Oppanna.com

ಡೈಮಂಡು ಭಾವನ ಕೈ ಬೇನೆಯೂ… ಕೋಡಿ ಮಾವನ ’ಕೈ’ ಗುಣವೂ…

ಬರದೋರು :   ಡೈಮಂಡು ಭಾವ    on   15/12/2011    23 ಒಪ್ಪಂಗೊ

ಡೈಮಂಡು ಭಾವ

ಮ್ಮ ಬೈಲಿನ ಡೈಮಂಡು ಭಾವನ ಗೊಂತಿಲ್ಲೆಯೋ ನಿಂಗೊಗೆ.. ಅವನ ಬಗ್ಗೆ ಒಪ್ಪಣ್ಣ ಭಾರಿ ಚೆಂದಕೆ ವಿವರುಸುಗು. ಅವ° ಬೆಂಗಳೂರಿಲ್ಲಿ ಇಪ್ಪದಿದಾ.. ಬೈಲಿಂಗೆ ಬಪ್ಪದು ಅಪರೂಪ. ಆದರೆ ನೆರೆಕರೆಯೋರಿಂದ ಎಲ್ಲಾ ವಿಚಾರಂಗಳ ತಿಳ್ಕೊಂಗು.

ಇಂದು ನಾವು ಹೇಳ್ಳೆ ಹೆರಟ ವಿಚಾರ ಅವಂದೇ.. ಅವನತ್ರೆ ಹೇಳಿಕ್ಕೆಡಿ ಆತೋ ಬೈಲಿಲಿ ಅವನ ಶುದ್ದಿ ಹಾಕಿದ್ದವು ಹೇಳಿ, ಎನ್ನ ಕೂಬಲೆ ನಿಂಬಲೆ ಬಿಡ ಅವ° 🙂

~

ಡೈಮಂಡು ಭಾವ ಕೆಲಸ ಮಾಡುವುದು ಬೆಂಗ್ಳೂರಿಲ್ಲಿ ಯಾವುದೋ ಕಂಪೆನಿ ಅಡ. ಹೆಸರು ನವಗರಡಿಯ. ಕೆಲಸಕ್ಕೆ ಸೇರಿ ಕೆಲವು ವರ್ಷ ಅಪ್ಪಗ ಒಂದು ಬೈಕು ತೆಗೆದ°. ಬೇಕನ್ನೆ ಓಡುಸಲೆ.. ನಮ್ಮ ಕೊಕ್ಕಡದ ಹತ್ತರೆ ಮಾಡಿಲ್ಲದೇ ಬರೇ ಬೆಶಿಲಿಲ್ಲಿ ಕೂದ ಮಹಾಗೆಣವತಿಯ ಗೊಂತಿಲ್ಲೆಯೋ.? ಸೌತಡ್ಕ ಗೆಣಪ್ಪಣ್ಣ.. ಹ್ಞಾಂ ಅವನೇ. ಈ ಭಾವಯ್ಯ ಅವರ ಪರಮ ಭಕ್ತ. ಊರಿಂಗೆ ಹೋದಪ್ಪಗ ಎಲ್ಲಾ ಅಲ್ಲಿಗೆ ಹೋಗಿ ಗೆಣಪ್ಪಣ್ಣಂಗೆ ಸಾಷ್ಟಾಂಗ ನಮಸ್ಕಾರ ಮಾಡಿ. ಅವಲಕ್ಕಿ ಪಂಚ ಕಜ್ಜಾಯ ಮಾಡ್ಸದ್ದರೆ ಅವಂಗೆ ಸಾಮಾಧಾನ ಆವುತ್ತಿಲ್ಲೆ.

ಅವ° ಏವ ಕೆಲಸ ಮಾಡ್ಳೆ ಹೆರಟರೂ ಸೌತಡ್ಕ ಗೆಣವತಿ ದೇವರ ನೆನಯದ್ದೆ ಇರಾಡ°. ಅವನೇ ಹೇಳಿದ್ದು. ಬೈಕು ತೆಗೆದು ಅದರ ಸೌತಡ್ಕ ಗೆಣವತಿಗೆ ತೋರಿಸ್ಸಿಕ್ಕಿ, ಅವಂಗೆ ತೋರ‍್ಸಿಸಿದ ಕರ್ಪೂರಾರತಿಯನ್ನೇ ಅಲ್ಯಾಣ ಬಟ್ಟಮಾವ°ನತ್ರೆ ಹೇಳಿ ಬೈಕಿಂಗೂ ಹಿಡಿಶೇಕೂ ಹೇಳ್ತದು ಇವನ ಮನಸ್ಸಿಲ್ಲಿ ಮೊದಲಿನಿಂದಲೇ ಇದ್ದ ಒಂದು ಅಪೇಕ್ಷೆಯೋ, ಬಯಕೆಯೋ ಅಥವಾ ಗೆಣವತಿಯೇ ಇವನ ಮನಸ್ಸಿಲ್ಲಿ ಬಿತ್ತಿದ ಆಶೆಯೋ ಉಮ್ಮಪ್ಪ .. ಒಂದೂ ನವಗರಡಿಯ.

~

ಅಂತು ಒಂದು ಸುದಿನ ಅವನ ಬಾಡಿಗೆ ಮನೆಯ ಮುಂದೆ ಬೈಕು ತಂದು ನಿಲ್ಲಿಸಿದ°. ಬೈಕಿನ ಹೆಸರು ನವಗೆ ಗೊಂತಿಲ್ಲೆ.. ಈಗಾಣ ಜವ್ವನಿಗರು ಬಿಡುವ ಬೈಕಡಪ್ಪ ಅದು. ಮರುದಿನಂದ ಅದರಲ್ಲೇ ಆಪೀಸಿಂಗೆ ಹೋಪಲೆ ಸುರು ಮಾಡಿದ° ಡೈಮಂಡು ಭಾವ. ಸೌತಡ್ಕಲ್ಲೇ ಪೂಜೆ ಮಾಡ್ಸುದು ಹೇಳಿ ಬೆಂಗ್ಳೂರಿಲ್ಲಿ ಏವ ದೇವಸ್ಥಾನಕ್ಕೂ ಬೈಕಿನ ತೆಕ್ಕೊಂಡು ಹೋಯಿದನೇಲ್ಲೆ. ಮನೆಲಿ ಇತ್ತಿತ್ತ ಗುರುಗಳ ಮಂತ್ರಾಕ್ಷತೆಯನ್ನೇ ಬೈಕಿಂಗೆ ಹಾಕಿಕ್ಕಿ, ಎರಡು ಊದುಬತ್ತಿ ಹೊತ್ತಿಸಿ ಬೈಕಿನ ಎದುರು ಮಣಿ ಆಡ್ಸಿದ°… ಆ ವಾರವೇ ಸೌತಡ್ಕ ಹೋಯೆಕ್ಕಳಿ ಅವಂಗಿತ್ತಿದು. ಬೆಂಗ್ಳೂರಿಂದ ೩೦೦ ಕಿಲೋ ಮೀಟರ್‌ ದೂರಲಿಪ್ಪ ಸೌತಡ್ಕಕ್ಕೆ ಬೈಕಿಲ್ಲಿ ಹೋಪದು ಹೇಳಿದರೆ ತಮಾಷೆಯೋ? ಹುಎಲ್ಲರೂ ನಿನಗೆ ಮರ್ಲು ಹೇಳಿಯೇ ಅವನತ್ತರೆ ಹೇಳಿದ್ದು. ಅವನ ಆಪೀಸಿಲ್ಲೂ ಕೆಲವು ಹಿತೈಷಿಗೊ ಹೇಳಿದವಡ ಹೋಯಿಕ್ಕಡ ಮರಾಯಾ ಈಗ. ಒಂದು ಸರ್ವೀಸು ಆದರೂ ಆಗಲಿ ಹೇಳಿ.

