Oppanna.com

ಹವ್ಯಕ ಸಂಸ್ಮರಣೆ ಕಾರ್ಯಕ್ರಮ

ಬರದೋರು :   ಬೊಳುಂಬು ಮಾವ°    on   13/05/2012    9 ಒಪ್ಪಂಗೊ

ಬೊಳುಂಬು ಮಾವ°

ದ.ಕ. ಮತ್ತು ಕಾಸರಗೋಡು ಹವ್ಯಕ ಮಹಾಜನ ಸಭಾದ ಸ್ಥಾಪನೆ ಹಾಂಗೂ ಅದರ ಅಭಿವೃದ್ಧಿಗೆ ಬೇಕಾಗಿ ಬಹಳಷ್ಟು ಶ್ರಮಿಸಿದ ಪ್ರಕೃತ ದೈವಾಧೀನಾರಾದ ಮಹನೀಯರುಗಳ ಸಂಸ್ಮರಣೆ ಹಾಂಗೂ ಅವರ ಭಾವ ಚಿತ್ರ ಅನಾವರಣ ಕಾರ್ಯಕ್ರಮ ತಾ. ೦೧.೦೫.೨೦೧೨ನೇ ಮಂಗಳವಾರ ನಂತೂರಿನ ಶ್ರೀ ಭಾರತೀ ಕಾಲೇಜಿನ “ಶಂಕರಶ್ರೀ” ಸಭಾಂಗಣಲ್ಲಿ ನೆಡದತ್ತು. ಈ ಕಾರ್ಯಕ್ರಮದ ಅಧ್ಯಕ್ಷತೆಯ ಹೊರನಾಡು ಶ್ರೀ ಅನ್ನಪೂರ್ಣೇಶ್ವರೀ ಕ್ಷೇತ್ರದ ಧರ್ಮಕರ್ತರಾದ ಶ್ರೀ ಭೀಮೇಶ್ವರ ಜೋಷಿಯವು ವಹಿಸಿದ್ದಿದ್ದವು. ದ.ಕ. ಮತ್ತು ಕಾಸರಗೋಡು ಹವ್ಯಕ ಮಹಾಜನ ಸಭಾದ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಎಂ.ಭಟ್ ಮುಳಿಯದವು ಸಂಘಟನೆಯ ಮಹತ್ವ ಉದ್ದೇಶಂಗಳ ವಿವರುಸಿ, ಸಭಾ ಸ್ಥಾಪನೆಗೊಂಡ ಹಿನ್ನೆಲೆಯ ವಿವರುಸಿ ಎಲ್ಲೋರನ್ನೂ ಸ್ವಾಗತಿಸಿದವು.

ಶ್ರೀ ಚಂದ್ರಶೇಖರ ದೈತೋಟ ಮಾತನಾಡಿ, ದಕ ಕಾಸರಗೋಡು ಹವ್ಯಕ ಮಹಾಜನ ಸಭಾ ೩೨ ವರ್ಷ ಹಿಂದೆ ಏವ ರೀತಿ ಸುರು ಆತು ಹೇಳಿ ವಿವರುಸಿದವು. ಹೆರಾಣ ಊರಿಂದ ಮಂಗ್ಳೂರಿಂಗೆ ಬಪ್ಪ ಹವ್ಯಕ ವಿದ್ಯಾರ್ಥಿನಿ/ ಮಹಿಳೆಯರಿಂಗೆ ವಸತಿಯ ಅನಿವಾರ್ಯತೆಂದ ನಿಲಯವೊಂದರ ಸ್ಥಾಪನೆಗೆ ಬೇಕಾಗಿ ಇದು ಸುರು ಆತು ಹೇಳಿದವು.  ಮತ್ತೆ,  ಶ್ರೀ ಭೀಮೇಶ್ವರ ಜೋಷಿಯವು  ಮಹನೀಯರುಗಳಾದ ದಿ.ಕೂಡೂರು ಕೃಷ್ಣ ಭಟ್, ದಿ. ಸಿ.ವಿ.ಶಾಂತಾ, ದಿ.ಶಂಕರನಾರಾಯಣ ಭಟ್ ಕಾಶೀಮಠ, ದಿ.ಖಂಡಿಗೆ ಶ್ಯಾಮ ಭಟ್ ಹಾಂಗೂ ದಿ.ವರ್ಮುಡಿ ರಾಮ ಭಟ್ ಅವರ ಸಂಸ್ಮರಣೆ ಮಾಡಿ ಅವರ ಭಾವಚಿತ್ರವ ಅನಾವರಣ ಗೊಳಿಸಿದವು.

