- ವಿಷು ವಿಶೇಷ ಸ್ಪರ್ಧೆ – 2021 - April 14, 2021
- 26-ಜೂನ್-2015: ಮುಜುಂಗಾವು ವಿದ್ಯಾಪೀಠಕ್ಕೆ “ವಿದ್ಯಾನಿಧಿ ಸಮರ್ಪಣೆ” - June 26, 2015
- ವಿಷು ವಿಶೇಷ ಸ್ಪರ್ಧೆ 2015 : ಆಹ್ವಾನ - January 11, 2015
ಶ್ರೀರಾಮಚಂದ್ರಾಪುರ ಕೃಪಾಪೋಷಿತ ಯಕ್ಷಗಾನ ಮಂಡಳಿಯು ನಾಳಂಗೆ ೦೧.೦೩.೨೦೧೧ ಮಂಗಳವಾರ ಹೊತ್ತೋಪಗ ೬.೩೦ ರಿಂದ ೧೦.೩೦ ರ ವರೆಗೆ ವಿದ್ಯಾಲಯದ ವಠಾರಲ್ಲಿ ಗಜೇಂದ್ರ ಮೋಕ್ಷ – ಶ್ರೀನಿವಾಸ ಕಲ್ಯಾಣ ಹೇಳ್ತ ಯಕ್ಷಗಾನ ಪ್ರದರ್ಶನ ನೆಡೆಸುಲಿದ್ದು. ಮುಜುಂಗಾವು ಶ್ರೀ ಭಾರತೀ ಸಮೂಹ ವಿದ್ಯಾಸಂಸ್ಥೆಗಳ ಸಹಾಯಾರ್ಥ ನೆಡವ ಈ ಯಕ್ಷಗಾನ ಬಯಲಾಟಲ್ಲಿ ಪದ್ಯಾಣ ಗೆಣಪ್ಪಣ್ಣ, ಪ್ರಫುಲ್ಲಚಂದ್ರ ನೆಲ್ಯಾಡಿ ಭಾಗವತರಾಗಿಯೂ ಶಿವರಾಮ ಜೋಗಿ ಬಿ.ಸಿ.ರೋಡ್, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ, ಸಂಪಾಜೆ ಶೀನಪ್ಪ ರೈ ಪ್ರಧಾನ ವೇಷಧಾರಿಗೊ ಆಗಿಯೂ, ಸ್ತ್ರೀ ಪಾತ್ರಲ್ಲಿ ಅಂಬಾಪ್ರಸಾದ ಪಾತಾಳ ಮತ್ತು ಸಂತೋಷಕುಮಾರ್ ಹಿಲಿಯಾಣ ಹಾಂಗೂ ಬಂಟ್ವಾಳ ಜಯರಾಮ ಆಚಾರ್ಯ, ಸೀತಾರಾಮಕುಮಾರ್ ಕಟೀಲ್ ಹಾಸ್ಯ ಪಾತ್ರಂಗಳಲ್ಲಿ ಮಿಂಚಲಿದ್ದವು. ನೂರು ಗಿರ್ಕಿ ಹಾರುವ ದಿವಾಕರ ರೈ ಸಂಪಾಜೆ ನಾಳಂಗೆ ಎಷ್ಟು ಹಾರ್ತು ಹೇಳಿ ನೋಡೆಕು. 🙂
ಇನ್ನೊಂದು ಹೇಳಲೇ ಮರತ್ತು. ಪಟ/ವೀಡ್ಯ ತೆಗವಾಗ ರಂಗಸ್ಥಳದ ಹತ್ರೆ ಹೋದರೆ ಗಿರಕಿ ಹೊಡವವರ ಬೆಗರು ರಟ್ಟಿ ಚೆಂಡಿ ಆಕ್ಕು
ಕಡ್ಲೆ ಸಿಕ್ಕುಗ.. ಒಟ್ಟಿಂಗೆ ನೀರ್ ಚಾಯದೇ ಬೆಕಾವುತ್ತು..
ದೊಡ್ಡಭಾವಾ,
ಪಟ ನೋಡಿರೆ ಆಟ ನೋಡಿದ ಹಾ೦ಗಾಗಿ,ಸಮಾಧಾನ ಅಕ್ಕು.
ವಿಷಯ ತಿಳಿಸಿದ್ದಕ್ಕೆ ಧನ್ಯವಾದಂಗೊ……
ಗಜೇಂದ್ರ ಮೋಕ್ಷ ಲಾಯ್ಕಿದ್ದು ಪ್ರಸಂಗ. ಆನೆ ಮೊಸಳೆ ಮುಖವಾಡ ಹಾಯ್ಕೊಂಡು ರಂಗಸ್ಥಳಲ್ಲಿ ಕೊಣಿವದರ ನೋಡಲೇ ಖುಷಿ ಆವ್ತು. ಆದರೆ ಯಕ್ಷಗಾನದ ಪರಂಪರೆ ಲಿ ಮುಖವಾಡ ಮಡುಗುವ ಕ್ರಮ ಇಲ್ಲೆ.
ಹಾಂಗೆ ಶ್ರೀನಿವಾಸ ಕಲ್ಯಾಣಲ್ಲಿ ದಿವಾಕರ ಸೀತಾರಾಮನ ಜೋಡಿ ವೇಷ ನೋಡೆಕ್ಕಾದ್ದೆ. ಸೀತಾರಾಮನ ಹಾಸ್ಯ ಲಾಯ್ಕಿದ್ದು. ದಿವಾಕರ ಲೆಕ್ಕಂದ ಹೆಚ್ಚು ಗಿರಕಿ ಹಾಕಿ ಸೇಂಕು ಬಿಟ್ರೆ ಮಾತ್ರ ವೇಷ ಪುಸ್ಕ ಆವ್ತು !
ಆಟ ಲಾಯಕ ಆಗಲಿ. ಸಾದ್ಯ ಇಪ್ಪವ್ ಹೋಗಿ ನೋಡಿ ಬಂದು ಬೈಲಿನ್ಗೆ ಹೇಳಿ, ಪಟ ತೋರ್ಸಿರೆ ಕಾಶಿ ಆಕ್ಕು.
ಹೇಳಿದ ಹಾಂಗೆ ನಮ್ಮ ಭೋಸ ಭಾವಂಗೆ ಗಿರಕಿ ಹಾಕುಲೆಡಿತ್ತ ?