ವೇಣಿಯಕ್ಕ° 28/01/2014
ಶುಂಠಿ – ನಿಂಬೆ ಹುಳಿ ಜ್ಯೂಸ್ ಸಿರಪ್ ಬೇಕಪ್ಪ ಸಾಮಾನುಗೊ: 1-1.25 ಕಪ್(ಕುಡ್ತೆ) ನಿಂಬೆ ಹುಳಿ ಎಸರು 1/2 ಕಪ್(ಕುಡ್ತೆ) ಕ್ರಶ್ ಮಾಡಿದ ಶುಂಠಿ 8 ಕಪ್(ಕುಡ್ತೆ) ಸಕ್ಕರೆ 1.5-2 ಕಪ್(ಕುಡ್ತೆ) ನೀರು ಮಾಡುವ ಕ್ರಮ: ನಿಂಬೆ ಹುಳಿಯ ಲಾಯಿಕಲಿ ತೊಳದು, ತುಂಡು ಮಾಡಿ, ಬಿತ್ತಿನ ತೆಗದು ಎಸರು ಹಿಂಡಿ ಮಡುಗಿ. ಶುಂಠಿಯನ್ನೂ ಲಾಯಿಕಲಿ ತೊಳದು, ಮಿಕ್ಸಿಗೆ ಹಾಕಿ ಕ್ರಶ್ ಮಾಡಿ ಮಡಿಕ್ಕೊಳ್ಳಿ. ಸಕ್ಕರೆ, ನೀರಿನ ಒಂದು ಪಾತ್ರಲ್ಲಿ ಹಾಕಿ ತೊಳಸಿ, ಕೊದುಶಿ. ಇದಕ್ಕೆ ಕ್ರಶ್ ಮಾಡಿದ ಶುಂಠಿಯ ಹಾಕಿ ಸಕ್ಕರೆ ಪಾಕ ಅಪ್ಪನ್ನಾರ ಮಡುಗಿ. (ಸಕ್ಕರೆ ಪಾಕ ಆತಾ ಹೇಳಿ ನೋಡುಲೆ, ಕೋಲು ಬೆರಳಿನ ಕೊಡಿಯ ಜಾಗ್ರತೆಲಿ ಸಕ್ಕರೆ ಪಾಕಕ್ಕೆ ಅದ್ದಿ, ಅದರ ಹೆಬ್ಬಟೆ ಬೆರಳಿಲ್ಲಿ ಮುಟ್ಟಿ ಬಿಡಿ. ಅಸ್ಟೊತ್ತಿಂಗೆ ನೂಲಿನ ಹಾಂಗೆ ಬಂದರೆ ಸಕ್ಕರೆ ಪಾಕ ಆಯಿದು ಹೇಳಿ ಲೆಕ್ಕ.) ಇದಕ್ಕೆ ನಿಂಬೆ ಹುಳಿ ಎಸರಿನ ಹಾಕಿ ಲಾಯಿಕಲಿ ತೊಳಸಿ, ಕಿಚ್ಚಿನ ನಂದ್ಸಿ. ಇದರ ಒಂದು ಅರಿಪ್ಪೆಲಿ ಅರುಶಿ, ತಣಿವಲೆ ಮಡಿಗಿ. ಪೂರ್ತಿ ತಣುದ ಮೇಲೆ ಇದರ ಲಾಯಿಕಲಿ ತೊಳಸಿ, ಕುಪ್ಪಿಗೆ ತುಂಬ್ಸಿ ಮಡುಗಿ. ಫ್ರಿಜ್ಜಿಲ್ಲಿ ಮಡುಗಿದರೆ 6 ತಿಂಗಳಾದರೂ ಹಾಳಾವುತ್ತಿಲ್ಲೆ. ಜ್ಯೂಸ್ ಮಾಡ್ಲೆ, ಈ ಸಿರಪ್ಪಿನ ಒಂದು ಪಾತ್ರಲ್ಲಿ ಹಾಕಿ ಅದಕ್ಕೆ 4 ಪಟ್ಟು ನೀರು ಹಾಕಿ ತೊಳಸಿ. ಐಸ್ ತುಂಡು ಬೇಕಾದರೆ ಹಾಕಿ ಕೊಡಿ.
ವೇಣಿಯಕ್ಕ° 14/05/2013
ಮಾವಿನ ಹಣ್ಣಿನ ಶರಬತ್ತು(ಜ್ಯೂಸ್) ಬೇಕಪ್ಪ ಸಾಮಾನುಗೊ: 5-6 ಕಾಟು ಮಾವಿನ ಹಣ್ಣು 1-1.5 ಕಪ್(ಕುಡ್ತೆ) ಸಕ್ಕರೆ 6 ಕಪ್(ಕುಡ್ತೆ) ತಣ್ಣಂಗೆ ನೀರು ಮಾಡುವ ಕ್ರಮ: ಕಾಟು ಮಾವಿನ ಹಣ್ಣಿನ ಲಾಯಿಕಲಿ ತೊಳದು, ತೊಟ್ಟು ತೆಗದು, ಕೆಳಾಣ ಚಿತ್ರಲ್ಲಿ