭವದ ಓಜುಪೇಯಿ ಅಜ್ಜ°, ಈಗ ರಾಜಕೀಯ ವಿಶ್ರಾಂತಿಲಿ ಇದ್ದವು ಆದರೆ ಅವರ ಮನಸ್ಸು ದೇಶಕ್ಕಾಗಿ, ದೇಶದ ಜನಂಗೊಕ್ಕಾಗಿ ಇಂದಿಂಗೂ ಜಾಗೃತ ಆಗಿಕ್ಕು ಅಲ್ಲದ? ಅವರ ಹಾಂಗೆ ಇಪ್ಪ ದೇಶಭಕ್ತರು ಸಿಕ್ಕುದೆ ಕಷ್ಟ. ನೀನು ಅವರ ವ್ಯಕ್ತಿತ್ವವ ವಿವರ್ಸಿದ್ದು ಲಾಯ್ಕಾಯಿದು. ಅಪರೂಪದ ಪಟ ಕೊಟ್ಟದಕ್ಕೆ ಅಕ್ಷರದ ಅಣ್ಣಂಗೆ ಮತ್ತೆ ನಿನಗೆ ಧನ್ಯವಾದಂಗೋ..
ನೀನು ಹೇಳಿದ ಹಾಂಗೆ ಓಜುಪೇಯಿ ಅಜ್ಜನ ಹಾಂಗೆ ಇಪ್ಪ ದೇಶ ಭಕ್ತರು ಸಾವಿರಂಗಳಲ್ಲಿ ಆಗಿ ಭಾರತಮಾತೆ ಬೆಳಗಲಿ.