Oppanna.com

ಕೆಸವಿನೆಲೆ ಚಟ್ನಿ

ಬರದೋರು :   ಬಂಡಾಡಿ ಅಜ್ಜಿ    on   23/11/2013    5 ಒಪ್ಪಂಗೊ

ನಿನ್ನೆ ಓ ಅಲ್ಲೆ ತೋಟಕ್ಕೆ ಇಳುದಪ್ಪಗ ಗೆನಾದ್ದು ಮುಂಡಿ ಕೆಸವಿನ ಎಲೆ ಕಂಡತ್ತದ.. ಪತ್ರೊಡೆ ಮಾಡದ್ದೆ ಸುಮಾರು ದಿನ ಆತು ಹೇಳಿಗೊಂಡು ಅದರ ಕೊಯಿದು ತಂದಾತು.. ಪತ್ರೊಡೆ ಮಾಡಿಯೂ ಆತು. ಕೆಸವು ಹೇಳಿ ಹೆಸರು ಕೇಳೊಗಳೇ ನಾಲಗೆ ತೊರುಸುವ ಪುಳ್ಳಿಗೆ ಪತ್ರೊಡೆಯೂ ತೊರುಸಿತ್ತತ್ಲಾಗಿ.. ಆತನ್ನೆ.. ಎರಡು ಸರ್ತಿಯಂಗೆ ಪತ್ರೊಡೆ ಮಾಡುಲಕ್ಕು ಹೇಳಿ ಕೊಯ್ಕೊಂಡು ಬಂದದರ ಇನ್ನೆಂತರ ಮಾಡ್ಸು.. ಪುನಾ ಪತ್ರೊಡೆ ಮಾಡಿರೆ ಈ ಪುಳ್ಳಿ ಬೊಬ್ಬೆ ಹೊಡಗು.. ಅಷ್ಟಪ್ಪಗ ಈ ಚಟ್ನಿ ನೆಂಪಾತದ.. ಮಾಡುಲೂ ಸುಲಾಬ, ಉಂಬಲೂ ರುಚಿ ಹೇಳಿಗೊಂಡು ಮಾಡಿತ್ತು. ಪುಳ್ಳಿಯ ಬಾಳೆಲಿ ನಾಕು ಸೌಟು ಅಶನ ಮುಗುದ್ದದೇ ಗೊಂತಾಯಿದಿಲ್ಲೆ ಅದ..
kesavu-1ನಿಂಗೊಗೂ ಮಾಡೆಕ್ಕು ಹೇಳಿ ಆವುತ್ತೊ.. ಹೇಂಗೆ ಮಾಡ್ಸು ಹೇಳ್ತೆ ಕೇಳಿ..
ಮೊದಾಲಿಂಗೆ ಕೆಸವಿನ ಸೊಪ್ಪಿನ ದಂಟು ತೆಗದು, ರೆಜಾ ನೀರು ಹಾಕಿ, ಹುಳಿ ಹಾಕಿ ಬೇಶಿ ಮಡಿಕ್ಕೊಳೇಕು. ಅದು ಗಳಿಗ್ಗೆಲಿ ಬೇಯ್ತು.. ಹುಳಿ ರೆಜ ಜಾಸ್ತಿ ಬೇಕು ಇದಕ್ಕೆ ಆತೊ..ಹೇಳಿದಾಂಗೆ ಹುಳಿ ಕೋಡು ಬಿಟ್ಟಿದಾಯಿಕ್ಕು ಅಲ್ಲದೊ.. ಬಂಡಾಡಿಲೂ ಬಿಟ್ಟಿದು.. ಕಳುದ ಸರ್ತಿ ಮನೆಕರ್ಚಿಂಗೆ ತಕ್ಕಿತ ಆಗಿ ಒಳುದ್ದು.. ಈ ಸರ್ತಿಯೂ ಅಷ್ಟೇ ಸಿಕ್ಕುಗೊ ಏನೊ.. ಕೊಯಿವಲೆ ಕೆಲಸದವು ಸಿಕ್ಕುದೇ ದೊಡಾ ಬಂಙ ಇದಾ.. ಕಳುದೊರಿಷ ಮತ್ತೆ ಅಕೇರಿಗೆ ಬಿದ್ದ ಹುಳಿಯ ಹೆರ್ಕಿಯೇ ಸುದಾರುಸಿದ್ದದು..
kesavu-2
ಅದಿರಳಿ.. ಈಗ ಕೆಸವಿನ ಎಲೆ ಬೇಶಿ ಆತನ್ನೆ.. ಮತ್ತೆ ನಾಕು ಉದ್ದಿನ ಬೇಳೆ, ರೆಜ ಇಂಗು, ಕಾರಕ್ಕೆ ತಕ್ಕಿತ ಮೆಣಸು – ಇಷ್ಟರ ಎಣ್ಣೆ ಹಾಕಿ ಹೊರಿವದು. ಹೊರುದ್ದದನ್ನುದೆ, ಬೇಶಿದ ಸೊಪ್ಪನ್ನುದೆ ಕಾಯಿಯೊಟ್ಟಿಂಗೆ ಗಟ್ಟಿಗೆ ಕಡವದು. ಬೇಕಾರೆ ಒಂದು ಒಗ್ಗರಣೆ ಜೊಯಿಂಕ ಮಾಡಿರೆ ಚಟ್ನಿ ತೆಯಾರಾತದ.. ಬೆಶಿ ಬೆಶಿ ಅಶನಕ್ಕೆ ಎಣ್ಣೆ ಹಾಕಿ, ಈ ಚಟ್ನಿಲಿ ಕಲಸಿ ಉಂಬಲೆ ರುಚಿಯೋ ರುಚಿ..

