- ವಿಷು ವಿಶೇಷ ಸ್ಪರ್ಧೆ – 2021 - April 14, 2021
- 26-ಜೂನ್-2015: ಮುಜುಂಗಾವು ವಿದ್ಯಾಪೀಠಕ್ಕೆ “ವಿದ್ಯಾನಿಧಿ ಸಮರ್ಪಣೆ” - June 26, 2015
- ವಿಷು ವಿಶೇಷ ಸ್ಪರ್ಧೆ 2015 : ಆಹ್ವಾನ - January 11, 2015
ಆಧುನಿಕ ಯುಗದ ಅಂತರ್ಜಾಲಲ್ಲಿ ಒಪ್ಪಣ್ಣನ ನೆರೆಕರೆ https://oppanna.com ಹೇಳ್ತ ಹವ್ಯಕ ವೆಬ್-ಸೈಟ್ ಕಳುದ ಆರು ವರುಷ೦ದ ತನ್ನ ಸಾಹಿತ್ಯ ಕೃಷಿಯ ಮಾಡುತ್ತಾ ಬೈಂದು .
Oppanna.com – ಸಾಹಿತಿ-ಚಿಂತಕ-ಬರಹಗಾರರ ಬಳಗ ಈಗ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.) ಹೇಳಿ ಸರಕಾರೀ ಮಾನ್ಯತೆ ಪಡೆದ ಸ್ವಾಯತ್ತ ಸಂಸ್ಥೆ ಆಯಿದು.
ಹವ್ಯಕಭಾಷಾ ಸಾಹಿತ್ಯದ ಬೆಳವಣಿಗೆಯ ದೃಷ್ಟಿಲಿ ತನ್ನ ಪ್ರಯತ್ನ ಮಾಡ್ತಾ ಇಪ್ಪ ಪ್ರತಿಷ್ಠಾನ, ಮುಂದೆ ಸಾಮಾಜಿಕ- ಸಾಂಸ್ಕೃತಿಕ ಕಾರ್ಯಕ್ರಮಂಗಳ ಮೂಲಕ ವ್ಯಾಪ್ತಿವಿಸ್ತಾರವ ಹೆಚ್ಚುಸುವ ಯೋಜನೆಲಿ ಇದ್ದು.
ಕಳುದ ಎರಡು ವರ್ಷಂದ ಯುಗಾದಿಗೆ ಆಯೋಜನೆ ಆದ ವಿಷು ವಿಶೇಷ ಸ್ಪರ್ಧೆ – ಹವ್ಯಕ ಸಾಹಿತ್ಯ ಲೋಕಕ್ಕೆ ಹೊಸ ಸಂಚಲನ ಕೊಟ್ಟಿದು.
ಈ ವರ್ಷವೂ ಯುಗಾದಿಯ ಪರ್ವಕಾಲಲ್ಲಿ ಹವ್ಯಕ ಸಾಹಿತ್ಯದ ಬೆಳವಣಿಗೆಗಾಗಿ “ವಿಷು ವಿಶೇಷ ಸ್ಪರ್ಧೆ – 2014” ಆಯೋಜನೆ ಮಾಡ್ತಾ ಇದ್ದು.
ಬನ್ನಿ, ಭಾಗವಹಿಸಿ, ನಿಂಗಳ ನೆಂಟರು ಮಿತ್ರರಿಂಗೂ ತಿಳುಶಿ …
ವಿಷು ವಿಶೇಷ ಸ್ಪರ್ಧೆ – 2014 ವಿವರಂಗೊ:
- ಪ್ರಬಂಧ:
ವಿಷಯ – “ಹವ್ಯಕ ಭಾಷೆಯ ಬೆಳವಣಿಗೆಯಲ್ಲಿ ಸಂಘಟನೆಯ ಪಾತ್ರ”
750 ಶಬ್ದಂಗೊಕ್ಕೆ ಸೀಮಿತವಾಗಿರಲಿ. - ಕಥೆ :
ವ್ಯಾಪ್ತಿ: ಸಾಮಾಜಿಕ ಜೀವನ (ವಿಷಯ ಸ್ಪರ್ಧಾರ್ಥಿಗಳ ಆಯ್ಕೆ)
1000 ಶಬ್ದಂಗೊಕ್ಕೆ ಸೀಮಿತವಾಗಿರಲಿ. - ಕವಿತೆ:
ವಿಷಯ: ಹಬ್ಬದ ಗೌಜಿ
30 ಸಾಲುಗಳ ಒಳ ಇರಳಿ .
