ಜೋಗುಳ ಹಾಡು – ಕೂಗೆಡ ಮಗಳೂ ಒರಗೀಗ ಸುಖಲ್ಲೀ

June 19, 2014 ರ 10:30 amಗೆ ನಮ್ಮ ಬರದ್ದು, ಇದುವರೆಗೆ 9 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 

ಕೂಗೆಡ ಮಗಳೂ ಒರಗೀಗ ಸುಖಲ್ಲೀ |

ತೂಗುವೆ ಜೋಗುಳ ಪದಂಗಳ ಹೇಳೀ ||

ಜೋಜೋ ಜೋಜೋ ಜೋಜೋ ||೧||

 

ಎದ್ದಿಕ್ಕಿ ಬಪ್ಪಾಗ ಆಡುಲೆ ಕೊಡುವೇ

ಮುದ್ದೀನ ಕೊಟ್ಟಾನು ಎತ್ತುತ್ತ ನಡವೇ

ಇದ್ದಷ್ಟು ಹಾಲಿನ ನಿನಗಾನು ಕೊಡುವೇ

ಮದ್ದಿನ ಕುಡುಸಲೆ ಬೇಜಾರ ಪಡುವೇ

ಜೋಜೋ ಜೋಜೋ ಜೋಜೋ ||೨||

 

ಅಕ್ಕಂದ್ರು ಅಣ್ಣಂದ್ರು ಎಲ್ಲೋರೂ ಬಂದೂ

ಸಿಕ್ಕಿದ ಹಾಂಗೆಲ್ಲ ಎತ್ತುಗು ನಿಂದೂ

ಶಕ್ಕರೆ ಹಣ್ಣಿನ ಬಾಯಿಗೆ ತಂದೂ

ತೆಕ್ಕೊಬ್ಬೊ ತಿನ್ನಬ್ಬೊ ಹೇಳುಗು ಇಂದೂ

ಜೋಜೋ ಜೋಜೋ ಜೋಜೋ ||೩||

 

ರಂಗೀನ ತರತರ ಅಂಗೀಯ ಹೊದ್ದು

ನಿನಗಾನು ತೊಡುಸುವೆ ಮಂಗಳೆ ಮುದ್ದು

ಬಂಗಾರ ಬಳೆಕುಟುಕಿ ಹಾಕುಲೆ ಇದ್ದು

ಸಿಂಗಾರ ಮಲ್ಲಿಗೆ ಸೂಡುಸುವೆ ಎದ್ದು

ಜೋಜೋ ಜೋಜೋ ಜೋಜೋ ||೪||

 

ಕೂಸು ಕೂಸೇಳಿ ಸಸಾರವು ಜನಕೆ

ಕೂಸೇ ಅಲ್ಲದೋ ಅಬ್ಬೆಯು ನಿಜಕೆ

ಕೂಸೇ ಆಗಿರೆಕ್ಕು ಹೆಂಡತ್ತಿ ಜೋಕೆ

ಕೂಸಾದರೆಂತಾತು ಬುದ್ದಿ ಒಳ್ಳೆದಿರೆಕ್ಕು

ಜೋಜೋ ಜೋಜೋ ಜೋಜೋ ||೫||

 

 

 

ಅಯ್ಯೋ ಬಾರನ್ನೆ ಪದ ಎನಗೊಂದುದೆ

ಸ್ವರಾ ಬಪ್ಪಾದು ಹೇಂಗದು ಪದವ ಹೇಳದ್ದೆ

ಶುರುಮಾಡುತ್ತೆ ಆನು ಪದ ಒಂದು ಹೇಳುಲೆ

ನಿಂಗೊ ಮಾಡೆಡಿ ಬೇಜಾರ ಪದವ ಕೇಳುಲೆ

ನಾಚಿಕೆ ಎಂತ ಹೇಳುಲೆ ಸ್ವಂತ

ಮಾಡುಲೆ ಆಗ ಈಗ ಕೋಲಂಗಳ

ಇಪ್ಪ ತಪ್ಪೀನ ಕ್ಷಮಿಸೆಕ್ಕು ನಿಂಗಳೆ

ಬಪ್ಪ ಕಷ್ಟಾವ ಬಿಡುಸೆಕ್ಕು ದೇವರೆ ||ಅಯ್ಯೋ||

 

