Oppanna.com

ಬೈಲ ಮಿಲನ, ಪುಸ್ತಕ ಲೋಕಾರ್ಪಣೆ, ಗುರು ಭೇಟಿ – ವರದಿ

ಬರದೋರು :   ತೆಕ್ಕುಂಜ ಕುಮಾರ ಮಾವ°    on   26/08/2012    36 ಒಪ್ಪಂಗೊ

ತೆಕ್ಕುಂಜ ಕುಮಾರ ಮಾವ°

ಅಗೋಸ್ತು 25, 2012ರಂದು ಗಿರಿನಗರದ “ರಾಮಾಶ್ರಮ”ಲ್ಲಿ ಬೈಲಿನೋರು ಸೇರಿದ ಕಾರ್ಯಕ್ರಮದ ಸಂಕ್ಷಿಪ್ತ ವರದಿ, ಪಟಂಗೊ.

ಆಗೋಸ್ತು ಇಪ್ಪತ್ತೈದು, ನಂದನ ಸಂವತ್ಸರದ ಈ ದಿನ ನಮ್ಮ ಬೈಲ ಬಾಂಧವರಿಂಗೆ ಸುದಿನ.
ನೆರೆಕರೆಯ ಒಪ್ಪಣ್ಣ – ಒಪ್ಪಕ್ಕಂಗೊಕ್ಕೆ ಅವಿಸ್ಮರಣೀಯವಾದ ದಿನ. ದೊಡ್ಡಜ್ಜಂದ ಹಿಡುದು ದೊಡ್ಡಳಿಯ ಸಹಿತ ಬೈಲ ಹೆರಿ -ಕಿರಿಯೋರೆಲ್ಲ ಒಟ್ಟು ಸೇರಿದ ಮಂಗಲ ದಿನ.
ಈ ಶುಭ ದಿನಲ್ಲಿ, ಗಿರಿನಗರದ ರಾಮಾಶ್ರಮಲ್ಲಿ ನಮ್ಮ ಗುರುಗೊ ಪರಮ ಪೂಜ್ಯರಾದ ಶ್ರೀ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ‘ಒಪ್ಪಣ್ಣ.ಕೋಮ್’ನ  ಹರಸಿ ಆಶೀರ್ವಚಿಸಿಯಪ್ಪದ್ದೆ  ಬೈಲ ಸಾರಡಿ ತೋಡು ತುಂಬಿ ಹರದತ್ತು. ನೆರೆಕರೆಯೋರ ಮನಸ್ಸೂ ಮಹದಾನಂದಲ್ಲಿ ತುಂಬಿ ತುಳುಕಿತ್ತು.!

ನೆರೆಕರೆಯೊರೆಲ್ಲ ಸೇರಿ ಗುರಿಕ್ಕಾರ್ರ ಅನುಮೋದನೆಯ ಹಾಂಗೆ – ಮದಲೇ ನಿಘಂಟು ಮಾಡಿದ ಹಾಂಗೆ, ಬೈಲಿನ ಮಿಲನ, ಗುರು ಭೇಟಿ, ಪುಸ್ತಕ ಬಿಡುಗಡೆ ಕಾರ್ಯಕ್ರಮಂಗೊ ಗಿರಿನಗರದ ನಮ್ಮ ಮಠಲ್ಲಿ ತುಂಬ ಚೆಂದಕ್ಕೆ  ಕಳುದತ್ತು.
ಉದಿಯಪ್ಪಗ ಬೈಲಿನ ಲೆಕ್ಕಲ್ಲಿಯೂ, ಓ ಮನ್ನೆ ದಾಂಪತ್ಯ ಜೀವನಕ್ಕೆ ಕಾಲು ಮಡಗಿದ ನಮ್ಮ ಗಣೇಶ ಮಾವನ ಲೆಕ್ಕಲ್ಲಿಯೂ ‘ಪಾದಪೂಜೆ’ ನೆರೆವೇರಿತ್ತು.
ಬೈಲ ಲೆಕ್ಕಲ್ಲಿ ಗುರಿಕ್ಕಾರು ಪಾದಪೂಜೆ ನೆರವೇರಿಸಿ, ನೆರೆಕರೆಯ ಹತ್ತು ಸಮಸ್ತರುಗೊ ಗಂಗಾಭಿಷೇಕ ಮಾಡಿದ ಘಳಿಗೆಲಿ ಬಂದ ಮಳೆ ಶುಭಸೂಚಕವಾಗಿದ್ದತ್ತು.!

ಮಧ್ಯಾಹ್ನದ ಪ್ರಸಾದ ಭೋಜನ ಕಳುದು ಗುರುಗಳ ಸಭಾಕಾರ್ಯಕ್ರಮಲ್ಲಿ, ಚೆನ್ನೈಯ ‘ರಾಧಾ – ಗೋಧಾ’ ಸಹೋದರಿಯರ ಸಂಗೀತ ಕಾರ್ಯಕ್ರಮ ಸೇರಿದ ಸಭಿಕರ ಮನಸೂರೆ ಮಾಡಿತ್ತು.
ಪೂಜಾ – ಪೃಥ್ವಿ ಹೆಸರಿನ ಪುಟ್ಟು ಕೂಸುಗೊ “ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ” ಹೇಳಿ ರಾಮ ನಾಮವ ಹಾಡಿದ್ದು ಎಲ್ಲೋರ ಹೃದಯವ ತಟ್ಟಿತ್ತು.
ಯಥಾಪ್ರಕಾರ ಮಂಡಲ- ವಲಯದ ವರದಿ ನೆರವೇರಿತ್ತು.

