Oppanna.com

ಕಠೋಪನಿಷತ್ (ಷಷ್ಠ ವಲ್ಲೀ)

ಬರದೋರು :   ಶರ್ಮಪ್ಪಚ್ಚಿ    on   20/02/2012    4 ಒಪ್ಪಂಗೊ

ಆತ್ಮೀಯ ಬೈಲಿಂಗೆ,

ಡಾ।ಮಡ್ವ ಶಾಮ ಭಟ್ಟ

ಡಾ| ಶಾಮ ಭಟ್ಟ, ಮಡ್ವ ಇವು ಬರದ “ಉಪನಿಷತ್ ಗೀತಾಂಜಲಿ” ಪುಸ್ತಕಂದ ಕಠೋಪನಿಷತ್ ಇದರ ಷಷ್ಠ ವಲ್ಲೀ ಕೊಡುತ್ತಾ ಇದ್ದೆ. ಸಂಸ್ಕೃತ ಪಾಠ ಆದ ಕೂಡಲೇ ಅದರ ಕನ್ನಡ ಅನುವಾದ ಗೀತೆ ಬತ್ತ ಹಾಂಗೆ ಜೋಡಿಸಿದ್ದೆ.

ಶರ್ಮಪ್ಪಚ್ಚಿ
~~~~

ಕಠೋಪನಿಷತ್ (ಷಷ್ಠ ವಲ್ಲೀ)

ಊರ್ಧ್ವಮೂಲೋSವಾಕ್ಯಾಖ ಏಷೋಶ್ವತ್ಥಃ ಸನಾತನಃ |

ತದೇವ ಶುಕ್ರಂ ತದ್ಬ್ರಹ್ಮ ತದೇವಾಮೃತಮುಚ್ಯತೇ |

ತಸ್ಮಿಂಲ್ಲೋಕಾಃ ಶ್ರೀತಾಃ ಸರ್ವೇ ತದು ನಾತ್ಯೇತಿ ಕಶ್ಚನ|

ಏತದ್ವೈತತ್ ||೧||

ಯದಿದಂ ಕಿಂಚ ಜಗತ್ ಸರ್ವಂ ಪ್ರಾಣ ಏಜತಿ ನಿಃಸೃತಮ್ |

ಮಹದ್ಭಯಂ ವಜ್ರಮುದ್ಯತಂ ಯ  ಏತದ್ವಿದುರಮೃತಾಸ್ತೇ ಭವಂತಿ ||೨||

ಭಯಾದಸ್ಯಾಗ್ನಿಸ್ತಪತಿ ಭಯಾತ್ತಪತಿ ಸೂರ್ಯಃ|

ಭಯಾದಿಂದ್ರಶ್ಚ ವಾಯುಶ್ಚ ಮೃತ್ಯುರ್ಧಾವತಿ ಪಂಚಮಃ ||೩||

ಇಹ ಚೇದಶಕದ್ಬೋದ್ಧುಂ ಪ್ರಾಕ್ ಶರೀರಸ್ಯ ವಿಸ್ರಸಃ |

ತತಃ ಸರ್ಗೇಷು ಲೋಕೇಷು ಶರೀರತ್ವಾಯ ಕಲ್ಪತೇ ||೪||

ಯಥಾದರ್ಶೇ ತಥಾSSತ್ಮನಿ ಯಥಾ ಸ್ವಪ್ನೇ ತಥಾ ಪಿತೃಲೋಕೇ|

ಯಥಾಪ್ಸು ಪರೀವ ದದೃಶೇ ತಥಾ ಗಂಧರ್ವಲೋಕೇ

ಛಾಯಾತಪಯೋರಿವ ಬ್ರಹ್ಮ ಲೋಕೇ ||೫||

ಇಂದ್ರಿಯಾಣಾಂ ಪೃಥಗ್ಭಾವಮುದಯಾಸ್ತಮಯೌ ಚ ಯತ್|

ಪೃಥಗುತ್ಪದ್ಯಮಾನಾನಾಂ ಮತ್ವಾಧೀರೋ ನ ಶೋಚತಿ ||೬||

ಇಂದ್ರಿಯೇಭ್ಯಃ ಪರಂ ಮನೋ ಮನಸಃ ಸತ್ತ್ವಮುತ್ತಮಮ್ |

