- ನೀ ಶುದ್ದಿಯೊಳಗೋ…. ನಿನ್ನೊಳು ಶುದ್ದಿಯೋ… - April 17, 2020
- ಕನಸಿನ ಸೀರೆ ಕೈಸೇರಿತ್ತು - April 22, 2017
- ಎನ್ನ ಕನಸಿನ ಕೂಸು ಹುಟ್ಟಿತ್ತಿದಾ….. - May 12, 2013
ಎಂಗಳಲ್ಲಿ ಕರೆತ್ತ ದನ ಮತಿ ಮಾಡಿದ್ದು.
ಇನ್ನೊಂದು ತಂದರೆ ಕರವದು ಆರು ಹೇಳಿ ಚಿಂತೆ. ಎನಗೆ ಕರವಲೆ ಗೊಂತಿಲ್ಲೆ, ಅತ್ತೆಗೆ ಕೈ ಬೇನೆ ಸುರುವಾಯಿದು – ಗುಣ ಅಪ್ಪನ್ನಾರ ಕರವಲೆ ಎಡಿಯ. ಹಾಂಗಾಗಿ ರಜ್ಜ ಸಮಯ ಕಳುದು ತೆಗವದು ಹೇಳಿ ಆಲೋಚನೆ ಮಾಡಿತ್ತು.
ಅಷ್ಟನ್ನಾರಕ್ಕೆ ಹಾಲಿಲ್ಲದ್ದೆ ಎಂತ ಮಾಡುದು…? ದೇವರ ನೈವೇದ್ಯಕ್ಕೂ ಹಾಲು ಇಲ್ಲೆ ಹೇಳಿ ಆವುತ್ತಿದಾ…?
ಪೇಕೆಟ್ಟು ಹಾಲು (ಎಂಗೊಗೂ,ದೇವರಿಂಗೂ) ಮೆಚ್ಚುತ್ತಿಲ್ಲೆ!!!!!!
ಎಂತ ಮಾಡುದು ಹೇಳಿ ಚಿಂತೆ ಮಾಡ್ಯೊಂಡು ಇಪ್ಪಗ ಒಂದು ಜಂಬರಲ್ಲಿ ನಮ್ಮ ಮಾಲಿಂಗಣ್ಣ ಸಿಕ್ಕಿದವು.
ಅವನತ್ತರೆ ಶುದ್ದಿ ಹೇಳುಗ ಅವ ಹಾಲು ಹೋಟ್ಳಿಂಗೆ ಕೊಡ್ತ ಹೇಳಿ ಎನ್ನ ಅತ್ತೆಗೆ ಗೊಂತಾತು .
ಅಂಬಗ ಎಂಗೊಗೆ ಕೊಡುವಿರಾ ಹೇಳಿ ಅತ್ತೆ ಕೇಳಿಯೇ ಬಿಟ್ಟವು.
ಕೊಡ್ಳಕ್ಕು – ಆದರೆ ಎಂಗಳಲ್ಲಿಂದ ಹಾಲು ನಿಂಗಳಲ್ಲಿಗೆ ಎತ್ತುಸುದು ಹೇಂಗೆ…? ಎಂಗಳ ಹೊಡೆಯೇ ಬೇರೆ….ನಿಂಗಳ ಹೊಡೆಯೇ ಬೇರೆ…!!!! ಹೇಳಿ ಮಾಲಿಂಗಣ್ಣನ ಚಿಂತೆ.
ಅತ್ತೆ ಹೇಳಿದವು ಹೇಂಗೂ ಹೋಟ್ಳಿಂಗೆ ಹಾಲು ಕೊಡ್ತಿರನ್ನೆ ಇನ್ನೊಂದು ಪಾತ್ರೆಲಿ ಎಂಗೊಗಿಪ್ಪದರ ಅಲ್ಲಿಯೇ ಮಡುಗಿದರಾತು, ಎನ್ನ ಸೊಸೆ ಮಗನ ಶಾಲೆಗೆ ಬಿಡ್ಳೆ ಹೋಗಿ ಬಪ್ಪಗ ತೆಕ್ಕೊಂಡು ಬಕ್ಕು ಆಗದಾ…? ಹೇಳಿ ಕೇಳಿದವಡ.
