ವೇಣಿಯಕ್ಕ° 21/05/2013
ಮಾವಿನ ಹಣ್ಣು ರಸಾಯನ ಬೇಕಪ್ಪ ಸಾಮಾನುಗೊ: 2 ದೊಡ್ಡ ಮಾವಿನ ಹಣ್ಣು 1 ಕಪ್(ಕುಡ್ತೆ) ಬೆಲ್ಲ 1/2 ಕಪ್(ಕುಡ್ತೆ) ಸಕ್ಕರೆ 2 ಕಪ್(ಕುಡ್ತೆ) ಕಾಯಿ ತುರಿ ಅಥವಾ 1.5 ಕಪ್(ಕುಡ್ತೆ) ಕಾಯಿ ಹಾಲು 2 ಚಮ್ಚೆ ಎಳ್ಳು (ಬೇಕಾದರೆ ಮಾತ್ರ) 2-3 ಚಮ್ಚೆ ಸಣ್ಣಕೆ ತುರುದ ಕಾಯಿ ತುರಿ (ಬೇಕಾದರೆ ಮಾತ್ರ) ಚಿಟಿಕೆ ಉಪ್ಪು 2 ಏಲಕ್ಕಿ ಮಾಡುವ ಕ್ರಮ: ಮಾವಿನ ಹಣ್ಣಿನ ಚೋಲಿಯ ತೆಗದು, ಸಣ್ಣಕೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕೊಚ್ಚಿ ಮಡುಗಿ. ಇದಕ್ಕೆ ಬೆಲ್ಲ, ಸಕ್ಕರೆ, ಚಿಟಿಕೆ ಉಪ್ಪು ಹಾಕಿ ತೊಳಸಿ 20-30 ನಿಮಿಷ ಮಡುಗಿ. ಕಾಯಿಯ ರೆಜ್ಜ ನೀರು ಹಾಕಿ ನೊಂಪಿಂಗೆ ಕಡದು, ಒಂದು ವಸ್ತ್ರಲ್ಲಿ ಹಿಂಡಿ. ಕಾಯಿ ಹಾಲಿನ ಮಾವಿನ ಹಣ್ಣು ಕೊಚ್ಚಿ ಮಡುಗಿದ ಪಾತ್ರಕ್ಕೆ ಹಾಕಿ