ಬೈಲಿನ ವಿಜಯಕ್ಕನ ಮಾತೃ ಶ್ರೀಮತಿ ಶಾರದಮ್ಮ ಇನ್ನಿಲ್ಲೆ. 3-4-2013 ಮಧ್ಯರಾತ್ರಿ 12:30 ಕ್ಕೆ ಇವು ಕೊನೆಯುಸಿರೆಳೆದವು. ನಿಡುಗಳ ಕುಟುಂಬದ ಅಂಗವಾದ ಇವು ಕುಂಠಿಕಾನ ಮಠದ ಹತ್ರೆ ಶಂಕರಮೂಲೆ ಮನೆಲಿ ಹಿರಿ ಮಗ ವೆಂಕಟಕೃಷ್ಣನ ಒಟ್ಟಿಂಗೆ ವಾಸವಾಗಿತ್ತಿದ್ದವು. ಇವು ದಿ. ಶಂಭಟ್ಟರ ಧರ್ಮ ಪತ್ನಿ. ಇವಕ್ಕೆ ಒಟ್ಟು ಏಳು ಮಕ್ಕೊ. ಹಿರಿಯವು ಕಾನ ಕಾರ್ತಿಕೇಯಲ್ಲಿಪ್ಪ ವಿಜಯಕ್ಕ, ಮತ್ತೆ ಪದ್ಯಾಣ ದಿ. ಈಶ್ವರಿ, ಶಂಕರಮೂಲೆ ವೆಂಕಟಕೃಷ್ಣ, ಮಂಗ್ಳೂರಿಲ್ಲಿಪ್ಪ ಮುಂಗಿಲ ರಮಾ, ಭದ್ರಾವತಿಲಿಪ್ಪ ಕೇಶವ ಪ್ರಕಾಶ, ಹುಬ್ಬಳ್ಳಿಲಿಪ್ಪ ಶಶಿಪ್ರಭಾ ಕರ್ಣಿಕ್, ದಿಲ್ಲಿಲಿಪ್ಪ ಮಂಜುನಾಥ ಪ್ರಸಾದ ಹಾಂಗೂ ಕುಟುಂಬದ ಅಂಗಂಗಳ ಇವು ಅಗಲಿದ್ದವು. ಪ್ರಾಯ 82ನೇ ವರುಷ, ವಿಶೇಷ ಹೇಳಿರೆ ಇವರ ಜನ್ಮ ದಿನ 4 ವರುಷಕ್ಕೊಂದಾರಿ ಬಪ್ಪದು (29-2-1932).
ಬೈಲಿನವರದ್ದೆಲ್ಲರದ್ದೂ ಇವರ ಆತ್ಮಕ್ಕೆ ಶ್ರದ್ಧಾಂಜಲಿ.
- ತೆಂಗಿನ ಮರಂಗೊಕ್ಕೆ ಕೀಟದ ಹಾವಳಿ - November 12, 2017
- ಕಾರಿಂಜ ಹಳೆಮನೆ ಶ್ರೀ ಶಂಭಟ್ಟರು ಇನ್ನಿಲ್ಲೆ - August 25, 2014
- ಸಿ.ಪಿ.ಸಿ.ಆರ್.ಐ.ಯ ತೆಂಗು, ಅಡಕೆ, ಕೊಕ್ಕೋಗೆ ಅಪೇಕ್ಷೆ ಸಲ್ಲುಸಲಕ್ಕು - December 29, 2013
ಶ್ರದ್ಧಾಂಜಲಿ.
ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಕ್ಕಲಿ.
ಹರೆ ರಾಮ
ಹರೇ ರಾಮ; ಅವರ ಆತ್ಮಕ್ಕೆ ಚಿರಶಾ೦ತಿ ಲಭಿಸಲಿ ಹೇದು ಪ್ರಾರ್ಥನೆ.ಮನೆಯವಕ್ಕುದೆ ಈ ಅಗಲಿಕೆಯ ತಡಕ್ಕೊ೦ಬ ಶಕ್ತಿಯ ದೇವರು ಕೊಡಲಿ.
ಶ್ರದ್ಧಾಂಜಲಿ, ಕುಟುಂಬದವಕ್ಕೆ ಅವರ ಅಗಲಿಕೆಯ ಸಹಿಸುವ ಶಕ್ತಿ ದೇವರು ನೀಡಲಿ.
ಹರೇರಾಮ ಎನ್ನಬ್ಬೆ ಕಾರಿಂಜ ಹಳೆಮನೆ ದಿ!ಕೇಶವಭಟ್ಟರ ಹಾಂಗೂ ದಿ!ತಿರುಮಲೇಶ್ವರಿ ಅಮ್ಮ .ಈ ದಂಪತಿಗಳ ಪುತ್ರಿ.. ಕಾರಿಂಜಹಳೆ ಮನೆಲಿ ಅಂಕುರಗೊಂಡ ಈ ಬಲ್ಲಿ ನಿಡುಗಳ, ಕೆಳಾಣಮನೆ ಶಂಭುಭಟ್ಟರ ಕೈ ಹಿಡುದು ಅಲ್ಲಿ ಹಬ್ಬಿ ಫಲ ಪುಷ್ಪ ಬಿಟ್ಟು ಸುತ್ತಲೂ ಸುಹಾಸನೆ ಬೀರಿ ಶಂಕರಮೂಲೆಲಿ ಮತ್ತೂ ಮಾಗಿ ಮರೆಯಾದರೂ ಎಲ್ಲೋರ ಮನಸ್ಸಿಲ್ಲೂ ನೆಂಪು ಒಳಿಶಿಗೊಂಡ ಜೆನ. ಸಾಹಿತ್ಯ ಕ್ಷೇತ್ರಲ್ಲಿ ಆನು ಕಾಲೂರ್ಲೆ ಅಬ್ಬೆಯೇ ಕಾರಣ
ಚೆನ್ನೈಭಾವ, ಶರ್ಮಭಾವ, ರಘುಮುಳಿಯ, ಮತ್ತೆ ಬಯಲಿನವು ಎಲ್ಲೋರೂ ಅಬ್ಬೆಯ ಸದ್ಗತಿಗಾಗಿ ಪ್ರಾಥನೆ ಮಾಡಿದ್ದಕ್ಕಾಗಿ ಎಂಗೊ ಮಕ್ಕೊಗೂ ಸಮಧಾನ ಆತು. ಮತ್ತೊಂದಾರಿ ಅಬ್ಬೆಯ ಸಾಯುಜ್ಯಕ್ಕಾಗಿ ಪ್ರಾರ್ಥಿಸುತ್ತಾ ಕೈ ಮುಗಿತ್ತೆ
ಶೃದ್ಧಾ೦ಜಲಿ.
ಶಂಕರಮೂಲೆ ಅತ್ತೆಯ ಆತ್ಮಕ್ಕೆ ಸದ್ಗತಿ ಸಿಕ್ಕಲಿ, ಭಾವಂದಿರಿಂಗೂ, ಆತ್ತಿಗೆಯಕ್ಕೊಗೂ ಅವರ ಅಗಲಿಕೆಯ ಸಹಿಸುವ ಶಕ್ತಿಯ ಪರಮಾತ್ಮ ಕೊಡಲಿ ಹೇಳಿ ಪ್ರಾರ್ಥನೆ
ಶ್ರದ್ಧಾಂಜಲಿ. ಸದ್ಗತಿ ದೊರಕಲಿ ಹೇಳಿ ಪ್ರಾರ್ಥಿಸುವೊ°.