ಚೋಲು - ಡಬ್ಬಲ್ ಚೋಲು

ಬೈಲಿನ ಶುದ್ದಿಗೊ:

ಬೈಲಿನ ನೆರೆಕರೆ:

ಗುರಿಕ್ಕಾರ°ಒಪ್ಪಣ್ಣಕಳಾಯಿ ಗೀತತ್ತೆವಿದ್ವಾನಣ್ಣಶೇಡಿಗುಮ್ಮೆ ಪುಳ್ಳಿಯೇನಂಕೂಡ್ಳು ಅಣ್ಣಪೆರ್ಲದಣ್ಣಶ್ರೀಅಕ್ಕ°ಬಲ್ನಾಡುಮಾಣಿನೀರ್ಕಜೆ ಮಹೇಶಶರ್ಮಪ್ಪಚ್ಚಿಅನು ಉಡುಪುಮೂಲೆಮುಳಿಯ ಭಾವಅಡ್ಕತ್ತಿಮಾರುಮಾವ°ಡಾಮಹೇಶಣ್ಣಚೆನ್ನೈ ಭಾವ°ಜಯಶ್ರೀ ನೀರಮೂಲೆಹಳೆಮನೆ ಅಣ್ಣಪುತ್ತೂರಿನ ಪುಟ್ಟಕ್ಕವಸಂತರಾಜ್ ಹಳೆಮನೆಒಪ್ಪಕ್ಕಎರುಂಬು ಅಪ್ಪಚ್ಚಿಸುಭಗಸುವರ್ಣಿನೀ ಕೊಣಲೆಅಕ್ಷರದಣ್ಣಡೈಮಂಡು ಭಾವಮಾಷ್ಟ್ರುಮಾವ°ಬಂಡಾಡಿ ಅಜ್ಜಿಅಕ್ಷರ°ತೆಕ್ಕುಂಜ ಕುಮಾರ ಮಾವ°ಕೊಳಚ್ಚಿಪ್ಪು ಬಾವಶ್ಯಾಮಣ್ಣಚೂರಿಬೈಲು ದೀಪಕ್ಕಚೆನ್ನಬೆಟ್ಟಣ್ಣದೊಡ್ಡಮಾವ°ಬೊಳುಂಬು ಮಾವ°ದೇವಸ್ಯ ಮಾಣಿದೀಪಿಕಾಪುತ್ತೂರುಬಾವಶುದ್ದಿಕ್ಕಾರ°ದೊಡ್ಡಭಾವಕೆದೂರು ಡಾಕ್ಟ್ರುಬಾವ°ಪವನಜಮಾವಮಂಗ್ಳೂರ ಮಾಣಿಗಣೇಶ ಮಾವ°ವೇಣೂರಣ್ಣಬಟ್ಟಮಾವ°ಅನುಶ್ರೀ ಬಂಡಾಡಿಅಜ್ಜಕಾನ ಭಾವಡಾಗುಟ್ರಕ್ಕ°ಸಂಪಾದಕ° (editor)ನೆಗೆಗಾರ°ಸರ್ಪಮಲೆ ಮಾವ°ಕೇಜಿಮಾವ°ಶಾಂತತ್ತೆಗೋಪಾಲಣ್ಣಪುಟ್ಟಬಾವ°ಕಾವಿನಮೂಲೆ ಮಾಣಿಚುಬ್ಬಣ್ಣವೇಣಿಯಕ್ಕ°ಪೆಂಗಣ್ಣ°


ಚೌತಿದಿನ `ಗಣಪತಿವಾಹನ’ ಎ೦ಗಳ ಮನೆಲಿ!

