- ಹವ್ಯಕ ಭಾಷೆ – ಕಲ್ಪನಾ ಅರುಣ್ - May 30, 2019
- ತೋಟ್ಮನೆ ವಳಿಸೊ - May 4, 2019
- ಅಪ್ಪಯ್ಯ - April 10, 2016
ಬೈಲಿಂಗೆ ಇಳಿಯಲೆ ಸೌಕರ್ಯ ಇಲ್ಲದ್ದರೂ, ಬೈಲಿನ ಬಗ್ಗೆ ಅತೀವ ಪ್ರೀತಿ ಹೊಂದಿಂಡ ಅನೇಕ ನೆಂಟ್ರುಗೊ ನಮ್ಮ ಸುತ್ತಮುತ್ತ ಇದ್ದವು.
ಅಂತವರಲ್ಲಿ ಒಬ್ಬರು ಈ ಕಲ್ಪನಾ ಅಕ್ಕ. ಹೊನ್ನಾವರದ ಪ್ರೌಢಶಾಲೆ ಒಂದರಲ್ಲಿ ಅಧ್ಯಾಪಿಕೆ ಆಗಿಂಡು, ಹವ್ಯಾಸಲ್ಲಿ ಅನೇಕ ಸಾಹಿತ್ಯಕೃತಿಯ ಪ್ರಕಟಿಸಿಗೊಂಡು ಸರಸ್ವತಿ ಸೇವೆ ಮಾಡಿಗೊಂಡು ಇದ್ದವು.
ಹೊಸ್ತಿಲು, ಮಕ್ಕಳಹಾಡು, ವಸಂತ ಲಾಸ್ಯ, ಇತ್ಯಾದಿ ಕವನ ಸಂಕಲನ; ಸಸ್ಯಾಹಾರಿ ಅಡುಗೆಗಳ ಪುಸ್ತಕ, ಗೃಹಸಂಜೀವಿನಿ – ಮನೆ ಮದ್ದಿನ ಸಂಗ್ರಹ – ಇತ್ಯಾದಿ ಸುಮಾರು ಪುಸ್ತಕಂಗೊ ಪ್ರಕಟ ಆಯಿದು.
“ಕಲ್ಪನಾ ಅರುಣ” ನಮ್ಮ ಬೈಲಿಂಗೆ ಕವನವೊಂದರ ಕಳುಸಿಕೊಟ್ಟಿದವು. ನಾವೆಲ್ಲರೂ ಓದಿ, ಒಪ್ಪ ಕೊಡುವೊ.
ನಮಸ್ಕಾರ.
ದಾಯವಾದ್ರು:
ರಚನೆ: ಕಲ್ಪನಾ ಅರುಣ್
ದಾಯವಾದ್ರು ಅಂದ್ರೆ ಎಲ್ರ ಮನೆಲೂ ಹೊಡೆತೊ ಕತೆ
ಜಗಳ ಪುಕಾರು ದೂರು ಬರೀ ಚಾಡಿ ಮತ
ನೋಡ್ವೋರ ಕಣ್ಗೆ ಭಾರೀ ಪ್ರೀತಿ ಒಳಗೆ ನಡೇತೂ ಕಶ್ ಬಿಶಿ
ಆಸ್ತಿ ಪಾಸ್ತಿ ತಂಟೆ ತಕರಾರು ಗುಂಟೆಗೆ ||
ಅಣ್ಣ ತಮ್ಮ ಸಣ್ಣಕ್ಕಿದ್ದಾಗ ಪ್ರೀತಿಂದಿದ್ದೊ
ಈಗ ನೋಡ್ದ್ರೆ ಮಾತಿಗ್ ಮಾತ ಬೆಳೆಸ್ತೊ
ಕೈಸಾರ್ ಮೈ ಸಾರ್ ಹೋದ್ರೂ ಹೆಚ್ಚೇನೂ ಇಲ್ಲೆ
ಕಟ್ಕಂಡ್ ಹೆಣ್ತಿರೂ ಎಲ್ಲದಕ್ಕೂ ಮುಂದೆ ಆಗ್ತೊ ||
ಕಂಜೂಸ್ ತನ ಲಾಯಕ್ಕಾಗ್ತು ಮುಂದೆ ಇರ್ತೊ
ಪಾಲು ಪೊಗಟೆ ಬರುವಂತದ್ರಲ್ಲಿ ಕಣ್ಣ ಕಣ್ಣ ಬಿಡ್ತೊ
ಹೆಚ್ಕಮ್ಮಿ ಆಗ್ದಗಿದ್ದಾಂಗ್ ಲೆಕ್ಕ ಹಾಕ್ತೊ
ಯಜಮಾನ್ ತನ್ಕೆ ಮಾಡೂಲೇ ಹಾತಬರೇತಿರ್ತೊ ||
ಯಾರಿಗೂ ಹೊತ್ಕಂಬ್ದು ಬೇಡ ಜವಾಬ್ದಾರಿ
