ಬಂಡಾಡಿಯ ಅಜ್ಜಿ ಮದ್ದು ಅರೆತ್ತಡ…!

ಸಂಸ್ಕೃತಿ ಒಳಿವಲೆ ಹಿರಿಯೋರು ಬೇಕಡ.
ಹೇಂಗೆ ಒಂದು ಮನೆಲಿ ಪುಳ್ಳಿಯಕ್ಕೊ ಮಕ್ಕೊ ಇದ್ದರೆ ಗೌಜಿಯೋ, ಹಾಂಗೆಯೇ ಅಜ್ಜ- ಅಜ್ಜಿಯಕ್ಕೊ ಇದ್ದರೆ ಗಾಂಭೀರ್ಯ.
ಅಜ್ಜ-ಅಜ್ಜಿಯಕ್ಕೊ ಇದ್ದರೇ ಒಂದು ಮನೆಗೆ ಶೋಭೆ.
ಅಜ್ಜಿಗೊಕ್ಕೆ ಮನೆಯ ಸಂಸ್ಕಾರ, ಹಳೆ ಕ್ರಮಂಗೊ ಎಲ್ಲ ಅರಡಿಗು.
ಮನೆ ಯೆಜಮಾನನ ತಿದ್ದುತ್ತ ಕಾರ್ಯ ಅವ್ವೇ ಅಲ್ಲದೋ ಮಾಡಿದ್ದು.. ಹಾಂಗಾಗಿ ಇಡೀ ಮನೆಲಿ ಅತ್ಯಂತ ಪೂಜ್ಯರೂ, ಗೌರವಯುತರೂ ಆಗಿ ಇರ್ತವು ಇವು.

ನಿಂಗೊಗೆ ಬಂಡಾಡಿಅಜ್ಜಿ ಗುರ್ತ ಇದ್ದಲ್ದ?
ನವಗೆಲ್ಲ ಅಂಬಗಂಬಗ ಬುದ್ಧಿಮಾತು ಹೇಳಿಯೊಂಡು, ಒಳ್ಳೆದರ ತಿಳಿಸಿಗೊಂಡು, ಎಲೆ ತಿಂದೊಂಡು, ರೇಡ್ಯ ಕೇಳಿಯೊಂಡು – ಒಟ್ಟಿಲಿ ನಮ್ಮೊಟ್ಟಿಂಗೆ ಆತ್ಮೀಯವಾಗಿ ಬದುಕ್ಕಿಯೊಂಡು ಇಪ್ಪ ಹಿರಿ ಜೀವ. ತುಂಬ ಅನುಭವಸ್ಥರು.
ಪ್ರಾಯಲ್ಲಿ ಅಜ್ಜಿ ಹೇಳಿ ಕಾಣದ್ರೂ, ಅನುಭವಲ್ಲಿ, ಮಾತಾಡ್ತ ಕ್ರಮಲ್ಲಿ ಥೇಟ್ ಅಜ್ಜಿಯೇ!!
ನೀನು ಅಜ್ಜಿಯೋ? ಹೇಳಿ ಕೇಳಿರೆ,
“ಅಂದ್ರಾಣ ಅಜ್ಜಿಪುಳ್ಳಿ, ಈಗಾಣ ಪುಳ್ಯಕ್ಕಳ ಅಜ್ಜಿ…!” ಹೇಳುಗು ನೆಗೆ ಮಾಡಿಗೊಂಡು.
ರಜ ರಜ ಹಳ್ಳಿ ಮದ್ದುಗೊ, ಕಷಾಯಂಗೊ – ಎಲ್ಲ ಅರಡಿಗು. ಶೀತವೋ, ತಲೆಬೇನೆಯೋ ಮಣ್ಣ ಪುಳ್ಯಕ್ಕೊಗೆ ಬಂದರೆ ಜೆಂಗಂದ ರಜ ಗೆಣಮೆಣಸು ಗುದ್ದಿ – ಹೇಂಗೂ ಅಡಕ್ಕೆ ಗುದ್ದುತ್ತ ಗುಂಡು ಇದ್ದನ್ನೆ- ಗುದ್ದಿ ಕೊಡುಗು. ಹಾಂಗಿರ್ತ ಅಜ್ಜಿ ಅದು.