5 thoughts on “ಕೆಸವಿನೆಲೆ ಚಟ್ನಿ

  1. ಉತ್ತಮ ಸಾ೦ಪ್ರದಾಯಿಕ ಹವ್ಯಕ ಅಡುಗೆ ಕಲಿಶಿದ್ದಕ್ಕೆ ಅಜ್ಜಿಗೆ ದನ್ಯವಾದ೦ನ್ಗೊ

  2. ಬಂಡಾಡಿ ಅಜ್ಜಿಯ ಕಾಣದ್ದೇ ಸುಮಾರು ಸಮಯ ಆತು ಹೇಳಿ ಗ್ರೇಶಿಂಡಿಪ್ಪಗ ಬಂತದ ಅಜ್ಜಿ ಮಾಡುವ ರುಚಿರುಚಿಯ ಕೆಸವಿನೆಲೆಯ ಬಜ್ಜಿ ಶುದ್ದಿ. ಓದಿ ಕೊಶೀ ಆತು. ಅಜ್ಜೀ, ಬೈಲಿಂಗೆ ನಿಂಗೊ ಏವತ್ತುದೆ ಬಂದೊಂಡಿರಿ ಆತೊ ? ನಿಂಗೆ ಬಾರದ್ರೆ ಕುಮಾರ ಮಾವ ಹೇಳಿದ ಹಾಂಗೆ ಅಸಕ್ಕ ಆವ್ತು ಖಂಡಿತ.

  3. ಪತ್ರೊಡೆ ತೊರುಸದ್ದರೂ, ಅದರ ಹೆಸರು ಕೇಳಿಯೇ ತೊರ್ಸುತ್ತೆನಗೆ. ಈ ಚಟ್ನಿ ವಿಶೇಷ ಆತು. ಇನ್ನೊಂದರಿ ಪಾರುವ ಕಂಡಿಪ್ಪಗ ಹೇಳ್ತೆ, ಮಾಡಿಕೊಡ್ಲೆ.
    ಬಂಡಾಡಿ ಅಜ್ಜಿಯ ಕಾಣದ್ದೆ ಭಾರಿ ಅಸಕ್ಕ ಹಿಡುದಿದ್ದತ್ತು ಬೈಲಿಲಿ.ಪುಳ್ಳಿಯ ಕಾಂಬಲೆ ಬೆಂಗ್ಳೂರು ಮಣ್ಣ ಹೋಗಿತ್ತಿರೋ..?

    1. ಅಪ್ಪಪ್ಪು ಈ ಬೈಲಿನ ಹೊಡೇಂಗೆ ಬಾರದ್ದೆ ಸುಮಾರು ಸಮೆಯ ಆತೀಗ.. ಈ ಒರಿಶ ಇನ್ನಾಣ ಮಳೆಕಾಲದ ಒರೆಂಗೂ ಮಳೆ ನಿಲ್ತ ಅಂದಾಜಿ ಇಲ್ಲೆ… ಹಾಂಗೆ ಮಳೆ ಬಪ್ಪಗ ಸೆಡ್ಲಿಂಗೆ, ಗಾಳಿಗೆ ಹೆದರಿ ಕರೆಂಟು ಹೋವುತ್ತು… ಹಗಲು ಕರೆಂಟು ಇದ್ದರೆ, ಇರುಳಾಣ ಮಳಗೆ ಮರ ಬಿದ್ದು ಫೋನಿನ ಬಳ್ಳಿ ತುಂಡಾಗಿ ಇಂಟ್ರನೆಟ್ಟು ಬತ್ತಿಲ್ಲೆ… ಹಾಂಗೆಲ್ಲ ಸಂಗತಿಗಳ ಎಡಕ್ಕಿಲಿ ಬೈಲಿಂಗೆ ಇಳಿವಲಾತಿಲ್ಲೆ ಇದ..
      ಬೆಂಗುಳೂರಿಂಗೆ ಬಪ್ಪಲೆ ಹೇಳುತ್ತಾ ಇದ್ದು ಪುಳ್ಳಿ.. ಅಷ್ಟು ದೂರ ಬಸ್ಸಿಲಿ ಹೋಬದೇ ಇಪ್ಪದು ಸಮಸ್ಯೆ.. ಬಸ್ಸಿನ ಬುಡಂದ ಸೀಟುಸಮೇತ ಹೊತ್ತುಗೊಂಡು ಹೋಯೇಕಾಗಿ ಬಂದರೆ ಹೇದು ಹೆರಟಿದಿಲ್ಲೆ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×