Oppanna.com

ಗೋಕರ್ಣಂದ ಕೊಡೆಯಾಲಕ್ಕೆ…

ಬರದೋರು :   ಶೇಡಿಗುಮ್ಮೆ ಪುಳ್ಳಿ    on   28/02/2012    12 ಒಪ್ಪಂಗೊ

ಕಳುದ ವಾರ ಕೊಡೆಯಲಂದ ಗೋರ್ಣಕ್ಕೆ ಹೋದ್ದರ ಹೇಳಿದ್ದು. [ ಸಂಕೋಲೆ ]

ಇದಾ ಇಲ್ಲಿ ಬೆಳಗ್ಗ ಬೇಗ ಎದ್ದು ಮಹಾಬಲೇಶ್ವರನ ದರುಶನ ಪಡೆದು, ಅಮೃತಾನ್ನ ಪ್ರಸಾದವಾಗಿ ಕೊಟ್ಟ ಅವಲಕ್ಕಿ ಉಪ್ಪಿಟ್ಟು ತಿಂದು ಕಾಪಿ ಕುಡುದು ಗೋಕರ್ಣಂದ ಹೆರಟು ಕೊಡೆಯಾಲಕ್ಕೆ ಬಪ್ಪ ಸುದ್ದಿಯ ಹೇಳ್ತಾ ಇದ್ದು ನಾವು.

ಬೇಗನೆದ್ದತ್ತು ಮಿಂದು ಹೆರಟತ್ತು
ಸರತಿ ಸಾಲಿಲಿ ನಿಂದತ್ತು
ಚೀಟಿ ಮಾಡ್ಸಿತ್ತು ಒಳಂಗೆತ್ತಿತ್ತು
ಪೂಜೆ ಭಟ್ಟರ ಕಂಡತ್ತು

ನೀರು ಎತ್ತಿತ್ತು ಕಲಶ ತಂದತ್ತು
ಸಂಕಲ್ಪವ ಮಾಡಿತ್ತು
ಸಾಲಿಲಿ ನಿಂದತ್ತು ಅಭಿಷೇಕವ ಮಾಡಿತ್ತು
ಆತ್ಮಲಿಂಗವ ಮುಟ್ಟಿತ್ತು

ಸುತ್ತು ಹಾಕಿತ್ತು ಕ್ಷೇತ್ರ ನೋಡಿತ್ತು
ಮನಸ್ಸು ಹರಹರ ಹೇಳಿತ್ತು
ತಾಮ್ರ ಗೌರಿಗೆ ಅಡ್ಡಬಿದ್ದತ್ತು
ಕಾಣಿಕೆ ಹಾಕಿಕ್ಕಿ ಹೆರಟತ್ತು

ಕಾಪಿ ಕುಡುದತ್ತು ಅಲ್ಲಿಂದ ಹೆರಟತ್ತು
ಕಾರು ಇತ್ತಂಗೆ ತಿರುಗಿತ್ತು
ದಾರಿಲಿ ಉಪ್ಪಿನ ಗದ್ದೆ ನೋಡಿತ್ತು
ಲೋರಿಲಿ ಒಂದಾನೆ ಸಿಕ್ಕಿತ್ತು

ಸೌತೆ ಕೊಟ್ಟತ್ತು ಹಣ್ಣು ಕೊಟ್ಟತ್ತು
ಸೊಂಡಿಲಾಡ್ಸುದು ನೋಡಿತ್ತು
ಹೊತ್ತು ಮಧ್ಯಾನ್ನಕ್ಕಪ್ಪಗ
ಇಡಗುಂಜಿಗೆತ್ತಿತ್ತು

ದರುಶನಾದಿಕ್ಕಿ ಊಟ ಮಾಡಿಕ್ಕಿ
ಕೊಲ್ಲೂರಿಂಗೆರಟತ್ತು
ಹೋವುತ್ತ ದಾರಿಯ ಸೊಬಗು ನೋಡುತ್ತ
ನಮ್ಮ ವಾಹನ ಸಾಗಿತ್ತು

ನಾಸಿಕೆಂದ ಹೆರಟ ಭಕ್ತರೊಟ್ಟಿಂಗೆ
ಇನ್ನೊಂದಾನೆಯ ನೋಡಿತ್ತು
ಚಿಟ್ಟೆ ಪಾರ್ಕಿನ ಗೇಟು ನೋಡಿಕ್ಕಿ
ದೇವಸ್ಥಾನಕ್ಕೆತ್ತಿತ್ತು

ಸುತ್ತು ಹಾಕಿತ್ತು ಕಾಣಿಕೆ ಹಾಕಿತ್ತು
ಮುಕಾಂಬಿಕೆಯ ನೋಡಿತ್ತು
ಮುಂದೆ ಸಾಗಿತ್ತು ಎಡಕ್ಕೆ ತಿರುಗಿತ್ತು
ರಜಾ ಕೆಳಂಗೆ ಇಳುದತ್ತು

ಹಟ್ಟಿಯಂಗಡಿ ಗೆಣವತಿಗೆ ನಮಿಸಿತ್ತು
ಶಿವನ ನೋಡಿಕ್ಕಿ ಹೆರಟತ್ತು
ಆನೆಗುಡ್ಡೆಯ ಗುಡ್ಡೆ ಹತ್ತಿತ್ತು
ಗೆಣವತಿಗೆ ಅಡ್ಡ ಬಿದ್ದತ್ತು

ಪುನರ್ಪತಿಷ್ಠೆಯ ಲೆಕ್ಕಲ್ಲಿ
ಹೋಮಹವನಂಗ ಇದ್ದತ್ತು
ಕೆಳಂಗಿಳುದತ್ತು ಕಾಲು ತೊಳುದತ್ತು
ಗಂಗಾಧರಂಗೆ ನಮಿಸಿತ್ತು

ದಾರಿ ತಿರುಗಿತ್ತು ಮುಂದೆ ಸಾಗಿತ್ತು
ಬಪ್ಪನಾಡಿಂಗೆತಿತ್ತು
ಒಂಬತ್ತನೆಯ ಕ್ಷೇತ್ರಲ್ಲಿ
ದುರ್ಗಾಪರಮೇಶ್ವರಿಯ ನೋಡಿತ್ತು

ಬಾಳ ಪಯಣದ ದಾರಿ ಮಧ್ಯಲ್ಲಿ
ಕ್ಷೇತ್ರ ದರುಶನ ಮಾಡಿತ್ತು
ಮಹಬಲೇಶ್ವರನ ನೋಡಿದ ದಿನ
ದುರ್ಗಾಪರಮೇಶ್ವರಿಯ ನೋಡಿಕ್ಕಿ ಮುಗುದತ್ತು

ದೇವ ದರಶನ ಪಡಕ್ಕೊಂಡು ಇರುಳಿಂಗೆ ಕೊಡೆಯಾಲಕ್ಕೆತ್ತಿ ನಮ್ಮ ಗೂಡು ಸೇರಿಯೊಂಡತ್ತು.

ಕೆಲವು ಪಟಂಗೊ..

12 thoughts on “ಗೋಕರ್ಣಂದ ಕೊಡೆಯಾಲಕ್ಕೆ…

  1. ಶೇಪು ಭಾವನ ಯಾತ್ರೆ ರೈಸಿತ್ತು.

  2. ಗೋಕರ್ಣಂದ ಮಂಗಳೂರಿನ ಹಾದಿಲಿ ಇಪ್ಪ ಕ್ಷೇತ ದರ್ಶನದ ಪದ್ಯಂಗೊ ಲಾಯಿಕ ಆಯಿದು.
    ಒಂದರಿ ಎಲ್ಲಾ ಕ್ಷೇತ್ರಂಗಳ ನೆನಪು ಮಾಡಿದ ಹಾಂಗೆ ಆತು.

  3. ಒಪ್ಪ ಆಯಿದನ್ನೆ ಪದ್ಯ.

  4. ಕೇತ್ರ ದರ್ಶನ ಮಾಡ್ತಾ ತಿರುಗಿ ಕೊಡೆಯಾಲಕ್ಕೆ ಬಂದಂತಹ ಪದ್ಯ ಲಾಯಕಾತು. ವಿಶೇಷವಾದ ಫೊಟೊಂಗಳೂ ಚೆಂದ ಬಯಿಂದು.

  5. ಇಡಗು೦ಜಿಗೆತ್ತಿತ್ತು ಇಡು ಗ೦ಜಿ ಹೇಳಿತ್ತು
    ತೀರ್ಥಯಾತ್ರೆಯ ಮು೦ದುವರಿಸಿತ್ತು
    ಮೋರೆಯಿಡೀಕ ಪ್ರಸಾದ ಹಾಕಿತ್ತು
    ಅ೦ತೂ ಇ೦ತೂ ಶೇಪು ಪದ್ಯ ರೈಸಿತ್ತು ..

  6. ಮರುದಿನ…ಮರುದಿನ… ಹೇಳಿ ಸುಮಾರು ದಿನದ ಪದ್ಯ ಇಕ್ಕು ಹೇಳಿ ಗ್ರೆಷಿತ್ತಿದ್ದೆ… ‘ಕೊಡೆಯಾಲಂದ ಗೋಕರ್ಣಕ್ಕೆ’ , ‘ಗೋಕರ್ಣಂದ ಕೊಡೆಯಾಲಕ್ಕೆ’ ಹೇಳಿ ಮುಗಿಶಿದಿರನ್ನೇ…

    1. ಯಾವುದರ್ಲಿ ಹೇಳಿ ಹೇಳದ್ದು ಒಳ್ಳೆದಾತು.!!

  7. [ಬಾಳ ಪಯಣದ ದಾರಿ ಮಧ್ಯಲ್ಲಿ ಕ್ಷೇತ್ರ ದರುಶನ ಮಾಡಿತ್ತು] – ಇದು ಹೇಳಿದ್ದು ಲಾಯಕ ಆಯ್ದು.

    ಬಪ್ಪ ದಾರಿಲಿ ಹಲವು ದೇವಸ್ಥಾನ ಸಂದರ್ಶನ ಮಾಡಿಗೊಂಡು ಬಂದದು ಇನ್ನೂ ಲಾಯಕ ಆಯ್ದು. ಒಟ್ಟಿಂಗೆ ಹೋಗಿಪ್ಪಗ ಹೀಂಗಿಪ್ಪ ಸಿಕ್ಕ ಸಂದರ್ಭ ಲಾಯಕ ಸದುಪಯೋಗ ಪಡಿಸಿಗೊಂಡಿ ಹೇಳಿ ಒಂದು ಶ್ಲಾಘನೆ. ಆದರೆ ಇಡಗುಂಜಿಗೆ ಎತ್ತಿತ್ತು ಹೇಳಿಯಪ್ಪಗ ಎದೆ ಧಸಕ್ಕಾತು ಒಂದರಿಯಂಗೆ ಆತೋ!! ಹ್ಮ್ಮ್ಮ್ಮ್ಮ್

    ಆನೆ ಪಟ ಸಹಿತ ಎಲ್ಲ ಪಟಂಗೊ ಲಾಯಕ ಆಯ್ದು. ಪದ್ಯಕ್ಕೊಂದು ಒಪ್ಪ ಹೇಳಿತ್ತ್ತು -‘ಚೆನ್ನೈವಾಣಿ’

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×