ಮಾಲಿಂಗಣ್ಣಂಗೆ ಸಮಾಧಾನ ಆಯಿದಿಲ್ಲೆ. ನಿಂಗೊಗೆ ಇಪ್ಪದರ ನಿಂಗಳ ಕೈಲಿಯೇ ಒಪ್ಪುಸಿದರೆ ಎನಗೆ ಸಮಾಧಾನ. ಅಲ್ಲಿ ಇಲ್ಲಿ ಮಡುಗಿದರೆ ಲಾಯ್ಕ ಆವುತ್ತಿಲ್ಲೆ ಹೇಳಿ ಹೇಳಿದವಡ .
ಅಂಬಗ ಎಂತ ಮಾಡುದು ಹೇಳಿ ಅತ್ತೆಗೂ ಚಿಂತೆ ಶುರುವಾತು.
ಮಾಲಿಂಗಣ್ಣ ಹೇಳಿದವಡ ಬಸ್ಸು ಇಳಿತ್ತಲ್ಲಿ ವರೆಗೆ ಆನು ತಂದು ಕೊಡ್ತೆ. ಆ ಸಮಯಕ್ಕೆ ನಿಂಗಳ ಸೊಸೆ ಅಲ್ಲಿಗೆ ಬಂದರಾತು ಆಗದೋ….? ಹೇಳಿ .
ಉದಿಯಪ್ಪಗಾಣ ಹೊತ್ತು ಸೊಸೆ ಗಡಿಬಿಡಿಲಿ ಇರ್ತು ಎಂತ ಮಾಡುದು ಹೇಳಿ ಅದನ್ನೇ ಕೇಳ್ತೆ ಹೇಳಿ ಹೇಳಿಕ್ಕಿ ಮನಗೆ ಬಂದವು .
ಅದಾ ಈಗ ಎನ್ನ ಬುಡಕ್ಕೇ ಬಂತಿದಾ…..
ಸುದ್ದಿ ಗೊಂತಪ್ಪಗ ಎಂತ ಮಾಡುದು ಹೇಳಿ ಎನಗೆ ಚಿಂತೆ ಶುರುವಾತು.
ಮನೆಂದ ಬಸ್ಸು ಇಳಿತ್ತಲ್ಲಿಂಗೆ 2 ಕಿಲೋಮೀಟರ್ ಆವುತ್ತು. ಉದಿಯಪ್ಪಗ ಎದ್ದಿಕ್ಕಿ ಹೋದರೆ ತಿಂಡಿಯ ತಯಾರಿ ಆಯೆಕ್ಕು, ಉದಿಯಪ್ಪಗಾಣ ಪೂಜೆಗೆ ತಯಾರಿ ಮಾಡೆಕ್ಕು, ಮಿಂದು ಪೂಜೆಗೆ 2 ಕುಡ್ತೆ ಅಕ್ಕಿ ನೈವೇದ್ಯ ತಯಾರಿ ಮಾಡೆಕ್ಕು, ಮಗನ ಏಳ್ಸೆಕ್ಕು, ಶಾಲೆಗೆ ಹೆರಡ್ಸೆಕ್ಕು.
ಇದರೊಟ್ಟಿಂಗೆ ಇನ್ನು ಹಾಲು ತಪ್ಪಲೆ ಹೋಪ ಕೆಲಸವೂ ಶುರುವಾತನ್ನೆ ಹೇಳಿ ಆಲೋಚನೆ ಮಾಡುಗ, ಹೇಂಗೂ ರಥ (ಸ್ಕೂಟರ್) ಇದ್ದನ್ನೆ ಒಂದರಿ ಡುರೂನೆ ಹೋಗಿ ಬಂದರಾತು ಹೇಳಿ ಅತ್ತೆಯೇ ಹೇಳಿದವು.
ಅಪ್ಪು ಹೇಳಿ ತೋರಿತ್ತು. ಒಳ್ಳೆ ಹಾಲು ಸಿಕ್ಕುಗ ಬಿಡುದು ಬೇಡ ಹೇಳಿ ಒಪ್ಪಿದೆ.
ಎಂಗಳ ಮನೆಗೆ ಅರೇ ನೆಂಟ್ರು ಬರಲಿ ಉದಿಯಪ್ಪಗ ಒಂದು ವಾಕಿಂಗ್ ಹೋಪ ಕ್ರಮ ಇದ್ದು.
