Oppanna.com

ಉಪ್ಪುಸೊಳೆಯ ಸುತ್ತ

ಬರದೋರು :   ಬೊಳುಂಬು ಮಾವ°    on   01/05/2020    1 ಒಪ್ಪಂಗೊ

ಬೊಳುಂಬು ಮಾವ°

ಶ್ರೀಮತಿ  ಶೈಲಜಾ ಪುದುಕೋಳಿ, ಮಂಗಳೂರಿಲ್ಲಿ ಡೊಂಗರಕೇರಿಲಿಪ್ಪ ಕೆನರಾ ಪ್ರೌಢಶಾಲೆಲಿ ಕನ್ನಡ ಅಧ್ಯಾಪಿಕೆಯಾಗಿ ಉದ್ಯೋಗಲ್ಲಿದ್ದವು. ಉತ್ತಮ ಕವಯಿತ್ರಿ. ಇವರ “ಕಣಿವೆಯಾಳದ ಕಾವ್ಯ” ಹೇಳುವ ಕವನ ಸಂಕಲನ, “ಕಾಲುದಾರಿಯ ಗುರುತು” ಹೇಳುವ ಲಲಿತ ಪ್ರಬಂಧ ಸಂಕಲನ ಪ್ರಕಟಣೆಗೊಂಡಿದು. ಇವು ಶಾಲೆಲಿ ಮಕ್ಕೊಗೆ ಸಾಹಿತ್ಯ ಚಟುವಟಿಕೆ ನೆಡಶುತ್ತರ ಒಟ್ಟಿಂಗೆ ಕನ್ನಡ ಸಂಘಲ್ಲಿ ನಾಟಕ, ಪ್ರಹಸನಂಗಳನ್ನು ಕೂಡ ಅವರ ಕೈಲಿ ಮಾಡುಸುತ್ತವು.    ಇವು ಕಾಲೇಜಿಲ್ಲಿ ಕಲಿವಗಳೇ ಕಥೆ ಕವನಂಗಳ ಬರದು ಹೆಸರುಗಳಿಸಿದ್ದವು.  ಹಲವಾರು ಬಹುಮಾನಂಗಳ ಗೆದ್ದಿದವು.   ಇದೀಗ ನಮ್ಮ ಒಪ್ಪಣ್ಣ ಬೈಲಿಂಗೆ  ವಿಶೇಷವಾಗಿ ಈ  ಲಲಿತ ಪ್ರಬಂಧ  “ಉಪ್ಪುಸೊಳೆ”ಯ ಕಳುಸಿಕೊಟ್ಟಿದವು. 

shailaja.pudukoli22@gmail.com

 

ಉಪ್ಪುಸೊಳೆಯ ಸುತ್ತ (ಲಲಿತ ಪ್ರಬಂಧ )

ಇದು ಹಲಸಿನ ಸೀಸನ್. ಹವ್ಯಕರಷ್ಟು ಹಲಸಿನ ಸದುಪಯೋಗ ಮಾಡುವವು ಆರೂ ಇಲ್ಲೆ ಹೇಳಿರೆ ತಪ್ಪಲ್ಲ.     ಸ್ವತಃ ಹವೀಕರೇ ಒಪ್ಪಿಕೊಳ್ಳುತ್ತವು.    ಹಲಸಿನ ಮರ ಚಿಗುರು ಬಪ್ಪಗಳೇ ಕಳ್ಳಿಕೆ ಬಿಟ್ಟಿದೋ ಹೇಳಿ ನೋಡ್ಲೆ ಸುರುವಾವುತ್ತು.     ಮಸಿಕಳ್ಳಿಕೆ ಉದುರುವಾಗ ಹೊಟ್ಟೆ ಉರಿತ್ತು. ಹಣ್ಣುಗಳ ರಾಜ ಹೇಳಿ ಹೆಸರು ಪಡದ ಹಲಸು  ಬಹೂಪಯೋಗಿ. ‘ಹಸಿದು ಹಲಸಿನ ಹಣ್ಣು, ಉಂಡು ಮಾವಿನ ಹಣ್ಣು ‘ ಹೇಳುತ್ತವು.