ಇಪ್ಪಾದು ನಾವು ಸುಮ್ಮನೆ ಭೂಮಿಲಿ

ಬಪ್ಪ ಕಷ್ಟವ ಬಿಡಿಸಿ ಎನ್ನ ಕಾಯಿರಿ

ದೇವರ ದಯವೇ ಜ್ಞಾನದ ಮೂಲ

ಆಯ ಇಲ್ಲದ ಮನೆ ನಿರ್ಮೂಲ ||ಅಯ್ಯೋ||

~~~

 

[ಜೋಗುಳ ಹಾಡು

ಸಂಗ್ರಹ : ಅರ್ತಿಕಜೆ ಮಾವ]

 

 

 

 

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 9 ಒಪ್ಪಂಗೊ

 1. ಶಾರದಾಗೌರೀ

  ಅರ್ತಿಕಜೆ ಮಾವಾ,
  ಪದ್ಯ ಲಾಯ್ಕಾಯಿದು.

  [ಕೂಸು ಕೂಸೇಳಿ ಸಸಾರವು ಜನಕೆ
  ಕೂಸೇ ಅಲ್ಲದೋ ಅಬ್ಬೆಯು ನಿಜಕೆ
  ಕೂಸೇ ಆಗಿರೆಕ್ಕು ಹೆಂಡತ್ತಿ ಜೋಕೆ
  ಕೂಸಾದರೆಂತಾತು ಬುದ್ದಿ ಒಳ್ಳೆದಿರೆಕ್ಕು
  ಜೋಜೋ ಜೋಜೋ ಜೋಜೋ ||೫||]

  ಈ ಸಾಲುಗ ತುಂಬಾ ಲಾಯ್ಕಿದ್ದು…

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಕೂಸು ಕೋಸೇಳಿ …
  ಸಾಲುಗೊ ತುಂಬ ಲಾಯಿಕಿದ್ದು. ಲಾಯ್ಕದ ಪದ್ಯಂಗೊ.

  [Reply]

  VN:F [1.9.22_1171]
  Rating: 0 (from 0 votes)
 3. ಮುಳಿಯ ಭಾವ
  ರಘುಮುಳಿಯ

  ಅರ್ಥ , ಭಾವ ತುಂಬಿದ ಜೋಗುಳ ಪದ . ಧನ್ಯವಾದ ಮಾವ .

  [Reply]

  VA:F [1.9.22_1171]
  Rating: 0 (from 0 votes)
 4. ಭಾಗ್ಯಲಕ್ಷ್ಮಿ

  ತುಂಬಾ ಮರ್ಮಿಕವಗಿದ್ದು ಮಾವ . ಅಮ್ಮನ ಆತ್ಮವೇ ಆಗಿ ಬರದ ಹಾಂಗಿದ್ದು !

  ”ಕೂಸೇ ಅಲ್ಲದೋ ಅಬ್ಬೆಯು ನಿಜಕೆ’ —- ಇದು ಅರ್ಥ ಆಗದ್ದೆ , ”ಎನ್ನ ಅಬ್ಬೆ ಕೂಸಲ್ಲ ಹೆಮ್ಮಕ್ಕೋ ” ಹೇಳಿ ಹೇಳುವ ಬೋಸಂಗ ಬೈಲಿಲಿ ಇದ್ದರೆ ಆಶ್ಚರ್ಯ ಇಲ್ಲೆ .

  [Reply]

  VA:F [1.9.22_1171]
  Rating: 0 (from 0 votes)
 5. ಭಾಗ್ಯಲಕ್ಷ್ಮಿ