ಅದಾದ ಮತ್ತೆ ನಮ್ಮ ಬೈಲಿನ ಸಮ್ಮಂದಪಟ್ಟ ಕಾರ್ಯಕ್ರಮಂಗೊ ನೆಡದತ್ತು.
ಶುರುವಿಂಗೆ, ನೆರೆಕರೆ ಪ್ರತಿಷ್ಠಾನದ ಅಧ್ಯಕ್ಷರಾದ ಶರ್ಮಪ್ಪಚ್ಚಿ ಗುರುಗಳ ಕೈಂದ ಲೋಗೋ (ಬೈಲಮುದ್ರೆ) ಅನಾವರಣ ಮಾಡ್ಸಿದವು.  (ಬೈಲಮುದ್ರೆಯ ವಿವರ ಸದ್ಯಲ್ಲೇ ನಿರೀಕ್ಷಿಸಿ)
ಗುರಿಕ್ಕಾರು, ‘ಒಪ್ಪಣ್ಣ.ಕೋಮ್’ ಬಗ್ಗೆ ಕಿರುಪರಿಚಯ ಕೊಟ್ಟು ಪ್ರತಿಷ್ಠಾನದ ಹೆಸರಿಲಿ ಪ್ರಕಟ ಮಾಡಿದ ಎರಡು ಪುಸ್ತಕಂಗಳ ಬಗ್ಗೆ ವಿವರಿಸಿದವು.
ಗಣ್ಯರಾದ ಸಿಎಚ್ಚೆಸ್ ಮಾವ, ಕೇಜಿ ಅಜ್ಜ°, ಭಾರತಿ ಪ್ರಕಾಶನದ ಶಾರದತ್ತೆ, ಎಡಪ್ಪಾಡಿ ಭಾವ, ಮಾಷ್ಟ್ರು ಮಾವ – ಇವರ ಉಪಸ್ಥಿತಿಲಿ, ಸೇರಿದ ಸಮಸ್ತ ಬಂಧುಗಳ ಸಮ್ಮುಖಲ್ಲಿ, ಶ್ರೀ ಗುರುಗೊ ‘ಒಪ್ಪಣ್ಣನ ಒಪ್ಪಂಗೊ – ಒಂದೆಲಗ‘ ಹಾಂಗೆ ‘ಹದಿನಾರು ಸಂಸ್ಕಾರಂಗೊ’ ಪುಸ್ತಕಂಗಳ ಲೋಕಾರ್ಪಣೆ ಮಾಡಿ ಹರಸಿದವು.
ಗುರುಗಳ ಅಶೀರ್ವಚನಲ್ಲಿ ಶಕ್ತಿ ಯುಕ್ತಿ ಭಕ್ತಿಯ ಬಗ್ಗೆ ಪ್ರವಚನ ಕೊಟ್ಟು ಹರಸಿದವು.
ಸಭಾಂಗಣದ ಕರೇಲಿ ಮಡಗಿದ “ಪುಸ್ತಕ ಮಳಿಗೆ”ಲಿ ಆಸಕ್ತ ಓದುಗ ವೃಂದ ಪುಸ್ತಕವ ಖರೀದಿ ಮಾಡಿಗೊಂಡು ಪ್ರೋತ್ಸಾಹಮಾಡಿಗೊಂಡು ಇತ್ತಿದ್ದವು.

ಸೇರಿದ ಎಲ್ಲೋರಿಂಗೂ ವ್ಯಾಸಮಂತ್ರಾಕ್ಷತೆ ಕೊಟ್ಟಮತ್ತೆ, ನೆರೆಕರೆಯೋರ ಖಾಸಗಿಯಾಗಿ ಭೇಟಿ – ಮಾತುಕತೆಗೆ ಬಪ್ಪಗ ಹೊತ್ತೋಪಗಾಣ ಹೊತ್ತು ಏಳು ಕಳುದಿತ್ತು.
ಉದೆಗಾಲಂದ ಬಿಡುವಿಲ್ಲದ್ದೆ ವಿವಿಧ ಕಾರ್ಯಕ್ರಮಂಗಳಲ್ಲಿ ತೊಡಗಿಸಿಗೊಂಡರೂ, ನೆರೆಕರೆಯೋರ ಒಬ್ಬೊಬ್ಬನನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ಮಾತಾಡ್ಸಿದವು.
ಇಪ್ಪ ಹೆಸರು-ಒಪ್ಪ ಹೆಸರುಗಳ ವಿಚಾರ್ಸಿಗೊಂಡು,  ಬೈಲಿಲಿ ಬರವ ಶುದ್ದಿಗಳ ಬಗ್ಗೆ ತಿಳ್ಕೊಂಡವು.
ಬೈಲಿಲಿ ಬಂದ ಶುದ್ದಿಗಳ, ವಿಶೇಷವಾಗಿ ‘ಸಮಸ್ಯಾಪೂರಣ’ ದ ಬಗ್ಗೆ ಕಾಳಜಿ ವಹಿಸಿ ಅರ್ತುಗೊಂಡವು.
ನಿಘಂಟು ಮಾಡಿತ್ತಿದ್ದ ಒಂದು ಘಂಟೆ ಸಮಯ ಮೀರಿ ಸುಮಾರು ಎರಡು ಘಂಟೆ ಹೊತ್ತು ನಮ್ಮೊಟ್ಟಿಂಗೆ ಇದ್ದುಗೊಂಡು ಕೊಶಿಪಟ್ಟವು.
ದೂರಂದಲೇ ಆಶೀರ್ವಾದ ಬೇಡಿಂಡು, ಬಪ್ಪಲಾಗದ್ದ ನೆರೆಕರೆಯೋರ ನೆಂಪು ಮಾಡಿಗೊಂಡವು ಸೇರಿದ ನೆಂಟ್ರುಗೊ.

ನೆರೆಕರೆಯೋರ ಒಗ್ಗಟ್ಟು ಹೀಂಗೆ ಸದಾ ಮುಂದುವರಿಯೆಕ್ಕು ಹೇಳಿ ಆಶೀರ್ವದಿಸಿದವು.
ಇನ್ನು ಮುಂದೆಯೂ ಗುರು ಭೇಟಿ ಆಯೆಕ್ಕು, ಅದು ಒಂದೆರಡು ಘಂಟೆಗೆ ಸೀಮಿತ ಮಾಡದ್ದೆ ಇಡೀ ದಿನಾಣ ಕಾರ್ಯಕ್ರಮ ಆಗಿರೆಕ್ಕು ಹೇಳ್ತ ಆಶಯ – ಆದೇಶವ ಗುರುಗೊ ಕೊಟ್ಟದು ಬೈಲ ನೆರೆಕರೆಯೋರ ದೊಡ್ಡ ಭಾಗ್ಯವೇ ಸರಿ.
ಸೇರಿದ ಸುಮಾರು ಮೂವತ್ತಕ್ಕೂ ಹೆಚ್ಚು ಬೈಲ ಬಾಂಧವರಿಂಗೆ ಭೇಟಿಯ ಸ್ಮರಣಿಕೆ ಲೆಕ್ಕಲ್ಲಿ ಶ್ರೀ ಗುರುಗೊ “ಸುಪ್ರಿಯ ಸುಭಾಷಿತಾನಿ” ಹೊತ್ತಗೆಯ ಕೊಟ್ಟು ಆಶೀರ್ವದಿಸಿದವು.