ಎಂತ ಹೇಳಿರೆ ಎಂಗಳ ಗೇಟಿನ ಹತ್ತರೆ ಹೋದರೆ ಸೂರ್ಯೋದಯ ಅಪ್ಪದು ತುಂಬ ಚೆಂದ ಕಾಣುತ್ತು. ಗುಡ್ಡೆಲೆಲ್ಲ ನವಿಲುಗ ಓಡಡ್ತಾ ಇರ್ತು.
ತುಂಬ ಸುಂದರ ವಾತಾವರಣ.ಇನ್ನು ಯಾವಾಗಲು ನೋಡ್ಲೆ ಸಿಕ್ಕುಗನ್ನೆ ಹೇಳಿ ಮನಸ್ಸಿನ ಒಳಾದಿಕೆ ಒಂದು ಖುಶಿಯೂ ಆತು.
ಹಾಂಗೆ ಹಾಲು ತಪ್ಪಲೆ ಶುರು ಮಾಡಿ ಆತು.ಉದಿಯಪ್ಪಗ ಬೇಗ ಎದ್ದು ಒಂದರಿಯಾಣ ಕೆಲಸ ಮುಗಿಶಿ ಏಳು ಗಂಟೆಗೆ ಸರಿಯಾಗಿ ರಥಲ್ಲಿ ಹೆರಟರೆ ಆನು ಮಾರ್ಗದ ಕರೆಂಗೆ ಎತ್ತುದು , ಮಾಲಿಂಗಣ್ಣ ಬಸ್ಸಿಂದ ಇಳಿವದೂ ಸಮಾ ಸಮ!
ಇದು ಏವುಗಳು ಅಪ್ಪ ಸಂಗತಿ.
ಹಾಂಗೆ ನಡಕ್ಕೊಂಡು ಬತ್ತಾ ಇಪ್ಪಗ ಒಂದು ಹೊಸ ಸಮಸ್ಯೆ ಶುರು ಆತು. ದಾರಿಲಿ ಕಂಡಾಬಟ್ಟೆ ನಾಯಿಗಳ ಕಾಟ!!!!!!
ಯಾವ ವಾಹನ ಹೋದರೂ ಅಟ್ಟುಸಿಗೊಂಡು ಬತ್ತವು . ಅದು ಅಟ್ಟುಸಿಗೊಂಡು ಬತ್ತು ಹೇಳಿ ನಾವು ಸ್ಪೀಡಾಗಿ ಹೋದರೆ ಅದು ನಮ್ಮಂದಲೂ ಸ್ಪೀಡು ಬತ್ತು.
ಎಂತ ಮಾಡುದು…?
ಮದಲೇ ಮಾರ್ಗ ಹೇಳಿರೆ ಹೊಂಡ ಗುಂಡಿ! ಮಳೆಗಾಲಲ್ಲಿ ನೀರು ಹೋಗಿ ಹೋಗಿ ದೊಡ್ಡ ದೊಡ್ದ ಕಣಿ ಆಯಿದು. ಅದರ ಎಡಕ್ಕಿಲಿ ಮಾರ್ಗ ಎಲ್ಲಿದ್ದು ಹೇಳಿ ಹುಡುಕ್ಕಿಗೊಂಡು ಹೋಪದೇ ದೊಡ್ದ ಕೆಲಸ .
ಅದರೊಟ್ಟಿಂಗೆ ನಾಯಿಗಳೂ ಅಟ್ಟುಸಿಗೊಂಡು ಬಂದರೆ ನಾಯಿಗಳ ತಪ್ಪುಸಿಗೊಂಡು ಹೋಪದಾ….? ಗುಂಡಿಗಳ ತಪ್ಪುಸಿಗೊಂಡು ಹೋಪದಾ…….? ಎ
ನ್ನ ಯಜಮಾನ್ರು ಗಾಡಿ ತೆಗೆಸಿ ಕೊಡುವಗಲೇ ಹೇಳಿದ್ದವು ಗಾಡಿಯ ಕೆಮಿ ಜೋರು ತಿರ್ಪಿದ್ದು ಗೊಂತಾದರೆ ನಿನ್ನ ಕೆಮಿ ಆನು ತಿರ್ಪುವೆ ಹೇಳಿ….!
