Oppanna.com

ಒಂದು ವಿಶಿಷ್ಟ ಘಟನೆ ಮತ್ತೆ ವಿಶೇಷ ಮ೦ತ್ರಾಕ್ಷತೆ….

ಬರದೋರು :   ಶ್ರೀಪ್ರಕಾಶ ಕುಕ್ಕಿಲ    on   19/03/2014    9 ಒಪ್ಪಂಗೊ

ಒಂದು ವಿಶಿಷ್ಟ ಘಟನೆ ಮತ್ತೆ ವಿಶೇಷ ಮ೦ತ್ರಾಕ್ಷತೆ….

 
ಚ೦ದಾವರ ಸೀಮೆಯ ಹೊನ್ನಾವರ ಮಂಡಲ.
ಅಲ್ಲಿ  ಹೊಸಾಕುಳಿ ಶ್ರೀ ಲಕ್ಷ್ಮಿನಾರಾಯಣ ದೇವರ ಸನ್ನಿಧಿ.
ಮಾರ್ಚಿ ಹದಿನಾರು ಮತ್ತು ಹದಿನೇಳರ೦ದು ಇಲ್ಲಿ ಶ್ರೀಗುರು ಭಿಕ್ಷೆ, ದೊಡ್ಡ ಗುರುಗೋ ಶ್ರೀಶ್ರೀ ರಾಮಚಂದ್ರ ಭಾರತೀ ಸ್ವಾಮಿಗಳ ಆರಾಧನೆ, ಶ್ರೀ ಗುರುಗಳಸಮ್ಮುಖಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ೦ಗೋ…..
ಉತ್ತರ ಕನ್ನಡದ ಹವೀಕರ ಕ್ರಮ ಗೋ೦ತಿದ್ದನ್ನೇ… ಅತಿಥಿ ಸತ್ಕಾರಲ್ಲಿ ದಕ್ಷಿಣ ಕನ್ನಡದವರಿ೦ದ ತು೦ಬಾ ಮುಂದೆ… ಯಾವುದೇ ತೋರಿಕೆ ಇಲ್ಲದ್ದೆ ತು೦ಬು ಹೃದಯದ ಸತ್ಕಾರ.
ಎಲ್ಲ ದಿಕ್ಕೆಯೂ ಊಟ ಆಗಿಯೇ ಗುರುಗಳ ಆಶೀರ್ವಚನ ಇಪ್ಪದು.
ನವಗೆ ಊಟ ಆಗದ್ರೆ ಗುರುಗೋ ಬೇಜಾರು ಮಾಡಿಗೊಳ್ತವನ್ನೆ.
ಹಾ೦ಗೇ ಇಲ್ಲಿಯೂ ಮಧ್ಯಾನ್ನಪ್ಪಗ ಒಂದೂವರೆಗೆ ಗಡದ್ದಿನ ಊಟ ಆಗಿ ಗುರ್ತ ಇಪ್ಪೋರತ್ರೆ ಪಟ್ಟಾಂಗ ಇಲ್ಲದ್ರೋತ್ರೆ ನೆಗೆ ಎಲ್ಲ ಆಗಿ ಅಪ್ಪಾಗ ಸುಮಾರು ಮೂರು ಘಂಟೆಯ ಹೊತ್ತಿ೦ಗೆ ಪೀಠಕ್ಕೆ ಬಂದ ಗುರುಗಳ ಸಂಮುಖಲ್ಲಿ ‘ಗುರು ಪರಂಪರೆಯ’ ಬಗ್ಗೆ  ಹಿರಣ್ಯ ವೆಂಕಟೇಶ್ವರಣ್ಣನ ಅದ್ಭುತ ವಿವರಣೆ.
ಇನ್ನು ಗುರುಗಳ ಆಶೀರ್ವಚನ ಸುರು ಆಯೆಕ್ಕು.
ಅವಾಗ ‘ಜ್ಯೋತಿ’ ಹೇಳ್ತ ಒಪ್ಪಕ್ಕ°೦ಗೆ ಮತ್ತೆ ‘ಜ್ಯೋತಿ’ಯ ಗೆಂಡ°೦ಗೆಮತ್ತೆ ಜ್ಯೋತಿಯ ಅಮ್ಮ ಅಪ್ಪ°೦ಗೆ  ಗುರುಗಳ ವಿಶೇಷ ಮ೦ತ್ರಾಕ್ಷತೆ.