ಮನೆತನಕ್ಕ ಬೇಕಾದ ಉಸಾಬರಿ
ಎಲ್ರಿಗೂ ಬೇಕು ದೊಡ್ಡಸ್ತಿಕೆ ಆಡಂಬ್ರ
ಅದ್ಕಾಗಿ ನಡೇತೀರ್ತು ಷಡ್ಯಂತ್ರ ||
ಆರಾಮಿಗೆ ಐಷಾರಾಮಿಗೆ ಬಪ್ಪುಲಾಗ ಗಂಡಾಂತ್ರ
ಸ್ವಾರ್ಥಕ್ ಬಿಟ್ಟು ಬೇರೆದಕ್ಕಿಲ್ಲೆ ಮತಾಂತ್ರ
ದಾಯವಾದಿತನವೇ ಈಗಿನ ಆಚಾರ ವಿಚಾರದಲ್ಲೂ ವಾ
ದುಡ್ಡಿನಾಸೆ ಸಾಯುತನ್ಕ ದೊಡ್ಡೊರಾದ್ರೂವಾ||
~*~*~
ಸೂ:
- ದಾಯವಾದ್ರು = ದಾಯಾದಿ
- ಲೇಖಕಿಯ ವಿಳಾಸ:
ಶ್ರೀಮತಿ ಕಲ್ಪನಾ ಅರುಣ
ಪತಿ: ಅರುಣ ಹೆಗಡೆ,
57, “ಚೈತನ್ಯ”,
5 ನೇ ಮುಖ್ಯ ರಸ್ತೆ,
ಶ್ರೀ ಲಕ್ಷ್ಮೀನಾರಾಯಣ ಬಡಾವಣೆ
ಮುನ್ನೆಕೊಳಾಲು, ಮಾರತಹಳ್ಳಿ
ಬೆಂಗಳೂರು – 560037
ಶ್ರೀಮತಿ ಕಲ್ಪನಾ ಅರುಣ
“ಸ್ವಾರ್ಥಕ್ ಬಿಟ್ಟು ಬೇರೆದಕ್ಕಿಲ್ಲೆ ಮತಾಂತ್ರ” ದೇಶ- ರಾಜ್ಯ ಗಳ ರಾಜಕೀಯಕ್ಕೂ ಹಲವು ಮನೆಗಳಲ್ಲಿಪ್ಪ ಪರಿಸ್ಥಿತಿಗೂ ಎಷ್ಟು ಸಾಮ್ಯ ! ಉ.ಕ.ದ ಹವ್ಯಕ ಶೈಲಿಯ ಪದ್ಯ ಲಾಯಕ್ ಇದ್ದೊ/ಇಜ್ಜು.
“ಸ್ವಾರ್ಥಕ್ ಬಿಟ್ಟು ಬೇರೆದಕ್ಕಿಲ್ಲೆ ಮತಾಂತ್ರ” ದೇಶ- ರಾಜ್ಯ ಗಳ ರಾಜಕೀಯಕ್ಕೂ ಹಲವು ಮನೆಗಳಲ್ಲಿಪ್ಪ ಪರಿಸ್ಥಿತಿಗೂ ಎಷ್ಟು ಸಾಮ್ಯ ! ಉ.ಕ.ದ ಹವ್ಯಕ ಶೈಲಿಯ ಪದ್ಯ ಲಾಯಕ್ ಇಜ್ಜು.
ಸಂತೋಷ ಆತು. ಸ್ವಾಗತ.
ಸುಸ್ವಾಗತ ಬೈಲಿಂಗೆ.
ಹವ್ಯಕ ಭಾಷೆಯ ವೈವಿಧ್ಯತೆ ಬೈಲಿಲ್ಲಿ ಬತ್ತಾ ಇಪಪ್ದು ಸಂತೋಷದ ಸಂಗತಿ
ಸ್ವಾಗತ..ಕವನ ಚೆಂದ ಇದ್ದು..ಹವ್ಯಕ ಭಾಷಾ ವೈವಿಧ್ಯತೆ ಕಾಣ್ತು..ಪ್ರತಿಭೆಗೆ ಸರಿಯಾದ ಅವಕಾಶ ಸಿಕ್ಕಿ ಸಮಾಜಲ್ಲಿ ಗುರುತುಸುವಹಾಂಗೆ ಆಗಲಿ..
ಹವ್ಯಕ ಭಾಷೆಲಿ ಎಷ್ಟು ವೈವಿದ್ಯ ಇದ್ದು ಅಲ್ಲದಾ…
ಕೊಶಿ ಆತು, ಕಲ್ಪನ ಅಕ್ಕನ ಕವನ ಓದಿ.
ಕಲ್ಪನಾಕ್ಕಂಗೆ ಬೈಲಿಂಗೆ ಸ್ವಾಗತ.
ಕವನ ಲಾಯಕ ಆಯ್ದು. ಒಪ್ಪ. ಬತ್ತಾ ಇರಲಿ.