Oppanna.com

ಮನೆ ದಾನದ ದ್ವಿಶತಕ

ಬರದೋರು :   ಗೋಪಾಲಣ್ಣ    on   04/09/2012    10 ಒಪ್ಪಂಗೊ

ಗೋಪಾಲಣ್ಣ

ನಿನ್ನೆಯ ಪತ್ರಿಕೆಗಳಲ್ಲಿ ಒಂದು ಮುಖ್ಯ ಸುದ್ದಿ.
ಕಿಳಿಂಗಾರಿನ[ಬೇಳದ ಹತ್ತರೆ] ಗೋಪಾಲಕೃಷ್ಣ ಭಟ್ಟರು ಸಮಾಜಸೇವೆಲಿ ದೊಡ್ಡ ಹೆಸರು. ಸಾಯಿರಾಂ ಭಟ್ರು ಹೇಳಿಯೇ ಅವಕ್ಕೆ ಹೆಸರು.ಕುಡಿವ ನೀರಿನ ಪೂರೈಕೆ,ಉಚಿತ ಸಾಮೂಹಿಕ ವಿವಾಹ,ಉಚಿತ ವೈದ್ಯಕೀಯ ಶಿಬಿರ,ಬಡವರಿಂಗೆ ಮನೆ ಕಟ್ಟಿಸಿ ಕೊಡುದು-ಹೀಂಗೆ ಅನೇಕ ವರ್ಷಂದ ಮಾಡುತ್ತಾ ಬೈಂದವು.
ಅವು ಕಟ್ಟಿಸಿ ದಾನ ಮಾಡುವ ೨೦೧ನೇ ಮನೆಯ ಬೀಗದ ಕೈಯ ಹಸ್ತಾಂತರ ಮೊನ್ನೆ ಆದಿತ್ಯವಾರ ನಡೆದತ್ತಡ.ಕೇರಳದ ಗ್ರಾಮಾಭಿವೃದ್ಧಿ ಮಂತ್ರಿ ಕೆ.ಸಿ.ಜೋಸೆಫ್ ಮತ್ತೆ ದೊಡ್ಡ ನಾಯಕರೆಲ್ಲಾ ಬಂದ ಈ ಕಾರ್ಯಕ್ರಮಲ್ಲಿ ಫಲಾನುಭವಿ ಗೀತಾ ಪಾಟಾಳಿಗೆ ಬೀಗದ ಕೈ ಕೊಟ್ಟವು.
ಸಾಯಿರಾಮ ಭಟ್ಟರ ಬಗ್ಗೆ ಇತ್ತೀಚೆಗೆ ಮಲಯಾಳದ ಪತ್ರಿಕೆಯೊಂದರಲ್ಲಿ ವಿಸ್ತಾರದ ಲೇಖನ ಬಯಿಂದು.
ಅವರ ಸಾಧನೆಯ ಬಗ್ಗೆ ಅಭಿನಂದನೆ ಹೇಳುವೊ.

10 thoughts on “ಮನೆ ದಾನದ ದ್ವಿಶತಕ

  1. ಒಂದು ಸರಕಾರ, ಅಥವಾ ಸಂಘಟನೆ, ಅಥವಾ ಪಕ್ಷ ಮಾಡದ್ದ ಘನ ಕಾರ್ಯವ ಮಾಡ್ತಾ ಇಪ್ಪ “ಸಾಯಿ ರಾಂ” ಭಟ್ರಿಂಗೆ ನಮೋ ನಮಃ.

  2. ಸಿರಿ ಬಂದ ಕಾಲದಲಿ | ಕರೆದು ದಾನವ ಮಾಡು
    ಪರಿಣಾಮವಕ್ಕು ಪದವಕ್ಕು – ಕೈಲಾಸ
    ನೆರೆಮನೆಯಕ್ಕು ಸರ್ವಜ್ಞ

    ಸಾಯಿರಾ೦ ಭಟ್ರಿಗೆ ಶುಭವಾಗಲಿ . ಅಭಿನ೦ದನೆಗಳು. ನಮ್ಮ ಸಮಾಜಕ್ಕೆ ಇವರೆಲ್ಲಾ ಮಾದರಿಯಾಗಲಿ. ಇ೦ಥವರ ಸ೦ಖ್ಯೆ ಇಮ್ಮಡಿಯಾಗಲಿ ಎ೦ಬ ಹಾರೈಕೆ.

    ಮಾಹಿತಿ ಹಂಚಿಕೊಂಡ ಗೋಪಾಲಣ್ಣ೦ಗೆ ಧನ್ಯವಾದ .

  3. ಒಳ್ಳೆ ಮಾಹಿತಿ ಗೋಪಾಲಣ್ಣ , ಇವರ ಬಗ್ಗೆ ಪೂರ್ತಿಯಾಗಿ ಗೊಂತಾದರೆ ಒಳ್ಳೇದಿತ್ತು.

    ದನ್ಯವಾದ೦ಗೊ

  4. ಸಮಾಜಸೇವಾ ಮನೋಭಾವವ ಬೆಳೆಶುವವು ಅಪ್ರೂಪ ಆದ ಈ ಕಾಲಲ್ಲಿ ಯೇವದೇ ಪ್ರಚಾರ ಇಲ್ಲದ್ದೆ ಮಾಡುವ ಈ ಸೇವೆ ನವಗೆಲ್ಲಾ ಮಾದರಿಯಾಗಲಿ.ಸಾಯಿರಾ೦ ಭಟ್ಟರ ಹಾ೦ಗಿಪ್ಪ ಜೆನರ ಸ೦ಖ್ಯೆ ಸಮಾಜಲ್ಲಿ ಇನ್ನೂ ಹೆಚ್ಚಾಗಲಿ ಹೇಳಿ ಶುಭ ಹಾರೈಸುವ.

  5. ಹೀಂಗಿಪ್ಪ ದಾನಿಗೊ ತೀರಾ ವಿರಳ.
    ಅಭಿನಂದನೆಗೊ

  6. ಅಪರೂಪಲ್ಲಿ ಒಬ್ಬ°. ಅಭಿನಂದನೆಗೊ. ದೇವರು ಅವಕ್ಕೆ ಎಲ್ಲಾ ಸೌಭಾಗ್ಯವ ಅನುಗ್ರಹಿಸಲಿ ಹೇಳಿ ಹಾರೈಸುವೊ°.

  7. ಸಾಯಿರಾಂ ಭಟ್ಟರು ಮಾಡ್ತಾ ಇಪ್ಪ ಸಮಾಜ ಸೇವೆ ನಿಜವಾಗಿಯೂ ಅಭಿನಂದನೀಯ. ೨೦೧ನೇ ಹೊಸ ಮನೆಯ ಕಟ್ಟುಸಿ ಪಾಪದವಕ್ಕೆ ಕೊಡ್ತಾ ಇಪ್ಪ ವಿಷಯವ ಆನುದೆ ಪೇಪರಿಲ್ಲಿ ಓದಿದೆ. ಇದು ನಮ್ಮ ಸಮಾಜಕ್ಕೇ ಹೆಮ್ಮೆಯ ವಿಷಯ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×