 ಇರುಳಾಣ ಊಟವ ಮಠಲ್ಲೇ ಉಂಡಿಕ್ಕಿ, ಬೈಲಿನ ನೆರೆಕರೆಯ ನೆಂಟ್ರುಗೊ ಸವಿನೆಂಪಿನ ಒಟ್ಟಿಂಗೆ ಗೂಡು ಸೇರಿದವು.

ನೆರೆಕರೆಯ ಕೆಮರದಣ್ಣಂದ್ರು ತೆಗದ ಕೆಲವು ಪಟಂಗೊ ಇಲ್ಲಿದ್ದು:
(ಇನ್ನಷ್ಟು ಪಟಂಗೊ ಸದ್ಯಲ್ಲೇ ನಿರೀಕ್ಷಿಸಿ / ನಿಂಗಳ ಹತ್ತರೆಯೂ ಪಟಂಗೊ ಇದ್ದರೆ ಬೈಲಿಂಗೆ ತೋರುಸಿ)

36 thoughts on “ಬೈಲ ಮಿಲನ, ಪುಸ್ತಕ ಲೋಕಾರ್ಪಣೆ, ಗುರು ಭೇಟಿ – ವರದಿ

  1. ಎಲ್ಲೋರಿಂಗು ನಮಸ್ಕಾರ, ಅನಿವಾರ್ಯ ಕಾರಣಂದ ಎನಗೂ ಬಪ್ಪಲಾತಿಲ್ಲೆ ಕುಮಾರ ಮಾವ ಚೆಂದಕ್ಕೆ ವರದಿ ಕೊಟ್ಟಿದವು .ಕೆಲವು

    ಪಟಂಗಳೂ ಕಂಡತ್ತು.ಕೊಶಿ ಆತು.ಬೈಲಿನೋರನ್ನು ಗುರುಗಳನ್ನೂ ಭೇಟಿ ಅಪ್ಪ ಅವಕಾಶ ತಪ್ಪಿತ್ತು ಹೇಳಿ ಬೇಜಾರಿದ್ದು. ಬೈಲಿನೋರ

    ಕೆಲಸಂಗಳ ಗುರುಗೊ ಹರಸಿದ್ದದೂ ಗೊಂತಾಗಿ ತುಂಬಾ ಸಂತೋಷ ಆತು. ಕಾರ್ಯಕ್ರಮ ಚೆಂದಕ್ಕೆ ಕಳುದ್ದದು” ಸವಿ ನೆಂಪಾ”ಗಿ ರಲಿ.

  2. ಹರೇ ರಾಮ,
    ನಮ್ಮ ಬಯಲಿನ ಒ೦ದು ಮಹತ್ತರ ಮೈಲಿಗಲ್ಲುಗಳಲ್ಲಿ ಇದೂ ಒ೦ದು.

    ಒಪ್ಪಣ್ಣ೦ಗೂ – ಚೆನ್ನೈ ಭಾವ೦ಗು ಶುಭಾಶಯ, ಮತ್ತು ಧನ್ಯವಾದ.
    ಬಯಲಿನ ಲೆಕ್ಕಲ್ಲಿ ಇನ್ನು ಇನ್ನೂ ಪುಸ್ತಕ ಬರಲಿ ಹೇಳುದೇ ಆಶೆ. ಹವ್ಯಕ ಭಾಷೆ ಒಳುಶಿ -ಬೆಳಶಿ -ಎಲ್ಲಾ ಕಡೆಯೂ ಹರಡುವಾ೦ಗೆ ಮಾಡಿದ oppanna.com ಇ೦ಗೆ ಧನ್ಯವಾದ.
    ನಮ್ಮ ನೆರೆಕರೆಯ ಎಲ್ಲಾರ ಪ್ರೋತ್ಸಹ, ಪ್ರೀತಿ ಇರಳಿ.

  3. ಹಾ೦ಗೆ , ಅದರ ಮೊದಲು ,ಕೇಳಿಬ೦ದ, ಕೊಳಲ ನಾದದ, ಹೊಳೆಯು ನಾವು ನೆನಪಿಡಕ್ಕಾದ್ದೇ.ಎಲ್ಲಾ ಒ೦ದೇ ಸಮಯಲಿ ನಡೆದ ಬಗೆ,ಇದು ಭಾಗ್ಯ ,ಇದು ಭಾಗ್ಯವಯ್ಯಾ, ಹೇಳಿದರೆ ತಪ್ಪಾಗ ಅಲ್ಲದ?.ಸೇರಿದ್ದ ದೊಡ್ದ ಬೈಲ್ ಪೂರಾ,ಮಳೆ ಯೊಟ್ತಿ೦ಗೆ, ನಾದಮಯ-ವೇದಮಯ-ರಾಮಮಯ.

  4. ”ಪೂಜಾ – ಪೃಥ್ವಿ ಹೆಸರಿನ ಪುಟ್ಟು ಕೂಸುಗೊ ”ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ“ ಹೇಳಿ ರಾಮ ನಾಮವ ಹಾಡಿದ್ದು ಎಲ್ಲೋರ ಹೃದಯವ ತಟ್ಟಿತ್ತು”
    ಅಪ್ಪು. ಆ ಮಕ್ಕ ತುಂಬಾ ಚೆನ್ದಕೆ ಹಾಡಿತ್ತಿದ್ದವು. ತುಂಬಾ ಲಾಯಿಕದ,ಅರ್ಥ ಪೂರ್ಣವಾದ ಹಾಡು ಅದು. ಯಾರಾದರು ರೆಕೊರ್ಡ್ ಮಾಡಿಗೊ೦ಡಿದ್ದರೆ ದಯವಿಟ್ತು ಬೈಲಿಲಿ ಹಾಕುವಿರೊ? ಅಥವ ಪದ್ಯವಾದರು ಸರಿ.ಒಟ್ತಿ೦ಗೆ ಬರದವ್ವು ಯಾರುಳೀ ಗೊ೦ತ್ತಿದ್ದರೆ ಹೆಸರುದೆ ಇರ್ಲಿ.