ಶ್ರೀ ಭೀಮೇಶ್ವರ ಜೋಷಿ ಸಭಾಧ್ಯಕ್ಷರ ನೆಲೆಲಿ ಮಾತಾಡಿ,  ಸ್ಮರಣೆ ಎಲ್ಲೋರು ಮಾಡ್ತವು. ಆದರೆ ಸಂಸ್ಮರಣೆ ವಿಶೇಷ, ಆ ಆಚರಣೆ ಇನ್ನೂದೆ ಶ್ರೇಷ್ಠ. ಅದು ಕ್ರಿಯಾಶೀಲ ಚಿಂತನೆ, ದುಡಿಮೆ/ಸಾಧನೆಗಳ ಗುರುತಿಸಿದ ಸೂಚನೆ. ವ್ಯಕ್ತಿಯ ಸಾಧನೆ ಉಳಿದವಕ್ಕೆ ಆದರ್ಶವಾಗಿರಲಿ, ಸಾಧನೆ ನಿರಂತರವಾಗಿರಲಿ, ಹೇಳ ತತ್ವ ಸಂದೇಶ ಈ ಕಾರ್ಯಕ್ರಮದ ಹಿಂದೆ ಇದ್ದು. ಸ್ಮರಿಸಿದ ಸ್ಮರಣೆ ನಮಗೆ ಚೈತನ್ಯಪೂರಕವಾಗಿರಲಿ ಹೇಳಿ ಶುಭ ಹಾರೈಸಿದವು. ಸಮಾಜ, ಸಂಘ, ಸಂಘಟನೆ, ಸಭೆ, ಉದ್ದೇಶ ಹೇಳ್ತ ಐದು ವಿಷಯಂಗೊ ಒಂದೇ ವ್ಯವಸ್ಥೆಯ ಮುಖವಾಗಿದ್ದಲ್ಲಿ ಪಂಚಮಂ ಕಾರ್ಯಸಿದ್ದಿ: ಹೇಳಿ ಆವ್ತು. ಸಂಘಟನೆಂದ ನಮಗೆ ಎಂತ ಸಿಕ್ಕಿದ್ದು ಹೇಳ್ತ ಮನೋಭಾವನೆಂದ, ನಾವು ಸಂಘಟನೆ ಎಂತ ಕೊಟ್ಟಿದು ಹೇಳ್ತ ಚಿಂತನೆ ಮಂಥನ ಆಗಿ ಅಪ್ಪಗ ಬಲಿಷ್ಠತೆ, ಕಾರ್ಯಸಿದ್ದಿ ಸಾಧ್ಯ. ಸಂಘಟನೆಲಿ ಯುವಶಕ್ತಿಯನ್ನುದೆ ಸೇರ್ತ ಹಾಂಗೆ ಪ್ರೇರೇಪಣೆ ಕೊಡಿ. ನಮ್ಮಲ್ಲಿ ಏವದೇ ಕೊರತೆ ಇಲ್ಲೆ. ಇಚ್ಛಾ ಶಕ್ತಿ, ಜ್ಞಾನಶಕ್ತಿ, ಧನಮೂಲಶಕ್ತಿ ಎಲ್ಲವುದೆ ಇದ್ದು. ಆದರೆ, ನಮ್ಮಲ್ಲಿ ಮನಸ್ಸು ವಿಶಾಲ ಇಲ್ಲೆ, ಹೃದಯಶ್ರೀಮಂತಿಕೆ ಇಲ್ಲೆ. ಕೌಟುಂಬಿಕ ದೌರ್ಬಲ್ಯಂಗಳ ಮೆಟ್ಟಿನಿಂದು ಅಡಿಪಾಯಮಾಡಿ ಪ್ರಗತಿ ಕಡೇಂಗೆ ಚಿಂತನೆ ಹಾಂಗೂ ಅನುಷ್ಟಾನ ಮಾಡಿರೆ ಬೆಳವಣಿಗೆ ಸಾಧ್ಯ ಹೇಳಿ ಹೇಳಿದವು.