ಡೈಮಂಡು ಭಾವನ ಆಶೆಗೆ ಮನೆಯವು ತಣ್ಣೀರು ಚೇಪಿದ್ದವಾಲ್ಲೆಯಾ ಹೇಳಿ ನಿಂಗೊ ಕೇಳುವಿರಿ. ಒಂದರಿ ಬೇಡ ಹೇಳಿದರೂ ಸೌತಡ್ಕ ಗೆಣವತಿಯ ಹೆಸರು ಹೇಳಿದ ನಂತರ ಅವು ಮಾತಾಡಿದ್ದವೇಲ್ಲೆ.. ಆಪೀಸಿನವಕ್ಕೆ ಎಂತ ಗೊಂತಿದ್ದು ಸೌತಡ್ಕ ಗೆಣಪ್ಪಣನ ಮಹಿಮೆ? ಹು 🙂 ಆರು ಎಂತ ಹೇಳಿದರೂ ತೊಂದರೆ ಇಲ್ಲೆ ಊರಿಂಗೊರಗೆ ಬೈಕಿಲ್ಲಿ ಹೋಪದು ಹೇಳಿ ಭಾವ ನಿಗಂಟು ಮಾಡಿ ಆಗಿತ್ತಿದಾಅವ° ಮನಸ್ಸು ಬದಲಾಯಿಸಿದ್ದನೇಲ್ಲೆ

~

ಒಂದು ತಿಂಗಳು ಕಳಾತುಮೊದಲಾಣ ಸರ್ವೀಸು ಮಾಡ್ಸಿದ°. ಸರ್ವೀಸು ಆತು ಹೇಳಿದರೆ ಊರಿಂಗೆ ಬೈಕಿಲ್ಲೇ ಹೋಪಲೆ ಸಮಯ ಆತೋಳಿಯೇ ಅರ್ಥ ಇದಾ.. ಆಪೀಸಿಂಗೆ ಮೂರು ದಿನ ರಜೆ ಹಾಕಿ, ಸೌತಡ್ಕ ಗೆಣವತಿಯ ನೆನದು ಒಂದು ದಿನ ಉದೆಗಾಲಕ್ಕೆ ಬೈಕು ಸ್ಟಾರ್ಟು ಮಾಡಿ ನೆಲಮಂಗಲದ ಹೊಡೆಂಗೆ ತಿರುಗಿಸಿದ°. ಹೊಸ ಬೈಕು, ಹೊಸತ್ತಾಗಿ ಮಾಡಿದ ಅಗಲ ಮಾರ್ಗ (ಘಾಟಿ ಬಿಟ್ಟು) ಪಾಸ್ಟು ಹೋಪಲೆ ಇನ್ನೆಂತ ಬೇಕು? ಡೈಮಂಡು ಭಾವ ಎಕ್ಸಲೇಟರು ತಿರ್ಪಿದ್ದರಲ್ಲಿ ಮಧ್ಯಾಹ್ನ ಒಂದು ಗಂಟೆ ಅಪ್ಪಗ ಸೌತಡ್ಕ ಗೆಣವತಿಯ ಎದುರು ಬೈಕಿನ ತಂದು ನಿಲ್ಸಿತ್ತಿದಾ°! ೩೦೦ ಕಿ.ಮೀ ಬಂದದು ಅವಂಗೇ ಗೊಂತಾಯಿದಿಲ್ಲೆಡಾಹೀಂಗೆ ಒಂದರಿ ಸಿಕ್ಕಿಯಪ್ಪಗ ಅವನೇ ಹೇಳಿತ್ತಿದಾ°.

~

ಅವನ ಅಪೇಕ್ಷೆಯ ಹಾಂಗೆ ಅಲ್ಯಾಣ ಬಟ್ಟಮಾವ° ಗೆಣವತಿಗೆ ಎತ್ತಿದ ಮಂಗಳಾರತಿಯನ್ನೇ ಬೈಕಿಂಗೂ ತೋರಿಸಿ, ಮೂರು ಸುತ್ತು ಬಂದು ಒಂದು ತೆಂಗಿನಕಾಯಿ ಒಡದವು. ಗೆಣವತಿ ಆಶೀರ್ವಾದದಿಂದ ಕಾಯಿಯ ತುಂಡುಗೊ ಎಲ್ಲಾ ಮೊಗಚ್ಚಿಯೇ ಬಿದ್ದಿತ್ತಿದು. ಡೈಮಂಡು ಭಾವಂಗೆ ಕೊಶಿಯೋ ಕೊಶಿ. ದೇವರಿಂಗೆ ಸಾಷ್ಟಾಂಗ ಮಾಡಿ ಮನೆಗೆ ಹೆರಟ°. ಒಂದು ದಿನ ಮನೆಲಿ ವಿಶ್ರಾಂತಿ ತೆಕ್ಕೊಂಡು ಮರುದಿನ ಪುನಃ ಬೆಂಗಳೂರಿಗೆ ಹೆರಡುವ ಯೋಜನೆ ಅವನದ್ದು. ಮತ್ತೆ ಪುನಃ ೩೦೦ ಕಿ.ಮೀ ಹೋಗಡೆದೋ.. ಮರುದಿನ ಅಲ್ಲ ಮಾರನೇ ದಿನ ಉದಿಯಪ್ಪಗ ಮನೆಂದ ಹೆರಟತ್ತದಾ ಡೈಮಂಡು ಭಾವನ ಬೈಕು.