ಛಂದೋಬದ್ಧವಾದ ಕವಿತೆಗೊಕ್ಕೆ ಹೆಚ್ಚಿನ ಆದ್ಯತೆ. - ನೆಗೆಬರಹ:
ಸದಭಿರುಚಿಯ ಲಘುಬರಹ ಈ ವಿಭಾಗಕ್ಕೆ ಬರಲಿ.
500 ಶಬ್ದಂಗೊಕ್ಕೆ ಮಿತಿಗೊಳುಸಿ .
(ಅಪಹಾಸ್ಯ, ಅಶ್ಲೀಲತೆಗೊ ಬೇಡ) - ಫೋಟೋ ಸ್ಪರ್ಧೆ:
ಭಾರತೀಯರ ಸಾಂಪ್ರದಾಯಿಕ ಮನೆಗಳ ಪ್ರತಿನಿಧಿಸುವ ಫೋಟೋಕ್ಕೆ ಸೂಕ್ತ ಶೀರ್ಷಿಕೆಯನ್ನೂ ಕೊಟ್ಟು ಕಳುಸಿ .
ಫೋಟೋದ ಗಾತ್ರ: ಅಂಚೆಯಲ್ಲಿ ಕಳುಸುತ್ತ ರೆ 5×7 ಅಳತೆಲಿ.
ಮಿಂಚಂಚೆಲಿ ಕಳುಸುತ್ತರೆ ಗರಿಷ್ಠ – 1 MB.
ನಿಯಮಂಗೊ:
- ಎಲ್ಲಾ ಬರಹಂಗೊ ಕಡ್ಡಾಯವಾಗಿ ಹವ್ಯಕ ಭಾಷೆ- ಕನ್ನಡ ಲಿಪಿಲಿಯೇ ಇರೇಕು.
- ಹವ್ಯಕ ಪರಂಪರೆ – ಸಂಸ್ಕೃತಿಯ ಹಿರಿಮೆಗಳ ಬಿಂಬುಸುವ ಬರಹಂಗೊಕ್ಕೆ ಆದ್ಯತೆ.
- ಸ್ಪರ್ಧೆಗೆ ಬಪ್ಪ ಯಾವುದೇ ಬರಹ / ಫೋಟೋ ಈ ಹಿಂದೆ ಬೇರೆಲ್ಲಿಯೂ ಪ್ರಕಟ ಆಗಿಪ್ಪಲಾಗ.
- ಸ್ಪರ್ಧೆಗೆ ಬಂದ ಎಲ್ಲಾ ಬರಹ / ಫೋಟೋಗಳ ಸಂಪೂರ್ಣ ಸ್ವಾಮ್ಯ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ) ದ್ದೇ ಆಗಿರ್ತು.
- ಸ್ಪರ್ಧೆಯ ವಿಚಾರಲ್ಲಿ ಪ್ರತಿಷ್ಠಾನದ ತೀರ್ಮಾನವೇ ಅಂತಿಮ.
- ಪ್ರತಿ ವಿಭಾಗಲ್ಲಿ ಪ್ರಥಮ ಮತ್ತು ದ್ವಿತೀಯ – ಎರಡು ಬಹುಮಾನಂಗೊ ಇರ್ತು.
ಸೂಕ್ತ ಸಂದರ್ಭಲ್ಲಿ ಪ್ರೋತ್ಸಾಹಕ ಬಹುಮಾನವನ್ನೂ ಕೊಡುವ ಯೋಜನೆ ಇದ್ದು. - ಬಹುಮಾನ ವಿಜೇತರುಗಳ ವಿಷುವಿನಂದು (14-04-2014) https://oppanna.com ಅಂತರ್ಜಾಲಲ್ಲಿ ಪ್ರಕಟ ಆವುತ್ತು.
- ಹಸ್ತಪ್ರತಿಗಳ ಕಳುಸುತ್ತರೆ A4 ಹಾಳೆಲಿಯೇ ಬರದಿರೆಕು.