ಅವಕ್ಕೆ ಗೊಂತಿಪ್ಪ ಅಜ್ಜಿಮದ್ದುಗಳ ತಿಳಿಶಲೆ ಒಪ್ಪಣ್ಣ ಕೇಳಿಗೊಂಡಪ್ಪಗ ಸಂತೋಷಲ್ಲಿ ಒಪ್ಪಿ, ಒಂದು ಹೇಳಿಕೊಟ್ಟವು. ಅಜ್ಜಿಮದ್ದು ವಿಭಾಗಲ್ಲಿ ಅದರ ಹಾಕುವೊ ಹೇಳಿ ಕಂಡತ್ತು.

ಓದಿ, ಎಡಿಗಾರೆ ಮದ್ದು ಮಾಡಿ.
ಅಜ್ಜಿಗೂ, ಅದರ ಮದ್ದಿಂಗೂ ಒಪ್ಪ ಕೊಟ್ಟೋಂಡಿರಿ. ಆತೋ?
ಕಷಾಯ ಕೈಕ್ಕೆ ಆದರೆ ಎರಡು ಬೈವದಕ್ಕೆ ಅಡ್ಡಿ ಇಲ್ಲೆ..!! 😉
~
ಒಪ್ಪಣ್ಣ

ಎಲೆ ಅಡಕ್ಕೆ ಗುದ್ದಿಯೊಂಡಿತ್ತಿದ್ದೆ.
ಅಷ್ಟಪ್ಪಗ ಒಪ್ಪಣ್ಣ ಬಂದು, ಹೀಂಗೀಂಗೆ ಒಂದು ವೆಬ್ಬುಸೈಟು ಮಾಡಿದ್ದೆ ಹೇಳಿದ.
ಎಂತದೋ ಈ ಅಜ್ಜಿಗರಡಿಯಪ್ಪ.!
ಕರೆಂಟಿನ ಪುಸ್ತಕಲ್ಲಿ ಮಾಡ್ತ ಸೈಟಡ. ರಜ ರಜ ವಿವರ್ಸಿದ ನಿದಾನಕ್ಕೆ.

ಬಂಡಾಡಿ ಅಜ್ಜಿಯ ಎಲೆ ಸಂಚು..!

ಬಂಡಾಡಿ ಅಜ್ಜಿಯ ಎಲೆ ಸಂಚು..!

ಇಲ್ಲದ್ರೆ ಅಜ್ಜಿಗೆ ಅರ್ತ ಆಯೆಕೆ.!!
ಇರಳಿ, ಅದರ್ಲಿ ನಮ್ಮ ಹವ್ಯಕ ಅಡಿಗೆಗಳನ್ನೋ, ಮನೆಮದ್ದುಗಳನ್ನೋ ಎಲ್ಲ ಬರೆಯೆಕೂಳಿ ಹೇಳಿದ. ಎನಗೂ ಕರೆಂಟಿನ ಪುಸ್ತಕಲ್ಲಿ ಬರೆಯೆಕೂಳಿ ಕೊದಿ ಇತ್ತು. ನಿಂಗಳಷ್ಟೆಲ್ಲ ಎಂತ ಗೊಂತಿಲ್ಲೆ ಎನಗೆ. ಪುಳ್ಯಕ್ಕಳತ್ರೆ ಕೇಳ್ಯೊಂಡು ಕೇಳ್ಯೊಂಡು ಕಲ್ತುಗೊಂಬದು.
ಮತ್ತೆ ಪ್ರಾಯವೂ ಆತು, ದಣಿಯ ಬರವಲೆಲ್ಲ ಎಡಿಯ ಹೇಳಿದೆ.

ಆದರೂ ಪುಳ್ಯಕ್ಕೊ ಕೇಳುವಗ ‘ಆವುತ್ತಿಲ್ಲೆ‘ ಹೇಳ್ಳೆ ಮನಸ್ಸು ಬಕ್ಕೋ?
ಎಡಿಗಾದಾಂಗೆ ಬರೆತ್ತೆ ಹೇಳಿದೆ. ಒಪ್ಪಣ್ಣನ ಸೈಟಿಲಿ ಬೇರೆ ನೋಡ್ಳೆಲ್ಲ ಸುಮಾರಿದ್ದು, ಎಳ್ಯಡ್ಕ ಶಾಂತಕ್ಕನ ಮನೆಲಿರ್ತ ಹೂಗಿನ ತೋಟದಾಂಗೆ.
ಎಲ್ಲ ತಿರುಗಿ ಬಚ್ಚಿರೆ ಹೊಟ್ಟೆತಣಿಶಿಗೊಂಬಲೆ ಇತ್ಲಾಗಿ ಬಂದಿಕ್ಕಿ.