    1. ಪೂಜಾ – ಪೃಥ್ವಿ ಭಾವಪೂರ್ಣವಾಗಿ ಹಾಡಿದ ಹಾಡಿನ ರಚಿಸಿದ ಕವಿ ಶ್ರೀ ಗಜಾನನ ಶರ್ಮರು.
      ರೆಕಾರ್ಡ್ ಮಾಡದ್ದೆ ಸೋತತ್ತು.

      1. ಧನ್ಯವಾದಗಳು.ಇದರ hareraama.in ಲಿ ಹಾಕಿದ್ದವು.

  5. ಮೊನ್ನೆ ಬೈಲ ಮಿಲನ ತುಂಬಾ ಚೆಂದಕೆ ನಡದತ್ತು. ವರದಿದೆ ಪಟಂಗಳುದೆ ಚೆಂದಕೆ ಬಯಿಂದು ಮಾವ.

  6. ಪತ ಚಿತ್ರ೦ಗೊನೊಡಿದೆ ಮನಸ್ಸು ತು೦ಬಿ ಬ೦ತು

  7. ಮೊನ್ನೆ ಅಚ್ಹುಕಟ್ಟಾಗಿ ನಡದ ಕಾರ್ಯಕ್ರಮದ ವರದಿ ಓದಿ ಬಾರೀ ಸಂತೋಶ ಆತು..ಒಟ್ಟಿಂಗೆ ಎನಗೆ ಕಾರ್ಯಕ್ರಮಕ್ಕೆ ಬಪ್ಪಲೆ ಆಯಿದಿಲ್ಲೆನ್ನೆ ಹೇಳುತ್ತ ಬೇಜಾರ ಕೂಡಾ ಆತು.. ಎನಗೆ ಆರೋಗ್ಯ ಸರಿ ಇಲ್ಲದ್ದಕಾರಣ ಬಪ್ಪಲೆ ಆಯಿದಿಲ್ಲೆ.. ಬೈಲು ಇನ್ನಸ್ಟ್ಟು ವಿಸ್ತ್ತಾರವಾಗಿ ಬೆಳೆಯಲಿ …ಪ್ರತಿಸ್ಟ್ಟಾನ ಕೂಡಾ ಇನ್ನಸ್ಟ್ಟು ಅಭಿವ್ರುದ್ದಿ ಹೊಂದಲಿ…ಇದೇ ಎನ್ನ ಆಶಯ..

  8. ಭಾಗವಹಿಸಿ ಸಂತೋಷ ಪಟ್ಟದ್ದಲ್ಲದ್ದೆ ಸ್ಮರಣೀಯ ದಿನ ಆಗಿ ಉಳಿಗು ಆ ದಿನ..ಹರೇ ರಾಮ..

    1. ಓ, ವೇಣೂರಣ್ಣನ ಕಾಣದ್ದೆ ಸುಮಾರು ಸಮಯ ಆತು. ವೇಣೂರಣ್ಣ, ಬಲು ಬೇಗನೆ ಡಾ. ವೇಣೂರಣ್ಣ ಆಗಲಿ ಹೇಳುವ ಶುಭ ಹಾರೈಕೆಗೊ.

  9. ಆನುದೇ ಎನ್ನ ತಮ್ಮನೂ ಈ ಕಾರ್ಯಕ್ರಮಲ್ಲಿ ಭಾಗವಹಿಸಲೆ ಎಡಿಗಾದ್ದದು ಬಹಳ ಸಂತೋಷ ಆತು. ಇಡೀ ಕಾರ್ಯಕ್ರಮ ತುಂಬ ಚೆಂದಕೆ ಕಳಾತು. ಬೇಜಾರು ಎಂತರ ಹೇಳಿರೆ ಒಟ್ಟುಸೇರಿದವರ ಸರಿಯಾಗಿ ಮಾತಾಡ್ಸುಲೆ ಆಯಿದಿಲ್ಲೆ. ಕಡೇಂಗೆ ಕಾರ್ಯಕ್ರಮ ಕಳುದ ಮತ್ತೆ ಮಳೆ, ಒಟ್ಟು ಗಡಿಬಿಡಿ, ಆರತ್ರೂ ಸರಿಯಾಗಿ ಮಾತಾಡ್ಲೆ ಆಯಿದಿಲ್ಲೆ. ಅಂತೂ ಎಂಗೊ ಮನೆಗೆತ್ತುವ ಮೊದಲೇ ಕಾರ್ಯಕ್ರಮದ ಪಟಸಹಿತ ವರದಿ ಕೊಟ್ಟ ತೆಕ್ಕುಂಜ ಮಾವಂಗೆ ಧನ್ಯವಾದಂಗೊ.

  10. ಶುಭಾಶಯಗಳು.
    ವರದಿ ಲಾಯಕ್ಕಿದ್ದು. ನಿಮ್ಮೆಲ್ಲರ ಶ್ರಮ ಸರ್ವರ ಪ್ರಯೊಜನಕ್ಕೆ ಬರಲಿ.
    ನಮ್ಮ ಹಾರೈಕೆ ನಿಮಗಾಗಿ.

  11. ಒಪ್ಪಣ್ನನ ಒಪ್ಪ ಪುಸ್ತಕ ಒಪ್ಪಾಗಿ ಲೊಕಕ್ಕೆ ಶ್ರೀ ಗುರುಗಳ ದಿವ್ಯ ಹಸ್ತ೦ದ ಬಿಡುಗದೆ ಮಾದಿದ್ದು ಬಹು ಆನ೦ದ ಆತು

  12. ವರದಿ ಲಾಯ್ಕಾಯ್ದು ಮಾವ! ಕಾರ್ಯಕ್ರಮ ತಪ್ಸಿಗೊಂಡದಕ್ಕೆ ಬೇಜಾರಾತು, ಪಟಂಗ ಲಾಯ್ಕ ಬೈಂದು..ಧನ್ಯವಾದ..