ಶ್ರೀಯುತ ಉಳ್ಳೋಡಿ ಗೋಪಾಲಕೃಷ್ಣ ಭಟ್ ಚೆಂದಕೆ ಕಾರ್ಯಕ್ರಮ ನಿರ್ವಹಣೆ ಮಾಡಿದವು. ವೇದಿಕೆಲಿ ನಿಕಟಪೂರ್ವ ಅಧ್ಯಕ್ಷ ಶ್ರೀ ಕೊಲ್ಲರ ಮಜಲು ಶಂಕರ ಭಟ್, ಉಪಾಧ್ಯಕ್ಷ ಶ್ರೀ ಕಜೆ ಈಶ್ವರ ಭಟ್, ಕೋಣಾಜೆ ಶ್ರೀ ಜಿ.ಕೆ.ಭಟ್ ಉಪಸ್ಥಿತರಿತ್ತಿದ್ದವು. ಸಭಾದ ಹಿಂದಾಣ ಅಧ್ಯಕ್ಷರುಗೊ, ಸಂಸ್ಮರಣೆಗೊಂಡ ಮಹನೀಯರ ಮನೆಯವು, ಅವರ ಹತ್ರಾಣ ಸಂಬಂಧಿಕರುದೆ ಕಾರ್ಯಕ್ರಮಲ್ಲಿ ಭಾಗವಹಿಸಿದವು. ಕಡೆಂಗೆ ಕಾರ್ಯದರ್ಶಿ ಶ್ರೀ ನಿಡುಗಳ ಕೃಷ್ಣ ಭಟ್ ವಂದಿಸಿದವು.

ರುಚಿಕರ ಭೋಜನದ ಜೆತೆಲೆ ಕಾರ್ಯಕ್ರಮ ಕೊನೆಗೊಂಡತ್ತು.

ಕೆಲವು ಪಟಂಗೊ:

9 thoughts on “ಹವ್ಯಕ ಸಂಸ್ಮರಣೆ ಕಾರ್ಯಕ್ರಮ

  1. ಸವಿವರ ವರದಿ.ಧನ್ಯವಾದ ಬೊಳು೦ಬುಮಾವಾ.

  2. ಮಾವ° ವರದಿಗೆ ಧನ್ಯವಾದ .. ಒಳ್ಳೆ ಕಾರ್ಯಕ್ರಮ

  3. ಹಿರಿಯವು ಸಮಾಜಕ್ಕೆ ಕೊಟ್ಟ ಕೊಡುಗೆಯ ಸ್ಮರಣೆ ಮಾಡಿದ ಒಳ್ಳೆ ಕಾರ್ಯಕ್ರಮ.
    ಪಟಂಗೊ, ಒಟ್ಟು ಕಾರ್ಯಕ್ರಮದ ಸ್ಥೂಲ ಪರಿಚಯ ಕೊಟ್ಟತ್ತು.

  4. ಒಳ್ಳೆ ಕಾರ್ಯಕ್ರಮ.ಧನ್ಯವಾದ.

  5. ಬೊಳು೦ಬು ಮಾವಾ, ಶುದ್ದಿಗೆ ಧನ್ಯವಾದ..
    ಇನ್ನಾಣ ವಾರ ಇಲ್ಲಿ ಸತ್ಯನಾರಾಯಣ ಪೂಜೆ ಇದ್ದಾಡ, ದೇವರೆತ್ತಿಸಿರೆ ಒ೦ದು ಘಳಿಗ್ಗೆ ಹೋಗಿ೦ಡು ಬರೆಕ್ಕು..

  6. ಒಳ್ಳೆ ಕಾರ್ಯಕ್ರಮ. ಶುದ್ದಿಗೆ ಧನ್ಯವಾದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×