- ಉದ್ದಿನ ಗೊಜ್ಜಿ - December 4, 2013
- ಕೆಸವಿನೆಲೆ ಚಟ್ನಿ - November 23, 2013
- ಕಣ್ಣಿಲಿ ಕುರು ಅಪ್ಪದಕ್ಕೆಮದ್ದು - November 11, 2013
ವೈಶಾಕ ಹೇಳಿರೆ ವೈಶಾಕವೇ ಈ ಸರ್ತಿಯಾಣದ್ದು. ಎಂತಾ ಸೆಕೆ ಎಂತಾ ಸೆಕೆ! ಸಾರಡಿ ತೋಡಿಲಿ ಮುಳುಗಿ ಏಳುವಾಳಿ ಕಾಣ್ತು. ಅದರಲ್ಲಿ ನೀರು ಬೇಕೆ… ಇನ್ನು ನಾಕು ದಿನಲ್ಲಿ ಪಟ್ಟ ಪಸೆ ಇರ. ಹ್ಮ್.. ಈಗ ಒಳ್ಳೆತ ಬೆಗರುತ್ತಲ್ಲದೋ. ಹಾಂಗೆ ದೇಹಕ್ಕೆ ನೀರಿನಂಶ ಸರೀ ತೆಕ್ಕೊಳೆಕ್ಕು. ಪುಳ್ಯಕ್ಕೊಗೆ ಒಂದೊಂದು ದಿನ ಒಂದೊಂದು ಶರ್ಬತ್ತು ಮಾಡಿಕೊಡೊದು ಆನು. ನೀರು ಕುಡಿರಿ ಹೇಳಿರೆ ಕೇಳೆಕ್ಕೆ.. ಅದು ಚಪ್ಪೆ ಅಡ, ರುಚಿ ಇಲ್ಲೆಡ – ಹೀಂಗೆ ಒಂದೊಂದು ಹೆಳೆಗೊ. ಹಾಂಗೇಳಿ ಬೆಲ್ಲ-ನೀರು ಕೊಟ್ರೆ ಗಿಣ್ಣಾಲಿಲಿಪ್ಪ ಬೆಲ್ಲ ಮಾಂತ್ರ ಕಾಲಿ ಅಕ್ಕು. ಅಜ್ಜಕಾನ ರಾಮ ಹಾಂಗೇ ಮಾಡೊದು ಬಂದಿಪ್ಪಗ ಬಂದಿಪ್ಪಗ ಎಲ್ಲ. ಅವನ ಅಮ್ಮನತ್ತರೆ ಹೇಳಿ ಪರಂಚುಸೆಕ್ಕೋ ಗ್ರೇಶುದು… ಮತ್ತೆ ಬೇಡ ಪಾಪನ್ನೇಳಿ ಕಾಣ್ತು…
ನೀರು ಕುಡಿವಲೆ ಕೇಳದ್ದ ಪುಳ್ಯಕ್ಕೊ ಎಲ್ಲ ಶರ್ಬತ್ತು ಮಾಡಿರೆ ಚೆಂದಕ್ಕೆ ಕುಡಿತ್ತವು. ಹಾಂಗೆ ಅಜ್ಜಿ ಉಪಾಯ ಮಾಡಿದ್ದು.
ದಿನಕ್ಕೊಂದು ಶರ್ಬತ್ತು ಮಾಡುವೊ ಹೇಳಿ. ಕುಡಿವಲೂ ಕುಷಿ, ನೀರಿನಂಶವೂ ಒಳ್ಳೆತ ಸಿಕ್ಕುತ್ತು. ಮಾಡಿದ್ದು ನೆಂಪುಬಂದದರೆಲ್ಲ ಬರೆತ್ತೆ.