  13. ಮನ್ನೆ ಚೆಂದಕೆ ಅಚ್ಚುಕಟ್ಟಾಗಿ ನೆಡದ ಕಾರ್ಯಕ್ರಮಲ್ಲಿ ಸಂಪೂರ್ಣವಾಗಿ ಭಾಗವಹಿಸಿದವರಲ್ಲಿ ಆನೂ ಒಬ್ಬ ಹೇಳ್ಲೆ ತುಂಬಾ ಕೊಶಿ, ಹೆಮ್ಮೆ ಎಲ್ಲವುದೆ ಆವ್ತಾ ಇದ್ದು. ದೀಪಿಕ ಸುಶ್ರಾವ್ಯವಾಗಿ ಹಾಡಿದ ಒಪ್ಪಣ್ಣ ಬರದ ಬೈಲಿನ ಆಶಯ/ಶೋಬಾನೆ ಗೀತೆಯ ಒಟ್ಟಿಂಗೆ ಗುರುಗೊ ಎರಡು ಪುಸ್ತಕಂಗಳ ಬಿಡುಗಡೆ ಮಾಡಿ ಅಪ್ಪಗ ಹೃದಯ ತುಂಬಿ ಬಂತು. ಬೈಲಿನ ತುಂಬಾ ಸದಸ್ಯರ ಅಲ್ಲಿ ಮುಖತಾ ಭೇಟಿ ಅಪ್ಪಲಾತು. ಕುಮಾರಮಾವ ಫೊಟೋಂಗಳ ಒಟ್ಟಿಂಗೆ ಕೊಟ್ಟ ಸಂಪೂರ್ಣ ವರದಿ ಒಪ್ಪುಸಿದ್ದವು. ಧನ್ಯವಾದಂಗೊ. ದೊಡ್ಮನೆ ಭಾವಯ್ಯನ ಆನೂ ಕಂಡಿದಿಲ್ಲೆ. ಎಲ್ಲಿ ಇದ್ದಿದ್ದ ಅವ ? ಚೆ, ಕಾಣೆಕಾಗಿತ್ತಾನೆ.
    ಪುಸ್ತಕಂಗೊ ಚೆಂದ ಬಯಿಂದು. ಪುಸ್ತಕಕ್ಕೆ ಒಳ್ಳೆತ ಬೇಡಿಕೆ ಖಂಡಿತಾ ಇಕ್ಕು. ಪುಸ್ತಕಂಗಳ ನಾವೂ ತೆಕ್ಕೊಂಡು, ನಮ್ಮ ಬಂಧುಗಳೂ ತೆಕ್ಕೊಳ್ತ ಹಾಂಗೆ ಮಾಡಿ ಪ್ರೋತ್ಸಾಹಿಸುವೊ.

    1. ಗೋಪಾಲ ಭಾವಾ,
      ನಿ೦ಗಳ ಸ೦ಬ೦ಧಿಯೊಬ್ಬರು (ಸುಮಾರು 55ವರ್ಷ) ಸಿಕ್ಕಿದ್ದೊ, ಅವರು ಮ೦ಗಳೂರಲ್ಲಿ ಬ್ಯಾ೦ಕ ನೌಕರಿ ಮಡ್ತೊ, ನೆನಪಾತ್ತೋ? (ಪರಿಚಯ ಇದ್ದು ಅ೦ತ ಮಾತಾಡಿಸಿ, ಹೆಸರು ಕೇಳಿದರೆ ಹ್ಯಾ೦ಗೆ? ಅದಕ್ಕೇ ಅವರ ಹೆಸರು ಕೇಳುಲೆ ಹೋದ್ನಿಲ್ಲೆ!) ಸುಮಾರುಹೊತ್ತು ಚೊಲೋ ಮಾತಾಡಿದ, ಸಜ್ಜನ ಅವರು.
      (ಮೇಲೆ ಒಪ್ಪವೊ೦ದರಲ್ಲಿ ನಿ೦ಗಳ ಹೆಸರ ’ಬೊಳು೦ಬು’ ಬದಲಾಗಿ ತಪ್ಪಾಗಿ ’ಬೆಳು೦ಬೆ” ಅ೦ತ ಬರದ್ದೆ, ಕ್ಷಮೆಯಿರಲಿ)

  14. ಹರೇ ರಾಮ , ಪಟ ಮತ್ತೆ ವರದಿ ಲಾಯಿಕ ಬಯಿಂದು ತೆಕ್ಕಕುಂಜ ಮಾವ 🙂

  15. ಪರಿಪೂರ್ಣಸುಂದರ ವರದಿ, ಪ್ರಾರಬ್ಧ ನೋಡಿ ಆನು ಬೆಂಗಳೂರಲ್ಲೇ ಇಪ್ಪ ಸದಸ್ಯ, ಕಳೆದ ಒಂದುವರೆ ತಿಂಗಳಿಂದ ಪ್ರತಿದಿನ ಮೂರು ಹೊತ್ತೂ ಶ್ರೀರಾಮಾಶ್ರಮಕ್ಕೆ ಬತ್ತಾ ಇದ್ದೆ, ಅಂದು ಶನಿವಾರವೂ ಬಂಯ್ದೆ, ಆದರೆ ಕಾರ್ಯಕ್ರಮದ ಸಮಯಲ್ಲಿ ಇಪ್ಪಲೆ ಆಯ್ದಿಲ್ಲೆ, ಯೆನಗೆ ಆ ದಿನ working day, ರಜೆ ಸಾಧ್ಯ ಇತ್ತಿಲ್ಲೆ, ಖಾಸಗೀ ಭೇಟಿ ಸಮಯಲ್ಲಿ ಎದುರಗಡೆ ರೂಮಲ್ಲೇ ಕೂತಿದ್ದೆ, ಆದರೆ ನಿಂಗಳೊಟ್ಟೆಗೆ ಇಪ್ಪಲಾಯ್ದಿಲ್ಲೆ. ರಾಮಕಥೆಗೆ ಸಂಬಂಧಪಟ್ಟ, ಚಾತುರ್ಮಾಸ್ಯಕ್ಕೆ ಸಂಬಂಧಪಟ್ಟ ಕೆಲಸ ಮಾಡ್ತಾ ಕಂಪ್ಯೂಟರ್ ಮುಂದೆ ಇದ್ದಿದ್ದೆ. ನಿಂಗ ಎಲ್ಲ ಬಂದು ಕಾರ್ಯಕ್ರಮ ಚೆಂದಕ್ಕೆ ಮಾಡಿದ್ರಿ ಖುಷಿ ಆತು, ನಂಗಳ ವ್ಯವಸ್ಥೆಯಲ್ಲಿ ಎಂತರು ಲೋಪ ಆಗಿದ್ರೆ ಹೊಟ್ಟೆಲಿ ಹಾಕ್ಕಂಡ್ ಬುಡಿ.

