Oppanna.com

ಕಣ್ಯಾರ ಜಾತ್ರೆ

ಬರದೋರು :   ಶೇಡಿಗುಮ್ಮೆ ಪುಳ್ಳಿ    on   17/01/2012    32 ಒಪ್ಪಂಗೊ

ಎಷ್ಟು ದಿನ ಈ ಕಣ್ಯಾರ ಜಾತ್ರಗೆ
ಇನ್ನು ಒಳುದ್ದು ಮೂರೇದಿನಾ ||೨||
ಜಾತ್ರೆ ನೋಡುಲೆ ನಾವು ಹೋಪೋ ||೨||
ಕುಂಬ್ಳೆ ಸೀಮೆಯ ಚಾಮಿಯ ನೋಡುಲೆ (ಪ)

ಎಂಟು ಗಂಟಗೇ ಹೆರಡೆಕ್ಕು ಅಂದು
ತಂಟೆ ತಕರಾರು ಮಾಡುಲೆ ಇಲ್ಲೆ ||೨||
ಮಿಂದು ಬೇಗನೆ ಹೆರಟರೆ ಆತು ||೨||
ಕುಂಬ್ಳೆಸೀಮೆಯ ಚಾಮಿಯ ನೋಡುಲೆ ||ಎಷ್ಟು||

ಮಕರ ಸಂಕ್ರಮಣದಾ ದಿನವೇ
ಏರ್ತ ಕೊಡಿಯ ನೋಡುವ ಖುಶಿಲೇ ||೨||
ಭಾರಿ ಲಾಯಿಕಿನ ಜಾತ್ರೆಯ ಸುರುವು ||೨||
ಶಂಖ ಜಾಗಟೆ ಸದ್ದಿನ ಎಡೆಲೇ||ಎಷ್ಟು||

ಲೈಟು ಮಾಲೆಯ ತೋರಣ ಇಕ್ಕು
ಮಕ್ಕಳಾಟದ ಸಾಮಾನೂ ಇಕ್ಕು||೨||
ಕಡ್ಳೆಮಿಠಾಯಿ ಲಾಯಿಕದ್ದು ಇಕ್ಕು||೨||
ಮಂಗ್ಳೂರು ಬಂಟನ ಐಸ್ಕ್ರೀಮು ಬಕ್ಕು||ಎಷ್ಟು||

ಬೆಡಿಯ ಕಟ್ಟೆಯ ಹತ್ತರೆ ಹೋಪ
ಬಣ್ಣದ ದುರುಸಿನ ನೋಡುಲೆ ಅಕ್ಕು||೨||
ರೋಕೇಟು ಹಾರುವ ಗೌಜಿಯೇ ಬೇರೆ||೨||
ಕಂಬೆಡಿ ಹೊಟ್ಟುವಗ ಓಡೂಲೆ ಅಕ್ಕು||ಎಷ್ಟು||

ಐದು ದಿನದಾ ಜಾತ್ರೆಯ ಗೌಜಿ
ಕೊಡಿಯ ಮರುದಿನ ಒಂದೊದ್ದು(ಸಣ್ಣ ದೀಪ) ಹೇಳಿ ||೨||
ಎರಡೊದ್ದು(ನಡುದೀಪ) ಮುಗುದರೆ ಬೆಡಿಯಾ ಗೌಜಿ ||೨||
ಐದನೆ ದಿನಕ್ಕೆ ಆರಾಟು ಕೆರೆಲೀ ||ಎಷ್ಟು||

32 thoughts on “ಕಣ್ಯಾರ ಜಾತ್ರೆ

    1. ದೊಡ್ಡ ಭಾವಂಗೆ ಧನ್ಯವಾದಂಗೊ….

  1. ಕಣ್ಯಾರ ಬೆಡಿಯ ವರ್ಣನೆ ಲಾಯಕಾತದ. ನಿನ್ನೆ ಇರುಳು ಪೂರ್ತಿ ಬೆಡಿ ಹೊಟ್ಟುಸಿದಿರಾಯ್ಕು. ಅಜ್ಜಕಾನ ಭಾವ ಬಯಿಂದನೊ ? ಶೇಡಿಗುಮ್ಮೆ ಪುಳ್ಳಿಯ ಪದ್ಯವ ಏವ ರಾಗಲ್ಲಿ ಹಾಡೆಕು ಹೇಳಿ ತುಂಬಾ ಅಂದಾಜು ಮಾಡಿದೆ. ಪದ್ಯದ ರಾಗ ನಾಲಗೆ ಕೊಡೀಲಿ ಇದ್ದು, ಬಾಯಿಗೆ ಬತ್ತಿಲ್ಲೆ ಹೇಳಿ. ಕಡೇಂಗೆ ಒಂದು ಪ್ರಖ್ಯಾತ ಪದ್ಯಕ್ಕೆ ಹೋಲುಸಿ ಎನ್ನಷ್ಟಕ್ಕೆ ಹಾಡಿದೆ. ಸರೀಯಾಗಿ ಹೊಂದಿತ್ತದ !! ಅಂತೂ ಪುಳ್ಳಿ ಬರದ ಪದ್ಯದ ಸಂಪೂರ್ಣ ರಸಾಸ್ವಾದನೆ ಆತು.