ಆದರೆ ಈಗ ಅನಿವಾರ್ಯ… ಎಂತ ಮಾಡುದು ಜೀವವ ಕೈಲಿ ಹಿಡ್ಕೊಂಡು ಓಡುದು ಹೇಳಿ ಹೇಳ್ತು ಕೇಳಿದ್ದೆ.
ಈಗ ಅನುಭವಿಸಿದೆ. ಜೀವವ ಕೈಲಿ ಹಿಡಿವದಾ….ಕಾಲಿಲಿ ಹಿಡಿವದಾ….ಗೊಂತಿಲ್ಲೆ .ಎನ್ನ ಗಾಡಿಲಿ ಮಡುಗಿಗೊಂಡು ಓಡ್ಸುದು ಹೇಳಿರೆ ತಪ್ಪಾಗ. ಎಡಿಗಾದಷ್ಟು ರಥದ ಕೆಮಿ ತಿರ್ಪಿಗೊಂಡು ಹೋಪಲೆ ಶುರು ಮಾಡಿದೆ.
ಆದರೂ ಅಪಾಯ ತಪ್ಪಿದ್ದಲ್ಲ. ಇದು ಒಂದು ಎರಡು ದಿನದ ಸಮಸ್ಯೆ ಅಲ್ಲನ್ನೇ. ಮಗನ ಶಾಲೆಗೆ ಕರಕ್ಕೊಂಡು ಹೋಪಗಲೂ ಬಪ್ಪಗಲೂ ಇದೇ ಅವಸ್ಥೆ.
ಅದು ಆರ ನಾಯಿಗ ಹೇಳಿ ವಿಚಾರ್ಸಿದರೆ ಆರಿಂಗೂ ಗೊಂತಿಲ್ಲೆ. ಅದರ ಮುನ್ಸಿಪಾಲ್ಟಿಯವಕ್ಕೆ ಹೇಳಿ ಕೊಲ್ಲುಸಿದರೆ ನಾಯಿ ದಯಾ ಸಂಘದವು ಬಂದು ನಮ್ಮ ಲಗಾಡಿ ತೆಗಗು.
ಮೊನ್ನೆ ಮೊನ್ನೆ ಪೇಪರಿಲಿ ಓದಿದ್ದೆ ಬೆಂಗ್ಳೂರಿಲಿ ಒಂದು ನಾಯಿ ಸಣ್ಣ ಮಗುವಿನ ಕಚ್ಚಿಗೊಂಡು ಹೋಗಿ ತಿಂದು ಹಾಕಿದ್ದಡ! ಅದರ ಓದಿದ ಮತ್ತೆ ಆನು ಗಾಡಿಯ ಕೆಮಿ ತಿರ್ಪುದು ಇನ್ನೂ ಹೆಚ್ಚಾಯ್ದು….!!!!
ಹೀಂಗಿಪ್ಪ ಘಟನೆಗ ಸುಮಾರು ಕೇಳಿದರೂ ಕಾಟು ನಾಯಿಗಳ ಕೊಲ್ಲುಲೆ ಪ್ರಾಣಿ ದಯಾ ಸಂಘದವು ಬಿಡ್ತವಿಲ್ಲೆಡ ಅದೇಕೆ…? ಇನ್ನು
ಮನುಷ್ಯ ದಯಾ ಸಂಘ ಹೇಳಿ ಶುರು ಮಾಡಿ ಒಂದು ಹೋರಾಟ ಮಾಡಿದರೆ ಅಕ್ಕೋ ಹೇಳಿ ಕಾಣುತ್ತು.
ಎಂತ ಮಾಡುದು ಹೇಳಿ ಅಲೋಚನೆ ಮಾಡುಗ ಅತ್ತೆ ಹೇಳಿದವು ಕಾಲಿನ ಹತ್ತರೆ ಕೋಲು ಮಡುಗಿಗೊಂಡು ಹೋಗು ಗಾಡಿ ನಿಲ್ಸು ರಪರಪ ಬಾರ್ಸು!!!!!