  16. ಅತಿ ಶೀಘ್ರವಾಗಿ ಕಾರ್ಯಕ್ರಮದ ವರದಿಯ ಒದಗಿಸಿದ ಕುಮಾರಣ್ಣಂಗೆ ಧನ್ಯವಾದಂಗೊ.
    ಅಂದು ಭಾಗವಹಿಸಿದ ಎಲ್ಲರಿಂಗೂ ಅದು ಮರೆಯಲಾಗದ್ದ ಸುದಿನ.
    ಹೀಂಗಿಪ್ಪ ಅವಕಾಶಂಗೊ ಇನ್ನೂದೆ ಬೈಲಿನವಕ್ಕೆ ಸಿಕ್ಕಲಿ, ಬೈಲು ವಿಸ್ತಾರವಾಗಲಿ, ಪ್ರತಿಷ್ಠಾನವೂ ಬೆಳೆಯಲಿ ಹೇಳಿ ಹಾರೈಕೆಗೊ.
    ದೊಡ್ಮನೆ ಭಾವ ಬಂದದು ಗೊಂತಾಗದ್ದೆ ಹೋತನ್ನೆ.

  17. ಹರೇ ರಾಮ ಕುಮಾರ ಮಾವ.

    ಲಾಯಕ ವರದಿಗೆ ಧನ್ಯವಾದ. ಪಟಂಗಳೂ ಲಾಯಕ ಬಯಿಂದು. ಪಟದಣ್ಣಂದ್ರಿಂಗೆ ಅಭಿನಂದನೆ. ಬೈಲ ಸಭೆಲಿ ಶ್ರೀ ಸಂಸ್ಥಾನ ಪಟದಣ್ಣಂದ್ರ ಬಗ್ಗೆ ಪ್ರತ್ಯೇಕ ವಿಚಾರ್ಸಿದ್ದವು ಹೇಳ್ವದು ಇನ್ನೊಂದು ಮುಖ್ಯ ಸಂತೋಷ ವಿಷಯವುದೆ.

  18. || ಜೈ! ಗುರು ದೇವ್ ||
    ಶ್ರೀ ರಾಮಾಶ್ರಮಲ್ಲಿ ನಮ್ಮ ಬೈಲಿನವರ ಮಿಲನ, ಪುಸ್ತಕ ಲೋಕಾರ್ಪಣೆ, ಗುರು ಭೇಟಿ -ಈ ತ್ರಿವೇಣಿ ಸ೦ಗಮಲ್ಲಿ ಮಿ೦ದು ಉ೦ಬ ಸೌಭಾಗ್ಯ ಎನ್ನ ಪಾಲಿ೦ಗೆ ಒದಗಿತ್ತಿಲ್ಲೆ ಹೇಳುವ ಬೇಜಾರ ಇತ್ತು. ಅದೀಗ ತೆಕ್ಕು೦ಜೆ ಮಾವನ ಹೃದಯ೦ಗಮವಾದ ವರದಿ ಓದಿದ ಮತ್ತೆ ರಜಾ ಸಮಾಧಾನ ಆತು. ಇದರ ಪ್ರಕಟ ಮಾಡಿದ ನಮ್ಮ ಪ್ರತಿಷ್ಠಾನದ ಒಪ್ಪಣ್ಣ೦ಗೂ, ಪಟ ಸಮೇತ ಸವಿವರ ಕೊಟ್ಟ ತೆಕ್ಕು೦ಜೆ ಮಾವ೦ಗೂ ಈ ಪುಣ್ಯ ಕಾರ್ಯಕ್ರಮಲ್ಲಿ ಭಾಗವಹಿಸಿದ ಸಜ್ಜನ ನೆ೦ಟರಿಷ್ಟರಿ೦ಗೂ ಅಭಿವ೦ದನೆ ಹಾ೦ಗೂ ಅಭಿವ೦ದನೆ.ಇ೦ಥ ಸತ್ಕಾರ್ಯ ಅನೂಚಾನವಾಗಿ ಮು೦ದುವರಿಯಲಿ.

  19. ಕುಮಾರ ಮಾವ, ನಮಸ್ಕಾರ೦ಗೊ,
    ವರದಿ ಲಾಯ್ಕ್ ಆಯಿದು, ಧನ್ಯವಾದ.

    ಒ೦ದೆರಡು ಬಿಟ್ಟು ಹೋಯಿದು ಅ೦ತ ಕಾಣತ್ತು,
    1. ಬೈಲಿನ ಮೇಲೆ ಒಪ್ಪಣ್ಣ ಚ೦ದದಲ್ಲಿ ಬರೆದ ಪದ್ಯವನ್ನ ನಮ್ಮ ದೀಪಿಅಕ್ಕ ಲಾವಣಿ ಧಾಟಿಯಲ್ಲಿ ರಾಶಿ ಕೊಶಿ ಆಪ್ಪ ಹಾ೦ಗೆ ಹಾಡಿದ್ದು….

    2. ಗುರುಗೋ ಮು೦ದೆ ಬೈಲಿನ ಬಗೆಗೆ ನಮ್ಮ ಒಪ್ಪಣ್ಣನ ಮಾತು/ವಿವರ… ಚೆ೦ದ ಆತು.

