Latest posts by ಬಂಡಾಡಿ ಅಜ್ಜಿ (see all)
- ಉದ್ದಿನ ಗೊಜ್ಜಿ - December 4, 2013
- ಕೆಸವಿನೆಲೆ ಚಟ್ನಿ - November 23, 2013
- ಕಣ್ಣಿಲಿ ಕುರು ಅಪ್ಪದಕ್ಕೆಮದ್ದು - November 11, 2013
ಆಡುಸೋಗೆ, ಅಮೃತಬಳ್ಳಿ- ನಾಕ್ನಾಕು ಎಲೆ, ತೊಳಶಿ ಒಂದು ಮುಷ್ಟಿ, ಹತ್ತು ಮೂವತ್ತು ಕಾಳು ಗೆಣಮೆಣಸು, ಶುಂಟಿ ಒಂದು ತುಂಡು, ಕಿರಾತಕಡ್ಡಿಯ ಸೊಪ್ಪುರಜ ಎಲ್ಲ ಒಟ್ಟಿಂಗೆ ಹಾಕಿ ಕೊದಿಶುದು. ಸರೀ ಅರ್ದ ಅಪ್ಪಷ್ಟು ಬತ್ತೆಕು ಅದು. ಮತ್ತೆ ಅದಕ್ಕೆ ಒಂದು ರಜ ಜೇನು ಹಾಕಿ, ದಿನಲ್ಲಿ ಮೂರ್ನಾಕು ಸರ್ತಿ ಕುಡಿಯೆಕು. ತಣುದಿದ್ದರೆ ರಜ ಬೆಶಿ ಮಾಡಿಯೇ ಕುಡಿಯೆಕು. ಸಾದಾರ್ಣದ ಜ್ವರ ಎಲ್ಲ ಗುಡ್ಡೆಹತ್ತುತ್ತು.
ಓ ಮೊನ್ನೆ ರಜೆಲಿ ಬಂದಿದ್ದ ಕಜೆ ಕುಮಾರಂಗೆ ವಿಪರೀತ ಜ್ವರ. ಅಷ್ಟಪ್ಪಗ ಇದರ ಮಾಡಿಕೊಟ್ಟಿತ್ತಿದೆ. ಮಾಣಿ ಕುಡಿವಲೇ ಕೇಳಿದ್ದಾಯಿಲ್ಲೆ ಸುರೂವಿಂಗೆ! ಕಾರ ಕಾರ ಹೇಳಿ ಬೊಬ್ಬೆ ಹೊಡದ. ಒತ್ತಾಯಲ್ಲಿ ಕುಡಿಶಿದ್ದು. ಅವಂಗೆ ಮೂರು-ನಾಕು ಸರ್ತಿ ಕುಡಿಶೆಕಾರೆ ಎನಗೇ ಬೆಗರು ಬಿಚ್ಚಿದ್ದು. ಆದರೆ ಒಂದೇ ದಿನಲ್ಲಿ ಜ್ವರ ಬಿರುದ್ದು ಮಾತ್ರ. ಅಜ್ಜಿ lusso repliche orologi ಮದ್ದು ಲೊಟ್ಟೆ ಅಲ್ಲ ಹೇಳಿ ಜಾನ್ಸಿಕ್ಕು ಮತ್ತೆ.