ಒಳ್ಳೆ ಐಡಿಯಾ…..ಹಾಂಗೆ ಮರದಿನ ಹಾಲಿಂಗೆ ಹೋಪಗ ಕೋಲು ಮಡುಗಿಗೊಂಡೆ. ಅಟ್ಟುಸಿಗೊಂಡು ಬಪ್ಪ ನಾಯಿಗೊಕ್ಕೆ ಕೋಲು ತೆಗದು ಬಡಿವದು ಬಿಡಿ , ಗಾಡಿ ನಿಲ್ಸಿ ಅಪ್ಪಗಲೇ ಅದು ಒಂದು ಮೈಲು ದೂರ ಓಡಿದ್ದು !!!
ಮನೆಲಿ ಹೇಳಿಯಪ್ಪಗ ಎನ್ನ ಯಜಮಾನ್ರು ಹೇಳಿದವು “ಕೆಲವರ ಮೋರೆ ಕಂಡರೆ ನಾಯಿ ತೆಳಿ ಬಿಟ್ಟು ಓಡುಗು!!!!!!!!!” ಹೇಳಿ ಒಂದು ಮಾತಿದ್ದು.
ಮರದಿನವೂ ಕೋಲು ಮಡಿಗಿಗೊಂಡು ಬಂದೆ ಆ ದಿನವೂ ಆನು ಗಾಡಿ ನಿಲ್ಸಿಯಪ್ಪಗ ನಾಯಿ ಓಡಿತ್ತು.
ಗಾಡಿ ನಿಲ್ಸದ್ದರೆ ಅಟ್ಟುಸಿಗೊಂಡೇ ಬತ್ತು. ಒಂದು ವಿಷಯ ಅರ್ಥ ಆತು “ನಾವು ಹೆದರಿ ಓಡಿದರೆ ಅದು ಹೆದರ್ಸುತ್ತು , ನಾವು ಧೈರ್ಯಲ್ಲಿ ಎದುರಿಸಿದರೆ ಅದು ಹೆದರಿ ಓಡುತ್ತು”.
ಅದುವೇ ಜೀವನದ ಸತ್ಯವೂ ಅಲ್ಲದಾ….?
ಕಷ್ಟ ಬಂತು ಹೇಳಿ ಹೆದರಿ ಓಡಿದರೆ ಪರಿಹಾರ ಸಿಕ್ಕುಗಾ? ಅದರ ಎದುರಿಸಿ ನಿಂದರೆ ಮಾತ್ರ ನವಗೆ ದಾರಿ ಕಾಣುಗು ಅಲ್ಲದಾ…?
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದ ಹಿಗ್ಗದೆಯೆ ಕುಗ್ಗದೆಯೆ ನುಗ್ಗಿ ನಡೆ ಮುಂದೆ ಹೇಳಿ ಹಿರಿಯರು ಹೇಳಿದ್ದು ಸುಮ್ಮನೆ ಅಲ್ಲ ಅಲ್ಲದಾ…?
ನಾಯಿಗ ಅಟ್ಟುಸಿಗೊಂಡು ಬಂದರೆ ಓಡೆಡಿ . ಅಲ್ಲೇ ನಿಲ್ಲಿ ನಾಯಿಯೇ ಓಡುಗು.
ವಿ.ಸೂಃ ಉಡುಪುಮೂಲೆ ಅನುಪಮ ಹೇಳಿದ ಕಾರಣ ನಾಯಿ ಅಟ್ಟುಸುವಾಗ ಆನು ಓಡಿದ್ದಿಲ್ಲೆ. ಹಾಂಗಾಗಿ ನಾಯಿ ಕಚ್ಚಿತ್ತು. ಹೇಳಿರೆ ಆನು ಜವಾಬ್ದಾರಳಲ್ಲ…!
ಅನುಪಮಕ್ಕ.. ಬರದ್ದು ಭಾರೀ ಒಳ್ಳೇದಾಯಿದು.. ಅಷ್ಟು ಮನೋಹರ ದೃಶ್ಯ೦ಗೊ ಇಪ್ಪ ಜಾಗೆ ನೋಡೆಕು ಹೇಳಿ ಎನಗುದೆ ಆಶೆ ಆಯಿದು. ನಾಯಿಗಳ ಸಾ೦ಕುತ್ತವರ ಬೇಜವಾಬ್ದಾರಿತನ ಆವುತ್ತ್ಗು ಬೀದಿನಾಯಿಗಳ ಸ೦ಖ್ಯೆ ಹೆಚ್ಚಪ್ಪಲೆ ಕಾರಣ..