ತುಳುವ, ಬರಿಕ್ಕೆ, ಬಕ್ಕೆ, ಸಂಪಗೆ ಬಕ್ಕೆ ಹೀಂಗೆಲ್ಲ ಅಜ್ಜ ಹೆಸರು ಹೇಳೆಂಡಿತ್ತಿದ್ದವು. ಯಾವ ಮರದ್ದು ಯಾವುದಕ್ಕೆ ಒಳ್ಳೆದು  ಹೇಳಿ ಅವಕ್ಕೆ ಗೊಂತಿಕ್ಕು. ಕುಜುವೆ, ಬೇಳೆಚ್ಚೆಕ್ಕೆ  ತಾಳಿಂಗಾದರೆ ಯಾವುದು,  ಹದ ಬೆಳೆದರೆ ಸೋಂಟೆ ಮಾಡ್ಲೆ,  ದೋಸೆಗೆ, ಮೆಣಸು ಬೆಂದಿ,  ಉಳ್ಳಿಬೆಂದಿಗೆ  ಯಾವುದು ಒಳ್ಳೆದು, ಹಪ್ಪಳ ಮಾಡ್ಲೆ,  ಹಣ್ಣಾದರೆ ಗೆಣಸಲೆ ಅಥವಾ ಪಾಯಸಕ್ಕೆ ಯಾವ ಮರದ್ದು ಆಯೇಕು ಅದರ ಹೆಸರಿಂದಲೇ ಗೊಂತಕ್ಕು. ಆ ಹಣ್ಣಿನ ಆರಿಂಗಾರೂ ತಿಂಬಲೆ ಕೊಟ್ಟರೆ
“ಇದರ ಬೇಳೆಯ ತೆಕ್ಕೊಂಡು ಹೋಗಿ ಬಿತ್ತು ಹಾಕು, ನಾಕು ವರ್ಷಲ್ಲಿ ಫಲ ಕೊಡ್ತು.”ಹೇಳಿ ಅಜ್ಜ ವರ್ಣನೆ ಮಾಡುಗು.

 ಈ ವರ್ಷ ಚಳಿ ಇಲ್ಲದ್ದೆ ಬೆಳೆ ಕಮ್ಮಿ ಹೇಳುವ ಬೇಜಾರಿನ ಮಾತು ಕೇಳಿದೆ. ಪೇಟೆವಕ್ಕೆ ಹಲಸಿನ ಕಾಯಿದು ಎಂತ ಮಾಡಿಕೊಟ್ಟರೂ ಭಾರಿ ಪ್ರೀತಿ. ಮಕ್ಕೊ, ಪುಳ್ಳಿಯಕ್ಕೋ ಬಂದರೆ ಆರಾರಿಂಗೆ ಎಂತದು ಇಷ್ಟ ಹೇಳಿ ಗೊಂತಿಪ್ಪ ಕಾರಣ ರಜೇಲಿ ಬಪ್ಪಗ ತಿಂಬಲಾತು ಹೇಳುವ ಆಶೆ ಹಿರಿಯವಕ್ಕೆ.      ಆದರೆ ಈ ವರ್ಷ ಮಾರಿ ಕೊರೊನಂದಾಗಿ ಪೇಟೆಂದ ಬಪ್ಪಲೆಡಿಯದ್ದೆ ಆತನ್ನೆ ಹೇಳಿ ಅಸಬಡಿತ್ತವು.

ಈ ಹಲಸಿನ ವರ್ಷ ಇಡೀ ತಿಂಬ ಉಪಾಯ ಹೇಳಿರೆ ಉಪ್ಪುಸೊಳೆ ಹಾಕುದು ಮತ್ತೆ ಬೇಳೆಗೆ ಮಣ್ಣುದ್ದಿ ಮಡಗುವದು . ಮಳೆ ಸುರುವಪ್ಪಗ ಉಪ್ಪುಸೊಳೆ ಹಾಕುವ ಗೌಜಿ ಸುರುವಾವುತ್ತು. ಮನೆವಿಡೀ ಕೂದೊಂಡು ಊರ ಶುದ್ದಿ ಮಾತಾಡೆಂಡು ಸೋಳೆ ಆವಲೆ  ಸುರುಮಾಡಿರೆ ಕೆಲಸ ಬೇಗ ಮುಗಿತ್ತು. ಮೊದ್ಲೆಲ್ಲಾ ಸೊಳೆಯ ಮಣ್ಣಿನ ಮಂಡಗೆಲಿ ಹಾಕುವದು ಕ್ರಮ. ಅದರ ಬೆಶಿನೀರ ಕೊಟ್ಟಗೆಯ ಕರೇಲಿಯೋ ಅಥವಾ ಹೆಚ್ಚು ಅಗತ್ಯ ಇಲ್ಲದ್ದ ಹಾಂಗಿಪ್ಪ ಜಾಗೆಲಿಯೋ ಮಡಗುವದು.  ಮೊದಲಿಂಗೆ  ಸೊಳೆಲಿ ಹುಳುವಾದರೆ ಆರಿಂಗೂ ಹೇಸಿಗೆ ಇಲ್ಲೆ.  ಈಗ ಹುಳು ಆಗದ್ದ ಹಾಂಗೆ ಮಡಗುತ್ತವು.ಅದರ ನೋಡಿರೆ  ಈಗಾಣವು ತಿನ್ನವು ಹೇಳಿ ಜಾಗ್ರತೆ  ಮಾಡುತ್ತವು.