  ತುಂಬಾ ಮರ್ಮಿಕವಗಿದ್ದು ಮಾವ . ಅಮ್ಮನ ಆತ್ಮವೇ ಆಗಿ ಬರದ ಹಾಂಗಿದ್ದು !

  ”ಕೂಸೇ ಅಲ್ಲದೋ ಅಬ್ಬೆಯು ನಿಜಕೆ’ —- ಇದು ಅರ್ಥ ಆಗದ್ದೆ , ”ಎನ್ನ ಅಬ್ಬೆ ಕೂಸಲ್ಲ ಹೆಮ್ಮಕ್ಕೋ ” ಹೇಳಿ ಹೇಳುವ ಬೋಸಂಗ ಬೈಲಿಲಿ ಇದ್ದರೆ ಆಶ್ಚರ್ಯ ಇಲ್ಲೆ .
  ”ಕೂಸೇ ಅಲ್ಲದೋ ಅಬ್ಬೆಯು ನಿಜಕೆ’ —- ಇದು ಗೆರೆ ಅರ್ಥ ಆಗದ್ದೆ , ”ಎನ್ನ ಅಬ್ಬೆ ಕೂಸಲ್ಲ ಹೆಮ್ಮಕ್ಕೋ ” ಹೇಳಿ ಹೇಳುವ ಬೋಸಂಗ ಬೈಲಿಲಿ ಇದ್ದರೆ ಆಶ್ಚರ್ಯ ಇಲ್ಲೆ .

  [Reply]

  VA:F [1.9.22_1171]
  Rating: 0 (from 0 votes)
 6. Asha Balakrishna Bhat

  ಕೂಗಾಡ ಮಗಳೆ ಹಾಡು ನೋಡಿ ತುಂಬ ಖುಷಿ ಆತು. ಎಂತ ಹೇಳಿರೆ ಅದು ೫೦ ವರ್ಷಕ್ಕೆ ಹಿಂದೆ ಎಂಗಳ ಅಪ್ಪ ಪಳ್ಳದಕೋಡಿ ಸೀತಾರಾಮ ಭಟ್ರು ಕಟ್ಟಿದ ಹಾಡು. ಅವು ತಾಳಮದ್ದಳಗೆ ಅರ್ಥ ಹೇಳುಗು. ಯಕ್ಷಗಾನಲ್ಲಿ ವೇಷ, ಭಾಗವತಿಗೆ, ಚೆಂಡೆಮದ್ದಳೆ ಎಲ್ಲ ಮಾಡಿಗೊಂಡಿತ್ತಿದ್ದವು. ಕಾಂಚನ ಮೇಳಲ್ಲಿ ಕೆಲವು ಸಮಯ ಹೋಗಿಗೊಂಡು ಇತ್ತಿದ್ದವು. ತೀರಿಹೊಗಿ ೨೦ ವರ್ಷಕ್ಕೆ ಹತ್ತರೆ ಆತು. ಒಂದು ಅಕ್ಕ ಆದಮೇಲೆ ಅಣ್ಣಂದ್ರು ಮೂರು ಜನ ಆಗಿ ಎಂಗೊ ಪುನ ನಾಲ್ಕು ಜನ ಕೂಸುಗೊ. ಮತ್ತೆ ತಮ್ಮನು ಇದ್ದ. ಅಕೆರ್ಯಣ ಎನ್ನ ತಂಗೆ ಹುಟ್ಟಿಪ್ಪಗ ಬಡತನದ ಒಟ್ಟಿಂಗೆ ಈ ಕೂಸುಗೊಕ್ಕೆ ಎಷ್ಟು ಕಷ್ಟ ಹೇಳಿ ಅಬ್ಬೆ ಬೇಜಾರ ಮಾಡಿಯಪ್ಪಗ ಅಪ್ಪ ಬರದ ಹಾಡಿದು. ಧನ್ಯವಾದಂಗೊ ಅರ್ತಿಕಜೆ ಅಣ್ಣಂಗೂ ವೆಬ್ಸೈಟ್ ನಡೆಶುವೊರಿಂಗೂ

  [Reply]

  ಲಕ್ಷ್ಮಿ ಜಿ.ಪ್ರಸಾದ

  ಲಕ್ಷ್ಮಿ ಜಿ.ಪ್ರಸಾದ Reply:

  ಈ ಹಾಡಿನ ಮೂಲ ಮತ್ತೆ ಹಾಡು ಹುಟ್ಟಿದ ಸಂದರ್ಭ ಸನ್ನಿವೇಶ ತಿಳುದಪ್ಪಗ ಹಾಡಿನ ನಿಜವಾದ ಅರ್ಥ ಗ್ರಹಿಕೆ ಸಾಧ್ಯ ಅಪ್ಪದು ಅಕ್ಕಂದ್ರು ಅಣ್ಣಂದ್ರು ಎಲ್ಲೋರೂ ಬಂದೂ

  ಸಿಕ್ಕಿದ ಹಾಂಗೆಲ್ಲ ಎತ್ತುಗು ನಿಂದೂ

  ಶಕ್ಕರೆ ಹಣ್ಣಿನ ಬಾಯಿಗೆ ತಂದೂ

  ತೆಕ್ಕೊಬ್ಬೊ ತಿನ್ನಬ್ಬೊ ಹೇಳುಗು ಇಂದೂ

  ಜೋಜೋ ಜೋಜೋ ಜೋಜೋ ||೩||ನಿಂಗ ತಿಳಿಸಿದ ಮೇಲೆ ಈ ಸಾಲುಗ ಮನಸ್ಸಿಂಗೆ ಬಂತು ,ತಿಳಿಸಿದ್ದಕ್ಕೆ ಧನ್ಯವಾದಂಗ

  [Reply]

  VN:F [1.9.22_1171]
  Rating: 0 (from 0 votes)
 7. ಗೋಪಾಲಣ್ಣ
  GOPALANNA

  ಈ ಕವನದ ಹಿನ್ನೆಲೆ ತಿಳಿಸಿದ್ದಕ್ಕೆ ಧನ್ಯವಾದ.ಬರೆದವರ ಅಭಿನಂದಿಸುತ್ತೆ .

  [Reply]

  VA:F [1.9.22_1171]
  Rating: 0 (from 0 votes)
 8. ಭಾಗ್ಯಲಕ್ಷ್ಮಿ

  ಓಹ್ ! ಅಕ್ಕಾ ,ನಿಂಗೊ ಇದರ ಸಂದರ್ಭ ಸಹಿತ ವಿವರಣೆ ಕೊಟ್ಟಪ್ಪಗ ಪದ್ಯದ ತೂಕ ಮತ್ತಷ್ಟು ಹೆಚ್ಚಾತು! ಅದರ ಹಿಂದೆ ಇತ್ತ ಕಷ್ಟ ಕಳದು ಹೋದಿಕ್ಕು ಹೇಳಿ ಗ್ರೇಶುತ್ತೆ .

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾಂತತ್ತೆಪವನಜಮಾವಹಳೆಮನೆ ಅಣ್ಣವಿಜಯತ್ತೆಚೆನ್ನೈ ಬಾವ°ಡಾಗುಟ್ರಕ್ಕ°ಕೆದೂರು ಡಾಕ್ಟ್ರುಬಾವ°ಪ್ರಕಾಶಪ್ಪಚ್ಚಿಸರ್ಪಮಲೆ ಮಾವ°ಡೈಮಂಡು ಭಾವಸುವರ್ಣಿನೀ ಕೊಣಲೆಪುಣಚ ಡಾಕ್ಟ್ರುಮುಳಿಯ ಭಾವಮಾಷ್ಟ್ರುಮಾವ°ತೆಕ್ಕುಂಜ ಕುಮಾರ ಮಾವ°ವಿದ್ವಾನಣ್ಣಕಾವಿನಮೂಲೆ ಮಾಣಿವೇಣೂರಣ್ಣಸುಭಗವಸಂತರಾಜ್ ಹಳೆಮನೆಅನು ಉಡುಪುಮೂಲೆಶುದ್ದಿಕ್ಕಾರ°ಯೇನಂಕೂಡ್ಳು ಅಣ್ಣಡಾಮಹೇಶಣ್ಣಶ್ರೀಅಕ್ಕ°ಕಳಾಯಿ ಗೀತತ್ತೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