ವಿನೋದವೂ, ಚಂದವೂ ಆಯ್ದು ಶುದ್ದಿ. ಇಷ್ಟೆಲ್ಲಾ ಆದ್ರೂ ಅಕ್ಕಾ, ಆ ಓಡ್ಸಿಗೊಂಡು ಬಪ್ಪ ನಾಯಿ ಕೊರ್ಪ್ಪುತ್ತೋ ಅಂದಾಜಾಯ್ದಿಲ್ಲೆ. ಎಂತಕೆ ಹೇಳಿರೆ ಬೊಗಳುವ ನಾಯಿ ಕಚ್ಚುವುದಿಲ್ಲ ಹೇಳಿ ಆರೋ ಹೇಳಿದ್ದವಡ! ಆ ಓಡ್ಸಿಗೊಂಡು ಬಪ್ಪ ನಾಯಿಗೆ ಮೆಣಸಿನಹುಡಿ ನೀರು ತೋಕಿರೆ ರಿವರ್ಸ್ ಓಡುಗೋ? ಉಮ್ಮಾ. ಹೇದಾಂಗೆ ಆ ಹಂದಿಗೋ ಈಗಳೂ ಬತ್ತೋ ಅಕ್ಕಾ..! ಹಂದಿ ಬತ್ತ ದಾರಿಲೇ ಈ ನಾಯಿಗೋ ಇರ್ತಿದ್ರೆ ಉಪಕಾರ ಆವ್ತಿತ್ತೋ ಏನೋ ಅಲ್ದಾ!
ಎಂತದೇ ಆಗಲಿ ಪಟ ಸಹಿತ ಶುದ್ಧಿಯೂ, ಅದರಲ್ಲೊಂದು ಆಶಯವೂ ಲಾಯಕ ಆತು ಹೇಳಿತ್ತು – ‘ಚೆನ್ನೈವಾಣಿ’.
ಚೆನ್ನೈಭಾವ ಧನ್ಯವಾದಂಗೊ….
ಅದು ಅಟ್ಟುಸಿಗೊಂಡು ಬಪ್ಪ ಗೌಜಿಗೆ ಅದು ಕೊರಪ್ಪ್ಯೊಂಡು ಬತ್ತದು ಹೇಳ್ಲೆ ಬಿಟ್ಟತ್ತಿದಾ…..ಅದು ಗಮನಿಸಿದ್ದರೆ ಅದು ಕಚ್ಚುತ್ತಿಲ್ಲೆ ಹೇಳಿ ಎನಗೆ ಅಂದಾಜಾವುತ್ತಿತ್ತು. ನಿಂಗ ಹಾಂಗೆ ಹೇಳಿಯಪ್ಪಗ ಎನಗೆ ಒಂದು ಕಥೆ ನೆಂಪಾತಿದಾ….
ಒಬ್ಬ ಹಳ್ಲಿಯ ಮನುಷ್ಯ ಪೇಟೆ ತಿರುಗುಲೆ ಹೇಳಿಯೇ ಹೋದ. ಅಲ್ಲಿ ಇಲ್ಲಿ ತಿರುಗಿಕ್ಕಿ ಒಂದು ಸಿನೆಮಾ ನೋಡ್ಲೆ ಹೋದನಡ. ಸಿನೆಮಾ ಭಾರಿ ಒಳ್ಳೆದಿತ್ತಡ. ನೋಡ್ಯೊಂಡು ಇಪ್ಪಗ ಸಿನೇಮಲ್ಲಿ ಒಂದು ಹುಲಿ ಬಂತಡ! ಅಷ್ಟಪ್ಪಗ ಆ ವ್ಯಕ್ತಿ ಅಲ್ಲಿಂದ ಎದ್ದು ಸೀದ ಹೆರ ಓಡಿದನಡ. ಆಗ ಆ ಥಿಯೇಟರಿನ ಕಾವಲುಗಾರ ಕೇಳಿದ “ಯಾಕೆ ಸ್ವಾಮಿ ಓಡ್ತಾ ಇದ್ದೀರ ? ಸಿನೇಮಾ ಒಳ್ಳೆದುಂಟಲ್ಲಾ…?”
