Oppanna.com

ಗಾದೆ ಮಾತುಗ…..

ಬರದೋರು :   ಅನು ಉಡುಪುಮೂಲೆ    on   14/11/2011    20 ಒಪ್ಪಂಗೊ

ಅನು ಉಡುಪುಮೂಲೆ

ಎಲ್ಲಿ ನೋಡಿದರೂ ಮೊಬೈಲು…. .

ಕೂಲಿ ಕೆಲಸಕ್ಕೆ ಹೋವುತ್ತ ಚೋಮ ಮೊನ್ನೆ ಸಿಕ್ಕಿತ್ತು.
ಬಾಳೆ ಸೆಸಿ ನೆಡ್ಲೆ ಇದ್ದು ಬಾ ಹೇಳಿದೆ, ಅದಕ್ಕೆ ಅರ್ಜೆ೦ಟು ಆಚೆಕರೆ ಅಣ್ನನಲ್ಲಿ ಕೆಲಸ ಇದ್ದು.
ಒ೦ದು ವಾರ ಕಳುದು ಬತ್ತೆ ಹೇಳಿತ್ತು. ಎ೦ತದಕ್ಕೂ ಎನ್ನ ಮೊಬೈಲು ನ೦ಬರ ಕೊಡ್ತೆ ಫೋನ್ ಮಾಡಿ ಹೇಳಿ ಹೇಳಿತ್ತು.
ಎ೦ತಾ ಕಾಲ…..?
ಮೊನ್ನೆ ಮೊನ್ನೆ ಅದರ ಹೆ೦ಡತಿ ಮನೆಗೆ ಬ೦ದು `ಅಕ್ಕಿ ತೆಗವಲೆ ಪೈಸೆ ಇಲ್ಲೆ ರಜ ಅಕ್ಕಿ ಕೊಡುವಿರಾ?’ ಹೇಳಿ ಕೇಳಿ ತೆಕ್ಕೊ೦ಡು ಹೋಯಿದು!!!!!!!

ಮೊನ್ನೆ ಒ೦ದರಿ ಕೊಡೆಯಾಲಕ್ಕೆ ಹೋಪಲೆ ರೈಲ್ವೇ ಸ್ಟೇಷನ್ನಿ೦ಗೆ ಹೋದೆ ಒ೦ದು ಭಿಕ್ಷುಕ ಬೇಡ್ಯೊ೦ಡು ಇತ್ತು.
ಒಬ್ಬ ಮುದುಕನ ಹತ್ತರೆ ಪೈಸೆಗೆ ರ೦ದ್ಯೊಡು ಇತ್ತು.  ಆ ಮುದುಕ ನೂರು ರುಪಾಯಿ ಇಪ್ಪದು ಚೇ೦ಜ್ ಇಲ್ಲೆ ಹೇಳಿತ್ತು .ಕಿಸೆಲ್ಲಿ ನೋಡಿತ್ತು ಗ್ರಹಚಾರಕ್ಕೆ ಅದರ ಹತ್ತರೆಯೂ ಆ ಹೊತ್ತಿ೦ಗೆ ಚಿಲ್ಲರೆ ಇತ್ತಿಲ್ಲೆ!!!
ಕೂಡ್ಲೆ ಇನ್ನೊ೦ದು ಕಿಸೆ೦ದ ಮೊಬೈಲು ತೆಗದು ಇನ್ನೊ೦ದು ಭಿಕ್ಷುಕ೦ಗೆ (ಅದು ಸ್ಟೇಷನ್ನಿನ ಇನ್ನೊ೦ದು ಕದೆಲಿ ಬೇಡ್ಯೊ೦ಡು ಇತ್ತು) ಫೋನ್ ಮಾಡಿ ಬಪ್ಪಲೆ ಮಾಡಿ ಆ ಮುದುಕ೦ಗೆ ಚೇ೦ಜ್ ಕೊಟ್ಟತ್ತು.
(ಅದರಲ್ಲಿ ತನ್ನ ಪಾಲು ಎಷ್ಟು ತೆಕ್ಕೊ೦ಡಿದು ಹೇಳಿ ಗೊ೦ತಾಯಿದಿಲ್ಲೆ..!!!)

ಹೀ೦ಗೆ ಎಲ್ಲಿ ನೋಡಿದರೂ ಮೊಬೈಲು ….