ಎಂತಾರು ವೈವಿದ್ಯ ಮಾಡಿ ಬಳುಸುತ್ತೆ.
ಹೊಟ್ಟೆತುಂಬ ಉಂಡಿಕ್ಕಿ ಹೋಗಿ…. ದಾಕ್ಷಿಣ್ಯ ಮಾಡೆಡಿ ಆತೊ..?

ಮತ್ತೆ, ಮದ್ದಿನ ಶುದ್ದಿ ಹೇಳ್ತರೆ, ಡಾಕ್ಟ್ರ ಶೋಪಿಲಿ ಗಂಟೆಗಟ್ಲೆ ಸಾಲುನಿಂದು ಮದ್ದು ತಪ್ಪದಕ್ಕೆ ಮನೆಲೆ ಕೆಲವೆಲ್ಲ ಮದ್ದು ಮಾಡ್ಲಾವುತ್ತು. ಅಟ್ಟುಂಬೊಳ ಅಡಿಗ್ಗೆ  ಇಪ್ಪ ಸಾಹಿತ್ಯಂಗಳಲ್ಲೇ ಹಲವಾರು ಮದ್ದುಗಳೂ ಇದ್ದು.  ಸಣ್ಣ ಸಣ್ಣ ರೋಗಂಗೊಕ್ಕೆಲ್ಲ ಮನೆಲೇ ಮದ್ದು ಮಾಡ್ಳಕ್ಕಪ್ಪ.  ಎಲ್ಲೊರಿಂಗೂ ಕಮ್ಮಿ ಆವುತ್ತೂಳಿ ಅಲ್ಲ.  ಅವರವರ ದೇಹಪ್ರಕೃತಿ ಅವಲಂಬ್ಸಿಯೊಂಡಿಪ್ಪದದು.  ಇಂಗ್ಲೀಷು ಮದ್ದಿನಾಂಗೆ ಇದರಿಂದ ಬೇರೆ ಅಡ್ಡಪರಿಣಾಮ ಎಂತೂ ಆಗ.  ಗೊಂತಿಪ್ಪದರ ನೆಂಪಾದಾಂಗೆ ಹೇಳ್ತೆ.  ಅಜ್ಜಿ ಪ್ರಯೋಗ ಮಾಡಿ ನೋಡಿದ್ದದನ್ನೇ ಬರವದು. ಅಂತೆಂತೆ ಬರವದಲ್ಲ ಆತೋ…

ಬಂಡಾಡಿ ಅಜ್ಜಿ

   

You may also like...

4 Responses

 1. ಅಜ್ಜಿದೆ ಬರೆವಲೆ ಸುರು ಮಾಡಿತ್ತೋ.. ಒಳ್ಳೆದೆ ಆತು.. ಹಳಬರು ತಿಳ್ಕೊಂಡದ್ದು ಹೊಸಬ್ಬರಿಂಗೆ ತಿಳಿಸೆಕ್ಕಲ್ಲದ..

  ಇನ್ನು ಒಪ್ಪಣ್ಣನ ಬೈಲಿಲಿ ಇಪ್ಪವರಲ್ಲಿ ತಿಂಬದರಲ್ಲಿ ಕಮ್ಮಿ ಆರು ಇಲ್ಲೆ ಇದಾ.. ದಾಕ್ಷಿಣ್ಯ ಹೇಳಿರೆ ಎಂತ ಹೇಳಿ ಕೇಳುಗು… ಹಾಂಗಾಗಿ ಅಜ್ಜಿ ಜಾಸ್ತಿ ಕೆಲ್ಸ ಸಿಕ್ಕುಗು…

  ಅಜ್ಜಿ ಕೈಡುಗೆ ತುಂಬಾ ಲಾಯ್ಕಿದ್ದು ಹೇಳಿ ಮೊನ್ನೆ ಬೆಳ್ಳಿಪ್ಪಾಡಿ ಕುಂಞಪ್ಪಚ್ಚಿ ಅದೆಂತದೊ ಸಂಚಾರಿ ದೂರವಾಣಿಂದ ಮಾತಾಡುವಾಗ ಹೇಳ್ತಾ ಇತ್ತಿದ್ದವು.. ಅವು ಜೋರು ಮಳೆ ಬಪ್ಪಗ ಅಜ್ಜಿ ಮನೆಗೆ ಹೋಗಿ ಉಂಡ್ಳೆಕಾಳು ತಿಂಡಿದವಡ. ಒಪ್ಪಣ್ಣನ ಬೈಲಿನ ಚೆಂಬಾಯಿಗಕ್ಕು ತಿನ್ನೆಕ್ಕು ಹೇಳಿ ಆಯಿದಡ.. ಬೇಗ ಮಾಡಿ ಕೊಡೆಕ್ಕು ಆತಾ….

