ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನಲ್ಲಿ ಕಾಸರಗೋಡು ಹೊಸದುರ್ಗ ಹವ್ಯ ಮಹಾಸಭೆಯ ಆಶ್ರಯಲ್ಲಿ ನೆಡೆತ್ತಾ ಇಪ್ಪ ವಸ೦ತ ವೇದಪಾಠಶಾಲೆಯ ಈ ವರುಷದ ಬೇಸಗೆಯ ಶಿಬಿರ ಮೊನ್ನೆ ಎಪ್ರಿಲ್ ಎರಡನೆಯ ತಾರೀಕು ಶ್ರೀ ಬಾಲಸುಬ್ರಮಣ್ಯ ಭಟ್ ಕೆ.ಎಮ್. ( ದೇವಸ್ಥಾನದ ಸಹಾಯಕ ಅರ್ಚಕರು)ಇವರ ಹಸ್ತ೦ದ ಉದ್ಘಾಟನೆ ಆತು.
ಶ್ರೀ ಕುಳಮರ್ವ ಶ೦ಕರನಾರಾಯಣ ಭಟ್ ಇವು ಪ್ರಾಸ್ತಾವಿಕ ಭಾಷಣ ಮಾಡಿದವು.ಮುಖ್ಯ ಅತಿಥಿಗಳಾಗಿ ಶ್ರೀ ಪಟ್ಟಾಜೆ ಶ್ರೀಕೃಷ್ಣ ಭಟ್ ಇವು ಆಗಮಿಸಿತ್ತಿದ್ದವು.
ಶ್ರೀಗಳಾದ ವೇದಮೂರ್ತಿ ಕಿಳಿ೦ಗಾರು ಸತ್ಯೇಶ್ವರ ಭಟ್, ವೇದಮೂರ್ತಿ ಪಟ್ಟಾಜೆ ವೆ೦ಕಟೇಶ್ವರ ಭಟ್,ಡಾ.ಸದಾಶಿವ ಭಟ್,ಕಿಳಿ೦ಗಾರು ಸುಬ್ರಮಣ್ಯ ಪ್ರಸಾದ ಇವರ ಮಾರ್ಗದರ್ಶನಲ್ಲಿ ಎಪ್ರಿಲ್ ಮತ್ತೆ ಮೇ -ಈ ಎರಡು ತಿ೦ಗಳ ಕಾಲ ನೆಡೆತ್ತ ಈ ಶಿಬಿರಲ್ಲಿ ಈ ವರುಷ ೧೦೦ ಕ್ಕೂ ಹೆಚ್ಚು ವಿದ್ಯಾರ್ಥಿಗೊ ಭಾಗವಹಿಸುತ್ತಾ ಇದ್ದವು.
ಓ- ರಘುಭಾವ° ಆರು ಹೇಳಿ ನಿಂಗೊಗೆ ಗೊಂತಾತೋ? ಬೈಲಿನ ಒಪ್ಪಂಗಳ ನಿತ್ಯವೂ ನೋಡಿಗೊಂಡು ಇದ್ದಿದ್ದರೆ ಗೊಂತಾವುತಿತು. ಎಲ್ಲಾ ಶುದ್ದಿಗೊಕ್ಕೆ ಪ್ರೋತ್ಸಾಹಕ ಒಪ್ಪಂಗಳ ಕೊಟ್ಟೊಂಡು, ವಿಶಿಷ್ಟ ರೀತಿಯ ವಾದಂಗಳ ಮಂಡಿಸಿಗೊಂಡು, ಆಸಕ್ತಿದಾಯಕವಾಗಿ ಬರವದು ಅವರ ಹವ್ಯಾಸ. ಅವರ ಮೂಲ ನಮ್ಮ ಊರಿನ ಮುಳಿಯವೇ! ಮುಳಿಯದ ಅಜ್ಜ° ಇತ್ತಿದ್ದವಲ್ಲದೋ (ಶ್ರೀ ಮುಳಿಯ ತಿಮ್ಮಪ್ಪಯ್ಯ) - ಅವರ ತಮ್ಮನ ಪುಳ್ಳಿ! ಸದ್ಯಕ್ಕೆ ಬೆಂಗುಳೂರಿಲಿ ಯೇವದೋ ಕಂಪೆನಿಲಿ ದೊಡ್ಡ ಕೆಲಸ. ನಾಲ್ಕು ಜೆನರ ತುಂಬು ಸಂಸಾರ - ಸುಖ ಸಾಗರವಾಗಿ ನೆಡೆತ್ತಾ ಇದ್ದು. ದಿನ ಉದಿಯಾದರೆ ಆಪೀಸು - ಹೊತ್ತಪ್ಪಗ ಮನಗೆ. ಹೋಪಲೂ ಬಪ್ಪಲೂ ಕಾರಿದ್ದು- ಕಾರಿಲಿ ಒಂದು ಟೇಪ್ರೆಕಾರ್ಡು