~
ಘಾಟಿ ಹತ್ತಿತ್ತು ಸಕಲೇಶಪುರವೂ ದಾಂಟಿತ್ತುಪಾಳ್ಯ ಹೇಳ್ತ ಜಾಗೆಗೆ ಎತ್ತಿಯಪ್ಪಗ ಎಂತಾತೋ ಏನೋಸಡನ್ನಾಗಿ ಬೈಕು ಡಾಮಾರು ಬಿಟ್ಟು ಕೆಳ ಇಳುದತ್ತು.. ಕೆಳ ಇಳಿದಿದ್ದರೆ ಏನೂ ಸಮಸ್ಯೆ ಇತ್ತಿಲ್ಲೆ. ಮಾರ್ಗದ ಕರೇಲಿ ಒಂದು ಲಾರಿ ನಿಂದಿತ್ತಿದು. ಅದಕ್ಕೆ ಡಿಕ್ಕಿ ಹೊಡತ್ತು ಹೇಳಿ ಬ್ರೇಕು ಹಾಕಿದ ಡೈಮಂಡು ಭಾವ°. ಕಣ್ಣು ಮುಚ್ಚಿ ತೆಗವದರ ಒಳಗಾಗಿ ಬೇಕು ಧಡೀಲಾ ಹೇಳಿ ಎಡದೊಡೆಂಗೆ ಮೊಗಚ್ಚಿ ಬಿದ್ದತ್ತು. ಎದುರಂಗೆ ಕಾಂಬಲೆ ಎಂತು ಪೆಟ್ಟಾಗದ್ದರೂ ಬಿದ್ದ ರಭಸಕ್ಕೆ ಬೈಕಿನ ಕನ್ನಾಟಿ ಎಡದ ಭುಜಕ್ಕೆ ಸಿಕ್ಕಿ ಭಾವಯ್ಯನ ಭುಜದ ಕೀಲು ತಪ್ಪಿತ್ತು. ಅಂಬಗ ಬೈಕಿಂಗೆ ಎಂತಾತು ಹೇಳಿ ಕೇಳಿದಿರೋ? ಕಾಂಬಗೆ ಎಂತೂ ಆಯಿದಿಲ್ಲೆಹಾಂಡ್ಳು ಬೆಂಡಾತು, ಗೇರು ಲಿವರು ರಜ್ಜ ಬೆಂಡಾಗಿ ಗೇರು ಬೀಳದ್ದಾಂಗೆ ಆತು. ಭಾವಯ್ಯನ ಕೈ ಮುರುದ್ದಕ್ಕಿಂತ ದೊಡ್ಡ ವಿಚಾರವೋ ಅದು.. ಹು..

~

ಗೆಣವತಿಗೆ ಬೈಕು ತೋರ‍್ಸಿಕ್ಕಿ ಬಪ್ಪಗ ಹೀಂಗೆ ಏಕ್ಸಿಡೆಂಟು ಅಪ್ಪಲಕ್ಕೊ? ಅಂಬಗ ಗೆಣವತಿಯ ಮಹಿಮೆ ಎಂತರ? ಪೂಜೆ ಮಾಡ್ಸಿದ್ದು ಅವಂಗೆ ತೃಪ್ತಿ ಆಯಿದಿಲ್ಲೆಯಾ? ಹೀಂಗಿಪ್ಪ ಪ್ರಶ್ನೆಗೊ ಸುಳಿದು ಹೋತು ಡೈಮಂಡು ಭಾವ ತಲೆಲಿ. ಭಕ್ತನ ಗೆಣವತಿ ಕಾಯದ್ದೆ ಇಕ್ಕೋ? ಆಕ್ಸಿಡೆಂಟು ಆದ ಕೂಡ್ಳೆ ಸೂಕ್ತ ಚಿಕಿತ್ಸೆ ಸಿಕ್ಕೆಡದೋಆ ವ್ಯವಸ್ತೆಯ ಗೆಣವತಿ ಮಾಡಿತ್ತಿದ°. ಹೇಂಗೆ ಹೇಳಿ ಕೇಳುವಿ ನಿಂಗೊ.. ಮಾರ್ಗದ ಕರೆಲಿ ಒಂದು ಲಾರಿ ನಿಂದುಗೊಂಡು ಇತ್ತಿದು ಹೇಳಿದ್ದೆ ನೆಂಪಿದ್ದೋ? ಅದು ಆರದ್ದೋಳಿ ಗ್ರೇಶಿದ್ದಿ? ನಮ್ಮ ಊರಿನವರದ್ದೇ. ನರೆನ್ಸು ಬ್ರೆಡ್ಡು ಕಂಪೆನಿ ಗೊಂತಿಕ್ಕು ನಿಂಗೊಗೆ. ಅವರ ಲೈನು ಸೇಲು ಲಾರಿ ಅದು. ಅದರಲಿದ್ದ ಜೆನಂಗಳೂ ನಮ್ಮೂರಿನವೇ. ಇಷ್ಟು ಇದ್ದರೆ ಸಾಲದೋ. ನಮ್ಮ ಊರಿನವಕ್ಕೆ ಆಕ್ಸಿಡೆಂಟು ಆದರೆ ನಮ್ಮೋರು ಬಿಡುಗ? ಡೈಮಂಡು ಭಾವನ ಸಕಾಯಕ್ಕೆ ಬಂದದು ಅವ್ವೇ. ಭುಜದ ಕೀಲಿನ ಪೀಂಕಿದ್ದರ ಕೂರುಸಲೆ ಸಕಲೇಶಪುರದ ಗೋರ್ಮೆಂಟು ಡಾಗುಟ್ರ ಹತ್ತರೆ ಕರ್ಕೊಂಡು ಹೋದ್ದು ಇದೇ ಮನುಷ್ಯರು. ಪುಣ್ಯಕ್ಕೆ ಅಲ್ಲಿಪ್ಪ ಎಲುಗು ಡಾಕಗುಟ್ರುದೆ ನಮ್ಮ ಊರಿನವೇ ಆಗಿತ್ತವು. ಡೈಮಂಡು ಭಾವನ ಆಸ್ಪತ್ರೆಲಿ ಸೇರುಸಿಕ್ಕಿ ಲಾರಿಯ ಜೆನಂಗ ಹೋದವು. ಡಾಗುಟ್ರು ಕೂಡ ಜಾರಿದ್ದ ಭುಜದ ಕೀಲಿನ ಕೂರ‍್ಸಿಕ್ಕಿ ಕೈಯ ಚೀಲದ ಬ್ಯಾಂಡೇಜು ಹಾಕಿ ಕೊರಳಿಂಗೆ ಕಟ್ಟಿದವುಮುಂದಾಣ ೨೧ ದಿನ ಕೈ ಹೀಂಗೆಯೇ ಇರೇಕು ಹೇಳ್ತ ಷರತ್ತಿನ ಮೇಗೆ.

ಬ್ಯಾಂಡೇಜು ಚೀಲಲ್ಲಿ ಭಾವನ ಕೈ ನೇಲುಸಿದ್ದು

~

ಆಪೀಸಿಂಗೆ ಮೂರು ರಜೆ ಹಾಕಿದವ° ಮೂರು ವಾರ ರಜೆ ಹಾಕುವಾಂಗೆ ಆತು. ಆಕ್ಸಿಡೆಂಟು ಆದ ದಿನ ಬೆಂಗ್ಳೂರಿಂಗೆ ಎತ್ತೆಕ್ಕಾದವ ಭಾವಯ್ಯ° ಕೈಯ ಕೊರಳಿಂಗೆ ಕಟ್ಟಿಕೊಂಡು ಮನೆಗೆ ಎತ್ತಿದಾ°. ಮನೆಯೋರಿಂಗೆ ಎಲ್ಲಾ ಒಂದೇ ಸಮಾಧಾನದೊಡ್ಡ ಪೆಟ್ಟು (ದೇಹಕ್ಕೂ, ಕಿಸೆಗೂ) ಆಯಿದಿಲ್ಲನ್ನೇ ಹೇಳ್ತದು. ಸೊಂಟ ಮಣ್ಣ ಮುರುದು ಹಾಸಿಗೆಲೇ ನೆಗರುವಾಂಗೆ ಆಯಿದಿಲ್ಲನೇ ಹೇಳಿಯೊಂಡು ಸೌತಡ್ಕ ಗೆಣವತಿಯೇ ಕಾದದ್ದು ಹೇಳಿ ಮನೆಯವ್ವು ಡೈಮಂಡು ಭಾವನ ಸಮಾಧಾನ ಮಾಡಿದ್ದು ಮಾತ್ರವಲ್ಲ ಅವ್ವುದೆ ಸಮಾಧಾನ ಮಾಡಿಕೊಂಡವು. ಸಕಲೇಶಪುರದ ಡಾಗುಟ್ರ ನಾಲ್ಕು ದಿನದ ಮಾತ್ರೆಯ ಕೊಟ್ಟು ೨೧ನೇ ದಿನ ಪುತ್ತೂರಿಲ್ಲಿ ಎಲುಗು ಡಾಗುಟ್ರಂಗೆ ತೋರಿಸಿ ಕೈಗೆ ಹಾಕಿದ ಚೀಲದ ಬ್ಯಾಂಡೇಜಿನ ಬಿಚ್ಚೆಕ್ಕು ಹೇಳಿ ಭಾವಂಯ್ಯಗೆ ಹೇಳಿತ್ತಿದವು. ಮೊದಲ ಎರಡು ದಿನ ಮನೇಲಿ ಬೇನೆ ಮಾತ್ರೆ ತಿಂದ ಡೈಮಂಡು ಭಾವ°.

~

ಡೈಮಂಡು ಭಾವನ ಮನೆಲಿ ಅನುಭವಿಗೊಕ್ಕೆ ಏನೂ ಕೊರತೆ ಇಲ್ಲೆ. ಖುದ್ದು ಡೈಮಂಡು ಭಾವನ ಅಪ್ಪಂಗೆ ಹೀಂಗೆ ಹಿಂದೊಂದರಿ ಭುಜದ ಕೀಲು ಜಾರಿ ಎಲುಗು ಡಾಕ್ಟ್ರಂಗೆ ಗೊಂತಾಗದ್ದೆ, ಎಕ್ಸ್‌ರೇಲಿಯೂ ಮುರುದ್ದು ಗೊಂತಾಗದ್ದೆ, ನಮ್ಮ ಕೋಡಿ ಮಾವನ ಮದ್ದಿಲ್ಲಿ ಕಡಮ್ಮೆ ಆಗಿತ್ತಿದು. ಹಾಂಗಾಗಿ ಡೈಮಂಡು ಭಾವನ ಕೈಯನ್ನೂ ಕೋಡಿ ಮಾವಂಗೆ ತೋರ‍್ಸುವ° ಹೇಳಿ ಆತು.

~

ನಿಂಗೊಂಗೆ ಪುತ್ತೂರಿನ ಬೊಳುವಾರು ಗೊಂತಿಲ್ಲೆಯೋಉಪ್ಪಿನಂಗಡಿ ಹೊಡೆಂದ ಬಂದು ಪುತ್ತೂರು ಬಸ್‌ ಸ್ಟೇಂಡಿಗೆ ಹೋವುತ್ತ ಮಾರ್ಗಕ್ಕೆ ಸೇರುತ್ತಲ್ಲೇ ಎದುರಿಂಗೆ ಉತ್ತಮ ಮೆಡಿಕಲ್ಲು ಕಾಂಬಲೆ ಸಿಕ್ಕುತ್ತು. ಮೆಡಿಕಲ್‌ ಆದ ಮತ್ತೆ ಸಿಕ್ಕುವ ಕೋಣೆಲಿ ಶನಿವಾರ ಮತ್ತೆ ಸೋಮವಾರ ಕೋಡಿ ಮಾವ° ಕಾಂಬಲೆ ಸಿಕ್ಕುತ್ತವು.

ಓಯ್‌ ಕೋಡಿ ಮಾವಂಗೆ ಹೆಸರಿಲ್ಲೆಯೋ? ಇದ್ದಪ್ಪಾ ಇದ್ದು ಕೆ.ಗೋವಿಂದ ಭಟ್‌ ಹೇಳಿ. ಮಂಜೇಶ್ವರದ ಹತ್ತರೆ ಮನೆ. ಎಲುಗಿನ ಸಮಸ್ಯೆಗೆ ನಾಟಿ ಚಿಕಿತ್ಸೆ ನೀಡುವ ಕಲೆ ಅವಕ್ಕೆ ಅವರ ಅಪ್ಪಂದ ಬಳುವಳಿ ಆಗಿ ಬಂದದು. ಅವರ ಅಪ್ಪ, ಕೋಡಿ ಅಜ್ಜ° ಕೈ ಉದ್ದುದರಲ್ಲಿ/ ಎಲುಗಿಂಗೆ ಚಿಕಿತ್ಸೆ ನೀಡುವುದರಲ್ಲಿ ಮದಲಿಂಗೇ ಎತ್ತಿದ ಕೈ. ನಿಜ ಹೇಳೆಕ್ಕಾದರೆ ಕೋಡಿ ಮಾವ°ನ ಉಳುಸಿದ್ದೇ, ಅಜ್ಜನ ನಾಟಿ ಚಿಕಿತ್ಸೆ.

ಬಹು ಹಿಂದೆ ಕೋಡಿ ಮಾವ° ಮರಂದ ಬಿದ್ದಿತ್ತವಡ. ಬಿದ್ದ ಪೆಟ್ಟಿಲ್ಲಿ ಎಲುಗುಗ ಹೊಡಿ ಹೊಡಿ ಆಗಿತ್ತಡ. ಖುದ್ದು ಕೋಡಿ ಅಜ್ಜನೇ ಎಣ್ಣೆ ಹಾಕಿ ಉದ್ದಿ ಕೋಡಿ ಮಾವ° ಮತ್ತೆ ನೆಡವಾಂಗೆ ಮಾಡಿದ್ದಡ. ಈಗ ಕೋಡಿ ಅಜ್ಜ° ಇಲ್ಲೆ. ಅವರ ಕೆಲಸವ ಮಾವ° ನಿರಂತರವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ನೆಡೆಸಿಕೊಂಡು ಬತ್ತ ಇದ್ದವು.

ವಾರದ ಎರಡು ದಿನ ಪುತ್ತೂರಿಲ್ಲಿ, ಒಂದು ದಿನ ಮಂಗ್ಳೂರಿಲ್ಲಿ, ಮತ್ತೊಂದು ದಿನ ಬದಿಯಡ್ಕಲ್ಲಿ, ಆದಿತ್ಯವಾರ ಮನೆಲಿ ಮಾವ° ಚಿಕಿತ್ಸೆ ನೀಡ್ತವು. ಇಂಗ್ಲೀಷು ಮದ್ದಿಲ್ಲಿ ದೊಡ್ಡ ದೊಡ್ಡ ಡಾಗುಟ್ರಕ್ಕ ನೀಡಿದ ಚಿಕಿತ್ಸೆ ಫಲಕಾರಿಯಾಗದ್ದೆ ಇದ್ದವು ಬೇರೆ ಬೇರೆ ಊರಿಂದ ಮಾವನ ಹತ್ರಂಗೆ ಚಿಕಿತ್ಸೆಗೆ ಬತ್ತವು ಹೇಳಿದರೆ, ಅವರ ಕೈಗುಣ ಎಂತರ ಹೇಳಿ ಎಲ್ಲೊರಿಂಗೂ ಅರಡಿಗು.

~

ಹಾಂಗೆ ಒಂದು ಶನಿವಾರ ಡೈಮಂಡು ಭಾವ ಕೋಡಿ ಮಾವನ ಕಾಂಬಲೆ ಹೋದ°. ಮಂಜೇಶ್ವರಂದ ಬರೆಡದೋ ಮಾವ°. ಬಪ್ಪಗ ೧೧ ಗಂಟೆ ಆವುತ್ತು. ಡೈಮಂಡು ಭಾವಂಗೆ ಮಾವ° ದೂರಲ್ಲಿ ನೆಂಟ್ರಾಯೆಕ್ಕು. ಭಾವನ ಗುರ್ತ ಇಲ್ಲದ್ರೂ ಭಾವನ ಅಪ್ಪನ ಗುರ್ತ ಇದ್ದಿದಾ.. ಕಂಡ ಕೂಡ್ಳೆ ಚೆಂದಕೆ ಮಾತಾಡ್ಸಿದವು. ವಿಷಯ ಹೀಂಗೀಂಗೆ ಹೇಳಿಯಪ್ಪಗಳೇ, ಗೆಣವತಿಗೆ ನಿನ್ನ ಪೂಜೆಲಿ ತೃಪ್ತಿ ಆಯಿದಿಲ್ಲೆಯೋ ಹೇಳಿ ನೆಗೆ ಮಾಡಿದವು ಮಾವ°. ಅವರೊಟ್ಟಿಂಗೆ ಡೈಮಂಡು ಭಾವನೂ ನೆಗೆ ಮಾಡಿದ°. ಹತ್ತರೆ ಬಂದು ಕೈಯ ಮುಟ್ಟಿ ನೋಡಿ ಡಾಗುಟ್ರು ಕೂರ‍್ಸಿಸಿದ್ದು ಸರಿ ಆಯಿದಾತೊ. ಇನ್ನು ರಜ್ಜ ಅದಕ್ಕೆ ಆಯತ ಮಾಡೆಕ್ಕು ಹೇಳಿ ಒಂದು ಚೀಟು ಬರದವು.

ಚೀಟಿಲಿ ಇದ್ದದು ಎಂತರ?… ಊರ ಕೋಳಿಯ ಮೊಟ್ಟೆಯ ಬೆಳಿ ರಸಲ್ಲಿ ಎರಡು ಮರ್ಮಾಣಿ ಮಾತ್ರೆಯ ಕಲಸಿ ಇರುಳು ಮನುಗುವಂದ ಮೊದಲು ಭುಜಕ್ಕೆ ಲೇಪ ಹಾಯೆಕ್ಕು. ಉದಿಯಪ್ಪಗ ಲೇಪ ಹಾಕಿದ್ದರ ತೊಳದ ನಂತರ ಕಲ್ಮಡ್ಕ ತೈಲವ ಕಿಟ್ಟಿಗೆ ಎರಡು ಗಂಟೆಯ ನಂತರ ಬೆಶಿ ಬೆಶಿ ನೀರಿಲ್ಲಿ ಶೇಖ ಕೊಡೆಕು. (ಈ ಕಲ್ಮಡ್ಕ ತೈಲ ಇದ್ದನ್ನೆ ಭಾವ, ನಮ್ಮ ಅಭಾವನ ಊರಿಲ್ಲಿ ಮಾಡುದಿದಾ.. ಅವ° ಭಾರಿ ಚೆಂದಕ್ಕೆ ವಿವರುತ್ತ° ಅದರ) ಹೀಂಗೆ ಒಟ್ಟು ಎರಡು ವಾರ ಮಾಡೆಕ್ಕು. ಎರಡು ವಾರ ಬಿಟ್ಟು ಒಂದರಿ ಕೈಯ ತೋರ‍್ಸಿಕ್ಕು ಹೇಳಿದವು ಮಾವ°.

ಅಲ್ಲಿಂದ ಎರಡು ವಾರ ಡೈಮಂಡು ಭಾವನ ಅಮ್ಮಂಗೆ ಮರ್ಮಾಣಿ ಮಾತ್ರೆ ಕಲಸುವ ಕೆಲಸ. ಇದರೆಡಕ್ಕೆಲ್ಲಿ ಊರ ಕೋಳಿಯ ಮೊಟ್ಟೆ ಹುಡುಕ್ಕಲೆ ಭಾರಿ ಬಂಙ ಆತು ಭಾವಂಗೆ. ಹೇಂಗು ಎರಡು ವಾರಕ್ಕಿಪ್ಪಷ್ಟು ಸಿಕ್ಕಿತ್ತು. ಎರಡು ವಾರ ಕೈಗೆ ಲೇಪ ಹಾಕಿತ್ತು. ಉದಿಯಪ್ಪಗ ಕಲ್ಮಡ್ಕ ತೈಲ ಕಿಟ್ಟಿಕ್ಕಿ ಶೇಖ ಕೊಟ್ಟತ್ತು.

~

ಎರಡು ವಾರ ಬಿಟ್ಟು ಮತ್ತೆ ಕೋಡಿ ಮಾವ°ನಲ್ಲಿ ಹೋದ ಭಾವ°. ಕಂಡ ಕೂಡ್ಳೆ ಮಾವ° ಕೇಳಿದವು. ಹೇಂಗಿದ್ದು ಈಗ ಬೇನೆ. ಆ ಕೈಲಿ ಬೈಕಿನ ಕ್ಲಚ್ಚು ಹಿಡಿವಲೆಡಿಗೋ? ಬೆಂಗ್ಳೂರಿಂಗೆ ಬೈಕಿಲ್ಲಿ ಹೋಪಲೆ ಎಡಿಗೋ? ಹೇಳಿ ನೆಗೆ ಮಾಡಿಗೊಂಡು. ಫಾಸ್ಟ್‌ ಹೋಪಲೆ ಯಮಹಾ ಬೈಕು ಆಯೆಕ್ಕುಹೇಂಗೆ ಹೋವುತ್ತು ಗೊಂತಿದ್ದಾ ಹೇಳಿ ಡೈಮಂಡು ಭಾವನ ಕೆಣಕ್ಕಿದವು. ಇವಂಗೆ ಅವರ ಮಾತು ಕೇಳದ್ದೆ ಉಪಾಯ ಇಲ್ಲೆ, ಅವು ಹೇಳಿದ್ದಕ್ಕೆಲ್ಲ ಹಲ್ಲು ಬಿಡುದು ಬಿಟ್ಟರೆ ಭಾವನದ್ದು ಬೇರೆಂತ ಮಾತು ಇಲ್ಲೆ.

ಹಾಂಗೆ ಹೇಳಿಗೊಂಡೆ ಹೆಬ್ಬರಳಿಂಗೆ ರಜ್ಜ ಎಣ್ಣೆ ಪಸೆ ಮಾಡಿ ಭಾವನ ಭುಜಕ್ಕೆ ಕೈ ಹಾಕಿದವು. ಕೋಡಿ ಮಾವನ ಹತ್ತರೆ ಮದ್ದಿಂಗೆ ಹೋವುತ್ತವಕ್ಕೆ ಬೇನೆ ತಡವ ಪರಮ ಶಕ್ತಿ ಬೇಕು. ಎಂತಕೆ ಹೇಳಿದರೆ ಉಳಿದ ಡಾಗುಟ್ರಕ್ಕಗಳ ಹಾಂಗೆ ಅವು ಬೇನೆ ಗೊಂತಾಗದ್ದಾಂಗಿಪ್ಪ ಇಂಜೆಕ್ಷನ್‌ ಕೊಡ್ತವಿಲ್ಲೆ ಇದಾ

ಮನೆಲಿ ಅಪ್ಪ ಎಂತ ಮಾಡ್ತವು? ಅಮ್ಮ ಎಂತ ಮಾಡ್ತು? ಅಡಕ್ಕೆ ಕೊಯಿದಾತಮದ್ದು ಬಿಟ್ಟಾತಅವರ ಮದುವೆ ಕಾಗದ ಬೈಂದ, ಎಲ್ಲಿ ಕೆಲಸ ಮಾಡುದು? ಎಷ್ಟು ದಿನ ರಜೆ ಹಾಂಗೆ ಹೀಂಗೆ ಹೇಳಿ ಹಲವು ವಿಚಾರಂಗಳ ಹೇಳಿಗೊಂಡೆ ಭಾವನ ಕೈಯ ಉದ್ದಲೆ ಶುರು ಮಾಡಿದವು. ಉದ್ದುವಾಗ ಅಪ್ಪ ಬೇನೆಲಿ ಭಾವನ ಪೆರ್ಜೀವ ಹಾರಿತ್ತು. ಅದರ ಎಡಕ್ಕಿಲ್ಲಿ ಕೋಡಿ ಮಾವನ ಪ್ರಶ್ನೆಹಾ ..ಹುಎಬಬಬಅಯ್ಯಯ್ಯೊ ಅಮ್ಮಾ ಹೇಳಿಗೊಂಡೆ ಡೈಮಂಡು ಭಾವ ಉತ್ತರ ಹೇಳಿದ°. ಇವನ ಉತ್ತರ ಮುಗಿವ ಮೊದಲು ಮಾವಂಗೆ ಕೈ ಉದ್ದಿಯೂ ಆಯಿದು 🙂

ಕೈ ಉದ್ದಿಕ್ಕಿ ಒಂದು ಮಾತು ಮಾವ° ಹೇಳಿದವು. ಇನ್ನು ಹೋದ ಕೂಡ್ಳೆ ಬೈಕಿನ ಬಿಡ್ಳಕ್ಕು ಆತಆದರೆ ಆ ಕೈಲಿ ಭಾರ ನೆಗ್ಗುವಾಗ ಜಾಗ್ರತೆ ಬೇಕುಆರು ತಿಂಗಳು ರಜ್ಜ ಜಾಗ್ರೆತೆ ಮತ್ತೆ ಮಾಮೂಲಿ ಹಾಂಗೆ ಕೆಲಸ ಮಾಡ್ಳಕ್ಕು ಹೇಳಿ. ಇನ್ನಾಣ ವಾರ ಒಂದರಿ ಕೈಯ ತೋರ‍್ಸಿಕ್ಕು ಹೇಳಿ ಭಾವನ ಕಳುಗಿದವು.

ಮತ್ತಾಣ ವಾರ ಹೋದ ಕೂಡ್ಳೆ ಕೋಡಿ ಮಾವ°, ಇನ್ನೆಂತು ತೊಂದರೆ ಇಲ್ಲೆ….ಮತ್ತೆ ಚಿಕಿತ್ಸೆಗೆ ಬರೇಕೋಳಿ ಇಲ್ಲೆ. ರಜ್ಜ ಸಮಯ ಕಲ್ಮಡ್ಕ ತೈಲವ ಕಿಟ್ಟಿ ಒಳ್ಳೆತ ಬೆಶಿ ನೀರಿನ ಭುಜಕ್ಕೆ ಹಾಕಲೆ ಸಲಹೆ ಮಾಡಿದವು. ಡೈಮಂಡು ಭಾವ ಯಥಾನು ಶಕ್ತಿ ಪೈಸವ ಮಾವನ ಚೀಲಕ್ಕೆ ಹಾಕಿ ಅವರ ’ಕೈಗುಣ’ ಇನ್ನಷ್ಟು ಹೆಚ್ಚಲಿ ಹೇಳಿ ದೇವರತ್ರೆ ಪ್ರಾರ್ಥಿಸಿಕ್ಕಿ ಮನೆ ಹೊಡೆಂಗೆ ಹೆರಟ°.

23 thoughts on “ಡೈಮಂಡು ಭಾವನ ಕೈ ಬೇನೆಯೂ… ಕೋಡಿ ಮಾವನ ’ಕೈ’ ಗುಣವೂ…

  1. ಹ್ಮ್,ಚೀಲಲ್ಲಿ ನೇಲ್ಸಿದ ಕೈ ನೋಡಿಯಪ್ಪಗಳೆ ಜೆನ ಆರು ಹೇದು ಅ೦ದಾಜಿ ಅಕ್ಕೊ?
    ಅ೦ತೂ ಕೆಪ್ಪಣ್ಣನ ಶುದ್ದಿಯೊಟ್ಟಿ೦ಗೆ ಕೋಡಿ ಮಾವನ ಕೈಗುಣದ ಪರಿಚಯವೂ ಆತು.
    ” ಕೈ ಕೈ ಜೈ ಜೈ”

  2. ಈ ಕೆಪ್ಪಣ್ಣಂಗೆ ಬೇರೆ ಕೆಲಸ ಇಲ್ಲೆ… ಆನು ಬೈಕಿಂದ ಬಿದ್ದ ಸುದ್ದಿಯ ಇಡಿ ಲೋಕಕ್ಕೆ ಹೇಳಿದ°. ಎಂತ ಮಾಡೆಕ್ಕು ಇವಂಗೆ..
    ಆನು ಬೈಲಿಂಗೆ ಬಾರದ್ರೂ ವಿಷಯ ಎಲ್ಲ ಗೊಂತಾವ್ತು ನವಗೆ….
    ಕೋಡಿ ಮಾವನ ಕೈಗುಣವ ವಿವರಿಸುದ್ದು ಲಾಯ್ಕ ಆಯಿದು ಸರಿ…
    ಆದರೆ ಆನು ಬೇನೆ ತಿಂದ ವಿಷಯವ ನೀನು ಲಾಲಿ ಮಾಡಿದ್ದು ಎನಗೇನೂ ಸಮಾಧಾನ ಆಯಿದಿಲ್ಲೆ. ಎದುರಂಗೆ ಸಿಕ್ಕುತ್ತನೆ ನೀನು.. ಅಂಬಗ ನೋಡಿಗೊಳ್ತೆ…

  3. ಈಚ ಭಾವನೂ ಬಂದಿರೋ…. ಡೈಮಂಡು ಭಾವ ಬಿದ್ದದು ಸಕಲೇಶಪುರದ ತಿರ್ಗಾಸಿಲ್ಲಿ ಅಲ್ಲಡ ಭಾವೋ..ಲೇವೇಲು ಮಾರ್ಗಲ್ಯಡ ಅವನೇ ಹೇಳಿದ್ದು…

  4. ಕೋಡಿ ಮಾವನ ಕೈ ಗುಣಕ್ಕೆ ಡೈಮಂಡ್ ಭಾವನ ಕೈ ಬೇನೆ ಕಮ್ಮಿಯಾಗಿ.. ಸಕಲೇಶಪುರದ ತಿರ್ಗಾಸುಗಳ ಅವಸ್ಥೆ ಮರದು ಹೋಗಿ.. ಇನ್ನೊಂದರಿ ಬೈಕಿಲಿ ಊರಿಂಗೆ ಹೋಪನಾ ಭಾವ..? ಹೇಳಿ ಕೇಳುವಲ್ಲಿವರೆಗೆ ಆಯ್ದಡ…! 😉

  5. ಕೆಪ್ಪಣ್ಣೋ,
    ಬೈಕ್ ಸ್ಕಿಡ್ ಆಗಿ ಹೀಂಗೆಲ್ಲ ಅಪ್ಪಲೆ ಆವ್ತಿತಿಲ್ಲೆ.
    ಆದರೆ ಅನುಭವಂಗಳ ಬರದ್ದಂತೂ ಭಾರೀ ಲಾಯಿಕ ಆಯಿದು.
    ಅವು ಕೋಳಿ ಮೊಟ್ಟೆ ಲೇಪನ ಮಾಡ್ಲೆ ಹೇಳಿದವು. ನೀನು ಹಾಸ್ಯದ ಲೇಪನ ಮಾಡಿದೆ ಇಲ್ಲಿ.
    ಕೋಡಿ ಮಾವನ ಕೈಗುಣಲ್ಲಿ, ಭಾವಯ್ಯನ ಕೈ ಗುಣ ಆದ್ದು ಫಷ್ಟಾತು.

    1. ಅಪ್ಪಚ್ಚೀ ಕೊಶಿ ಆತು.. ಧನ್ಯವಾದ ಒಪ್ಪಕ್ಕೆ… ಇದೆಲ್ಲ ಡೈಮಂಡು ಭಾವನ ಅನುಭವಂಗಾ…:)

  6. ಬರದ್ದು ಲಾಯಕ್ಕಾಯಿದು. ಡೈಮಂಡ್ ಭಾವನ ಕೈ ಈಗ “ವಜ್ರ”ದಷ್ಟು ಘಟ್ಟಿ ಆಗಿಕ್ಕು, ಎಣ್ಣೆ ಮಸಾಜು ಮಾಡಿಕ್ಕಿ.

    1. ಮಾವ°.. ಒಪ್ಪಕ್ಕೆ ಧನ್ಯವಾದ… ವಜ್ರದಷ್ಟು ಘಟ್ಟಿ ಆಯಿದಾಳಿ ಗೊಂತಿಲ್ಲನ್ನೇ.. ಅಂಬಗಂಬಗ…ಸಣ್ಣಕ್ಕೆ ಬೇನೆ ಆವುತ್ತೋಳಿ ಹೇಳ್ತಾ° ಅಪ್ಪ ಡೈಮಂಡು ಭಾವ… ರೆಜ್ಜ ಸಮಯ ಬೇನೆ ಇಕ್ಕು ಹೇಳಿದ್ದವು ಕೋಡಿ ಮಾವ°

  7. ದೇವರ ದಯೆ, ವಿಶೇಷ ಏನೂ ತೊಂರೆ ಆಗದ್ಸು ಪುಣ್ಯ.
    ಹೇಳಿದಾಂಗೆ,
    ಡೈಮಂಡು ಭಾವ ಹೇಳಿರೆ ಆರು…?
    ವಜ್ರೋತ್ತಮನೋ…

    1. ದೊಡ್ಡ ಭಾವ° ಬಂದಿರೋ…. ನಿಂಗಳ ಒಪ್ಪ ಕಂಡು ಕೊಶಿಆತು…
      ಡೈಮಂಡು ಭಾವ = ವಜ್ರೋತ್ತಮನಾ.. ಉಮ್ಮಪ್ಪ ನವಗರಡಿಯ 🙂

      1. ನಾವು ಪ್ರಶ್ನೆ ಕೇಳಿದ್ದು ಕೆಪ್ಪಣ್ಣನತ್ರೆ,
        ಉತ್ತರ ಹೇಳ್ಸು ಸೂರ್ಯ…
        ಇದೆಂತ ಹೀಂಗೇ…?

        ಬೈಲಿಲ್ಲಿ ಇದರಿಂದ ಮದಲೆ ಡೈಮಂಡು ಭಾವ° ಹೇಳ್ತ ಪಾತ್ರ ಬಂದ ನೆಂಪು ಇಲ್ಲೆ, ಎನಗೆ,ಆದರೆ ಎಲ್ಯೋ ಒಂದು ಕಡೆಲಿ ವಜ್ರೋತ್ತಮನ ಬಗ್ಗೆ ಕೇಳಿದ್ದೆ. ಇದು ಹೊಸತ್ತು ಹಾಂಗಾಗಿ ಕೇಳಿದ್ದು…!

          1. ಇಲ್ಲೆಪ್ಪಾ… ನವಗೆಂತಕೆ ಕೋಪ…?!
            ಒಂದೇ ಜೆನ, ನಾಮ ಹಲವು ಹೇಳಿ ಅಪ್ಪಗ, ನವಗೆ ಜೋರು ಕನುಫ್ಯೂಸು ಬಪ್ಪದಿದಾ…
            ಅಷ್ಟೆ…!
            ಶುದ್ದಿ ಓದಿ ಕೊಶಿ ಆತು…
            ಒಂದು ಒಪ್ಪ.

  8. ಗೆಣವತಿಯ ದಯೆಲಿ ದೊಡ್ಡ ವಿಷಯ ಅಪ್ಪದು ಅಷ್ಟರಲ್ಲೇ ಹೋತಾನೆ ಹೇಳಿ ಗ್ರೇಶುವೊ° ಅಲ್ಲದೊ ? ಕೋಡಿ ಮಾವನ ಕೈಗುಣದ ಬಗೆಲಿ ಹಾಂಗೇ ವಜ್ರಣ್ಣನ ಕೈ ಗುಣ ಆದ ಬಗೆಲಿ ಕೆಪ್ಪಣ್ಣ ಬರದ್ದದು ಲಾಯಕಾತದ. ವಜ್ರಣ್ಣ ಎಕ್ಸಿಲೇಟರು ತಿರ್ಪಿದ ಹಾಂಗೇ ಓದು/ಡುಸೆಂಡು ಹೋತದ. ಕೋಡಿ ಅಜ್ಜನ, ಹಾಂಗೇ ಅವರ ಮಗ ಕೋಡಿ ಮಾವನ ಕೈಗುಣದ ಪ್ರಯೋಜನವ ಪಡದವರಲ್ಲಿ ಆನೂ ಒಬ್ಬ. ಎಣ್ಣೆ ಉದ್ದುವಾಗಿನ ವರ್ಣನೆ ನೈಜವಾಗಿ ಬಯಿಂದು.

  9. ಕೆಪ್ಪಣ್ಣೋ,
    ಕತೆ ಅದುವೆ ನವಗೆ ಗೊಂತಾ…….ತೂ…………………., ಬೈಕಿನ ಹೆಸರೂ ಮರದ್ದಿಲ್ಲೆ ನವಗೆ,
    ಸೌತೆಡ್ಕ ಗೆಣವತಿಗೆ ಕರ್ಪೂರಾರತಿ
    ಬೈಕಿನ ಭಾವಂಗೆ ಮಂಗಳಾರತಿ
    ಕೋಡಿಮಾವನ ಕೈಗುಣ
    ಡೈಮಂಡು ಭಾವನ ಕೈ- ಗುಣ
    ಬಾರೀ ಪಷ್ಟಾಯಿದು ಆತೋ……. ಕೈ ಮುರುದ್ದಲ್ಲ ಬರದ್ದದು.

    1. ಪ್ರಸಾದ ಭಾವ…
      ಕೈ ಮುರುದ್ದದೂ ಪಷ್ಠಾಗಿತ್ತು.. ಡೈಮಂಡು ಭಾವ ೨೧ ದಿನ ಮನೆಲೇ ನೆಗರಿದ್ದಾ° ಅದಾ… 🙂
      ಒಪ್ಪಕ್ಕೆ ಧನ್ಯವಾದ

  10. ಸೂರ್ಯಣ್ಣ, ವಾಹ್ ವಾಹ್!.
    “ಸೌತಡ್ಕ ಗಣಪ್ಪ° – ಡೈಮಂಡು ಭಾವ – ಕೋಡಿ ಅಜ್ಜ° /ಮಾವ° – ಕೈಗುಣ” ಲಾಯಕ ಲಾಯಕ ಆಯ್ದು ಭಾವ ಹೇಳಿ -‘ಚೆನ್ನೈವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×