ವೇಣಿಯಕ್ಕ° 04/12/2012
ಚಿಕ್ಕು ಐಸ್ಕ್ರೀಮ್ ಬೇಕಪ್ಪ ಸಾಮಾನುಗೊ: 10 ಕಪ್(ಕುಡ್ತೆ) ಹಾಲು 4 ಕಪ್ ಸಕ್ಕರೆ 7-8 ಚಿಕ್ಕು 1 ಚಮ್ಚೆ ಐಸ್ಕ್ರೀಮ್ ಹೊಡಿ 1.5 ಚಮ್ಚೆ ಕಸ್ಟರ್ಡ್ ಹೊಡಿ ಮಾಡುವ ಕ್ರಮ: ಚಿಕ್ಕಿನ ತೊಳದು, ಹೆರಾಣ ಚೋಲಿ, ಬಿತ್ತು ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ ಮಡುಗಿ. ಒಂದು ದಪ್ಪ ಪಾತ್ರೆಲಿ ಹಾಲು, ಐಸ್ಕ್ರೀಮ್ ಹೊಡಿ, ಕಸ್ಟರ್ಡ್ ಹೊಡಿ ಹಾಕಿ ತೊಳಸಿ. ಸಕ್ಕರೆ ಹಾಕಿ ಕೊದುಶಿ. ಇದರ ಸಣ್ಣ ಕಿಚ್ಚಿಲ್ಲಿ ಸಾಧಾರಣ 15-20 ನಿಮಿಷ ತೊಳಸಿ. ಮತ್ತೆ ಸಾಧಾರಣ ಒಂದು ಘಂಟೆ ತಣೀವನ್ನಾರ ಕರೆಲಿ ಮಡುಗಿ. ಚಿಕ್ಕು, ಮೇಲೆ ಕೊದುಶಿ ತಣುಶಿದ ಹಾಲಿನ ಮಿಕ್ಸಿಗೆ ಹಾಕಿ ನೊಂಪಿಂಗೆ ಕಡೆರಿ. ಇದರ ಒಳುದ ಹಾಲಿಂಗೆ ಹಾಕಿ ತೊಳಸಿ. ಪುನಃ ಒಂದರಿ ಎಲ್ಲವನ್ನೂ ಮಿಕ್ಸಿಗೆ ಹಾಕಿ ತಿರ್ಗ್ಸಿ. ಇದರ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಒಂದು ಪಾತ್ರಲ್ಲಿ ಹಾಕಿ, ಮುಚ್ಚಲು ಮುಚ್ಚಿ ಫ್ರೀಜರ್ಲ್ಲಿ 3-4 ಘಂಟೆ ಮಡುಗಿ. ಪುನಃ ಈ ಐಸ್ಕ್ರೀಮಿನ ತೆಗದು ಮಿಕ್ಸಿಗೆ ಹಾಕಿ ಒಂದು ನಿಮಿಷ ಕಡದು ಪುನಃ ಅದೇ ಪಾತ್ರಕ್ಕೆ ಹಾಕಿ ಫ್ರೀಜರ್ಲ್ಲಿ 5-6 ಘಂಟೆ(ಘಟ್ಟಿ ಅಪ್ಪನ್ನಾರ) ಮಡುಗಿ. (ಗರ-ಗರ ಐಸ್ಕ್ರೀಮ್ ಬೇಕಾದರೆ ಈ ಕೊನೆಯಾಣ ಹಂತವ ಮಾಡೆಕ್ಕು ಹೇಳಿ ಇಲ್ಲೆ.) ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ. ~ ವೇಣಿ ಅಕ್ಕ°