    1. ಧನ್ಯವಾದಂಗೊ ಬೊಳುಂಬು ಮಾವಂಗೆ ,
      ಅಂತೂ ಹೊಂದುಸಿದಿರನ್ನೆ ಕೊಶೀಆತು.
      ನಿನ್ನೆ ಇರುಳು ಪೂರ್ತಿ ಬೆಡಿ ಹೊಟ್ಟುಸಿದಿರಾಯ್ಕು – ಇಲ್ಲೆ ಮಾವಾ, ಹೋಪಲಾಯಿದಿಲ್ಲೆ

  2. ಲಾಯ್ಕ ಆಯಿದು ಪದ್ಯ.

  3. ಪದ್ಯ ಭಾರಿ ಲಾಯ್ಕಾಯ್ದು..ಜಾತ್ರೆಗೆ ಹೋದಾ೦ಗೇ ಆತುಃ-)

    1. ಧನ್ಯವಾದಂಗೊ…. ಅಕ್ಕಂಗೆ.

  4. ಶೇಡಿಗುಮ್ಮೆ ಭಾವ ಲಾಯಕೆ ಬರದ್ದಿ..
    ಕು೦ಬ್ಳೆ ಜಾತ್ರೆಯ ವರ್ಣನೆ ಲಾಯಕೆ ಆಯಿದು.. ಕೊಶಿಯಾತು ಓದಿ. 🙂

    1. ಚುಬ್ಬಣ್ಣನ ಪ್ರೋತ್ಸಾಹಕ್ಕೆ ಧನ್ಯವಾದಂಗೊ…

    1. ಚೆ ಇಂದು ಆರಾಟು…. ಎಂತ ಮಾಡುದು ಬಪ್ಪವೊರುಶ ಹೋದರಾತಿನ್ನು.

  5. ಜಾತ್ರೆ ಸುದ್ದಿ ಕೇಳುವಾಗ ಗುರುಗೋ ಹೇಳಿದ್ದು ನೆನಪಾತು… “ವರ್ಷದ ಉಳಿದೆಲ್ಲ ದಿನ ನಾವು ದೇವರ ನೋಡುಲೆ ಹೋಯೆಕ್ಕು… ಜಾತ್ರೆ ದಿನ ಮಾಂತ್ರ ದೇವರು ನಮ್ಮ ನೋಡುಲೆ ಬತ್ತ… ಆದರೆ ನಾವು ಮಾಂತ್ರ ಸಂತೆ ನೋಡುದರಲ್ಲೇ ಬ್ಯುಸಿ ಆಗಿರುತ್ತು…”

    ಪದ್ಯ ಲಾಯಕ ಆಯಿದು…

    1. ಅಕ್ಕೋ ನಾವು ಹೋದರೂ ಅವನೇಬಂದರೂ ಅವನಮ್ಮ ಯಾವಾಗಲೂ ನೋಡ್ತಾ ಇರ್ತ ಅಲ್ಲದೋ…

      1. ಈ ಒಂದು ಜ್ಹಾನ ಎಲ್ಲೋರಿಂಗೂ ಇರುತ್ತಿದ್ದರೆ ಎಷ್ಟು ಒಳ್ಳೇದಿತ್ತು ಅಲ್ಲದ?

  6. ಫಸ್ಟಾಯಿದು.
    ಹಾ೦ಗಾರೆ ಬೆಡಿ ನೋಡಲೆ ಕಾದು ಕೂಬದೋ ಇನ್ನು?

    1. ಬೆಡಿಗೆ ಕಾವಲೆ ಎಂತದೂ ಇಲ್ಲೆ ಭಾವಾ, ಇಂದು ರಾತ್ರಗೇ ಅಲ್ಲದೋ….. ಒಂದಾರಿ ಹಾಂಗೆ ಹೋಗಿ ನೋಡಿಂಡು ಬಂದರಾತು.

  7. { ||೨| }
    ಅಲ್ಲ ಶೇಪುಭಾವಾ; ಪ್ರತಿ ಗೆರೆಯನ್ನೂ಼ ಎರಡೆರಡು ಸರ್ತಿ ಓದೇಕು ಹೇಳಿಯೋ ಪ್ರತಿ ಗೆರೆ ಆದಮತ್ತೆ ಹಾಂಗೆ ಬರವದು? 😉
    ಎನಗೊಂತಿಲ್ಲೆ, ಅದಕ್ಕೆ ಕೇಳಿದ್ದು..

    1. ಅದು “ಎರಡು” ಹೇಳಿ ಗೊಂತಾಯಿದನ್ನೇ ಬಾಕಿಪ್ಪದು ಮತ್ತೆ ಗೊಂತಕ್ಕು ರಜಾ ಕಾಯೆಕಕ್ಕು , ಇನ್ನೊಂದೆರಡು ಪೂಟ್ರೋಲು ಮುರಿಯೆಕಕ್ಕು….ಹಾಂ,

    2. “ಶೇಪು ಭಾವ” – ಈ ಹೆಸರು ಲಾಯಿಕಿದ್ದು.

    3. ಪದ್ಯ ಲಾಯಿಕ ಆಯಿದು. ಕಣ್ಯಾರ ಆಯನದ ಗೌಜಿಯ ಚುಟುಕಾಗಿ ಕೊಟ್ಟಿದೆ.
      [ಶೇಪುಭಾವಾ]- ಎಂತ ಶೇಪು ಬದಲ್ಸುತ್ತನಾ ಇನ್ನೊಬ್ಬರದ್ದು?

      1. ಅಪ್ಪಚ್ಚೀ ಸುರುವಾಣದ್ದಕ್ಕೆ ಧನ್ಯವಾದ,
        ಎರಡನೆದಕ್ಕೆ – ಯಾರದ್ದಾರೂ ಇದ್ದರೆ ಹೇಳಿ ಬದಲ್ಸುವ ಬೇಕಾರೆ ಆದರೆ conditions apply.

  8. [ಎಂಟು ಗಂಟಗೇ ಹೆರಡೆಕ್ಕು] – ಇದಾ ನಾವು ಉದಿಯಪ್ಪಗ ಎಂಟು ಗಂಟಗೇ ಮಿಂದು ರೆಡಿ ಆಯ್ದು. ಹೋಪೋ ಹೇಳಿದ ನಿಂಗೊ ಎಲ್ಲಿ? ಹುಹ್!!

    ಅಪ್ಪು ಭಾವ…. ಅದಿಕ್ಕು, ಇದಿಕ್ಕು ಹೇದಿರನ್ನೇ….. , ಆ ಮೈಕಿಲಿ ದೊಡ್ಡ ಬಾಳೆಗೊನೆ ಏಲಂ ಅಪ್ಪದರ ಏಕೆ ಹೇಳದ್ದು. ಹೋದ ವರ್ಷ ನಾಕು ಸರ್ತಿ ನಿಂಗಳ ಹೆಸರು ಕೇಟಿದು ಮೈಕಿಲ್ಲಿ ನಿಂಗೊ ಐವತ್ತು ಪೈಸೆ ಏರ್ಸಿದ್ದಕ್ಕೆ!!

    ಏ ಭಾವ, ಚಳಿಗೆ ಬೆಶಿ ಬೆಶಿ ಚಾಯಕ್ಕೆ ಹೆಬ್ಬಾರನ ಹೋಟಲು ಇಕ್ಕನ್ನೇ. ಇದಾ ರಿಂಗು ಇಡುಕ್ಕಿ ಬಿಸ್ಕುಟು ಪಾಕೇಟು ಗೆಲ್ಲುತ್ತ ಆಟದ ಹತ್ರಂಗೆ ಎನ್ನ ಕರ್ಕೊಂಡು ಕರ್ಕೊಂಡು ಹೋಯೇಕ್ಕಾತೋ. ಅದಪ್ಪೂ…, ಹೋವ್ತೆಂತರ್ಲಿ? ಜೀಪೋ, ಕಾರೋ, ಬೈಕೋ, ಶಂಕರವಿಠಲ ಬಸ್ಸೋ?! ಸೈಕಲ್ಲಾದರೆ ಆನೂ, ಬೋಚಬಾವನೂ ಇಲ್ಲೆ.

    ಅದೆಲ್ಲಾ ಸರಿ.., ‘ದೇವರ ಹಿಂದಿಕೆ ಭಕ್ತಿಲಿ ಸುತ್ತ ಬಪ್ಪೋ, ಗೋಪುರಲ್ಲಿ ಎದ್ದು ನಿಂದೊಂಡಿಪ್ಪೋರ ಕಾಂಬೋ.. ‘ ಇದೇಕೆ ಹೇಳದ್ದು.

    ಹೋದರೆ ಅದೆಲ್ಲಾ ಇಪ್ಪೋದೇ ಅಲ್ಲದೋ. ಹುಮ್ಮ್ಮ್. ಭಾವ , ಪದ್ಯ ಪಷ್ಟಾಯ್ದು ಹೇಳಿತ್ತಿದಾ- ‘ಚೆನ್ನೈವಾಣಿ’

    1. ಚೆನ್ನೈ ಭಾವಂಗೆ ಧನ್ಯವಾದ,
      (ಇದಾ ನಾವು ಉದಿಯಪ್ಪಗ ಎಂಟು ಗಂಟಗೇ ಮಿಂದು ರೆಡಿ ಆಯ್ದು.-ಏ ಭಾವ, ಚಳಿಗೆ ಬೆಶಿ ಬೆಶಿ ಚಾಯಕ್ಕೆ ಹೆಬ್ಬಾರನ ಹೋಟಲು ಇಕ್ಕನ್ನೇ.) – ಎಂತ ಭಾವಾ ಈ ಹೊತ್ತಿಲಿಯೂ ಚಳಿಯೋ..?

      ದೇವರ ಹಿಂದಿಕೆ ಭಕ್ತಿಲಿ ಸುತ್ತ ಬಪ್ಪೋ, ಗೋಪುರಲ್ಲಿ ಎದ್ದು ನಿಂದೊಂಡಿಪ್ಪೋರ ಕಾಂಬೋ.. ‘- ಇದೆಂತ ಸಂಗತಿ…!
      ಆ ಮೈಕಿಲಿ ದೊಡ್ಡ ಬಾಳೆಗೊನೆ ಏಲಂ ಅಪ್ಪದರ ಏಕೆ ಹೇಳದ್ದು. ಹೋದ ವರ್ಷ ನಾಕು ಸರ್ತಿ ನಿಂಗಳ ಹೆಸರು ಕೇಟಿದು ಮೈಕಿಲ್ಲಿ ನಿಂಗೊ ಐವತ್ತು ಪೈಸೆ ಏರ್ಸಿದ್ದಕ್ಕೆ!! – ಚೆನ್ನೈ ವರೆಗೆ ಕೇಳಿದ್ದು ಹೇಳಿರೆ ಕಣ್ಯಾರ ದೇವರ ಮಹಿಮೆ ಎಂತದ್ದು ಹೇಳಿ ಎಲ್ಲೋರಿಂಗೂ ಗೊಂತಕ್ಕಲ್ಲೋ…

    1. ಪುಟ್ಟಕ್ಕಂಗೆ ಧನ್ಯವಾದ,
      ನಿ೦ಗೊ ಪದ್ಯ ಬರವಲೆ ಭಾರೀ ಉಶಾರಿ ಇದ್ದಿ – ನಾವು ಕಾಲೆಳೆತ್ತದರಲ್ಲಿ ಇನ್ನೂ ಉಶಾರಿ ಅಕ್ಕೋ

        1. ಅಣ್ಣಾ… ಅದು ಗೊ೦ತಿಪ್ಪ ವಿಷಯವೇ……;) – ಇದು ನಿಜ
          ( ಸುಮ್ಮನೆ ಹೇಳಿದ್ದು;)) – ಇದು ಮಾತ್ರಾ ಸ್ಸತಲೊಟ್ಟೆ

  9. {ಲೈಟು ಮಾಲೆಯ ತೋರಣ ಇಕ್ಕು
    ಮಕ್ಕಳಾಟದ ಸಾಮಾನೂ ಇಕ್ಕು||೨||
    ಕಡ್ಳೆಮಿಠಾಯಿ ಲಾಯಿಕದ್ದು ಇಕ್ಕು||೨||
    ಮಂಗ್ಳೂರು ಬಂಟನ ಐಸ್ಕ್ರೀಮು ಬಕ್ಕು}

    ಒಪ್ಪ ಆಯಿದು ಇದು…

    1. ಮಾವಾ, ಓದಿ ಒಪ್ಪ ಕೊಟ್ಟದ್ದಕ್ಕೆ ಧನ್ಯವಾದಂಗೊ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×