Oppanna.com

ಹವ್ಯಕ ಭಾಷೆ – ಕಲ್ಪನಾ ಅರುಣ್

ಬರದೋರು :   ಕಲ್ಪನಾ ಅರುಣ್    on   30/05/2019    0 ಒಪ್ಪಂಗೊ

ಅಬ್ಬೆ ಬಾಷೆ ಹವ್ಯಕ
ಅಟಾ ಅಡಿದ್ ಹವ್ಯಕ
ಖುಶಿಯಾಗ್ ನೋಡದ್ ಹವ್ಯಕ
ಬೆಳ್ದದ್ದೆಲ್ಲ ಹವ್ಯಕ!!

ಹಳ್ಳೀಮೇಲೆ ಕವ್ಳ ಹಾಯ್ಕಂಡ್
ತೋಟ್ದ ಕೆಲ್ಸಾ ಮಾಡ್ಂಡ್
ಅಪ್ಪೇಹುಳಿ ಅನ್ನಾ ಉಂಡ್ಕಂಡ್
ತಂಪಿನೆಲ್ದಮೇಲ್ ಮನಿಕಂಡ್
ಕಾಲಾಕಳುಲಕ್ ತಯಾರಾದ್ರೆ
ಹಸ್ರು ನಲ್ಯುಲ್ ಖುಶಿಯೋ ಖುಶಿ ನಗ್ರದವ್ದೂ ಜನಜೀವ್ನಾ!!

ಅಪ್ರೂಪಕ್ಕೆ ಹಳ್ಳೀಗ್ ಬಂದೊ
ಶಾಂತತಿಂದ ಮನೇಲ್ ವಳ್ದೊ
ನಗ್ರದ್ ಬೇಜಾರ್ ಸ್ವಲ್ಪ ಕಳ್ದೊ
ನೆಂಟ್ರಾಇಷ್ಟ್ರಾಯೆಲ್ಲಾ ಸೇರ್ದೊ
ಹೊಸಾಉಮೇದಿಲ್ ತಿರ್ಗಿ ಹೋದೊ
ರಾಶಿ ಖುಶಿ ಹಾಡ್ ಹೊಗಳ್ದೊ
ಎಷ್ಟ್ ಚಂದಾ ಅರಾಮು ನಮ್ಮೂರು ಊಟಾ ತಿಂಡಿ!!

ಎಲ್ಲೆ ಇರ್ಲಿ ಹೇಂಗೆ ಇರ್ಲಿ
ನಮ್ಮೂರು ನಂಗೊಕೆ
ಊರಿಗ್ ಬಂದ್ರೆ ಅದೆಷ್ಟ್ ಖುಶಿ
ಶಾಂತಿ ನೆಮ್ಮದಿ
ಜಗ್ಳ ಬೇಡಾ ಪಾಲು ಪೊಗ್ಟೆ ಬೇಡಾ
ಪ್ರೀತಿಂದ್ ಇಪ್ಪೊ ಸಂಸಾರ ಮಾಡೋ ಹವ್ಯಕ್ ಸಂತತಿ!!

ಬಾಷೆ ಮೇಲೆ ಅಬಿಮಾನಾ
ನಮ್ಮಂದೋರಾ ಸಮ್ಮಾನ
ಪ್ರೀತಿ ವಿಶ್ವಾಸ ಗುಣಗಾನಾ
ಗೌರವ ಪೂರ್ವಕ ಸಂದಾನ
ಬೆಳ್ಕಂಬಂದ್ರೆ ಹಳ್ಳಿ ದಿಲ್ಲಿ
ಎಲ್ಲಾಬದಿಗೂ ಚಲೊನೇ ಇರ್ತು
ಹವ್ಯಕ ಸಂತಾನ!!

ಕಲ್ಪನಾಅರುಣ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×