ಈ …ಜಸ್ಟ್ ಮೇರೀಡ್ ದಂಪತಿ ಗೊಕ್ಕೆ ಒಂದೇ ಶಾಲು ಹೊದೆಶಿ ಎಲ್ಲೋರ ತಲೆಗೂ ಮ೦ತ್ರಾಕ್ಷತೆ ಹಾಕಿ ಪೂರ್ಣಾಶೀರ್ವಾದ ಮಾಡಿದವು.
ಇವಕ್ಕೆ ಸನ್ಮಾನ ಮತ್ತೆ ವಿಶೇಷ ಮ೦ತ್ರಾಕ್ಷತೆ ಪುನಃ  ಶ್ರೀ ರಾಮೋತ್ಸವ ಸ೦ದರ್ಭಲ್ಲಿಯೂ ನಾಳ್ತು ಹೊಸನಗರಲ್ಲಿ ಸಿಕ್ಕುಲಿದ್ದು.
…ಎ೦ತಗೆ ಹೇಳಿರೆ
” ಈ ಜ್ಯೋತಿ ಎಂಬ ಮಾಡ್ರನ್ ಶಿಕ್ಷಣ ಪಡೆದ ಹವೀಕ ಹುಡುಗಿ ಒಬ್ಬ ಕೃಷಿಕ ಹುಡುಗ ನನ್ನು ಒಪ್ಪಿ ಮದುವೆ ಆಗಿರುತ್ತಾಳೆ.
ಇವಳ ತಂದೆ ತಾಯಿ ಕೂಡಾ ತಮ್ಮ ಮಗಳಿಗೆ ಪೇಟೆಯ ವರನನ್ನು ಆರಿಸುವ ಬದಲು ಹಳ್ಳಿಯ ಶುದ್ಧ ಪರಿಸರದ ಕೃಷಿಕ ವರನನ್ನು ಅಳಿಯನನ್ನಾಗಿ ಮಾಡಿಕೊಂಡಿದ್ದಾರೆ.
ಇವರ ಈ ನಡೆಯನ್ನು ನಾವು ಶ್ಲಾಘಿಸುತ್ತೇವೆ ಮತ್ತು ಇವರೆಲ್ಲರೂ ಗುರು ಪೀಠದ ವಿಶೇಷ ಆಶೀರ್ವಾದಕ್ಕೆ ಭಾಜನರಾಗಿದ್ದಾರೆ.
ನಾಡಿದ್ದು ಶ್ರೀ ರಾಮೋತ್ಸವದ ಸಂದರ್ಭ ಪುನಃ ನಮ್ಮ ಇಡೀ ಸಮಾಜದ ಮುಂದೆ ಇವರನ್ನು ಸಂಮಾನಿಸಲಿದ್ದೇವೆ. ಈ ‘ಜ್ಯೋತಿ’ ಎಂಬ ಹುಡುಗಿ ಇಂದು ಹಚ್ಚಿದ ‘ಜ್ಯೋತಿ’ ಮುಂದೆ ಅನೇಕ ಹವ್ಯಕ ಹುಡುಗಿ ಮತ್ತು ಹೆತ್ತವರ ಹೃದಯದಲ್ಲಿ ಬೆಳಗಲಿ.
ಇನ್ನು ಮುಂದೆ ಕೃಷಿಕ ಮತ್ತು ವೈದಿಕ ಹುಡುಗರನ್ನು ಮದುವೆಯಾಗುವ ಹವ್ಯಕ ಹುಡುಗಿ ಮತ್ತು ಅವರ ಹೆತ್ತವರನ್ನು ಸಮಾಜದ ಮುಂದೆ ನಾವು ಗುರುತಿಸಿ ವಿಶೇಷ ಮಂತ್ರಾಕ್ಷತೆ ನೀಡಿ ಆಶೀರ್ವದಿಸಲಿದ್ದೇವೆ.”
ಗುರುಗೋ ಆಶೀರ್ವಚನಲ್ಲಿ ಹೇಳುವಾಗ ಒಂದೈದು ನಿಮಿಷ ಸಭೆಲಿ ಚಪ್ಪಾಳೆ ಶಬ್ದ ಮಾತ್ರ ಕೇಳಿದ್ದು ಇದರೆಡೆಲಿ ‘ಹರೇ ರಾಮ’ ಹೇಳುವ ಉದ್ಘೋಷಣೆ ಮಾತ್ರ.
