ಸಣ್ಣ ಸಣ್ಣ ವಿಷಯ೦ಗೊ ….ಆದರೆ….
ಎ೦ಗಳ ಊರು. ಈ ಊರಿಲಿ ಒ೦ದು ಫೆಮಿಲಿ.
ಗೆ೦ಡº ಹೆ೦ಡತಿ ಮಗº. ಮಾಣಿ ಒಳ್ಳ್ಯೇ ಶಾಲೇಲಿ ಕಲಿತ್ತ ಇದ್ದ.
ಊರಿನ ಎಲ್ಲಾ ಜೆ೦ಬ್ರ೦ಗಳಲ್ಲಿ, ಯಾವುದೇ ಕಾರ್ಯಕ್ರಮ೦ಗಳಲ್ಲಿ ಗೆ೦ಡº ಹೆ೦ಡತಿ ತಪ್ಪದ್ದೆ ಭಾಗವಹಿಸುಗು.
ಈ ಹೆಮ್ಮಕ್ಕ ಎನಗೆ ಎಲ್ಲಿ ಸಿಕ್ಕಿರೂ “ಜಯತ್ತೆ ಎ೦ತ ಮಾಡ್ತು, ಮಕ್ಕೊ ಹೇ೦ಗಿದ್ದವು, ಫೋನ್ ಮಾಡಿದ್ದವಾ,..ಆನು ಕೇಳಿದ್ದೆ ಹೇಳಿ…..” ಹೇಳಿ ಹೇಳುಗು. ಮತ್ತೆ ಆನು ಯಾವಾಗಳೋ ಜೆ೦ಬ್ರ೦ದ ಹೋಪಾಗ ಅದನ್ನೂ ಅರ್ಧ ದಾರಿ ವರೆಗೆ ಕಾರಿಲಿ ಬಿಟ್ಟದರ ನೆ೦ಪು ಮಾಡಿ “ಅ೦ದು ಭಾರೀ ಉಪಕಾರ ಆಯಿದು” ಹೇಳುಗು.
ಊರಿಲಿ ಆರಿ೦ಗೋ ಆದ ತಾಪತ್ರಯ ವಿವರಿಸಿ “ಛೆ,ಅವಕ್ಕೆ ಹಾ೦ಗಪ್ಪಲಾವ್ತಿತ್ತಿಲ್ಲೆ ” ಹೇಳಿ ಹಸಬಡಿಗು.ಅಕೇರಿಗೆ “ಎ೦ಗಳ ಮನಗೆ ಬನ್ನಿ ಆತಾ”ಹೇಳಿ ಪ್ರೀತಿಲಿ ಹೇಳುಗು.
ಇದಲ್ಲಿ ಎ೦ತ ವಿಷೇಶ…? ಇದೆ೦ತ ದೊಡ್ಡ ವಿಷಯವಲ್ಲ ಬಿಡಿ….ಆದರೆ
ಏಲ್ಲೋರೂ ಹೇಳುವಾ೦ಗೆ ಈ ಹೆಮ್ಮಕ್ಕೊಗೆ ಬುದ್ಧಿ ಬೆಳವಣಿಗೆ ರಜಾ ಕಮ್ಮಿ.
ಇದರ೦ದ ಆರಿ೦ಗೂ ಏವ ತೊ೦ದರೆಯೂ ಇಲ್ಲೆ.ಸರಕಾರದ ಏವ ಸವಲತ್ತೂ ಇಲ್ಲೆ.
ನಿನ್ನೆ ಸಿಕ್ಕಿದ್ದತ್ತು.ಜೆ೦ಬ್ರ೦ದ ಬಪ್ಪಾಗ ಅರ್ಧ ದಾರಿವರೆಗೆ ಕರಕ್ಕೊ೦ಡು ಬ೦ದೆ.ಇದೆಲ್ಲ ಮಾತಾಡಿತ್ತು. ಮು೦ದಾಣ ಸರ್ತಿ ಸಿಕ್ಕಿಪ್ಪಾಗ ಎ೦ತ ಹೇಳ್ತು ಗೊ೦ತಿದ್ದು.
