ವೇಣಿಯಕ್ಕ° 08/01/2013
ಸಂಕ್ರಾಂತಿ ಎಳ್ಳು ಬೆಲ್ಲ ಬೇಕಪ್ಪ ಸಾಮಾನುಗೊ: 1 ಕಪ್(ಕುಡ್ತೆ) ನೆಲಕಡಲೆ 1 ಕಪ್(ಕುಡ್ತೆ) ತುಂಡು ಮಾಡಿದ ಕೊಪ್ಪರ ಕಾಯಿ 1 ಕಪ್(ಕುಡ್ತೆ) ತುಂಡು ಮಾಡಿದ ಬೆಲ್ಲ 1 ಕಪ್(ಕುಡ್ತೆ) ಪುಟಾಣಿ/ಚಟ್ನಿ ಕಡ್ಲೆ 3/4-1 ಕಪ್(ಕುಡ್ತೆ) ಎಳ್ಳು ಮಾಡುವ ಕ್ರಮ: ನೆಲಕಡ್ಲೆಯ ಒಂದು ಬಾಣಲೆಲಿ ಹೊರುದು, ಚೋಲಿ ತೆಗದು ಅರ್ಧ-ಅರ್ಧ ಮಾಡಿ ಮಡಿಕ್ಕೊಳ್ಳಿ. ಎಳ್ಳನ್ನೂ ಬಾಣಲೆಗೆ ಹಾಕಿ ಪರಿಮ್ಮಳ ಬಪ್ಪನ್ನಾರ/ಹೊಟ್ಟುವನ್ನಾರ ಹೊರುದು ಕರೆಲಿ ಮಡುಗಿ. ಕೊಪ್ಪರ ಕಾಯಿಯ ಹೆರಾಣ ಚೋಲಿಯ ಕೆರಸಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ತುಂಡು ಮಾಡಿ ಮಡಿಕ್ಕೊಳ್ಳಿ. ಬೆಲ್ಲವನ್ನೂ ಸಣ್ಣಕೆ ತುಂಡು ಮಾಡಿ ಮಡಿಕ್ಕೊಳ್ಳಿ. ಈ ಎಲ್ಲಾ ಸಾಮಾನನ್ನು ಒಂದು ಪಾತ್ರೆಗೆ ಹಾಕಿ ತೊಳಸಿ ಒಂದು ಕರಡಿಗೆಲಿ ತೆಗದು ಮಡುಗಿ. ಇದರ ನೈವೇದ್ಯಕ್ಕೆ ಉಪಯೋಗ್ಸುಲೆ ಅಕ್ಕು. ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ. ~ ವೇಣಿ ಅಕ್ಕ° ಸೂ: ಈ ಶುದ್ದಿಯ