September 7, 2011 ರ 10:00 amಗೆ ನಮ್ಮ ಅನು ಉಡುಪುಮೂಲೆ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ವೃತ್ತಿಂದ ಒಳ್ಳೆ “ಅಮ್ಮ” ಆಗಿಂಡು, ಪ್ರವೃತ್ತಿಂದ ನೃತ್ಯಪಟುವಾಗಿ, ನಮ್ಮ ಬೈಲಿನ ಉಡುಪಮೂಲೆಲಿ ಇಪ್ಪ ಸಹೃದಯಿ ಅಕ್ಕನೇ ಈ ಅನುಅಕ್ಕ.
ಮದಲಿಂದಲೇ ಬೈಲಿಂಗೆ ಬಂದು, ಶುದ್ದಿಗೊಕ್ಕೆ ಒಪ್ಪಕೊಟ್ಟುಗೊಂಡು, ಪ್ರೋತ್ಸಾಹ ಕೊಟ್ಟುಗೊಂಡು ಇತ್ತಿದ್ದವು.
ಈಗ ನೆರೆಕರೆಗೇ ಬಂದು ಶುದ್ದಿ ಹೇಳುಲೆ ಸುರುಮಾಡಿದ್ದವು.
ಅನುಅಕ್ಕನ ಮೋರೆಪುಟ ಸಂಕೊಲೆ:

http://www.facebook.com/profile.php?id=100000354606946

ಗೆಣವತಿಯ ಬಗ್ಗೆ ಸಣ್ಣ ಒಂದು ನೆಗೆಶುದ್ದಿಂದಲೇ ಆರಂಭ ಮಾಡಿದ್ದವು.
ಬೈಲಿನ ಎಲ್ಲೋರುದೇ ಅವರ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಪ್ರೋತ್ಸಾಹಿಸೇಕು – ಹೇಳ್ತದು ನಮ್ಮ ಹಾರಯಿಕೆ.
~
ಗುರಿಕ್ಕಾರ°

ತು೦ಬ ದಿನ೦ದ ಎ೦ಗಳ ಅಡಿಗೆ ಮನೆಲಿ ಕಳ್ಳತನ ಆವುತ್ತಾ ಇತ್ತು.
ಹಣ್ಣುಗ ಕಾಣೆ ಅಪ್ಪದು, ತರಕಾರಿ ಕಾಣೆ ಅಪ್ಪದು ಹೀ೦ಗೆ………

ಇದು ಆರ ಕೆಲಸ ಹೇಳಿ ಗೊ೦ತಾಯಿದೇ ಇಲ್ಲೆ.
ಒ೦ದು ದಿನ ನಡು ಇರುಳು ನೀರು ಕುಡಿವಲೆ ಎದ್ದು ಅಡಿಗೆ ಕೋಣೆಗೆ ಬ೦ದೆ.
ಅಡಿಗೆ ಕೋಣೆಲಿ ಕಳ್ಳ….. ಒ೦ದು ಎಲಿ!

ಎನ್ನ ಕಾ೦ಬಗ ಓಡಿ ಅಟ್ಟ ಹತ್ತಿತ್ತು.
ಎ೦ತ ಮಾಡುದು ಹೇಳಿ ಚಿ೦ತೆ ಸುರು ಆತು.
ಮರುದಿನವೇ ಪೇಟೆಗೆ ಹೋಗಿ ಎಲಿ ಹಿಡಿವ ಗೂಡು ತ೦ದೆ.ಇರುಳು ಮನುಗುವ ಮೊದಲು ಕಾಯಿ ಹೋಳು ಮಡುಗಿದೆ.
ಮುನ್ನಾಣ ದಿನ ಎನ್ನ ನೋಡಿದ ಕಾರಣ ಆದಿಕ್ಕು ಎರಡು ದಿನ ಎಲಿ ಬೈ೦ದೇ ಇಲ್ಲೆ. :-)

ಚೌತಿ ಮುನ್ನಾಣ ದಿನ ಚಕ್ಕುಲಿ, ಮೋದಕ, ಕರ್ಜಿಕಾಯಿ…… ಎಲ್ಲ ಮಾಡಿ ಮನುಗುಗ ತು೦ಬ ತಡ ಆಯಿದು.
ಉದಿಯಪ್ಪಗ  ಎದ್ದು ಅಡಿಗೆ ಕೋಣೆಗೆ ಬಪ್ಪಗ ಹೊಸ ಅತಿಥಿ ಹಾಜರು! ಎಲಿ ಗೂಡಿನೊಳ!!!!!!

ಉದಿಯಪ್ಪಗಳೇ ಗಣಪತಿ ಎ೦ಗಳಲ್ಲಿಗೆ ಬ೦ದು  ಬೇರೆ ಎಲ್ಲ ಕಡೆ ಪಾರ್ಕಿ೦ಗ್ ಮಾಡುಲೆ ಜಾಗೆ ಇಲ್ಲೆ ಹೇಳಿಎ೦ಗಳ ಮನೆಲಿ ಪಾರ್ಕ್ ಮಾಡಿ ಎಡನೀರಿಲಿ ಗೌಜಿಯ ಸಾರ್ವಜನಿಕ ಗಣೇಶೋತ್ಸವ ಇದ್ದು ಅಲ್ಲಿಗೆ ಹೋಗಿಕ್ಕು. :-)
ಅ೦ದು ಚೌತಿ ಅಲ್ಲದಾ ಗೂಡಿಲಿ ಇಪ್ಪ ಎಲಿಯ ಕೊಲ್ಲುಲೆ ಮನಸು ಬೈ೦ದಿಲ್ಲೆ.
ಆನು ಕೊ೦ದರೆ ಗಣಪತಿ ವಾಪಾಸ್ ಬಪ್ಪಗ ವಾಹನ ಇಲ್ಲೆ ಹೇಳಿ ಅವ೦ಗೆ ಕೋಪ ಬ೦ದರೆ!

ಎ೦ತ ಮಾಡುದು ಹೇಳಿ ಆಲೋಚನೆ ಮಾಡಿ ಕೆಲಸದ ಹುಡುಗನ ಹತ್ತರೆ ಕೊಟ್ಟು ದೂರ ಗುಡ್ಡೆಲಿ ಬಿಟ್ಟು ಬಪ್ಪಲೆ ಹೇಳಿದೆ.
ಎನಗೆ ಆಗ ನೆ೦ಪಾದ್ದು ಆನು ಸಣ್ಣ ಇಪ್ಪಗ ಕೇಳಿದ ಒ೦ದು ಜೋಕು.

ರಾ೦ಪನ ಮನೆಲಿ ಒ೦ದು ಪುಚ್ಚೆ ಇತ್ತಡ. ಅದು ಕ೦ಡಾಬಟ್ಟೆ ಉಪದ್ರ ಕೊಟ್ಟುಗೊ೦ಡು ಇತ್ತಡ.
ಹಾ೦ಗೆ ಅವನ ಹೆ೦ಡತಿ ಅದರ ಎಲ್ಲಿಯಾದರು ಬಿಟ್ಟಿಕ್ಕಿ ಬನ್ನಿಹೇಳಿತ್ತಡ. ಎಲ್ಲಿ ಬಿಟ್ಟಿಕ್ಕಿ ಬ೦ದರೂ ಅವ ಮನೆಗೆ ಎತ್ತುವ ಮೊದಲೇ ಪುಚ್ಚೆ ಮನೆಲಿ ಹಾಜರ್.
ಹೀ೦ಗೆ ತು೦ಬ ಸರ್ತಿ ಆದ ಮತ್ತೆ ಅವನ ಹೆ೦ಡತಿ ತು೦ಬ ದೂರ ಎಲ್ಲಿಯಾದರು ಬಿಟ್ಟು ಬನ್ನಿ ಹೇಳಿತ್ತು.
ಕೊನೆಗೆ  ದೂರ ಒ೦ದು ಕಾಡಿ೦ಗೆ ಕೊ೦ಡೋಗಿ ಅಲ್ಲಿ ಗಿರಗಿರನೆ ತಿರುಗಿಸಿ ಬಿಟ್ಟ.

ಆದರೆ, ಅವ೦ಗೆ ವಾಪಾಸ್ ಮನೆಗೆ ಹೋಪಲೆ ದಾರಿ ಗೊ೦ತಾಯಿದಿಲ್ಲೆ .
ಕೊನೆಗೆ ಪುಚ್ಚೆ ಎಲ್ಲಿದ್ದು ನೋಡಿ ಅದರ ಹಿ೦ದ೦ದ ಹೋಗಿ ಮನೆ ಸೇರಿದ..!

~*~*~

ಚೌತಿದಿನ `ಗಣಪತಿವಾಹನ' ಎ೦ಗಳ ಮನೆಲಿ!, 4.8 out of 5 based on 4 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಅನು ಉಡುಪುಮೂಲೆ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

  1. ಮಂಗ್ಳೂರ ಮಾಣಿ
    ಮಂಗ್ಳೂರ ಮಾಣಿ
    VA:F [1.9.3_1094]
    Rating: 0 (from 0 votes)

    ಹೆ ಹೆ ಜೋಕು ಸೂಪರ್..
    ಬೈಲಿಂಗೆ ಸ್ವಾಗತ..

    ಒೞೆ ಶುದ್ದಿಃ)

    [ಉತ್ತರುಸಿ]

  2. ಚೆನ್ನೈ ಭಾವ
    ಚೆನ್ನೈ ಭಾವ°
    VN:F [1.9.3_1094]
    Rating: +1 (from 1 vote)

    ತಮಾಸು ಲಾಯಕ್ಕ ಇದ್ದು. ಅಲ್ಲಾ., ಎನಕಾಂಬದು … ಚೌತಿ ಅಲ್ಲದ್ದೆರುತ್ತಿದ್ರೆ ನಿಂಗೊ ಬಡಿಗೆ ಹಿಡ್ಕೊಂಡು ಎರಡು ದಿನ ಕಾದಿದ್ದರೆ !!! (ಮನೆಯವಕ್ಕೂ ಒರಗಲೆ ಧೈರ್ಯ ಬಾರದೋ..?!).

    ಬನ್ನಿ ., ಸ್ವಾಗತ. ಬರೆತ್ತಾ ಇರಿ ಹೇಳಿ ಇತ್ಲಾಗಿಂದ ಒಪ್ಪ.

    [ಉತ್ತರುಸಿ]

  3. ಬೊಳುಂಬು ಮಾವ
    ಬೊಳುಂಬು ಮಾವ°
    VA:F [1.9.3_1094]
    Rating: +2 (from 2 votes)

    ಎಲಿಯ ಮೇಗೆ ಪ್ರೀತಿಲಿ “ಎಂಗಳ ಮನಗೆ ಇನ್ನು ಬತ್ತಿಕ್ಕೆಡ ಪುಟ್ಟಾ” ಹೇಳಿ ದೂರ ಗುಡ್ಡೆಲಿ ಬಿಟ್ಟಿಕ್ಕಿ ಬಪ್ಪಲೆ ಹೇಳಿದ ಅನುಪಮಕ್ಕನ ಅನುಭವ ಲಾಯಕಾಯಿದು. ಅಕ್ಕಂಗೆ ಒಂದು ಕೆಣಿ ಮಾಡ್ಳಾವುತ್ತಿತು. ಗಣಪತಿ ಮೆರವಣಿಗೆ ಒಟ್ಟಿಂಗೆ ಎಲಿಯನ್ನುದೆ ತೆಕ್ಕೊಂಡು ಹೋಗಿ, ಎಡನೀರಿನ ಹೊಳೆಲಿ ಮಳುಗುಸಿ ವಾಹನದ ವಿಸರ್ಜನೆ ಮಾಡ್ಳಾವುತ್ತಿತು. ರಾಂಪನ ಜೋಕು ನೆಂಪಾದ್ದು ಸಹಜವೇ.

    [ಉತ್ತರುಸಿ]

  4. ಶರ್ಮಪ್ಪಚ್ಚಿ
    ಶರ್ಮಪ್ಪಚ್ಚಿ
    VA:F [1.9.3_1094]
    Rating: 0 (from 0 votes)

    ಬೈಲಿಂಗೆ ಸುಸ್ವಾಗತ
    ಒಳ್ಳೆ ಆರಂಭ.

    [ಉತ್ತರುಸಿ]

  5. ವೇಣೂರಣ್ಣ
    ವೇಣೂರಣ್ಣ
    VN:F [1.9.3_1094]
    Rating: 0 (from 0 votes)

    ಯಾರಿಗೂ ಕೊಡದೆ ನಾಳೆ ತಿನ್ನುವೆನೆಂದು
    ಅಡಗಿಸಿ ಇಟ್ಟೆನು ಹಣ್ಣನೊಂದನು ತಂದು
    ಮುಂಜಾನೆ ನೋಡಿದರೆ ಬರೀ ಸಿಪ್ಪೆ
    ರಾತ್ರಿಯಲಿ ತಿಂದದ್ದು ಮೂಷಿಕನ ತಪ್ಪೇ ??

    [ಉತ್ತರುಸಿ]

  6. ಅನುಪಮಾ ರಾಘವೇಂದ್ರ
    ಅನು ಉಡುಪುಮೂಲೆ
    VN:F [1.9.3_1094]
    Rating: +1 (from 1 vote)

    ಆನು ಬರದ ಸುದ್ದಿಗೆ ಒಪ್ಪ ಕೊಟ್ಟು ಪ್ರೋತ್ಸಾಹ ಕೊಟ್ಟ ಎಲ್ಲರಿ೦ಗೂ ಧನ್ಯವಾದ೦ಗೊ…………

    [ಉತ್ತರುಸಿ]

  7. ಗಣೇಶ
    ಗಣೇಶ ಪೆರ್ವ
    VA:F [1.9.3_1094]
    Rating: 0 (from 0 votes)

    ಬೈಲಿ೦ಗೆ ಸ್ವಾಗತ.
    {ಮುನ್ನಾಣ ದಿನ ಎನ್ನ ನೋಡಿದ ಕಾರಣ ಆದಿಕ್ಕು ಎರಡು ದಿನ ಎಲಿ ಬೈ೦ದೇ ಇಲ್ಲೆ.} ಹ್ಹಹ್ಹಹ್ಹಾ… ಅದೆ೦ತ? ಇರುಳು ನಿ೦ಗಳ ನೋಡಿರೆ ಅಷ್ಟುದೆ ಹೆದರಿಕೆ ಆವ್ತ ಹಾ೦ಗೆ ಇದ್ದಿರಾ? ;-)
    ಬರದ್ದು ಲಾಯ್ಕಿದ್ದು..

    [ಉತ್ತರುಸಿ]

  8. ಒಪ್ಪಣ್ಣ
    ಒಪ್ಪಣ್ಣ
    VA:F [1.9.3_1094]
    Rating: 0 (from 0 votes)

    ಅನುಪಮಕ್ಕೋ..
    ಒಂದು ಎಲಿ ಮನಗೆ ನುಗ್ಗಿದ್ದರ್ಲಿ ನಿಂಗೊಗೆ ಆದ ತಳಮಳವ ಚೆಂದಕೆ ಹೇಳಿದ್ದಿ ಅಪ್ಪೋ!
    ಗೆಣವತಿಗೆ ವಾಹನ ನಿಲ್ಲುಸಲೆ ಪಾರ್ಕಿಂಗು ಜಾಗೆ ಇಲ್ಲದ್ದೆ ಆದ್ದು ಗಮ್ಮತ್ತಾಯಿದು.

    ಪ್ರತೀಕಾರ ಹೇಳಿಗೊಂಡು ರಾಜಣ್ಣ ಹೋಗಿ ಕಾರಿನ ಗೆಣವತಿ ಮೂರ್ತಿ ಎದುರು ನಿಲ್ಲುಸಿ ಬಯಿಂದವಿಲ್ಲೆನ್ನೇ! ;-)
    ಶುದ್ದಿಗೊ ಬತ್ತಾ ಇರಳಿ.
    ನಮಸ್ತೇ…

    [ಉತ್ತರುಸಿ]

  9. ಅನುಪಮಾ
    ಅನು ಉಡುಪುಮೂಲೆ
    VN:F [1.9.3_1094]
    Rating: 0 (from 0 votes)

    ಅಣ್ಣೋ, ಒ೦ದು ಕವನ ಇದ್ದು
    ಮದುವೆ ಆದ ವರ್ಷ ಓಎನ್ನ ಪ್ರಾಣಸಖಿ
    ಎರಡನೇ ವರ್ಷ ನೀ ದೂರ ಇದ್ದರೆ ನಾನು ಸುಖಿ
    ಮತ್ತಾಣ ವರ್ಷ ಅಯ್ಯೋ ನೀನೊ೦ದು ಶೂರ್ಪನಖಿ…………..
    ……….
    ………
    ………..
    ನ್ನ ಮದುವೆ ಆಗಿ ೧೦ ವರ್ಷ ಆತು…………….

    [ಉತ್ತರುಸಿ]

    ಗಣೇಶ ಉತ್ತರ ಕೊಟ್ಟದು:
    ಗಣೇಶ ಪೆರ್ವ

    VA:F [1.9.3_1094]
    Rating: 0 (from 0 votes)

    ಹ್ಹಹ್ಹಹ್ಹಾ…

    [ಉತ್ತರುಸಿ]

    ನೆಗೆಗಾರ° ಉತ್ತರ ಕೊಟ್ಟದು:
    ನೆಗೆಗಾರ°

    VA:F [1.9.3_1094]
    Rating: 0 (from 0 votes)

    ಅನುಅತ್ತೆ,
    { ಮದುವೆ ಆಗಿ ೧೦ ವರ್ಷ }
    ಅಂಬಗ ಈಗ “ದಶಮುಖಿ” ಹೇಳುದಾ? ;-)

    ಮೊನ್ನೆ ರಾಮಕಥೆ ಕೇಳುವಗ ಈ ಹೆಸರು ಬಂದಿತ್ತು.. :-D

    [ಉತ್ತರುಸಿ]

  10. kirana arthyadka
    VA:F [1.9.3_1094]
    Rating: 0 (from 0 votes)

    anupamattige.. eliya kondiddare matte ganapathi bandu hopale vahana illadde ningala manele koortita alda?????

    [ಉತ್ತರುಸಿ]

ಒಪ್ಪ ಕೊಡ್ಳೆ ಇಲ್ಲಿ ಬರೆಯಿ:

ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಸದ್ಯದ ಪಟಂಗೊ

ಮಳೆಗಾಲದ ಅಟ್ಟಣೆಲಿ ಅಟ್ಟ-ಕೊಟ್ಟಗೆ ತುಂಬಿತ್ತೋ?ಪರೀಕ್ಷಾ ಫಲಿತಾಂಶ: ಚಿಂತೆ ಬಿಡಿ, ಚಿಂತನೆ ಮಾಡಿ!ಶ್ರೀಮದ್ಭಗವದ್ಗೀತಾ – ತೃತೀಯೋsಧ್ಯಾಯಃ – ಕರ್ಮಯೋಗಃ – ಶ್ಲೋಕಂಗೊ – 31- 40

ಬೆಶಿ ಬೆಶಿ ಒಪ್ಪಂಗೊ..

Switch to our mobile site

Powered By Indic IME