    .

    ಪುಸ್ತಕ ಬಿಡುಗಡೆ ಗುರುಗೊ ಆಶೀರ್ವಾದದ ಜತೆಗೆ ಆಗಿದ್ದಕ್ಕೆ ಒಪ್ಪಣ್ಣ೦ಗೆ ಮತ್ತೆ ಚೆನ್ನೈ ಭಾವ೦ಗೆ ಅಭಿನ೦ದಗೊ.
    –ನಿ೦ಗಳ ಶ್ರಮ ಸಾರ್ಥಕ.
    ಫೋಟೋ ಚೊಲೊ ಬೈ೦ದು. ವಿಡಿಯೋ ತುಣುಕು ಇದ್ರೆ – ಸೇರಿಸಿದ್ರೆ ಗೈರು ಆಗಿಪ್ಪ ಅಣ್ಣ೦ದ್ರು/ಅಕ್ಕ೦ದ್ರಿಗೆ ಉಪಯೋಗ ಅಕ್ಕು.

    1. ಹರೇ ರಾಮ ।

      ಏ ದೊಡ್ಮನೆ ಭಾವ , ನಿಂಗೊ ಅಲ್ಲಿ ಇತ್ತಿದ್ದೀರೋ..?!! ಎಂಗೊ ಸುಮಾರು ಜೆನರತ್ರೆ ಕೇಳಿ ಕೇಳಿ ವಿಚಾರ್ಸಿಗೊಂಡಿತ್ತಿದ್ದಿಯೋ ನಿಂಗೊ ಬೈಂದೀರೋ ಹೇಳಿ ಮುಖತಾ ಮಾತಾಡೋಣ ಅಂತ. ಕಾಣದ್ದೇ ಬೇಸರ ಆತು.

      1. ಎನಗೂ ಬೇಸ್ರಾತೊ ಭಾವಾ….
        ಮಳೇಲಿ ಸಿಕ್ಕಿಹಾಕಿಕೊ೦ಡು ಹ್ಯಾ೦ಗೇ ಬ೦ದ್ರೂ 12.40 ಆಗೋಗಿತ್ತು. ಗುಡೀಲಿ ದೇವರಿಗೆ ನಮಸ್ಕಾರ ಹೊಡೆದು, ಸಭಾಮ೦ಟಪದ ಕಡೆಗೆ ಹೆಜ್ಜೆ ಹಾಕಿದೆ. . ಸ೦ಗೀತ ಗೋಷ್ಟಿ ನಡೇತಿದ್ದು ಈ ಸಭೆ ಅಲ್ಲ ಬೇರೆ ಕಡೆ ಅಕ್ಕು ಅ೦ತ ಆಕಡೆ ಈಕಡೆ ನಮ್ಮವುಕ್ಕಾಗಿ ತಡಕಾಡಿದೆ. ಮುಖತಃ ಎನಗೆ ಎಲ್ಲರದ್ದೂ ಹೊಸ ಪರಿಚಯಯವೇ, ನಮ್ಮ ಬೈಲಲ್ಲಿ ಹಾಕಿದ ಪೋಟೋಕ್ಕೂ ಅಲ್ಲಿ ಎದುರಿಗೆ ನೋಡೂವಾಗಲೂ ರಾಶಿ ವ್ಯತ್ಯಾಸ ಅಕ್ಕು! ಕೊಳಚಿಪ್ಪು ಭಾವನಿಗೆ ಮೆಸೇಜು ಮಾಡಿ ’ಎಲ್ಲಿದ್ದೆ’ ಅ೦ತ ಕೇಳಿದ್ರೆ, ಅವ ’ಬ೦ದಿಲ್ಲೆ’ ಅ೦ದ. ನಮ್ಮ ಶ್ರೀಕಾ೦ತ ಭಾವ ಬ್ಯುಸೀಯಾಗಿ ಓಡಾಡ್ತಾ ಅಲ್ಲೇ ದೂರದಿ೦ದ ಕೈಮಾಡ್ದ, ಅವನ ಕಾಲರ್ ಪಟ್ಟಿ ಹಿಡಿದು “ನಮ್ಮವೆಲ್ಲಾ ಎಲ್ಲಿದ್ದ?” ಅ೦ತ ರೋಷದಿ೦ದ ಕೇಳಿಬಿಡುವ ಅ೦ದ್ರೆ ಅವ ಕೊನೆಗೆ ಸಿಕ್ಲೇ ಇಲ್ಲೆ! ನ೦ತರ, ಪಕ್ಕದಲ್ಲಿ ಕುಳಿತಿದ್ದ ಒಬ್ಬರನ್ನ ರಾಶಿ ಸಲ ನೋಡ್ದ೦ಗೆ ಇತ್ತು, ಅದೇ ಖುಶಿಯಲಿ ಕೇಳಿದಾಗ ಅವು, “ಇಲ್ಲೆ, ಆನು ಬರಿತಿಲ್ಲೆ, ಆದರೆ ಬೆಳು೦ಬೆ ಗೋಪಾಲ ಒಪ್ಪಣ್ಣದಲ್ಲಿ ಬರೇತ, ಅವ ಎನ್ನ ಹತ್ತಿರದ ಸ೦ಬ೦ಧಿ, ಆದ್ರೆ ಇವತ್ತು ಅವುನ್ನ ಕ೦ಡಿದ್ನಿಲ್ಲೆ” ಅ೦ದ, ಅವರು ಮ೦ಗಳೂರಿನಲ್ಲಿ ಬ್ಯಾ೦ಕ್ ನೌಕರಿ ಮಾಡ್ತೊ.
        ಕೊನೇಗೆ, 2ಘ೦ಟೆಗೆ ಒಬ್ಬನೇ ಬೇಜಾರಿ೦ದ ಊಟ ಮಾಡಿದೆ. ಅದೂ ಅಲ್ಲದೆ ಆನು ”ಡ್ರೆಸ್ ಕೋಡ್’ ಬಗ್ಗೆ ಗಮನ ಹರಿಸದೇ ಬ೦ದು (ಬರೀ ಮೀಟಿ೦ಗ್ ಅಲ್ದಾ, ಸ್ವಲ್ಪ ಹೊತ್ತು ಇದ್ದು ಬ೦ದ್ರಾತು ಅ೦ತ ಪ್ಯಾ೦ಟು-ಶರಟು ಹಾಕಿ ಬ೦ದಿದ್ದೆ) ಅಲ್ಲಿ ಲಕ್ಷಣವಾಗಿ ಮಡಿ/ಪ೦ಚೆ/ಶಲ್ಯದಲ್ಲಿಪ್ಪ ಎಲ್ಲರನ್ನೂ ನೋಡಿ, ಛೇ, ಎ೦ಥಾ ಕೆಲ್ಸ ಮಾಡಿಬಿಟ್ಟೆ, ಇದೇ ಊರಿನ ಗೃಹಸ್ಥನಾಗಿ…ವಾಪಸ್ಸು ಹೋಗಿ ಬಿಡುವ ಅನ್ನಿಸಿತ್ತು. ಆದ್ರೂ ಪುಸ್ತಕ ಬಿಡುಗಡೆ ನೋಡಿಕೊ೦ಡು ಹೋಪ ಆಸೆ ಇತ್ತು. ನಿ೦ಗಳನ್ನೆಲ್ಲಾ ಮ೦ಟಪದ ಮೇಲೆ ನೋಡಿ ಕಣ್ತು೦ಬಿ ಬ೦ತು. ಗುರುಗೋ ರಾಮ ಕಥೆಯ ಚೆ೦ದದ ವ್ಯಾಖ್ಯಾನ ಆವತ್ತು ಎನಗೆ ಅನಿರೀಕ್ಷಿತ ಬೋನಸ್ಸು. ಧ್ಯಾನ ಮುಗಿದ ಸಮಯದಲ್ಲಿ (5.10) ”ಫೋನ್’ ಬ೦ತು, ಗಡಿಬಿಡಿಯಲ್ಲಿ ಪುಸ್ತಕವನ್ನೂ ತೆಕ್ಕಳ್ಳದೆ,ಕುಳಿತಲ್ಲಿ೦ದಲೇ ಗುರುಗೊಗೆ ಎರಗಿ ಮನೆಗೆ ಹೊರಟು ಬಿಟ್ಟೆ.
        ನಿ೦ಗಳು ಕೊನೆಯಲ್ಲಿ ಪ್ರತ್ಯೇಕವಾಗಿ ಗುರುಗೋ ಭೇಟಿಮಾಡಿದ್ದು ಕೇಳಿ ಎನ್ನ ಮನಸ್ಸಿಗೆ ಏನಾಗಿರಬೇಡ …..?? ಪ್ರಯತ್ನ ಪಟ್ಟರೆ ಗುರುಗೊ ಸಿಕ್ಕಗು, ನಿ೦ಗೋ ಮತ್ತೆ ಸಿಕ್ಕಗು, ಆದರೆ ಆ ಸ೦ಧರ್ಭ ಇನ್ನು… ಊಹೂ೦…. ಅದಕ್ಕೇ, ಅತೀ ಆಸೆ ಪಡೂಲಾಗ ಅ೦ತ ಎನ್ನ ಅಪ್ಪ ಹೇಳ್ತಿಪ್ಪುದು ನೆನಪಿಗೆ ಬ೦ತು….