 2. ಬಂಡಾಡಿ ಅಜ್ಜಿ says:

  ಮಾಡಿಕೊಡ್ಳೆ ಏನೂ ಅಡ್ಡಿ ಇಲ್ಲೆ.
  ಆದರೆ ಕಡವದೊಂದೇ ಸಮಸ್ಯೆ ಇಪ್ಪದು! ಮದಲೆಲ್ಲ ಎಷ್ಟುದೇ ಕಡವಲೆಡ್ತುಗೊಂಡಿದ್ದತ್ತು. ಈಗ ಎಡಿತ್ತಿಲ್ಲೆಬ್ಬೊ.
  ಬಂದು ರೆಜ ಕಡದು ಕೊಟ್ರೆ ಮಾಡ್ಳಕ್ಕು. ಕಡದು ಕೊಡ್ತೇಳಿ ಹೇಳಿದ ಒಪ್ಪಣ್ಣಂದು ಸುದ್ದಿ ಇಲ್ಲೆ ಮಾಂತ್ರ. ಎಲ್ಲ ಒಟ್ಟಿಂಗೆ ಬನ್ನಿ ಒಂದರಿ ಇತ್ಲಾಗಿ. ಒಟ್ಟಿಂಗೆ ಸೇರಿ ಮಾಡಿ, ಬೈಲಿಲಿ ಹಂಚುವೊ ಆತೋ…?

  • ಅಜ್ಜಿ ಕೇಳಿಯಪ್ಪಗ ಬರೆಕ್ಕು ಹೇಳಿ ಆದ್ರೂ, ರಜ್ಜ ತಲೆಬಿಸಿ [ ಮಳೆ ಬಂದು ಅಡಕ್ಕೆ ಎಲ್ಲಾ ಚೆಂಡಿ ಆಯಿದಿದಾ ] ಇಪ್ಪ ಕಾರಣ ಬಪ್ಪಲೆ ಆಯಿದಿಲ್ಲೆ.. ಒಪ್ಪಣ್ಣ ಮೊನ್ನೆ ಸಿಕ್ಕಿಪ್ಪಗ ಹೇಳಿತ್ತಿದ್ದ ಬಂಡಾಡಿಗೆ ಹೋಯೆಕ್ಕು ಹೇಳಿ… ಬತ್ತೆ ಹೇಳಿದ್ರೆ ಬತ್ತ.. ಆದ್ರೆ ಏವಗ ಹೇಳಿ ಹೇಳ್ಳೆ ಎಡಿಯ… ಬಾರೀ ಅಂಬ್ರೇಪಿಲಿ ಇಪ್ಪ ಜೆನ ಇದಾ… ಎಂತದೋ ತಿರುಗಾಟ ಇದ್ದಡ.. ಗುರುಗ ಕೆಲ್ಸ ಹೇಳಿದ್ದವು ಹೇಳಿತ್ತಿದ್ದ.. ಅಜ್ಜಿ ಮಂಡೆ ಬೆಚ್ಚ ಮಾಡ್ತ ಇದ್ದು ಹೇಳಿಯಪ್ಪಗ, ‘ಭಾವ ಇಂದು ಕೊಡೆಯಾಲಲ್ಲಿದ್ದೆ, ಅತ್ಲಾಗಿ ಬಪ್ಪಗ ಬಂಡಾಡಿಗೆ ಹೋಗಿಯೆ ಬತ್ತೆ’ ಹೇಳಿದ್ದಾ.. ಅಜ್ಜಿ ಸೊಳೆ ತೆಗದು ಮಡಗುಲೆ ತೊಂದ್ರೆ ಇಲ್ಲೆ.. ಗಡಿಬಿಡಿಲಿ ತೆಗವಲೆ ಬಂಙ ಅಕ್ಕಿದಾ.. ಉದಿಯ ಕಾಲಕ್ಕೆ ಬಕ್ಕು ಕಡವಲೆ..

 3. TARANI says:

  ತು೦ಬಾ ಒಳ್ಳೆಯ ವಿಚಾರ…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *