Oppanna.com

ಪೆರಡಾಲ ವಸ೦ತ ವೇದಪಾಠಶಾಲೆಗೆ ನಿಧಿ ಸಮರ್ಪಣೆ-ವರದಿ

ಬರದೋರು :   ಶುದ್ದಿಕ್ಕಾರ°    on   10/05/2015    4 ಒಪ್ಪಂಗೊ

ಜೀವನಮೌಲ್ಯ೦ಗಳ ತಿಳ್ಕೊ೦ಬಲೆ ವೇದಾಧ್ಯಯನ ಸಹಕಾರಿ: ಜಯದೇವ ಖಂಡಿಗೆ

“ವೇದ೦ಗಳಲ್ಲಿ ನಮ್ಮ ಹಿರಿಯರು ಕಂಡುಗೊ೦ಡ ಜೀವನ ಮೌಲ್ಯ೦ಗಳ ಯಥಾವತ್ತಾದ ವಿವರ೦ಗೊ ಇದ್ದು. ಈ ಕಾರಣಕ್ಕಾಗಿ ವೇದಾಧ್ಯಯನ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಸಹಕಾರಿ ಆಗಿದ್ದು. ಸಮಾಜಮುಖಿ ಚಟುವಟಿಕೆಗಳಲ್ಲಿ ಕಾರ್ಯಪ್ರವೃತ್ತವಾಗಿಪ್ಪ ಒಪ್ಪಣ್ಣ ಅಂತರ್ಜಾಲ ತಾಣ ಆಸಕ್ತರ ಬಳಗ ವೇದಾಧ್ಯಯನವ ಪ್ರೋತ್ಸಾಹಿಸುಲೆ ‘ವೇದ ವಿದ್ಯಾ’ ಹೇಳ್ತ ವಿಭಾಗವ ಸಕ್ಷಮವಾಗಿ ನಿರ್ವಹಿಸಿಗೊ೦ಡಿಪ್ಪದು ತುಂಬ ಸಂತೋಷದ ವಿಚಾರ. ಹವ್ಯಕ ಭಾಷೆಯ ಒಳುಶಿ ಬೆಳೆಶುವ ದೃಷ್ಟಿಲಿ ರೂಪುಗೊಂಡ ಈ ಪ್ರತಿಷ್ಠಾನವು ಅನೂಚಾನವಾದ ಸಂಸ್ಕೃತಿಯ ಉಳಿವಿ೦ಗೂ ಪ್ರಯತ್ನ ಮಾಡ್ತಾ ಇಪ್ಪದು ಶ್ಲಾಘನೀಯ ಹೇಳಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ವ್ಯವಸ್ಥಾಪಕ ಶ್ರೀ ಜಯದೇವ ಖಂಡಿಗೆ ಇವು ಅಭಿಪ್ರಾಯಪಟ್ಟವು. 10.05.2015 ಭಾನುವಾರ ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರಲ್ಲಿ ನಡೆತ್ತಾ ಇಪ್ಪ ರಜಾಕಾಲದ ವಸಂತ ವೇದಪಾಠ ಶಿಬಿರಕ್ಕೆ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನವು ಕೊಡಮಾಡುವ ನಿಧಿ ಸಮರ್ಪಣೆ ಕಾರ್ಯಕ್ರಮಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಈ ಮಾತುಗಳ ಹೇಳಿದವು.

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀಕೃಷ್ಣ ಶರ್ಮ ಹಳೆಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿತ್ತಿದ್ದವು. ವೇದ ಪಾಠಶಾಲೆಯ ಕಾರ್ಯದರ್ಶಿ ಡಾ|ಸದಾಶಿವ ಭಟ್ ದೇಣಿಗೆಯ ಸ್ವೀಕರಿಸಿದವು. ಪ್ರತಿಷ್ಠಾನದ ವೇದ ವಿದ್ಯಾ ವಿಭಾಗ ಸಂಚಾಲಕರಾದ ಶ್ರೀ ಗಣೇಶ್ ಭಟ್ ಮಾಡಾವು ಪ್ರಾಸ್ತಾವಿಕ ಭಾಷಣ ಮಾಡಿದವು. ವೇದಮೂರ್ತಿ ಪಟ್ಟಾಜೆ ವೆಂಕಟೇಶ್ವರ ಭಟ್ ಸ್ವಾಗತಿಸಿದವು. ಶ್ರೀ ಉದನೇಶ್ವರ ಕ್ಷೇತ್ರದ ಪ್ರಧಾನ ಅರ್ಚಕರಾದ ವೇದಮೂರ್ತಿ ತುಪ್ಪೆಕ್ಕಲ್ಲು ಶಿವರಾಮ ಭಟ್ಟರು ಧನ್ಯವಾದ ಸಮರ್ಪಿಸಿದವು. ಶಿಬಿರದ ವಿದ್ಯಾರ್ಥಿಗೊ ವೈದಿಕ ಪ್ರಾರ್ಥನೆ ಮಾಡಿದವು.Report_Perdala Veda ShibiraIMG-20150510-WA0036IMG-20150510-WA0039IMG-20150510-WA0038

 

 

 

4 thoughts on “ಪೆರಡಾಲ ವಸ೦ತ ವೇದಪಾಠಶಾಲೆಗೆ ನಿಧಿ ಸಮರ್ಪಣೆ-ವರದಿ

  1. ಕಾರ್ಯಕ್ರಮವ ಚೊಕ್ಕಕೆ ವ್ಯವಸ್ಥೆಮಾಡಿದ ದೊಡ್ಡಭಾವಂಗೆ, ವೇದಪಾಠಶಾಲೆಯ ಗುರುಗೊಕ್ಕೆ ಹಾಂಗೂ ವೇದ ಪಾಠ ಶಾಲೆಯ ಆಢಳಿತ ಮಂಡಳಿಯವಕ್ಕೆ ತುಂಬು ಹೃದಯದ ಧನ್ಯವಾದಂಗೊ.
    ಎಂಗೊಗೆ ಅಲ್ಲಿ ಕಾರ್ಯಕ್ರಮಕ್ಕೆ ಸಿಕ್ಕಿದ ಪ್ರೋತ್ಸಾಹ ನೋಡಿ ತುಂಬಾ ಕೊಶೀ ಆಯಿದು.
    ಈ ವೇದಾಭ್ಯಾಸ ನಿರಂತರವಾಗಿ ನಡೆಯಲಿ ಹೇಳಿ ಹಾರೈಕೆಗೊ.

  2. ಸ೦ತೋಷದ ವಿಷಯ . ಮಕ್ಕೊಗೆ ಉತ್ತಮ ಸಂಸ್ಕಾರ ಸಿಕ್ಕಲಿ,ಸಂಸ್ಕೃತಿ ಸಮೃದ್ಧವಾಗಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×