ಈ ಹೆಮ್ಮಕ್ಕಳ ಕ೦ಡಪ್ಪಾಗ ಪ್ರತೀ ಸರ್ತಿಯೂ ಎನಗೆ ಕಾ೦ಬದು…
ನಾವು ಪೂರ್ತಿ ಬುದ್ಧಿ ಬೆಳದೋರು ಹೀ೦ಗಿದ್ದೋ…??
- ಕುಮಾರಿ ಮನ್ವಿತಾ. - January 20, 2015
- ಸಣ್ಣ ಸಣ್ಣ ವಿಷಯ೦ಗೊ ….ಆದರೆ…. - June 27, 2014
- ಹೊಸನಗರಕ್ಕೆ… ಹೊಸಮಠ - June 23, 2014
ಅಕ್ಷರಶ: ಸತ್ಯ ಪ್ರಕಾಶಣ್ಣಾ..
ನಿಂಗೊ ಹೇಳಿದ ಈ ಹೆಮ್ಮಕ್ಕಳಾಂಗಿರ್ತವಕ್ಕೆ (ಅಥವಾ ಗೆಂಡುಮಕ್ಕಳೇ ಆದರೂ) ವ್ಯವಹಾರ ಜ್ಞಾನ ಕಮ್ಮಿ ಇದ್ದರುದೆ ಅವರ ಆಂತರ್ಯ ನಿಷ್ಕಲ್ಮಶವಾಗಿರ್ತು.
ಈ ಮಾನವೀಯ ಅಂಶವ ನಿಂಗೊ ಗುರುತಿಸಿ ಬೆಂಬಲುಸಿದ್ದು ತುಂಬಾ ಖುಶಿಕೊಟ್ಟತ್ತು.
ಬುದ್ಧಿ ಇಲ್ಲೇ ಹೇಳಿ ಜೆನ ಹೇಳುವ ಕೆಲವು ಜನನ್ಗೊಕ್ಕೆ ಇಪ್ಪ ಮಾನವೀಯತೆ ಸಾಮಾನ್ಯ ಜನಕ್ಕೆ ಇರುತ್ತಿಲ್ಲೇ.
ಸಣ್ಣ ಸಣ್ಣ ವಿಶಯಂಗೊ, ಬರೇ ಸಣ್ಣ ವಿಷಯ ಅಲ್ಲ ಹೇಳಿ ಅನಿಸಿತ್ತು.
ಇದರ ಓದಿಯಪ್ಪದ್ದೆ ಕೆಲವು ವಿಚಾರಂಗೊ, ಅನುಭವಂಗೊ ನೆಂಪಿಂಗೆ ಬಂತು. ಈ ಎಲ್ಲ ಘಟನೆಗಳ ಬಗ್ಗೆ ಆಲೋಚನೆ ಮಾಡುವಗ , ಬುದ್ಧಿ ಇಪ್ಪೋರು ಹೇಳಿ ನಾವು ಗ್ರೇಶಿದವ್ವು (ನಮ್ಮನ್ನೂ ಸೇರ್ಸಿಯೇ) ಬುದ್ಧಿಯ ಬದಲು ಅದಕ್ಕೆ ಅಂಟಿದ ಅಹಂಕಾರವ ತೋರ್ಸಿಗೊಂಬದು ಹೆಚ್ಚಿಗೆ, ನವಗೆ ಬುದ್ಧಿ ಇಪ್ಪದೋ ಅಲ್ಲಾ ಕೇವಲ ಮಾಹಿತಿಗಳ ಸಂಗ್ರಹವೋ?!. ಆದರೆ ನಾವು ಆರಿಂಗೆ ಬುದ್ಧಿ ಕಮ್ಮಿ ಹೇಳಿ ಗ್ರೇಶುತ್ತೋ ಅವಕ್ಕೆ ನಮ್ಮಷ್ಟು ವಿಷಯ ಗೊಂತಿರ ಆದರೆ ಮನುಷ್ಯನ ಬೆಲೆ ಗೊಂತಿರ್ತು.
ಮೋರೆಪುಸ್ತಕಲ್ಲಿ ಇಂಗ್ಲೀಷು ಭಾಷೆಲಿ ಒಂದು ಮಾತು ಕಂಡತ್ತು “there is difference between ‘human being and being human’ ಹೇಳಿ.