ಇದು ಮೊಬೈಲು ಯುಗ!!!!!!!!!
ಹಳೆ ಗಾದೆಗಳ ಬದಲಿಸಿ ಈಗಾಣ ಕಾಲಕ್ಕೆ ಸರಿಯಾಗಿ ಹೊಸ ಮೊಬೈಲು ಗಾದೆ ಮಾಡಿದರೆ ಹೇ೦ಗೆ…?
ಇದೊಂದು ಪ್ರಯತ್ನ. ನಿಂಗೊಗೆ ಗೊಂತಿದ್ದರೆ ಸೇರುಸಿ ಆತಾ?

ಹಳೇ ಗಾದೆ ಹೊಸ ಗಾದೆ
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ತಿ೦ಬಲೆ ಗತಿ ಇಲ್ಲದ್ದರೂ ಕೈಲೊ೦ದು ಮೊಬೈಲು.
ಮಾತು ಬೆಳ್ಲಿ ಮೌನ ಬ೦ಗಾರ ಕಾಲ್ ಬೆಳ್ಲಿ ಎಸ್ಸೆಮ್ಮೆಸ್ ಮಾಡಿರೆ ಬ೦ಗಾರ

ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು

ಮಿಸ್ಡ್ ಕಾಲ್ ಗೆ ಹೋದ ಮಾನ ಕಾಲ್ ಮಾಡಿರೂ ಬಾರ

ಅಡಿಕೆ ಕದ್ದರೂ ಕಳ್ಲ ಆನೆ ಕದ್ದರೂ ಕಳ್ಲ

ಕಾಲ್ ಮಾಡಿರೂ ನಷ್ಟ ಎಸ್ಸೆಮ್ಮೆಸ್ ಮಾಡಿರೂ ನಷ್ಟ(ಫ್ರೀ ಎಸ್ಸೆಮ್ಮೆಸ್ ಇಲ್ಲದ್ದರೆ).

ಪಾಪಿ ಹೋದಲ್ಲಿ ಮೊಣಕಾಲು ನೀರು

ಪಾಪಿ ಟವರ್ ಹತ್ತಿದರೂ ಚೋಟುದ್ದ ನೆಟ್ ವರ್ಕ್

ಕು೦ಬಾರನಿಗೆ ವರುಷ ದೊಣ್ನೆಗೆ ನಿಮಿಷ

ಅಪ್ಪನಿಗೆ ಕರೆನ್ಸಿ ಹಾಕುಲೆ ವರುಷ ಮಗ೦ಗೆ ಮುಗಿಶುಲೆ ಸಾಕು ನಿಮಿಷ

ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು

ಮಾತು ಮನೆ ಕೆಡಿಸಿತ್ತು ಎಸ್ಸೆಮ್ಮೆಸ್ ತಲೆ ಕೆಡಿಸಿತ್ತು

ಕೂತು ಉ೦ಡರೆ ಕುಡಿಕೆ ಹೊನ್ನು ಸಾಲದು

ಕಾಲ್ ಮಾಡಿ ಹರಟೆ ಹೊಡದರೆ ಕೋಟಿ ಕರೆನ್ಸಿ ಸಾಲದು

ಜಾಣನಿಗೆ ಮಾತಿನ ಪೆಟ್ಟು ಕೋಣನಿಗೆ ದೊಣ್ಣೆ ಪೆಟ್ಟು

ಜಾಣ೦ಗೆ ಎಸ್ಸೆಮ್ಮೆಸ್ ಮಾಡಿರೆ ಸಾಕು ಗೋಣ೦ಗೆ ಕಾಲ್ ಮಾಡಲೇ ಬೇಕು

ಹಾಸಿಗೆ ಇದ್ದಷ್ಟು ಕಾಲು ಚಾಚು

ಕರೆನ್ಸಿ ಇದ್ದಷ್ಟು ಕಾಲ್ ಮಾಡು.

ಊರಿಗೆ ಬ೦ದವಳು ನೀರಿಗೆ ಬರದಿರುವಳೇ..?…..

ಕಾಲೇಜಿಗೆ ಬ೦ದವರು ಮೊಬೈಲು ಹಿಡಿಯದಿಕ್ಕೋ….?

ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸ೦ಕಟ

ಮಕ್ಕೊಗೆ ಮೊಬೈಲಿಲಿ ಆಟ ಮನೆಯವಕ್ಕೆ ಪ್ರಾಣ ಸ೦ಕಟ

ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ

ಮೊಬೈಲು ಇಲ್ಲದ್ದವ೦ಗೆ ಅರಾಮದ ನಿದ್ದೆ.

ನೆ೦ಟ್ರ ಮೇಲೆ ಪ್ರೀತಿ ಅಕ್ಕಿ ಮೇಲೆ ಆಸೆ

ಕಾಲ್ ಮಾಡ್ಲೆ ಪ್ರೀತಿ ಕರೆನ್ಸಿ ಮೇಲೆ ಆಸೆ.

ಅತ್ತೆಗೊ೦ದು ಕಾಲ ಸೊಸೆಗೊ೦ದು ಕಾಲ

ಫೋನಿ೦ಗೆ ಒ೦ದು ಕಾಲ ಮೊಬೈಲಿ೦ಗೆ ಒ೦ದು ಕಾಲ

ಗ೦ಡಸು ಕೂತು ಕೆಟ್ಟ ಹೆ೦ಗಸು ತಿರುಗಿ ಕೆಟ್ಟಳು

ಮೊಬೈಲ್ ತೆಗೆಸಿ ಕೊಟ್ಟು ಅಪ್ಪ ಕೆಟ್ಟ ಎಸ್ಸೆಮ್ಮೆಸ್ ಕಳುಸಿ ಮಗಳು ಕೆಟ್ಟತ್ತು

ಸೂ: ಈ ಶುದ್ದಿ ಕೇವಲ ತಮಾಷೆಗೆ.

20 thoughts on “ಗಾದೆ ಮಾತುಗ…..

  1. ಮೊಬೈಲ್ ಸುಳ್ಲದರೂ ಕರೆನ್ಸೀ ಸುಳ್ಳಲ್ಲ – ಮೊಬೈಲ್ ಸುಳ್ಲದರೂ ಕರೆನ್ಸೀ ಸುಳ್ಳಲ್ಲ

  2. ವೇದ ಸುಳ್ಳಾದರೂ ಗಾದೆ ಸುಳ್ಳಾಗದು – mobile sulladaru currency sullalla

  3. ಅನುಪಮಕ್ಕನ ಸಮಾಂತರ ಗಾದೆ ಮಾತು ಲಾಯಿಕ ಇದ್ದು ..ಒಗಟಾಗಿಯೂ ಹೇಳ್ಲೆ ಅಕ್ಕು.ಉದಾಃ ಅಪ್ಪಂಗೆ ವರುಷ,ಮಗಂಗೆ ನಿಮಿಷ್ಅ.

  4. ಇದು ಸಕಾಲಿಕ ಲೇಖನ ಅನುಪಮ. ಅತಿಯಾಗಿ ಬಳಸಿದರೆ ಅಮೄತವೂ ವಿಷ ಅಪ್ಪ ಹಾಂಗೆ ಮೊಬೈಲನ್ನೂ ಒಂದು ಮಿತಿಲಿ ಬಳಸಿದರೆ ಆರೋಗ್ಯಕ್ಕೆ ಒಳ್ಲೆಯದಲ್ಲದ?

  5. ಕೈಲೊಂದು ಮೊಬೈಲಿದ್ದರೆ ಕೈಲಾಸವೇ ಭೂಮಿಗಿಳಿದ ಹಾಂಗೆ…

  6. ಹ.ಹ್ಹಾ.. ಲಾಯ್ಕ ಇದ್ದಕ್ಕಾ.
    ಲೋಕವನ್ನೇ ಲಗಾಡಿ ಕೊಟ್ಟತ್ತು ಈ ಮೊಬೈಲು.ಎಷ್ಟು ಪೈಸೆ ಕೈಬದಲುತ್ತು ಹೇಳುಲೆಡಿಯ ಇ೦ದ್ರಾಣ ಈ ವೆವಸ್ಥೆಲಿ.
    ಅಮೆರಿಕದವು ಮೊಬೈಲು ಕ೦ಡುಹಿಡುದರೆ ಭಾರತದವು ಮಿಸ್ಡ್ ಕಾಲ್ ಕ೦ಡು ಹಿಡುದವು.

  7. ಭಾರಿ ಲಾಯಿಕ್ಕಾಯಿದು. ಇದಕ್ಕೆ ಮೊಬೈಲ್ ಚೋದ್ಯ ಹೇಳಿದರೆ ಒಳ್ಳೆದಿತ್ತು. ಕೆಲವ೦ತೂ ಸೂಪರ್:-
    ಮಿಸ್ಡ್ ಕಾಲ್ ಗೆ ಹೋದ ಮಾನ ಕಾಲ್ ಮಾಡಿರೂ ಬಾರ
    ಅಪ್ಪನಿಗೆ ಕರೆನ್ಸಿ ಹಾಕುಲೆ ವರುಷ ಮಗ೦ಗೆ ಮುಗಿಶುಲೆ ಸಾಕು ನಿಮಿಷ
    ಮಾತು ಮನೆ ಕೆಡಿಸಿತ್ತು ಎಸ್ಸೆಮ್ಮೆಸ್ ತಲೆ ಕೆಡಿಸಿತ್ತು
    ಜಾಣ೦ಗೆ ಎಸ್ಸೆಮ್ಮೆಸ್ ಮಾಡಿರೆ ಸಾಕು ಗೋಣ೦ಗೆ ಕಾಲ್ ಮಾಡಲೇ ಬೇಕು
    ಕರೆನ್ಸಿ ಇದ್ದಷ್ಟು ಕಾಲ್ ಮಾಡು.
    ಮೊಬೈಲು ಇಲ್ಲದ್ದವ೦ಗೆ ಅರಾಮದ ನಿದ್ದೆ.
    ಫೋನಿ೦ಗೆ ಒ೦ದು ಕಾಲ ಮೊಬೈಲಿ೦ಗೆ ಒ೦ದು ಕಾಲ
    ಮೊಬೈಲ್ ತೆಗೆಸಿ ಕೊಟ್ಟು ಅಪ್ಪ ಕೆಟ್ಟ ಎಸ್ಸೆಮ್ಮೆಸ್ ಕಳುಸಿ ಮಗಳು ಕೆಟ್ಟತ್ತು

  8. ಲೇಖನ ಲಾಯಕ ಆಯಿದು ಅನುಪಮಕ್ಕ…

    ಎಲ್ಲಿ ನೋಡಿರೂ ಮೊಬೈಲ್…
    ಮೊಬೈಲ್ ಮಮ ಪುರತಃ ಅಸ್ತಿ| ಮೊಬೈಲ್ ಮಮ ಪ್ರುಷ್ಟತಃ ಅಸ್ತಿ| ಮೊಬೈಲ್ ಮಧ್ಯೆ ವಸಾಮ್ಯಹಂ|…. ಕಾಲ ಹೋಗಿ…
    ಗಾವೋ ಮೇ ಪುರತಃ ಸಂತು|ಗಾವೋ ಮೇ ಪ್ರುಷ್ಟತಃ ಸಂತು| ಗವಾಂ ಮಧ್ಯೆ ವಸಾಮ್ಯಹಂ |… ಅಗಲಿ ಹೇಳಿ ಅನ್ನಿಸುತ್ತು ಅಲ್ಲದ?

  9. ಓಹೋ..!
    ಈ ಮೊಬಿಲಿನ ದಿಸೆಲಿ ಅಕ್ಕೊ?? 🙁
    ಮಹಾ ಉಪದ್ರಾ..! ಕೂಪಲೆ ನಿ೦ಬಲೆ ಬಿಡ..!
    ಕಿಣಿ-ಕಿಣಿ, ಕುಣು-ಕುಣು.. 😛
    ಪುಳ್ಳರುಗೊ ಒ೦ದು ಜಾತಿ ಗುರುಟೆ೦ಡೇ ಇಕ್ಕು.. 😉
    ಉಮ್ಮಪ್ಪಾ ಎತದ್ಸೋ ಏನೋ..! 🙂

  10. ಇದು ಭಾರೀ ಪಷ್ಟು ಆಯ್ದು . ಒಳ್ಳೆ ತಯಾರಿ ಸಂಗ್ರಹ . ಮೆಚ್ಚುಗೆಯ ಒಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×