- ಭಾಗವಹಿಸುಲೆ ಕೊನೇ ದಿನ : 03-03-2014
ನಿಂಗಳ ಬರಹ/ಫೋಟೋ ಹೆಸರು, ಸಂಪೂರ್ಣ ವಿಳಾಸ, ಹುಟ್ಟಿದ ತಾರೀಕು, ದೂರವಾಣಿ ಸಂಖ್ಯೆ, ಸ್ವವಿವರಗಳ ಸಹಿತ,
ಈ ವಿಳಾಸಕ್ಕೆ ಕಳುಸಿ:
ಅಂಚೆ ವಿಳಾಸ:
ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ),
“ಅನುಗ್ರಹ”, ಶಿವಗಿರಿ ನಗರ, ಕುಳಾಯಿ-ಹೊಸಬೆಟ್ಟು,
ಮಂಗಳೂರು – 575019
ಮಿಂಚಂಚೆ ವಿಳಾಸ:
editor@oppanna.com
ಹೆಚ್ಚಿನ ಮಾಹಿತಿಗಾಗಿ ಈ ನಂಬ್ರಂಗಳಲ್ಲಿ ಸಂಪರ್ಕಿಸಿ :
- ಮಂಗಳೂರು – 09449806563 / 09591994644
- ಕಾಸರಗೋಡು – 08547245304
- ಬೆಂಗಳೂರು – 09448472292 / 09535354380 / 09448271447
ಅಥವಾ http://oppanna.org/ ಅಂತರ್ಜಾಲ ಪುಟಲ್ಲಿ ಸಿಕ್ಕುತ್ತು.
~
ವಿಷು ವಿಶೇಷ ಸ್ಪರ್ಧೆ 2014 – ಸಂಚಾಲಕರು:
ರವಿಶಂಕರ ದೊಡ್ಡಮಾಣಿ
editor@oppanna.com / 08547245304
~
ಗಮನಿಸಿ: ಈ ಸ್ಪರ್ಧೆ ಹವ್ಯಕರಿಂಗಾಗಿ ಮಾಂತ್ರ ಅಲ್ಲ, ಹವ್ಯಕ ಭಾಷೆಗಾಗಿ.
ಕನ್ನಡ ಭಾಷೆಯ ಸುದ್ದಿಗೆ ಸಂಕೋಲೆ
ಒರಿಶ೦ದ ಒರಿಶಕ್ಕೆ ನಮ್ಮ ಬೈಲು ಬೆಳೆತ್ತಾ ಇಪ್ಪದು.ಸ೦ತೋಷದ ವಿಚಾರ.ಹಾ೦ಗೇ ಈ ಸ್ಪರ್ಧೆಲಿ ಭಾಗವಿಸುವ ಸ೦ಖ್ಯೆ ಹೆಚ್ಚುತ್ತಾ ಮು೦ದುವರಿಯಲಿ.ಅದೇ ರೀತಿ ನಮ್ಮ ಬೈಲು ಸರ್ವಾ೦ಗ ಸೌ೦ದರ್ಯ೦ದ ಬೆಳದು ಸಮೃದ್ಧವಾಗಲಿ ಹೇದು ಹಾರೈಸುತ್ತೆ.
ಇದು ಒಳ್ಲೆಯ ಪ್ರಯತ್ನ.ನಾವು ಇದರ ಹೊಗಳೂವೊ. ಸ್ಪರ್ಧೆ ಯಶಸ್ವಿಯಾಗಲಿ. ಮಕ್ಕಳೂ, ಹಿರಿಯರೂ ಭಾಗವಹಿಸುಲೆ ಮನಸ್ಸು ಮಾಡಲಿ.
”ಈ ಸ್ಪರ್ಧೆ ಹವ್ಯಕರಿಂಗಾಗಿ ಮಾಂತ್ರ ಅಲ್ಲ, ಹವ್ಯಕ ಭಾಷೆಗಾಗಿ”…..ಇದು ಖುಷಿ ಆತು
ಹರೇರಾಮ, ಹೆಚ್ಹು ಹೆಚ್ಹು ಜೆನ ಭಾಗವಹಿಸಿ ‘ವೇದಿಕೆ’ ಬೆಳೆಲಿ
ಸ೦ತೋಷದ ವಿಷಯ.ಹವ್ಯಕ ಭಾಷಾಸಾಹಿತ್ಯದ ಬೆಳವಣಿಗೆಯ ಈ ಪ್ರಯತ್ನ ಯಶಸ್ವಿಯಾಗಲಿ.