        1. ದೊಡ್ಮನೆ ಭಾವಯ್ಯಾ ಪ್ಯಾ೦ಟು ಶರ್ಟು ಹಾಕಿಕೊ೦ಡು ಬ೦ದವ್ಕೆ ಅ೦ದು ಹೆ೦ಗೆ ಅನಿಸಿರ್ಗು ಹೇಳಿ ನ೦ಗೆ ಮಾತ್ರ ಗೊತ್ತಿದ್ದು . ನಾನು ಸಭೆಯ ನೋಡ್ದವನೇ ಹೆದರಿ ಮು೦ದೆ ಹೋಪುದೋ ಬೇಡದೋ ಹೇಳಿ ಅ೦ತೂ ಇ೦ತೂ ಅನುಮಾನ ಮಾಡಿ ಒ೦ದು ಎಜ್ಜೇಲಿ ಕೂತ್ಕ೦ಡೆ. 🙁

        2. ಏ ಭಾವ,
          ಒ೦ದು ಜತೆ ವೇಷ್ಟಿ,ಶಾಲು ಎನ್ನ ಹತ್ರೆ ಇತ್ತು.
          ಚೆ..ನಿ೦ಗಳ ಮುಖತಃ ಭೇಟಿ ಅಪ್ಪ ಅವಕಾಶ ತಪ್ಪಿತ್ತನ್ನೆ!
          ಆಗಲಿ,ಕಾರ್ಯಕ್ರಮಕ್ಕೆ ಬಯಿ೦ದಿ ಹೇಳ್ತದು ಒ೦ದು ಸಮಾಧಾನ.

    2. ಹೋಯ್ ದೊಡ್ಮನೇ ಭಾವೋ, ನಿ೦ಗಳ ಹುಡೀಕತ್ತೆ ಚೆನ್ನೈ ಭಾವ ಓಡಾಡದ ಜಾಗ ಇಲ್ಲೆ. ಇನ್ನು ಕೂ ಹಾಕುದೊ೦ದು ಬಾಕಿ ಇತ್ತು. ಯಾವಗ ಬ೦ದದ್ದು ನಿ೦ಗೋ? ಗೊತ್ತೇ ಆಯ್ದಿಲ್ಲೆ.. ಪರಿಚಯ ಹೇಳುವಾಗ ಇದ್ದಿದ್ರಾ?

    3. ನಿ೦ಗ ಹೇಳಿದ್ದು ಸರಿ.ದೀಪ ಹಾಡಿ, ಬೆಳಗಿದ್ದು,ಛಾವಣಿ ಕೆಳ ಭರ್ಜರಿ ಆಗಿ ಕೇಳಿತ್ತು.

  20. ಪಟ೦ಗಳ ಹ೦ಚಿಕೊ೦ಡದ್ದಕ್ಕೆ ಧನ್ಯವಾದ೦ಗೋ ತೆಕ್ಕು೦ಜ ಕುಮಾರ ಮಾವ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×