ಆನೀಗ ಹೇಳಲೆ ಹೊರಟದು ಈ ಉಪ್ಪುಸೊಳೆಯ  ರಸಪ್ರಸಂಗವ. ಕಳೆದ ವರ್ಷ ಪ್ಲಾಸ್ಟಿಕ್ ಉರುಟು ಕ್ಯಾನ್ ಲಿ ರಜ  ಉಪ್ಪು ಸೋಳೆ ಹಾಕಿದ್ದೆ. ಮನೇಲಿ ಬೇರೆ ಆರೂ ತಿನ್ನದಿದ್ರು  ಎನಗೆ ಇದರ ರುಚಿ ಗೊಂತಿದ್ದು. ತಾಳು, ಉಳ್ಳಿಬೆಂದಿ, ಉಂಡ್ಲಕಾಳು ಎಲ್ಲ ಒಂದೊಂದು ಸರ್ತಿ ಮಾಡಿ ಎರಡು ಮುಷ್ಠಿ ಸೊಳೆ  ಒಳುದ್ದು. ಮನೆಂದ ಹೆರ ಎಲ್ಲೂ ಹೋಪಲಿಲ್ಲದ್ದ ಕಾರಣ ಪುರುಸೊತ್ತು ಧಾರಾಳ ಇದ್ದು.ಅರ್ಧ ಕುಡ್ತೆ ಅಕ್ಕಿ ಬೊದುಲಿಸಿ ಸೊಳೆ ಒಟ್ಟಿಂಗೆ ಗಟ್ಟಿಗೆ  ಕಲ್ಲಿಲಿ ಕಡದು, ಅದಕ್ಕೆ ಬೇವಿನ ಸೊಪ್ಪು, ನೀರುಳ್ಳಿ ಕೊಚ್ಚಿ ಹಾಕಿ ಒಡೆ ತಟ್ಟಿ ಎಣ್ಣೆಲಿ ಹೊರುದೆ. ಪೇಟೆಲಿ ಸಿಕ್ಕದ್ದ ಇಂಥ ಸ್ಪೆಷಲ್ ತಿಂಡಿಯ ನೆರೆಮನೆಯವಕ್ಕೆ ಕೊಡುವ ಕ್ರಮ ಇದ್ದು. ಮೊದಲೇ ಅದರ ಪರಿಮ್ಮಳ ಘಮ್ಮನೆ ಬಂದಿಕ್ಕು.

ಎಂಗಳ ಒಂದು ಕರೆಯ ಮನೆಯ ರಜ ಪ್ರಾಯದ ದಂಪತಿಯ ಮೂಗು ತುಂಬಾ ಸೂಕ್ಷ್ಮ. ನಾಲ್ಕು ಸೊಳೆ ಒಡೆಯ ಅವಕ್ಕೆ ಕೊಟ್ಟೆ. “ಎಂಥಾ ಪರಿಮಳ ಆಗಿನಿಂದ ಬರ್ತಾ ಇದೆ. ಈವತ್ತು ಬೆಳಗ್ಗಿನಿಂದ ಏನೋ ಕೆಟ್ಟ ವಾಸನೆ ಬರ್ತಾ ಉಂಟು. ಯಾರದೂ ಟಾಯ್ಲೆಟ್ ಪಿಟ್ಟ್ ನಿಂದ  ನೀರು ಓವರ್ ಫ್ಲೋ ಅಗ್ತಾ ಇದೆಯೋ ಏನೋ. ನಿಮಗೆ ಏನೂ ವಾಸ್ನೆ ಬರ್ತಾಇಲ್ವಾ?. ” ಹೇಳಿ ಕೇಳಿದವು. “ಇಲ್ವಲ್ಲ “ಹೇಳಿದೆ.

“ಈಗ ನಿಮ್ಮ ಈ ತಿಂಡಿ ಪರಿಮಳ ಸುರುವಾದ ನಂತರ ಆ ವಾಸನೆ ಹೋಯ್ತು ನೋಡಿ ” ಹೇಳೆಂಡು ತಿಂಡಿಯ ಆಸ್ವಾದಿಸಿ ಹೊಗಳಿದವು !

ಆ ವಾಸನೆ ತರಿಸಿದ ವಸ್ತು ಈ ತಿಂಡಿಯ ಮೂಲ ಹೇಳಿ  ಹೇಳೆಕೋ ಬೇಡದೋ ಹೇಳುವ  ಯೋಚನೆಲಿ ಇದ್ದೆ !!

One thought on “ಉಪ್ಪುಸೊಳೆಯ ಸುತ್ತ

  1. ಅನ್ಯ ಮಾಧ್ಯಮ ಪ್ರಕಾರಂಗಳಲ್ಲಿ ನುರಿತ ಈ ಲೇಖಕಿಯ ಜಾಲತಾಣ ಮಾಧ್ಯಮದ ಮೊದಲ ರಂಗ ಪ್ರವೇಶ ವೇ ಭರ್ಜರಿ ಆಯಿದು. ಭಳಿರೇ. ಹೀಂಗೇ ಮುಂದುವರಿಯಲಿ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×