ಇದ್ದು. ಅದಕ್ಕೆ ಆಟಂಗಳೋ, ತೆಂಕು-ಬಡಗು ಪದಂಗಳೋ, ಉರುಳಿಕೆಗಳೋ, ಪಂಚವಾದ್ಯಂಗಳೋ, ಇಂಪಾದ ಬಾಗೊತಿಗೆಗಳೋ - ಎಂತಾರು ಇಪ್ಪ ಉರುಟು ತಟ್ಟೆಸೀಡಿ ಹಾಕಿರೆ ಆಪೀಸಿಲಿ ಕಾರು ತಿರುಗುಸಿದ್ದು ನೆಂಪಿಕ್ಕು. ಮತ್ತೆ ಮನಗೆ ಎತ್ತಿ, ಮುಳಿಯದಕ್ಕ° ಪರಂಚಿದ ಮೇಗೆಯೇ ನಿಲ್ಲುಸುಗಷ್ಟೇ - ಅಷ್ಟುದೇ ಆಟದ ಮರುಳು - ಚೆನ್ನಬೆಟ್ಟಣ್ಣ, ವೇಣೂರಣ್ಣನ ಹಾಂಗೆ! ಅಪ್ಪು, ಅವಕ್ಕೆ ರಜ ಆಟದ ಮರುಳು ಜಾಸ್ತಿ. ಆಟ ಹೇಳಿರೆ - ಒಪ್ಪಣ್ಣನ ಹಾಂಗೆ ಬರೇ ನೋಡುದು ಮಾಂತ್ರ ಅಲ್ಲ. ಅರ್ತವೂ ಹೇಳುಗು. ದೊಡ್ಡ ದೊಡ್ಡ ಪ್ರಸಿದ್ಧ ಕಲಾವಿದಾರ ಒಟ್ಟಿಂಗೆ ಕೂದಂಡು ಅರ್ತ ಹೇಳಿದ ಅನುಬವ ಅವಕ್ಕಿದ್ದು. ಯೇವದೇ ಪ್ರಸಂಗ, ಯೇವದೇ ಪದ ಆದರೂ ಅದಕ್ಕೆ ಅರ್ತ ಹೇಳುವಗ ಇವರದ್ದೇ ಆದ ಚಿಂತನೆಗಳ ಸೇರುಸಿ ವರ್ಣನೆ ಸಹಿತವಾಗಿ ಕೇಳ್ತವಂಗೆ ಕುತೂಹಲ ಏರಿಗೊಂಡೇ ಹೋಪ ಹಾಂಗೆ ಅರ್ತ ಹೇಳ್ತದು ಅವರ ಶೆಗ್ತಿ. ಅವು ಮಾಂತ್ರ ಅಲ್ಲ, ಅವರ ಮಕ್ಕಳುದೆ ಯಕ್ಷಗಾನಲ್ಲಿ ಮುಂದೆ ಬಪ್ಪ ನಮುನೆ ಪ್ರೇರೇಪಣೆ ಕೊಟ್ಟು, ಈಗಾಣ ಅಮುಸರದ ಜೀವನಲ್ಲಿ ಬೆಂಗುಳೂರಿಲಿ ಬದುಕ್ಕುತ್ತ ಅಪ್ಪಂದ್ರಿಂಗೆ ಮಾದರಿ ಆಯಿದವು. ಮೊನ್ನೆ ಚೆನ್ನಬೆಟ್ಟಣ್ಣನ ಮದುವೆಲಿ ಒಟ್ಟಿಂಗೆ ಅಶನಕ್ಕೆ ಹಿಡಿವಲೆ ಸಿಕ್ಕಿದವು ಒಪ್ಪಣ್ಣಂಗೆ. ಸುಮಾರು ಶುದ್ದಿ ಮಾತಾಡಿದವು. ನಮ್ಮ ಊರು - ಈಗಾಣ ಬದುಕ್ಕಾಣ -ಅದು ಇದು ಎಲ್ಲ. ಈ ಶುದ್ದಿಗಳ ಬೈಲಿಂಗೆ ಹೇಳುವಿರೋ - ಕೇಳಿದ ಒಪ್ಪಣ್ಣ. ಸಂತೋಷಲ್ಲಿ "ಅಕ್ಕು ಒಪ್ಪಣ್ಣ ಭಾವಾ.." ಹೇಳಿದವು.
ಒಪ್ಪಕ್ಕೆ ಕೂದ ಮಕ್ಕಳ ನೋಡುಲೆ ಭಾರಿ ಖ್ಹುಷಿ ಆವುತ್ತು. ಒಳ್ಳೆ ಕಾರ್ಯಕ್ರಮ.
ಲಾಯ್ಕ ಆಯಿದು.ಮುಜುಂಗಾವಿಲೂ ಪಾಠ ಇದ್ದು ಹೇಳಿ ಕಾಣುತ್ತು.
ಒಳ್ಳೇ ಶುದ್ದಿಗೊಂದು ಧನ್ಯವಾದ ಸಹಿತ ಒಪ್ಪ ಭಾವಯ್ಯ.
ಹರೇ ರಾಮ…