Oppanna.com

ದೊಡ್ಡ ಭಾವನ ಕಾರು

ಬರದೋರು :   ಶೇಡಿಗುಮ್ಮೆ ಪುಳ್ಳಿ    on   13/03/2012    17 ಒಪ್ಪಂಗೊ

ನೇನೋ ಕಾರೊಂ
ದು ಬಯಿಂದು ನಮ್ಮ
ಬಯಲಿನ ದೊಡ್ಡ ಮನೆಯ ಮುಂದೇ
ಅದರೊಡೆಯ ಯಾರು
ಕೇಳಿದರೆ ದೊಡ್ಡ
ಮಾವನ ಮಗ ದೊಡ್ಡ ಭಾವನೇ

ಚಿನ್ನದ ಬಣ್ಣದ
ಚೆಂದದ ಕಾರದು
ನಿಲ್ಲುಗು ಮಾವನ ಮನೆ ಮುಂದೇ
ಹೆರಟರೆ ಗೌಜಿಲಿ
ದಾರಿಯ ನೆಡುಕೇ
ಓಡುವ ಚಿನ್ನದ ಜಿಂಕೆಯದೂ

ಪೇಂಪೇಂ ಹೇಳುವ
ಹೋರನು ನಾಕೂ
ಹಾಕಿದವರ ಎದುರಂಗೆಯೇ
ಹಿಂದಂಗೆ ಕಾಂಬ
ಕನ್ನಡಿ ಮೂರೂ
ಹಾಕಿದ್ದವದ ಒಳಹೆರವೇ

ಬಯಲಿನ ಜೆಂಬಾ
ರಕ್ಕೆ ಹೊರಟ ಒ
ಪ್ಪಣ್ಣಂಗೆ ಹಿಂದಿನ ಸೀಟಡ
ಮುಂದಿನ ಎರಡೂ
ಸೀಟುಗೊ ಇಪ್ಪದು
ದೊಡ್ಡಳಿಯಂಗೆ ಸರಿಯಕ್ಕೂ

ಮಳೆಯಾ ಕಾಲ
ಕ್ಕೆ ತಿರುಗುಲೆ ಹೇಳಿ
ಕನ್ನಡಿ ಉದ್ದುಲೆ ಕೋಲೆರಡೂ
ಬಿಸಿಲಿಲಿ ನಿಂಬಗ
ಬಣ್ಣವ ಕಾವಲೆ
ಚೆಂದದ ಕವರೇ ಬೇಕಕ್ಕೂ

ಚಾವಡಿ ಕರೆಯಾ
ಕೊಟ್ಟಗೆ ಈಗಾ
ಸದ್ಯಕ್ಕೆ ಅದರ ಅರಮನೆಯೂ
ಮುಂದಂಗೊಂದು
ಆಗದ್ದರೆ ಆ
ಗ ಕಾರಿಗೆ ಒಂದು ಹೊಸಮನೆಯೂ

ಸೂಚನೆ:
ಈ ಪದ್ಯಲ್ಲಿಪ್ಪ ಶರ ಶೇಪು ಬಂಧ ಸರಿಯಾಯಿದೋ ಎಂತಾರು ಅಂದಾಜು ಅವುತ್ತೋ

ಚಿತ್ರ ಕೃಪೆ: ಟಾಟಾ ಮೋಟಾರ್ಸ್

17 thoughts on “ದೊಡ್ಡ ಭಾವನ ಕಾರು

  1. ದೊಡ್ಡಭಾವನ ಕಾರು ಭಯಂಕರದ್ದು..ಸಣ್ಣ ಮಿನಿ ಲೋರಿ ಕೊಂಡೋಪ ಸಾಮಾನುಗಳ ಇದರಲ್ಲಿ ಕೊಂಡೋಪಲಾಗ್ತು..ಜೆನವು ಹಾಂಗೆ ಕಾರು ಸಣ್ಣ ಅದರು ೭ ೮ ಹಜೆನ ಹಿಡಿತ್ತು..ವಿಶೇಷ ಹೇಳಿರೆ ದೊಡ್ಡಮಾಣಿ ಹೊಂಡಂದ ಮೇಲಂಗೆ ಹತ್ತುತ್ತು ನೂಕದ್ದೆ..

  2. ಪದ್ಯ ಫಶ್ಟ್ ಆಯಿದು. ಶಟ್ಪದಿಯ ಪ್ರಯತ್ನ ಒಳ್ಳೆದಾಯಿದು
    ಇನ್ನೂದೆ ಬರಳಿ ಹೀಂಗಿಪ್ಪದು

    1. ಅಕ್ಕನ ಆಸೆ ನೋಡಿರೆ ಆ ರೋಡ್ ನಾಯಿಗೊ ಓಡ್ಸಿಗೊಂಡು ಬಪ್ಪ ಉಪದ್ರಕ್ಕೂ ಆತು, ಹಾಲು ತಪ್ಪಲೂ ಆತು ಅಪ್ಪೋ!!.

  3. ಪದ ರೈಸಿದ್ದು ಶೇಪು ಭಾವಾ!
    ಮತ್ತೆಂತಾತು?
    ಈಗ ಬೈಲಕರೆಂದ ದೊಡ್ಡಮಾಣಿ ಒರೆಗಾಣ ಮಾರ್ಗ ಪೂರ ಹೊಡಿ ಆಗಿ, ಈಗ ಧೂಳು ಒಳ್ಳೆತ ಏಳ್ಸು –
    ದೊಡ್ಡಳಿಯ ಷ್ಟೇರಿಂಗು ತಿರುಗುಸುಸ್ಸು;
    ದೊಡ್ಡಮಾವಂಗೆ ಹೋರ್ನು ಹರಟೆಅಪ್ಪದು –
    ಇದೆಲ್ಲವೂ ಬರಳಿ ಬರಳಿ.

    ದೊಡ್ಡಮಾಣಿಯ ದೊಡ್ಡ ಗುಡ್ಡೆಯ ಇಳಿತ್ತ ದೊಡ್ಡ ಪಟವೇಯೋ ಅದು. 😉

  4. ದೊಡ್ಡ ಭಾವನ ನೇನೋ ಕಾರಿನ ವರ್ಣನೆ ತುಂಬಾ ಲಾಯಕ ಆಯಿದು…

    ನಮ್ಮ ಬೈಲಿನ ಇಂಜಿನಿಯರ್ ಗ ಎಲ್ಲ ತಲೆಕರ್ಚು ಮಾಡಿ ಸೋಲಾರ್ ಶಕ್ತಿ ಮತ್ತು ಜೈವಿಕ ಇಂಧನಗಳ ಬಳಸಿ ಊರಿಂಗೆ ಅಪ್ಪ ಹಾಂಗೆ ಅತ್ಯುತ್ತಮ ಕಾರ್ ಬಂದರೆ ಎಷ್ಟು ಒಳ್ಳೇದಿತ್ತು… ಈ ವಿಷಯಲ್ಲಿ ಆಸಕ್ತಿ ಇಪ್ಪವು ಇನ್ನೂ ಇನ್ನೂ ಆಸಕ್ತಿ ಬೆಳೆಶಿಗೊಳ್ಳಿ… ಆಸಕ್ತಿ ತೀವ್ರವಾಗಿ ತಪಸ್ಸು ಆದಪ್ಪಗ ಅರ್ಥಿಕ ನೆರವು ಮತ್ತು ಅವಕಾಶಂಗ ತನ್ನಿಂತಾನೆ ಒದಗಿ ಬತ್ತು…

  5. ಶೇಪು ಷಟ್ಪದಿ-ಹೇಳಿ ಹೆಸರು ಮಡುಗುವೊ.ಶರ ಷಟ್ಪದಿಯ ಬಂಧ ಸರಿಯಾಗಿ ಬಾರದ್ದರೂ ಕವಿತೆ ಲಾಯ್ಕ ಆಯಿದು.ಕಾರು ಚೆಂದ ಇದ್ದು.

  6. ಬೈಲಿಲಿ ಪದ್ಯಂಗೊ ಒಂದರಿಂದ ಒಂದು ರೈಸಿಗೊಂಡಿದ್ದು. ಓದಿ ಕುಶೀ ಆತು. ಅಭಿನಂದನೆಗೊ.

  7. ಕೊಶಿ ಆತು ಶೇಪು ಭಾವಾ,
    ಪದ್ಯವೂ… ನೇನೋ ಕಾರೂ…
    ಕಾಂಬಲೆ ಕೆಪ್ಪೆಯ ಹಾಂಗೆ ಸಣ್ಣ ಆದರೂ…
    ದೊಡ್ಡಮಾವನ ದೊಡ್ಡ ಸಂಸಾರವ ಕೂರುಸಿಯೊಂಡು ಹೋಪಲೆ ತಕ್ಕ ಜಾಗೆ ಅದರ ಒಳದಿಕೆ ಇದ್ದು.
    ನಮ್ಮ ಊರ ಮಾರ್ಗಂಗೊಕ್ಕೆ ಅದರ ಶಿಫಾರಸು ಮಾಡ್ಳೆ ಅಡ್ಡಿ ಇಲ್ಲೆ.
    🙂

    1. ಕಾರಿನ ಫೊಟೊವುದೆ ಬೈಲಿಂಗೆ ಬಂದದು ಲಾಯಕಾತು. ಕಾರು ದೊಡ್ಡಮಾಣಿಗೆ ಇಳಿತ್ತ ಹಾಂಗೇ ಕಾಣ್ತಾ ಇದ್ದು.

  8. ದೊಡ್ಡ ಬಾವನ ಹೊಸ ಸಣ್ಣ ಕಾರಿಂಗೆ ಸರಿಯಾದ ಶೇಪು ಕೊಟ್ಟಿದ ಶೇಪು ಬಾವ. ಕಾರಿಲ್ಲಿ ಮುಂದಾಣ ಸೀಟಿಲ್ಲಿ ಕೂಬ್ಬಲೆ ನಾನೋ, ನೀನೋ ಹೇಳಿ ದೊಡ್ಡಕ್ಕಂಗೂ, ದೊಡ್ಡಳಿಯಂಗೂ ಜಗಳ ಅಕ್ಕೋ ಹೇಳಿ. ಹೊಸ ಕಾರಿಲ್ಲಿ ದೊಡ್ಡ ಭಾವನ ಪಯಣ ಸುಖಮಯವಾಗಿರಲಿ.
    ಪದ್ಯ ಏವ ಆರುಕಾಲಿನ ಸೆಡ್ಕನ ರೂಪಲ್ಲಿದ್ದು ಹೇಳಿ ಸರೀ ಗೊಂತಾವ್ತಿಲ್ಲೆ. ಪದ್ಯ ಅಂತೂ ಗಮ್ಮತ್ತಿತ್ತು.

    1. ಪದ್ಯದ ಅಕೆರಿಗೆ ಸೂಚನೆಲಿ ” ಶರ ಶೇಪು ಬಂಧ ” ಹೇದು ಬರದ್ದನ್ನೆ ಮಾವ°…..

      1. “ಶರ ಸೇತು ಬಂಧ” ಹೇಳಿ ಪ್ರಸಂಗ ಒಂದಿದ್ದಾನೆ, ಅದರ ಎಂತೋ ತಿರ್ಪಿ ಬರದ್ದದು ಹೇಳಿ ಆನು ಗ್ರೇಶಿದೆ. ಬಾಣ ಸರೀ ಮಂಡಗೆ ಹೊಕ್ಕತ್ತಿಲ್ಲೆ.

  9. ಶೇಪು ಭಾವನ ಆರು ಕಾಲಿಂಗೆ ಒಳ್ಳೆ ಶೇಪು ಬತ್ತಾ ಇದ್ದು.
    ಒಳ್ಳೇ ಪ್ರಯತ್ನ ಭಾವ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×