ಸತ್ತ್ವಾದಧಿ ಮಹಾನಾತ್ಮಾ ಮಹತೋSವ್ಯಕ್ತಮುತ್ತಮಮ್ ||೭||

ಅವ್ಯಕ್ತಾತ್ತು ಪರಃ ಪುರುಷೋ ವ್ಯಾಪಕೋ ಲಿಂಗ ಏವ ಚ|

ಯಂ ಜ್ಞಾತ್ವಾ ಮುಚ್ಯತೇ ಜಂತುರಮೃತತ್ವಂ ಚ ಗಚ್ಛತಿ ||೮||

ನ ಸಂದೃಶೇ ತಿಷ್ಠತಿ ರೂಪಮಸ್ಯ ನ ಚಕ್ಷುಷಾ ಪಶ್ಯತಿ ಕಶ್ಚನೈನಮ್|

ಹೃದಾ ಮನೀಷಾ ಮನಸಾSಭಿಕ್ಲೃಪ್ತೋ

ಯ ಏತದ್ವಿದುರಮೃತಾಸ್ತೇ ಭವಂತಿ ||೯||

ಯದಾ ಪಂಚಾವತಿಷ್ಠಂತೇ ಜ್ಞಾನಾನಿ ಮನಸಾ ಸಹ|

ಬುದ್ಧಿಶ್ಚ ನ ವಿಚೇಷ್ಟತೇ ತಾಮಾಹುಃ ಪರಮಾಂ ಗತಿಮ್ ||೧೦||

ತಾಂ ಯೋಗಮಿತಿ ಮನ್ಯಂತೇ ಸ್ಥಿರಾಮಿಂದ್ರಿಯಧಾರಾಣಾಮ್ |

ಅಪ್ರಮತ್ತಸ್ತದಾ ಭವತಿ ಯೋಗೋ ಹಿ ಪ್ರಭವಾಪ್ಯಯೌ||೧೧||

ನೈವ ವಾಚಾ ನ ಮನಸಾ ಪ್ರಾಪ್ತುಂ ಶಕ್ಯೋ ನ ಚಕ್ಷುಷಾ|

ಅಸ್ತೀತಿ ಬ್ರುವತೋSನ್ಯತ್ರ ಕಥಂ ತದುಪಲಭ್ಯತೇ ||೧೨||

ಅಸ್ತೀತ್ಯೇವೋಪಲಭ್ದವ್ಯಸ್ತತ್ತ್ವ ಭಾವೇನ ಚೋಭಯೋಃ |

ಅಸ್ತೀತ್ಯೇವೋಪಲಬ್ಧಸ್ಯ ತತ್ತ್ವಭಾವಃ ಪ್ರಸೀದತಿ ||೧೩||

ಯದಾ ಸರ್ವೇ ಪ್ರಮುಚ್ಯಂತೇ ಕಾಮಾ ಯೇSಸ್ಯ ಹೃದಿಶ್ರಿತಾಃ|

ಅಥ ಮರ್ತ್ಯೋSಮೃತೋ ಭವತ್ಯತ್ರ ಬ್ರಹ್ಮ ಸಮಶ್ನುತೇ ||೧೪|

ಯದಾ ಸರ್ವೇ ಪ್ರಭಿದ್ಯಂತೇ ಹೃದಯಸ್ಯೇಹ ಗ್ರಂಥಯಃ |

ಅಥ ಮರ್ತ್ಯೋSಮೃತೋ ಭವತ್ಯೇತಾವದ್ದ್ಯನುಶಾಸನಮ್ ||೧೫||

ಶತಂ ಚೈಕಾ ಚ ಹೃದಯಸ್ಯ ನಾಡ್ಯಸ್ತಾಸಾಂ ಮೂರ್ಧಾನಮಭಿನಿಃಸೃತೈಕಾ|

ತಯೋರ್ದ್ದ್ವಮಾಯನ್ನಮೃತತ್ವಮೇತಿ ವಿಷ್ವಙ್ಜನ್ಯಾ ಉತ್ಕ್ರಮಣೇ ಭವಂತಿ ||೧೬||

ಅಂಗುಷ್ಠ ಮಾತ್ರಃ ಪುರುಷೋಂSತರಾತ್ಮಾ

ಸದಾ ಜನಾನಾಂ ಹೃದಯೇ ಸಂನಿವಿಷ್ಟಃ |

ತಂ ಸ್ವಾಚ್ಛರೀತಾತ್ ಪ್ರವೃಹೇನ್ಮುಂಚಾದಿವೇಷಿಕಾಂ ಧೈರ್ಯೇಣ |

ತಂ ವಿದ್ಯಾಚ್ಛುಕ್ರಮಮೃತಂ ತಂ ವಿದ್ಯಾಚ್ಛುಕ್ರಮಮೃತಮಿತಿ ||೧೭||

ಮೃತ್ಯುಪ್ರೋಕ್ತಾಂ ನಚಿಕೇತೋSಥ ಲಬ್ಧ್ವಾ

ವಿದ್ಯಾಮೇತಾಂ ಯೋಗವಿಧಿಂ ಚ ಕೃತ್ಸ್ನಮ್ |

ಬ್ರಹ್ಮಪ್ರಾಪ್ತೋ ವಿರಜೋSಭೂದ್ವಿಮೃತ್ಯುರನ್ಯೋSಪ್ಯೇವಂ ಯೋ ವಿದಧ್ಯಾತ್ಮಮೇವ||೧೮||

ಶಾಂತಿ ಮಂತ್ರ

ಸಹ ನಾ ವವತು| ಸಹನೌ ಭುನಕ್ತು| ಸಹ ವೀರ್ಯಂಕರವಾವಹೈ|

ತೇಜಸ್ವಿನಾವಧೀತಮಸ್ತು| ಮಾ ವಿದ್ವಿಷಾವಹೈ ||

|| ಓಂ ಶಾಂತಿಃ ಶಾಂತಿಃ ಶಾಂತಿಃ ||

ಕಠೋಪನಿಷತ್- ಆರನೆಯ ವಲ್ಲಿ (ಕನ್ನಡ ಗೀತೆ)

ಬೇರು ಮೇಗಡೆ ರೆಂಬೆ ಕೆಳಗಡೆ ಶಾಶ್ವತಾಸ್ಥಿರ ಜಗವಿದು

ಅದರ ರಚಯಿತ ತೇಜವಂತನು ಹಿರಿಯನೀಶ್ವರ ಅಮರನು

ಲೋಕದಾಶ್ರಯವೆಲ್ಲವವನೇ ಯಾರಿಗಾಗದು ಮೀರಲು

ಈತನೇ ಪರಮಾತ್ಮನು ||೧||

ಪ್ರಾಣ ರೂಪದ ಜಗವಿದೆಲ್ಲವು ಅವನ ದಯೆಯಲಿ ಚಲಿಪುದು

ಅತಿ ಭಯಂಕರ ಮಿಂಚಿನಂತಿಹ; ಆತನರಿತವರಮರರು ||೨||

ಹೆದರಿ ಅಗ್ನಿಯು ಉರಿಯುತಿರುವುದು ಹೆದರಿ ಸೂರ್ಯನು ಉರಿವನು

ಹೆದರಿ ಇಂದ್ರಿಯ ವಾಯು ಚಲಿಪವು ಓಡುತಿರುವುದು ಮೃತ್ಯುವು ||೩||

ದೇಹ ಕಳಚುವ ಮುಂಚೆ ತಿಳಿದರೆ ಆತ್ಮನಾ ಪರಮಾತ್ಮನ

ಅರ್ಹನಾತನು ಪ್ರಗತಿ ಪಥದಲಿ ಪಡೆವನುತ್ತಮ ಜನ್ಮವ ||೪||

ಕಾಂಬ ಕನ್ನಡಿ ತೆರದಿ ಧ್ಯಾನದಿ ಆತ್ಮನೂ ಪರಮಾತ್ಮನು;

ಸ್ವಪ್ನದಂದದಿ ತಾಯಿ ತಂದೆಯ ಲೋಕದಲಿ ಗುರುಹಿರಿಯರ;

ವೇದವಾಣಿಯ ನಡುವೆ ಜನರಲಿ ಬಿಂಬದಂತಿದು ಜಲದಲಿ;

ನೆರಳು ಬಿಸಿಲುಗಳಂತೆ ಮೋಕ್ಷದಿ ಕಾಂಬರವರೀ ತೆರದಲಿ ||೫||

ಬುದ್ಧಿವಂತನು ಇಂದ್ರಿಯುಂಗಳ ಆದಿಯಂತ್ಯವ ತಿಳಿವನು

ದೇಹದಲಿ ತರ ತರ ವಿಕಾರವಿದೆಂದು ದುಃಖಿಸನೆಂದಿಗು ||೬||

ಮನವು ಶ್ರೇಷ್ಠವು ಇಂದ್ರಿಯಗಳಿಗು ಮನಸಿಗಿಂತಲು ಬುದ್ಧಿಯು

ಬುದ್ಧಿಗಿಂತಲು ಹಿರಿಯನಾತ್ಮಾ ಮಹತ್ ಗಿಂತ ಅವ್ಯಕ್ತವು ||೭||

ಪುರುಷ ಶ್ರೇಷ್ಠನವ್ಯಕ್ತಕಿಂತಲು ನಿರಾಕಾರನು ವ್ಯಾಪ್ತನು

ತಿಳಿಯಲಾತನ ಜನ್ಮ ಮುಕ್ತನು ಅಮೃತವುಣ್ಣುವನಮರನು ||೮||

ಸೂಕ್ಷ್ಮನಾತನು ನಿರಾಕಾರನು ಯಾರ ಕಣ್ಣಿಗು ತೋರನು

ಮನನ ಶೀಲನು ನಿಯಮ ಬದ್ಧನು ತಿಳಿಯಲೀತೆರ ಅಮರರು ||೯||

ಪಂಚ ಜ್ಞಾನದ ಇಂದ್ರಿಯಂಗಳು ಮನಸಿನೊಂದಿಗೆ ಸ್ಥಿರದಲಿ

ಬುದ್ಧಿ ನಿಂತರೆ ಚಲನೆಯಿಲ್ಲದೆ ಪರಮ ಗತಿಯಿದು ಎಂಬರು ||೧೦||

ಇಂದ್ರಿಯಂಗಳ ಸ್ಥಿರದ ಧಾರಣೆ ಯೋಗವೆನ್ನುವ ಸ್ಥಿತಿಯಲಿ

ಹುಟ್ಟು ನಾಶಗಳಿಹುದು ಜ್ಞಾನದ’ ಇರದು ಆಲಸ ಮನದಲಿ ||೧೧||

ಮಾತಿನಿಂದಲು ಮನಸಿನಿಂದಲು ಕಣ್ಣಿನಿಂದಲು ದೊರಕದು

ಯೋಗದನುಭವ ’ಇಹನು’ ಎನ್ನುವ ಧೃಢತೆಯಿಂದಲೆ ಸಾಧ್ಯವು ||೧೨||

’ಆತನಿರುವನು’ ಧೃಢತೆಯೀತೆರ ಆತ್ಮನಾ ಪರಮಾತ್ಮನ

ತತ್ತ್ವ ಭಾವನೆಯಲ್ಲಿ ಆಸ್ತಿಕವಾದ ಜ್ಞಾನವು ನಿರ್ಮಲ ||೧೩||

ಹೃದಯದೊಳಗಿನ ಕಾಮವೆಲ್ಲವ ತೊರೆವನೆಂದಿಗೆ ಮನುಜನು

ಅಮರನಾಗುವನಿದುವೆ ಲೋಕದಿ ಬ್ರಹ್ಮದನುಭವ ಪಡೆವನು ||೧೪||

ಎಂದು ಹೃದಯದ ಗ್ರಂಥಿಯೆಲ್ಲವು ಬಿಚ್ಚಿಹೋಗುತಲಿರುವವು

ಅಮರನಾಗುವ ಮನುಜನಾಗಲೆ; ಇದುವೆ ತಾತ್ತ್ವಿಕ ಬೋಧೆಯು ||೧೫||

ನೂರ ಒಂದಿವೆ ನಾಡಿ ಹೃದಯದಿ; ನೆತ್ತಿ ಭೇದಿಸಿ ಯಾವುದು

ಮೇಲೆ ಹರಿವುದಮೃತವಾಹಿನಿ; ಇತರ ಕಡೆ ಸಾಮಾನ್ಯವು ||೧೬||

ಅಂಗ ಅಂಗದಿ ಜೀವ ತುಂಬಿಹ ಅಂತರಾತ್ಮನು ಅಡಗಿಹ

ಧಾನ್ಯ ಕಾಳಿನ ತೆರದಿ ಧೈರ್ಯದಿ ಹೊಟ್ಟಿನಿಂ ಬೇರ್ಪಡಿಸಲಿ

ಆಗ ಜೀವವು ತೇಜವಂತನು ಅಮರನೆಂಬುದ ತಿಳಿಯಲಿ ||೧೭||

ಮೃತ್ಯು ಮುಖದಿಂ ದೊರೆತ ವಿದ್ಯೆಯ ಯೋಗ ವಿಧಿಯಿಂದರಿಯಲು

ಪಾಪ ಕಳೆಯುತ ಮೃತ್ಯು ಜಯಿಸುತ ಮುಕ್ತನಾ ನಚಿಕೇತನು

ಇತರರೀತೆರ ಆತ್ಮ ಯೋಗವ ಪಡೆದುಕೊಂಡರೆ ಮುಕ್ತರು ||೧೮||

ಶಾಂತಿ ಮಂತ್ರ

ಜತೆಗೆ ದೇವನೆ ರಕ್ಷಿಸೆಮ್ಮನು ನಾವು ಉಂಬೆವು ಜತೆಯಲಿ

ಕಾರ್ಯಗೊಂಬೆವು ವೀರತನದಲಿ, ವಿದ್ಯೆ ಕಲಿವೆವು ತೇಜದಿ

ದ್ವೇಷವೆಂದಿಗು ಬಿಡೆವು ನುಸುಳಲು ಶಾಂತಿ ಶಾಶ್ವತ ನೆಲೆಸಲಿ

ಶಾಂತಿಯಾಗಲಿ! ಶಾಂತಿಯಾಗಲಿ!! ಶಾಂತಿ ಶಾಶ್ವತ ನೆಲಸಲಿ !!!

“ಪಂಚಮ ವಲ್ಲೀ” ಗೆ ಇಲ್ಲಿ ನೋಡಿ

ಉಪನಿಷತ್ ಮಾಲಿಕೆಲಿ ಇದು ಅಕೇರಿಯಾಣ ಕಂತು.

ಸಂಗ್ರಹ- ಉಪನಿಷತ್ ಗೀತಾಂಜಲಿ, ಡಾ| ಮಡ್ವ ಶಾಮ ಭಟ್ಟ

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

4 thoughts on “ಕಠೋಪನಿಷತ್ (ಷಷ್ಠ ವಲ್ಲೀ)

  1. ತಾಳ್ಮೆಲಿ ಕೂದು, ಬೈಲಿಂಗೆ ಇಷ್ಟು ಸಂಗ್ರಹ ಮಾಡಿಕೊಟ್ಟ ಶರ್ಮಪ್ಪಚ್ಚಿಗೆ ಮನಸಾ ಧನ್ಯವಾದಂಗೊ. ಉಪನಿಷತ್ ಮಾಲಿಕೆಯ ಎಲ್ಲಾ ಕಂತುಗಳೂ ನಿರಂತರವಾಗಿ ಚೆಂದಕೆ ಬೈಂದು.

  2. “ಮಾತಿನಿಂದಲು ಮನಸಿನಿಂದಲು ಕಣ್ಣಿನಿಂದಲು ದೊರಕದು

    ಯೋಗದನುಭವ ’ಇಹನು’ ಎನ್ನುವ ಧೃಢತೆಯಿಂದಲೆ ಸಾಧ್ಯವು “

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×