ಹಳ್ಳಿ ಮನುಷ್ಯ ಹೇಳಿದನಡ “ಒಂದು ಹುಲಿ ಬಂತು ಅದಕ್ಕೆ ನಾನು ಎದ್ದು ಓಡಿದೆ” ಹೇಳಿ.
ಕಾವಲುಗಾರ ನೆಗೆ ಮಾಡ್ಯೊಂಡು ಹೇಳಿದನಡ “ಅದು ಬರೆ ಸಿನೆಮಾ ಅಲ್ವ ಮಾರಾಯ್ರೆ…?”
ಹಳ್ಳಿ ಮನುಷ್ಯ ಹೇಳಿದನಡ ” ಅದು ಸಿನೆಮಾ ಅಂತ ನನಿಗೆ ಗೊತ್ತುಂಟು, ನಿಮಿಗೆ ಗೊತ್ತುಂಟು ಆದರೆ ಆ ಹುಲಿಗೆ ಗೊತ್ತುಂಟೋ…..!!!!!!!!!
“ಎಂಗಳ ಗೇಟಿನ ಹತ್ತರೆ ಹೋದರೆ ಸೂರ್ಯೋದಯ ಅಪ್ಪದು ತುಂಬ ಚೆಂದ ಕಾಣುತ್ತು. ಗುಡ್ಡೆಲೆಲ್ಲ ನವಿಲುಗ ಓಡಡ್ತಾ ಇರ್ತು.” ಅನುಪಮಕ್ಕನ ಮನೆಗೆ ಒಂದರಿ ಸೂರ್ಯೋದಯ ನೋಡುಲೆ ಬಪ್ಪದೋ ಹೇಳಿ ಆಸೆ ಆವುತ್ತಾ ಇದ್ದು… ಲೇಖನ ಲಾಯಕ ಆಯಿದು… ಫೋಟೋ ಲಾಯಕ ಇದ್ದು…
ಅಕ್ಕ ಧನ್ಯವಾದಂಗೊ…..
ಎಂಗಳಲ್ಲಿಗೆ ಯಾವಾಗ ಬತ್ತರೂ ಸ್ವಾಗತ ಇದ್ದು. ಖಂಡಿತ ಬನ್ನಿ. ಎಂಗಳ ಮನೆಯ ಸುತ್ತ ಮುತ್ತ ತುಂಬ ಸುದರ ದೃಶ್ಯಂಗ ಇದ್ದು. ಗೇಟಿನ ಹತ್ತರೆ ಹೋದರೆ ಸೂರ್ಯೋದಯದ ದೃಶ್ಯ ಚೆಂದ ಕಾಣ್ತು. ಮನೆ ಸುತ್ತ ಮುತ್ತ ನವಿಲುಗ ಓಡಾಡಿಗೊಂಡು ಇರ್ತು. ಬೇರೆ ಬೇರೆ ಪಕ್ಷಿಗಳೂ ಮನೆ ಮುಂದಾಣ ಹೂತೋಟಕ್ಕೆ ಬತ್ತವು. ಹೊತ್ತೋಪಗ ಮನೆ ಹಿಂದಾಣ ಜಾಲಿಲಿ ನಿಂದರೆ ಸುಂದರ ಸೂರ್ಯಾಸ್ತದ ದೃಶ್ಯ ಕಾಣ್ತು. ಮನೆಯ ಮಾಳಿಗೆಯ ಮೇಲೆ ನಿಂದರೆ ಇಲ್ಲೇ ಹತ್ತರೆ ಪೊಳಲಿ ಕೋಟೆ ಇದ್ದು ಅದು ಕಾಣುತ್ತು…..ಎಂಗಳ ಮನೆಯ ಸುತ್ತ ಮುತ್ತದ ದೃಶ್ಯಂಗಳ ಪಟ ತೆಗದು ಹಾಕುತ್ತೆ….
ಎನಗೆ ನಾಯಿ ಬಪ್ಪಗ ಒಡ್ಸುಲೆ ಎಡಿಯ. ಓಡುಲೆ ಮೊದಲೆ ಶಕ್ಥಿ ಸಾಲ. ಹಾ೦ಗಾಗಿ ಆ ಮ೦ತ್ರ ದ೦ಡ ಎನಗೆ ಕೊಟ್ತಿಕ್ಕಿ. .ಮೊದಲು ಆನೇ ಕೇಳ್ತ ಇಪ್ಪದು. ಪಟದೆ, ಲೆಖನದೆ ಲಾಯಿಕಾಯಿದು.
ಭಾಗ್ಯಕ್ಕ ಮಂತ್ರ ದಂಡವೂ ಇಲ್ಲೆ ಎಂತದೂ ಇಲ್ಲೆ ನಾವು ಓಡಿದರೆ ಅದು ಅಟ್ಟುಸಿಗೊಂಡು ಬತ್ತು, ನಾವು ತಿರುಗಿ ನಿಂದರೆ ಅದು ಓಡುತ್ತು. ಅಷ್ತೆ!
ಇನೊ೦ದು ಸರ್ತಿ ರಥಲ್ಲಿ ಹೋಪಗ ನಿ೦ಗಳ ಅತ್ತೆ ಹೇಳಿದ ಕೋಲಿನ ಮನೆಲಿ ಮಡುಗಿಕ್ಕಿ ಹೋಗಿ.ಮತ್ತೆಯುದೆ ನಿನ್ಗೊ ನಿನ್ದಪ್ಪಗ ನಾಯಿ ಓಡಿದರೆ ನಿ೦ಗಳ ಒನ್ದರಿ ಕರಕ್ಕೊ೦ಡು ಬ೦ದು ಇಲ್ಲಿಯಾಣ ನಾಯಿಗಳ ಓಡೂಸಿದರೆ ಅಕ್ಕೊ ಹೇಳಿ ಎನ್ನ ಅಲೊಚನೆ ;). ನಾಯಿಗು ನಿ೦ಗೊಗು ಮೄಗ ಸರಿ ಇಲ್ಲೆ ಆಯಿಕ್ಕು.
ಅಕ್ಕ….. ಇನ್ನೊಂದರಿ ಕೋಲು ಇಲ್ಲದ್ದೆ ಹೋಗಿಯೂ ಆನು ನಿಂದಪ್ಪಗ ನಾಯಿಗ ಓಡಿ ಹೋಯ್ದು. ಆದರೆ ಎನಗೆ ನಿಂಗಳಲ್ಲಿಯ ನಾಯಿಗಳ ಓಡ್ಸುಲೆ ಪುರುಸೊತ್ತಿಲ್ಲೆ. ನಿಂಗಳೇ ಆನು ಮಾಡಿದ ಪ್ರಯೋಗ ಮಾಡಿ ನೋಡಿ. ಫಲಿತಾಂಶವ ಬೈಲಿನವಕ್ಕೆಲ್ಲ ತಿಳಿಸಿ…..ಆಗದಾ…..?
ಅಕ್ಕೊ,
ಪುರುಸೋತು ಇಲ್ಲದ್ದರೆ ಬೇಜಾರಿಲ್ಲೆ.ಶ್ರೀ ಸಾಮನ್ಯನ ಬಗ್ಗೆ ಕಾಳಜಿ ಇದ್ದರೆ ಎಲ್ಲೊರಿ೦ಗು ಕೊಶಿ.
ನಿ೦ಗಳ ಮಾತಿ೦ಗೆ ಬೆಲೆ ಕೊಟ್ಟು, ಪ್ರಯೊಗ ಮಾಡಿದೆ. ಇಲ್ಲಿ ತಿಳಿಸುದು ಎನ್ನ ೧ ವಾರದ ಪ್ರಯೋಗದ ಪಲಿತಾ೦ಶ.
“ಎಲ್ಲಾ ಬೀದಿಯ ನಾಯಿಗೊ ನ೦ಬಿಕೆಗೆ ಅರ್ಹವಲ್ಲ”
🙂
🙂
ಭಾಗ್ಯಕ್ಕ ಮಂತ್ರ ದಂಡವೂ ಇಲ್ಲೆ ಎಂತದೂ ಇಲ್ಲೆ .ನಾಯಿ ಅಟ್ತುಸಿಗೊಂಡು ಬಪ್ಪಗ ಓಡಿದರೆ ಅದು ಅಟ್ಟುಸಿಗೊಂಡು ಬತ್ತು, ನಾವು ತಿರುಗಿ ನಿಂದರೆ ಅದು ಓಡಿ ಹೋವುತ್ತು.ಅಷ್ಟೆ….