Oppanna.com

ಸಮಸ್ಯೆ- 07: “ಕೆಸವಿನ ಪತ್ರೊಡೆ ರುಚಿಯಕ್ಕು”

ಬರದೋರು :   ಸಂಪಾದಕ°    on   18/08/2012    19 ಒಪ್ಪಂಗೊ

ಬೈಲಿನ ಸಮಸ್ಯಾಪೂರ್ಣ ಆರು ಕಂತು ಆತು.
ಆರು ಗೆರೆಯ ಷಟ್ಪದಿಗಳ ಎಲ್ಲವನ್ನೂ ಒಂದರಿ ಪರಿಹಾರ ಮಾಡಿ ಆತು.
ಇದೀಗ ಎರಡ್ಣೇ ಸುತ್ತು. ಮತ್ತೆ ಬಂತು ಬಾಣ – ಶರ ಷಟ್ಪದಿ.

ಈ ವಾರದ ಸಮಸ್ಯೆ:

“ಕೆಸವಿನ ಪತ್ರೊಡೆ ರುಚಿಯಕ್ಕು”

ಮಳೆಗಾಲಲ್ಲಿ ಒಂದರಿ ಆದರೂ ರುಚಿ ನೋಡೆಡದೋ!

ಶರ ಷಟ್ಪದಿ

ಸೂ:

  • ಈ ಸಮಸ್ಯೆ ಶರ ಷಟ್ಪದಿಲಿ ಇದ್ದು.
    (ಕೆಸವಿನ | ಪತ್ರೊಡೆ | ರುಚಿಯಿ | ಕ್ಕು)
    ನಾಕು ನಾಕರ ಎರಡು ಗುಚ್ಛ – ಮೊದಲೆರಡು ಸಾಲಿಲಿ.
    ನಾಕರ ಮೂರು ಗುಂಪು, ಕೊನೆಗೊಂದು ಗುರು – ