Oppanna.com

ಇದಾರು – 14

ಬರದೋರು :   ಶುದ್ದಿಕ್ಕಾರ°    on   07/08/2011    22 ಒಪ್ಪಂಗೊ

ಕಳುದ ಸರ್ತಿಯಾಣ ಇದಾರುವಿಲಿ ಆರ ಮಂಡೆಗೆ ಗುರ್ತ ಮಾಡಿದ್ದು ಗೊಂತಾಯಿದಲ್ಲದೋ (ಸಂಕೋಲೆ)

ಈ ಸರ್ತಿ ನಮ್ಮ ಬೈಲಿನ ಹಲವು ಜೆನರ ಪ್ರಿಯ ಯಕ್ಷಗಾನ ಪಾತ್ರಧಾರಿಯ ಬಗ್ಗೆ ಕೇಳುವೋ° ಕಂಡತ್ತು. ಇದಾ, ಯಕ್ಷಗಾನ ಪ್ರಿಯ ನಮ್ಮ ಸುಳ್ಯದ ಗೌಡ್ರು ಮುಖ್ಯಮಂತ್ರಿ ಆದಪ್ಪಗ ಸುಳ್ಯದ ದೊಡ್ಡ ಗೌಡ್ರ ಕೋಲೇಜಿಲಿ ಹೆಸರು ಮಾಡಿದ ನಮ್ಮ ಬೈಲಿನ ಪ್ರೀತಿಯ ಜೆನ ಮೈಷಾಸುರ ವೇಷ ಮಾಡಿ ರೈಸಿದ್ದವು.
“ಅಮ್ಮಾ……,
ಓರಗೆಯ ಮಕ್ಕಳೊಂದಿಗೆ ರಾಜಾಂಗಣದಲ್ಲಿ ಆಡಿಕೊಂಡಿರುವ ಹೊತ್ತು, ಮಗನೇ ಮಹಿಷಾ… ಬಾ!!! ಎಂಬ ನಿನ್ನ ಆರ್ತನಾದ ಕೇಳಿಸಿತು.
ಅಮ್ಮಾ.., ಇದೋ ಓಡೋಡಿ ಬಂದಿದ್ದೇನೆ. ನಿನ್ನ ಮುಖವನ್ನು ನೋಡಿದಾಗ..
ಅಮ್ಮಾ.., ಇದೇನು??
ನಿನ್ನ ಮುಖ ಬಾಡಿ ಹೋಗಿದೆ. ಹಣೆಯಲ್ಲಿ ರಾರಾಜಿಸುತ್ತಿದ್ದ ಕುಂಕುಮ ಅಳಿದು ಹೋಗಿದೆ. ಯಾರಿಂದ ಆಪತ್ತು?
ಹೇಳಮ್ಮಾ..!! ” ಹೇಳಿ ಹೇಳ್ತಾ ಇಪ್ಪ ಈ ಜನ ಆರು ಹೇಳಿ ನೋಡಾ°!

ಸರಿ ಉತ್ತರ ಹೇಳಿದವಕ್ಕೆ ಸತ್ಯನಾರಾಯಣ ಪೂಜೆಯ ಸಪಾದ ಕೊಡ್ತು ಹೇಳಿದ್ದವು ಗುರಿಕ್ಕಾರ್ರು.

22 thoughts on “ಇದಾರು – 14

  1. ಅಜಕ್ಕಳ ನರಸಿಂಹ ಭಟ್ಟರ ಮಗ° ಆರು?
    ತುಪ್ಪೆಕಲ್ಲಿಲಿ ಅಜ್ಜನಮನೆ ಆರಿಂಗೆ?
    ನವಜೀವನ ಶಾಲೆಗೆ ಹೋದವು ಇಲ್ಲಿ ಆರಿದ್ದವು?
    ಸಾಕೋ.. ಚೆನ್ನೈಲಿಪ್ಪ ರಾಮಕೃಷ್ಣ ಭಾವಾ!

    1. ಯೆಬ್ಬಾ…. ಇದು ಒಳ್ಳೇ ಷ್ಟ್ರೋ೦ಗು ಆಯಿದು ಕೃಷ್ಣ ಭಾವಾ.. 😉

  2. ಕೊಟ್ಟ ಕುಳವ ಸರೀ ಚಿಂತಿಸಿ, ಬಂದ ಒಪ್ಪವ ಅವಲೋಕಿಸಿರೆ ಎನಗೇನೋ ಅನುಮಾನ –
    ಬೈಲಿನ ಜನಪ್ರಿಯ ಜೆನ, ಯಕ್ಷಗಾನ ಕಲಾವಿದ ಹೇಳಿ ಇದ್ದು , ಸಂಗೀತ ಪ್ರಿಯ ಹೇಳಿಯೂ ಕಾಣುತ್ತು, ಆದ್ದರಿಂದ ಇದು ಚೆನ್ನಬೆಟ್ಟಣ್ಣನೇ.
    ಹಿಂದೆ ಸುಳ್ಯ ಹೇಳಿ ಕಾಣುತ್ತಕಾರಣವೂ, ಕೆಂಪು ಕಣ್ಣು, ಡ್ಯುಯೆಟ್ಟು – ಡಯಟ್ಟು ಹೇಳಿ ದಿಸೆ ಬದಲಸುವ ಒಪ್ಪ ಬರದ ಕಾರಣವೂ ಇದು ಸುಭಗಣ್ಣನೇ ಎಂತಕೆ ಆಗಿರ?!
    ವೇಷದ ಭರ್ಜರಿ ಗಾಂಭೀರ್ಯ ನೋಡಿರೆ ಇದೇಕೆ ಮುಳಿಯ ಭಾವ ಆಗಿರ?.
    ಕಾಲೇಜು ಓದುವಾಗ ಆನೂ ಒಂದು ವೇಷ ಹಾಕಿದ್ದೆ ಹೇಳಿ ಒಂದರಿ ಬೊಳುಂಬು ಮಾವನೇ ಹೇಳಿತ್ತಿದ್ದವು, ಈ ಒಂದರಿ ವೇಷ ಹಾಕಿದ ಕಾರಣ ಕೆಮರಕ್ಕೆ ಕೊಂಬು ಫೋಸ್ ಕೊಡ್ಳೆ ಮರದ್ದು, ತೆ.ಕುಮಾರಣ್ಣನ ಒಪ್ಪವನ್ನೂ ಹೊಂದಿಸಿ ನೋಡಿರೆ ಇದೇಕೆ ಬೊಳುಂಬು ಮಾವನೇ ಅಪ್ಪಲಾಗ?!
    ಅಲ್ಲಾ, ನೋಡಿಯೂ ನೋಡದ್ದೇ ಹಾಂಗೆ ಇನ್ನೂ ತಳಿಯದ್ದೆ ಕೂದೊಂಡಿಪ್ಪ ವೇಣೂರಣ್ಣನೋ?!
    ಅಲ್ಲಾ ಬೊಳುಂಬು ಕೃಷ್ಣ ಭಾವ ಓರೆಕ್ಕೋರೆ ಹೇಳಿದ್ದು ನೋಡಿರೆ ಅಕೇರಿಗೆ ಇದು ಅಜಕ್ಕಳ ಗಿರೀಶಣ್ಣನೇಯೋ.

    (ಹೇಂಗೆ , ಸಪಾದ ಎನಗೆ ಸಿಕ್ಕುಗೋ ?)

    1. ಇದು ಒಳ್ಳೆ ಪತ್ತೇದಾರಿ ಕತೆ ಹಾಂಗೆ ಕಾಣ್ತಾ ಇದ್ದಾನೆ. ಕೆಲವು ಸಿನೆಮಂಗಳಲ್ಲಿ ಕೊಲೆಗಾರಂಗೊ ಬೇಕೂ ಹೇಳಿಯೇ ಬೇರೆಯವರ ಸಿಕ್ಕುಸಿ ಹಾಕಿಕ್ಕಿ ಪಲಾಯನ ಮಾಡುತ್ತವು. ಇದುದೆ ಹಾಂಗಿಕ್ಕೊ ?

  3. ಈ ಭಾವಯ್ಯನ ಬಗ್ಗೆ ಎನಗೆ ಗೊಂತಿಪ್ಪ ಒಂದು ಸಂಗತಿಯ ಆನು ಹೇಳ್ತೆ. ಅಂದು ಇರುಳು 3 ಗಂಟೆಗೆ ಮೈಶ್ಶಾಸುರನ ವೇಷ ಹಾಕಿ ರಂಗಸ್ಥಳಲ್ಲಿ ರೈಸಿ ಎಲ್ಲರಿಂದಲೂ ಶಹಬ್ಬಾಸ್ ಸಿಕ್ಕಿಯಪ್ಪಗ ಇವು ಕೊಶೀಲಿ ಒಂದು ಘೋಷಣೆ ಮಾಡಿದವು- ‘ ಈ ಶುಭ ಸಂದರ್ಭದ ನೆಂಪಿಂಗೆ ಇನ್ನು ಮುಂದೆ ನಿತ್ಯವೂ ಈ ಹೊತ್ತು ಆಗದ್ದೆ ಆನು ಒರಗೆ!’ ಹೇಳಿ. ಇಂದಿನವರೆಗೆ ಆ ವಚನವ ಇವು ನಿಯತ್ತಿಲ್ಲಿ ಪಾಲುಸಿಂಡು ಬಯಿಂದವು! 😉

  4. ಇನ್ನೊಂದು ಕುಳು ಇದ್ದು. ಅಜಕ್ಕಳ ಗಿರೀಶಣ್ಣಂಗೆ ಇವು ಎಂತ ಆಯೆಕ್ಕು?

  5. ಶುದ್ದಿಕ್ಕಾರೋ,
    ಅಪ್ರೂಪದ ಪಟ ಬೈಲಿಲಿ ಕೊಟ್ಟದಕ್ಕೆ ಧನ್ಯವಾದಂಗೋ.

    ಈ ಮಹಿಷಾಸುರ ವೇಷ ಆರದ್ದಪ್ಪಾ!!!!!
    ಹೀಂಗೆ ಬಣ್ಣ ಮೆತ್ತಿದ ಪಟ ತೋರ್ಸಿ ಗುರ್ತ ಹಿಡೀರಿ ಹೇಳಿದರೆ ಹೇಂಗಪ್ಪದು ನೋಡಾ°!! 😉

    ಆ ಮಹಿಷಾಸುರನ ಅಬ್ಬೆ ಎಂತ ಹಾಂಗುದೇ ಬಚ್ಚಿದ್ದದಪ್ಪಾ!!! ಅದುದೇ ‘ಡಯಟ್ಟು’ ಮಾಡುದೋ??? 😉

    ಇದಾರು ಹೇಳಿ ಕೇಳಿತ್ತು ಕಂಡ್ರೆ.., ಲೋಕಲ್ಲಿ ಒಂದೊಂದರಿಯೇ ಅವತಾರ ಎತ್ತಿದ ಯುಗಪುರುಷರ ಹೆಸರು ಮಡಿಕ್ಕೊಂಡಿಪ್ಪ, ಸಂಗೀತದ ಲಹರಿಲಿಯೇ ಇಪ್ಪ, ಮಂತ್ರ ತಪ್ಪದ್ದೆ ಹೇಳ್ತ, ಮಕ್ಕಳ ಪ್ರತಿಯೊಂದು ಎಂತಕ್ಕೆಗೊಕ್ಕೆ ತಾಳ್ಮೆಲಿ ಉತ್ತರ ಕೊಡ್ತ ಯೇವುದಾದರೂ ಮಹಾನ್ ವೆಗ್ತಿಯೇ ಆಯೆಕ್ಕಟ್ಟೇ. ಸಾಮಾನ್ಯದವಕ್ಕೆ ಆ ಕಿರೀಟ ನೆಗ್ಗುಲೇ ಎಡಿಯ ಇದಾ…. 😉

    1. ಆಹಾಹಾ..! ಈ ಮಹಾನ್ ವೆಗ್ತಿಯ ಗುರ್ತವ ಇಷ್ಟು ಲಾಯಿಕಲ್ಲಿ ಹೇಳ್ಳೆ ಶ್ರೀ ಅಕ್ಕಂಗೇ ಎಡಿಗಷ್ಟೆ, ಸಾಮಾನ್ಯದವಕ್ಕೆ ಎಡಿಯ!
      ಅಕ್ಕಾ, ಆ ಮಾಲಿನಿ ಈಗಾಣ ಸಿನೆಮಾ ನಾಯಕಿಯರ ಹಾಂಗೆ ‘ಡ್ಯುಯೆಟ್ಟು’ ಹಾಡಿಂಡು ಕೊಣಿವಲೆ ಇದ್ದು ಹೇಳಿ ಗ್ರೇಶಿ ಡಯಟ್ಟು ಮಾಡಿದ್ದು ಆಗಿಕ್ಕೋ ಏನೋ! ಪಾಪ!!

    2. ಶ್ರೀ ಅಕ್ಕ,
      ಮಾಲಿನಿ ವೇಷ ಹಾಕಿದ್ದು ಸುಳ್ಯದ ಜೆನ ಅಲ್ಲಡ( ಜಾಲ್ಸೂರು ಗಡಿಂದ ಅತ್ಲಾಗಿಯಾಣ ಜೆನ ಹೇಳಿ ಗಾಳಿ ಶುದ್ದಿ), ಜೀವ ಹಾಂಗಿದ್ದರೂ “ಮಗನೇ ಮಹಿಷಾ… ಬಾ!!! ” ಹೇಳಿ ಅರ್ಭಟೆ ಕೊಡುವಗ ಒರಕ್ಕು ತೂಗಿದವು ಪೆರ್ಚಿ ಬಿದ್ದು ಓಡಿದ್ದವಡ.

  6. ಅಂದಾಜಿಗೆ ಗುಂಡ ಹೊಡೆತ್ತರೆ,
    ಸುಳ್ಯದ “ದೊಡ್ಡಗೌಡರ” ಎನೆಂಸಿಲಿ ಕೊಳೆಂಜಿಗೆ ಕಲ್ತವಾರೋ ಅವ್ವೇ ಇವ್ವು.
    ಸಂಗೀತಪ್ರಿಯನೂ ಯಕ್ಷಪ್ರಿಯನೂ ಆದವು… ಒಂದು ಮದುವೆ ಮಾಂತ್ರ ಆದವು…
    ಮೋ ಬಾಯಿಲೊಂದಿದ್ದಡ, ಸಿಮ್ಮೆರಡಿದ್ದಡ… ಮತ್ತೊಂದು ಮೋ ಬೈಕುದೇ… ಉಮ್ಮಪ್ಪ, ಅಷ್ಟೇ ಅಡ!
    ಉತ್ತರ ಗೊಂತಾತೋ… ಆಗದ್ದರೆ ಸುಭಗ ಭಾವ° ಹೇಳುಗು!

  7. ಆರೂ ಹೇಳಿ ಎನಗೊ೦ತ್ತಿಲ್ಲೆ ಹೇಳಿ ಗ್ರೆಶಿಗೊ೦ಡು ಇತ್ಥಿದ್ದೆ.. ಈ ಒಪ್ಪ್೦ಗಳ ಓದಿಅಪ್ಪಗ ರಾಮ ರಾಮ……….ಕೃಷ್ಣ: …ಕೃಷ್ಣ…..ಇನ್ನೂ ಆರಪ್ಪಾ ಹೆಳಿ ಆತು.

  8. ಛೆ.. ಯಾರಪ್ಪಾ ಇದು..
    ಭಾಗವತಿಕೆ ಚೆನಿಯಪ್ಪ ನಾಯ್ಕ, ಚೆಂಡೆಗೆ ಕುಮಾರಣ್ಣ ಗೊಂತಾವ್ತು..
    ಙ್ಯೊಯ್ ಹೇಳ್ತಾ ಇಪ್ಪದು ಯಾರಪ್ಪಾ?

    1. ಸುಳ್ಯ ಹೇಳಿ ಬೋರ್ಡ್ ಕಾಣುತ್ತಲ್ಲಿ. ಹಾಂಗಾದ ಕಾರಣ ಅದಾರೋ ಸುಳ್ಯಲ್ಲಿ ಇದ್ದವೇಯೋ?! ಆ ಹೊಡೆಯಾಣವು ಆರಿದ್ದವು ನಮ್ಮ ಬೈಲಿಲಿ ಜನಪ್ರಿಯರು???! ಓಯಿ ಇದು ಸುಭಗನೋ ಹೇಂಗೆ?!!

  9. ಭಾಗವತ,ಶೃತಿಯ ಜೆನ,ಚೆ೦ಡೆಯವ,ಚಕ್ರತಾಳ ಎಲ್ಲ ಓಡುಲೆ ತಯಾರಾಗಿ ನಿ೦ದ ಹಾ೦ಗೆ ಕಾಣುತ್ತು.ಮದ್ದಳೆಯವ ಚೌಕಿಗೆ ಸೇರಿದ್ದನೋ ಹೇಳಿ ಸ೦ಷಯ ಈ ಮಹಿಷನ ಆರ್ಭಟಕ್ಕೆ ಹೆದರಿ… ಆದೆಲ್ಲಾ ಸರಿ…ಇದಾರು??

  10. ಈ ಮರಿ ಮಹಿಷಂಗೆ ಕೊಂಬು ಮೂಡುತ್ತಾ ಇದ್ದಷ್ಟೆ. ವೇಷ ಭರ್ಜರಿ ಆಯಿದು. ಸುಭಗನ ಉತ್ತರ ಕಾಂಬಗ, ಎಂತೋ ಕ್ಲೂ ಸಿಕ್ಕಿದ ಹಾಂಗೆ ಆವ್ತಾ ಇದ್ದಾನೆ.

    1. ಓ ಮನ್ನೆ ಮಂಗ್ಳೂರಿಲಿ ಆದ ಆಟದ ಶುದ್ದಿಯ ಪಟದೊಟ್ಟಿಂಗೆ ಹಾಕಿದ್ದಿರನ್ನೆ, ಅದರಲ್ಲಿ ಏನಾರೂ ಕ್ಲೂ ಸಿಕ್ಕುತ್ತೋ ಒಂದರಿ ನೋಡಿಕ್ಕಿ.ಸುಭಗಣ್ಣನ ಒಪ್ಪವನ್ನೂ ಓದಿ.

  11. ಅಬ್ಬಬ್ಬಾ…! ಈ ಗೋಣಂಗೆ ‘ಮದ್ರಾಸು ಕಣ್ಣು’ ಬಯಿಂದೋಪ್ಪಾ..? ಕೆಂಪುಕೆಂಪು ರಟ್ಟುತ್ತು ಆ ಕಣ್ಣು..!!

  12. ಯಬೋ…!! 🙂
    ಎನಗೊ೦ತ್ತಿಲ್ಲೆ ಆ ಜೆನೆ ಆರು ಹೇಳಿ.. 😛
    ಆ ರೌದ್ರಾವತಾರ ನೋಡಿರೆ ಎನ್ನ ಕೈ-ಕಾಲು ಗಡ ಗಡ ಹೇಳಿ ನಡುಗುತ್ತು.. 😉

  13. ಅಪ್ಪನ್ನೆ, ಈ ಗೋಣನ ಗುರ್ತ ನವಗೂ ಆವುತ್ತಿಲೆ. ಸಪಾದ ಸಿಕ್ಕೆಕ್ಕಾರೆ ಕಾಕೆ ಹತ್ತಿಗೊಂಡು ಹೋಯೆಕ್ಕೋ ಏನೋ..?

  14. ಆ ಗೋಣನ ಕಣ್ಣು ನೋಡಿರೆ ಅರನ್ನೋ ಕಂಡ ಹಾಂಗೆ ಆವ್ತಪ್ಪೋ?! . ಅಲ್ಲಾ… ಈ ಪಟಕ್ಕೂ ಸತ್ಯನಾರಾಯಣ ಪೂಜಗೂ ಎಂತ ಸಂಬಂಧ?! ಎಂತದೋ ಒಗಟು ಇದ್ದು ಇದರಲ್ಲಿ ಆತೋ. ‘ಎತ್ತಲ ಮಾಮರ ಎತ್ತಣ ಕೋಗಿಲೆ ಎತ್ತಲಿಂದ ಎತ್ತ ಸಂಬಂಧವಯ್ಯಾ!’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×