ಸ೦ತೋಷ ತಡವಲೆಡಿಯದ್ದೆ ಕೆಲವು ಜೆನ ತಲೆ ಬಗ್ಗಿಸಿ  ಕಣ್ಣುದ್ದಿಗೊಂಬದೂ ಎಡಕ್ಕಿಲಿ ಕಂಡುಗೊಂಡಿತ್ತು.

~~~***~~~

9 thoughts on “ಒಂದು ವಿಶಿಷ್ಟ ಘಟನೆ ಮತ್ತೆ ವಿಶೇಷ ಮ೦ತ್ರಾಕ್ಷತೆ….

  1. ಸನ್ಮಾನ ಮಾಡೆಕಾದ ವಿಷಯ. ಕೊಶಿಯಾತು ಕೇಳಿ.

  2. ಒಂದು “ಜ್ಯೋತಿಂ”ದ ಮತ್ತೆ ಹಲವು “ಜ್ಯೋತಿ”ಗಳ ಬೆಳಗಿದ ಹಾಂಗೆ , ಜ್ಯೋತಿ ದಂಪತಿಗೊ ನಮ್ಮ ಸಮಾಜವ ಬೆಳಗಲಿ.

  3. ಹರೇರಾಮ, ನಮ್ಮ ಸಮಾಜಲ್ಲಿ ಸತ್ಪರಿವರ್ತನಗೆ ಒಂದು ಬಾಗಿಲು ತೆಗದ ಹಾಂಗೆ ಕಾಣುತ್ತು. ಇದರಲ್ಲಿ ವಧುವಿನ, ಅದರ ಅಬ್ಬೆ-ಅಪ್ಪನ ತ್ಯಾಗ ಭಾವ ಎದ್ದು ಕಾಣುತ್ತು. ಮುಂದಾಣವಕ್ಕೆ ಆದರ್ಶವಾಗಲಿ, ಹಾಂಗೇ ಈ ನವ ವಧೂ ವರರು ಲಕ್ಶ್ಮೀ-ನಾರಾಯಣರ ಹಾಂಗೆ ಬೆಳಗಲಿ ಹೇಳಿ ಎನ್ನದೂ ಮನದಾಳದ ಪ್ರಾರ್ಥನೆ

  4. ಅಪ್ಪು. ತುಂಬಾ ಸಂತೋಶ ದ ವಿಶಯ. ಎನಗೂ ಕಣ್ಣಿಲ್ಲಿ ಹನಿ ಮೂಡಿತ್ತು. ಈ ಒಂದು ದೊಡ್ಡ ಸಮಸ್ಯೆ ಯ ಹೀಂಗೇ ಹಿಂದೂಡಿ ಬಗೆ ಹರಿಸಿದರೆ ಮತ್ತೆ ಬ್ರಾಹ್ಮಣ್ಯ, ಬ್ರಾಹ್ಮಣರು, ಒಟ್ಟಿಗೆ ಇಡೀ ಸಮಾಜ, ಇಡೀ ದೇಶ ವಿಕಾಸಗೊಳ್ಲಲು ಸರ್ವತೋಮುಖ ಅಭಿವ್ರದ್ಧಿ ಯಾಗಲು ಸುಲಭವಾಗುತ್ತದೆ. ನಮ್ಮ ಹವೀಕ ಮಹಾಗುರುಗಳಿಗೆ ಮತ್ತು ಗುರುಪೀಠಕ್ಕೆ ವನ್ದನೆಗಳು. ಆ ನೂತನ ವಧೂವರರಿಗೆ, ಹೆತ್ತವರಿಗೆ, ಶುಭವಾಗಲಿ ಎಂದು ನಮ್ಮ ಹಾರೈಕೆ ಮತ್ತು ಪ್ರಾರ್ಥನೆ.

  5. ಮಾದರಿಯಾಗಿರಲಿ. ಹರೇ ರಾಮ. ದೀರ್ಘಕಾಲ ಸುಖಸಂತೋಷನೆಮ್ಮದಿಂದ ಇವರ ಕುಟುಂಬ ಮುಂದುವರಿಯಲಿ ಹೇದು ಶುಭಾಶಯ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×