ನಿಂಬೆಯೊಳಿ ಶರ್ಬತ್ತು: ಶರ್ಬತ್ತು ಹೇಳಿರೆ ಮದಾಲಿಂಗೆ ನೆಂಪಪ್ಪದೇ ನಿಂಬೆಯೊಳಿ ಶರ್ಬತ್ತಲ್ಲದೋ… ಈ ಸರ್ತಿ ಬಂಡಾಡಿಲಿ ಹತ್ತೈವತ್ತು ನಿಂಬೆಯೊಳಿ ಆಗಿತ್ತು. ದೊಡ್ಡ ದೊಡ್ಡ ನಿಂಬೆಯೊಳಿ, ಬಾರೀ ಲಾಯ್ಕಿದ್ದು. ಒಪ್ಪಣ್ಣ ಎಲ್ಲಿಂದಲೋ ತಂದುಕೊಟ್ಟದು. ನೆಟ್ಟು ಸುಮಾರು ಸಮೆಯ ಆಗಿತ್ತು, ಕಾಯಿ ಆಗಿತ್ತೇ ಇಲ್ಲೆ ಅದರಲ್ಲಿ. ಈಗ ಒಂದೆರಡು ವರ್ಷಂದ ಆವುತ್ತಾ ಇದ್ದು. ಒಂದು ನಾಕರ ಉಪ್ಪಿನಕಾಯಿ ಹಾಕಿದ್ದೆ. ನಮ್ಮಲ್ಲೇ ಆದ್ದಲ್ಲದೋ…
ಈ ಶರ್ಬತ್ತು ಗೊಂತಿಲ್ಲದ್ದೋರಿಲ್ಲೆಪ್ಪ. ಕೊಡೆಯಾಲಲ್ಲಿ ಕುಪ್ಪಿಲಿ ತುಂಬುಸಿ ಮಾರ್ತವಡ. ಅದಕ್ಕೆಂತರಪ್ಪ ಲಾಯಿಮು ಹೇಳುದು ಕಾಣ್ತು. ಒಪ್ಪಕ್ಕ ಕೊಡೆಯಾಲಕ್ಕೆ ಹೋದರೆ ಒಪ್ಪಣ್ಣನತ್ತರೆ ಹಟ ಮಾಡಿ ಕೇಳಿ ಕೊಡುಸುಗಡ.
ಶರ್ಬತ್ತು ಮಾಡೆಕಾರೆ ಮದಲೆ ನೀರಿಂಗೆ ಶೆಕ್ಕರೆ ಹಾಕಿ ಕರಗುಸೇಕು. ಹುಳಿ ಹಾಕಿದ ಮತ್ತೆ ಕರಗೊದು ರಜ ನಿದಾನ ಇದಾ. ಅದಕ್ಕೆ ಮತ್ತೆ ನಿಂಬೆಯೊಳಿ ಹಿಂಡಿರೆ ಆತು. ಒಂದ್ರಜ ಉಪ್ಪು ಹಾಕಿರೆ ಲಾಯ್ಕಾವುತ್ತು. ದಣಿಯ ಬೇಡ, ಒಂಚೂರು. ಮತ್ತೆ ಏಲಕ್ಕಿಯೂ ಹಾಕುತ್ತವು ಕೆಲವು ಜೆನ. ಪರಿಮ್ಮಳಕ್ಕೆ. ಕೊಳಚ್ಚಿಪ್ಪು ಪುಳ್ಳಿಯಾಂಗೆ ಸೀವು ಜಾಸ್ತಿ ಬೇಕಾದೋರಿಂಗಾದರೆ ಒಳ್ಳೆತ ಶೆಕ್ಕರೆ ಹಾಕೆಕಾವುತ್ತು.
ಈ ಶರ್ಬತ್ತು ಆರೋಗ್ಯಕ್ಕೂ ಬಾರೀ ಒಳ್ಳೆದು.
ಪುನರ್ಪುಳಿ ಶರ್ಬತ್ತು: ಬಂಡಾಡಿಲಿ ನಾಕು ಪುನರ್ಪುಳಿ ಮರ ಇತ್ತು. ಎರಡರ ತೋಟಕ್ಕೆ ನೆರಳಾವುತ್ತೂಳಿಯೊಂಡು
ಕಡುದತ್ತು. ಚೆ, ಆಸೆ ಆವುತ್ತು. ಒಳ್ಳೆ ಪಲ ಬಂದೊಂಡಿತ್ತೂಳಿ. ಈಗ ಇಪ್ಪದರಲ್ಲಿಯೂ ಆವುತ್ತು. ಆದರೆ ಅದರಲ್ಲಿ ಹೆಚ್ಚಿಂದೆಲ್ಲ ಮಂಗಂಗೊಕ್ಕೇ ಆತು.
ಪುನರ್ಪುಳಿ ಚೋಲಿ ಒಣಗುಸಿ ಮಡುಗುದು. ಅಯ್ಯೋ ಅದರ ಕೊರದು ವಿಲೇವಾರಿ ಮಾಡೊದೇ ಒಂದು ಕೆಲಸ. ಪುನರ್ಪುಳಿ ಕೊರೆತ್ತ ದಿನ ಪುಳ್ಯಕ್ಕೊಗೆಲ್ಲ ಬಿತ್ತು ತೆಗೆತ್ತ ಕೆಲಸ. ತೆಗಕ್ಕೊಂಡು ತೆಗಕ್ಕೊಂಡು ನಾಕು ತಿಂದುಗೊಂಗುದೇ. ಜಾಸ್ತಿ ತಿಂಬಲೆ ಬಿಡ್ಳಿಲ್ಲೆ. ಅದು ಅಷ್ಟು ಒಳ್ಳೆದಲ್ಲಪ್ಪ ಆರೋಗ್ಯಕ್ಕೆ. ಚೋಲಿಲಿ ಗುಣ ಇಪ್ಪದು. ಒಣಗುಸಿ ಮಡಗಿರೆ ಏವಗ ಬೇಕಾರೂ ಶರ್ಬತ್ತೋ, ಸಾರೋ ಮಾಡ್ಳಕ್ಕು. ಅದರ ಬೊದುಲುಲೆ ಹಾಕಿ ಮಡಗಿ ಮತ್ತೆ ಶರ್ಬತ್ತು ಮಾಡ್ತದು. ಗೊಂತಿದ್ದನ್ನೇ… ಚೂರಿಬೈಲು ದೀಪ ಅದರದ್ದು ಎಸೆನುಸು ಹೇಳಿ ಮಾದಿ ಮಡುಗುತ್ತು. ಅದರ ಆದರೆ ಸೀತ ಹಾಕಿರಾತು ಸಾರಿಂಗೋ, ಶರ್ಬತ್ತಿಂಗೋ ಎಂತಕುದೇ. ಒಳ್ಳೆ ಮಂದ ಇರ್ತದು. ರಜ್ಜವೇ ಸಾಕಾವುತ್ತಡ…
ಪುನರ್ಪುಳಿ ಶರ್ಬತ್ತುದೇ ಆರೋಗ್ಯಕ್ಕೆ ಬಾರೀ ಒಳ್ಳೆದಪ್ಪ. ಪಿತ್ತಕ್ಕೆ ಒಳ್ಳೆ ಮದ್ದಿದು. ನಮ್ಮಲ್ಲಿ ಹೆಚ್ಚಾಗಿ ಜೆಂಬ್ರಂಗಳಲ್ಲಿ ಒಂದೋ ಪುನರ್ಪುಳಿ ಶರಬತ್ತು ಇಲ್ಲದ್ರೆ ನಿಂಬೆಯೊಳಿ ಶರ್ಬತ್ತು ಮಾಡುದಲ್ಲದೋ… ನಾಳ್ತು ಶಾಂತಕ್ಕನಲ್ಲಿ ಸಟ್ಟುಮುಡಿಗೂ ಇದನ್ನೇ ಮಾಡುಗೋಳಿ. ಅದೊಂದು ಗೌಜಿ ಇದ್ದೇಳಿದಾಂಗೆ… ಅದರ ಮತ್ತೆ ಮಾತಾಡುವೊ.
(ಓಟೆ)ಹುಳಿ ಶರ್ಬತ್ತು: ಇದು ಪಿತ್ತಕ್ಕೆ ಒಂದನೆ ಮದ್ದು. ತಿಂಗಳಿಂಗೆ ಎರಡು ಸರ್ತಿಯಾಂಗೆ ಕುಡಿಯೇಕು. ಬೆಂಗ್ಳೂರಿಲಿಪ್ಪ, ಕರೆಂಟಿನ ಪುಸ್ತಕಲ್ಲಿ ಕೆಲಸ ಮಾಡ್ತ ಪುಳ್ಯಕ್ಕೊಗೆಲ್ಲ ನಡಿರುಳೊರೆಂಗೆ ಕೂದು ಪಿತ್ತ ಕೆದರಿರೆ ಇದರ ಮಾಡ್ಳೇಳ್ಳಕ್ಕು. ಹೇಳಿದಾಂಗೆ ಹುಳಿಗೆ ವಿಪರೀತ ರೇಟಡ ಅಲ್ದೋ. ಒಂದು ಕೇಜಿಗೆ ಒಂದು ಕೇಜಿ ಅಡಕ್ಕೆಯಷ್ಟೇ ಇದ್ದೋಳಿ.. ಅಲ್ಲ ಇನ್ನು ಜಾಸ್ತಿಯೇ ಇದ್ದೋ… ಬಂಡಾಡಿಲಿಪ್ಪ ಮರಲ್ಲಿ ಒಂದು ನಾಕು ನಾಕೇ ಅಪ್ಪದು. ಈ ಸರ್ತಿ ತರವಾಡಿನ ಪಾತಿ ಕೊಟ್ಟಿದು ರೆಜ ಹುಳಿ. ಬಿತ್ತು ತೆಗೇಕಷ್ಟೆ. ಹುಳಿಬಿತ್ತು ಹೇಳಿರೆ ಪುಳ್ಯಕ್ಕೊಗೆ ಒಂದು ಕೊದಿ ಅಲ್ಲದೋ. ಅದರ ಹೊರುದು ಮಡಗಿರೆ ಏವಗ, ಹೇಂಗೆ ಕಾಲಿ ಆವುತ್ತೂಳಿಯೇ ಗೊಂತಾವುತ್ತಿಲ್ಲೆ. ಕಾಟಂಕೋಟಿ ಎಲ್ಲ ಮೆಚ್ಚುತ್ತಪ್ಪ. ಕೈರಂಗಳ ಕೂಸಂತೂ ಬಂಡಾಡಿಗೆ ಬಂದಿಪ್ಪಗ ಜೆಂಗಲ್ಲಿ ಅದನ್ನೇ balenciaga schoenen verkoop ಹುಡುಕ್ಕುದು.. “ಅಜ್ಜೀ ಪುಳಿಂಕೊಟೆ ಇಲ್ಲೆಯಾ…” ಹೇಳಿಯೊಂಡು. ದಣಿಯ ತಿಂದರೆ ಒಳ್ಳೆದಲ್ಲ ಅದು… ನೆತ್ತಿಗೆಂಡೆ ಸುರು ಆವುತ್ತಡ.
ಹ್ಮ್.. ಅದಿರಳಿ.. ಶರ್ಬತ್ತು ಮಾಡ್ತದು ಹೇಂಗೇಳಿ ಗೊಂತಿದ್ದನ್ನೇ.. ನಾಕು ಬಿತ್ತು ಹುಳಿಯ ಒಂದ್ರಜ ಬೊದುಲುಲೆ ಹಾಕೊದು. (ಬಿತ್ತು ಹೇಳಿರೆ ಬಿತ್ತಲ್ಲ… ಬಿತ್ತು ತೆಗದ ಹುಳಿ ಆತೊ..) ಅದರ ಮತ್ತೆ ಶೆಕ್ಕರೆ ಕರಗುಸಿದ ನೀರಿಲಿ ಪುರುಂಚೊದು. ಪೂರ ಸತ್ವ ಬಿಡುವ ಹಾಂಗೆ ಪುರುಂಚಿ ಎಸರು ಹಾಕೆಕು. ಹುಳಿ ಶರ್ಬತ್ತು ಒಂದು ಪರಿಮ್ಮಳವೇ ಬೇರೆ. ಪುಳ್ಯಕ್ಕೊಗೆಲ್ಲ ಬಾರೀ ಕುಷಿ ಇದೂಳಿರೆ. ಕುಷಿ ಆವುತ್ತೂಳಿಯೊಂಡು ದಣಿಯ ಕುಡಿವಲಾಗ ಮಾಂತ್ರ. ಅದೇ, ಹದಿನೈದು ದಿನಕ್ಕೊಂದರಿಯೋ ಮಣ್ಣ ಕುಡುಕ್ಕೊಂಡಿದ್ದರೆ ಪಿತ್ತಕ್ಕೆ ಬಾರೀ ಒಳ್ಳೆದು.
ಇನ್ನು ಹಣ್ಣಿನ ಶರ್ಬತ್ತುಗೊ ಸುಮಾರಿದ್ದು. ಒಪ್ಪಕ್ಕ ಬಂದಿದ್ದರೆ, ಮಿಸ್ಕಿಲಿ ಗರ್ರ ಮಾಡಿ ಗಳಿಗೆಲಿ ಶರ್ಬತ್ತು ಮಾಡಿ ಕೊಡ್ತು.
ಬಚ್ಚಂಕಾಯಿ, ಏಪುಲು, ಮಾವಿನಣ್ಣು, ಮುಸುಂಬಿ, ಚಿಕ್ಕು ಹೀಂಗೆ ಸುಮಾರು ಹಣ್ಣುಗಳದ್ದೆಲ್ಲ ಶರ್ಬತ್ತಾವುತ್ತು.
ಅಂತೂ ಈ ವೈಶಾಕಲ್ಲಿ ಹೀಂಗಿದ್ದದು ಎಂತಾರು ಮಾಡಿ ಕುಡ್ಕೊಂಡಿದ್ದರೆ ಒಳ್ಳೆದಪ್ಪ. ಸೆಕೆಗೆ ಕಾಯಿ ಹಾಕಿದ್ದರೆಲ್ಲ ಉಂಬಲೂ ಮೆಚ್ಚುತ್ತಿಲ್ಲೆ. ಎಂತಾರು ನೀರಿನಂಶ ತೆಕ್ಕೊಂಬಾಳಿಯೇ ಅಪ್ಪದು. ನಿಂಗಳೂ ಮಕ್ಕೊಗೆ ಹೀಂಗೆ ಮಾಡಿ ಕೊಡಿ ಆತೊ… ಶಾಲಗೆ ಕುಪ್ಪಿಲಿ ತುಂಬುಸಿ ಕೊಟ್ಟ ನೀರು ಹಾಂಗೇ ಒಪಾಸು ಬತ್ತಲ್ಲದೋ.. ಅದಕ್ಕೆ ಮನಗೆ ಬಂದಪ್ಪಾಗ ಎಂತಾರು ಶರ್ಬತ್ತು ಮಾಡಿಕೊಟ್ರೆ ಅಷ್ಟಾರು ನೀರು ಹೊಟ್ಟೆಗೋವುತ್ತದ..
ಅಜ್ಜಿಯ ಲೇಖನ ಲಾಯ್ಕಾಯಿದು.
ವಿಧ ವಿಧ ದ ಶರ್ಬತ್ತಿನ ಬಗ್ಗೆ ಸೆಕೆ ಕಾಲಕ್ಕೆ ಹೇಳಿ ಮಾಡುಸಿದ ಅಜ್ಜಿಯ ಲೇಖನ ಲಾಯ್ಕಾಯಿದು. ನೀಲಿ ಕಲರಿನ ಚಿಮಿಣಿ ಎಣ್ಣೆ ಹಾಂಗ್ರಿತ್ತ “ರಸನ” ಕುಡಿತ್ತದರ ಬದಲು ಇದು ಆರೋಗ್ಯಕ್ಕೆ ಬಾರಿ ಒಳ್ಳೆದು.
shrma appachchi yeva sharbattina heludu? kappu drakshiya beshiyappaga enthavthada? ummappa enagaradiya…
ಕಪ್ಪು ದ್ರಾಕ್ಷಿ ಶರ್ಬತ್ ಮಾಡುವಾಗ ಅದರ ರಜ ಬೇಯಿಸಿದರೆ ಮಂದವೂ ಆವುತ್ತು, ಒಳ್ಳೆದೂ ಆವುತ್ತು. ನೀರಿಲ್ಲಿ ಬೇಯಿಸಿ, ಮಿಕ್ಸಿಗೆ ಹಾಕಿ ತಿರುಗಿಸಿ ಅರುಷಿ, ಸಕ್ಕರೆ ಹಾಕಿದರೆ ಆತು. ಇದು ಪುರ್ಬುಗೊ ಮಾಡುವ ದ್ರಾಕ್ಷಾರಸ ಅಲ್ಲ.
ಅಜ್ಜಿ, ಈ ಸರ್ತಿ ಬರಿ ಹುಳಿ ಶರ್ಬತ್ತುಗಳನ್ನೇ ಬರದ್ದಿ.. ಇನ್ನೊಂದರಿ ಚೀಪೆ ಶರ್ಬತ್ತುಗಳ ಮಾಡುದರ ಬರೇರಿ ಆತ…. 🙂
ಇದೆಲ್ಲ ಒಳ್ಳೆತ ಶೆಕ್ಕರೆ ಹಾಕಿರೆ ಚೀಪೆಯೇ ಆವುತ್ತಪ್ಪ….
ನೀಲಿ (ಕಪ್ಪು) ದ್ರಾಕ್ಷಿಯ ಶರ್ಬತ್ತು ಲಾಯಿಕ ಆವುತ್ತು. ಅದರ ಮಾತ್ರ ಬೇಯಿಸಿ ಮಾಡಿದರೆ ಒಳ್ಳೆದು ಆವುತ್ತು ಮಾತ್ರ ಅಲ್ಲದ್ದೆ ಒದಗು ಕೂಡಾ ಬತ್ತು.
ಕೊಳಚ್ಚಿಪ್ಪು ಪುಳ್ಳಿಗೆ ಸೀವು ಜಾಸ್ತಿ ಬೇಕು ಹೇಳಿ ಆರು ಹೇಳಿದಪ್ಪ? ಕೊಳಚ್ಚಿಪ್ಪು ನವಕ್ಕೆ ಎಲ್ಲರಿಂಗು ಸೀವು ರಜ್ಜ ದೂರ.
“ಸಣ್ಣ ಭಾವನ ಸಟ್ಟುಮುಡಿಗೆ ಮಾಡಿದ ಹೋಳಿಗೆಲಿಯೂ ಸೀವು ಕಮ್ಮಿಇತ್ತು ,ಅದರೂ ಆನು ಬಂಗಲ್ಲಿ ಒಂದು ಹತ್ತು ಹೋಳಿಗೆ ತಿಂದೆ “ಹೇಳಿ ಒಪ್ಪಣ್ಣ ಹೇಳಿಯೊಂಡು ಇತ್ತಿದ್ದ ಮೊನ್ನೆ.
ಅಪ್ಪೋ… ಉಮ್ಮಪ್ಪ…ಎನಗೆ ಒಪ್ಪಣ್ಣನೇ ಹೇಳಿದ್ದು.. ಆನು ಒಪ್ಪಣ್ಣನಲ್ಲಿ ಒಂದರಿ ಕಂಡದಷ್ಟೆ ಅಲ್ಲದೋ…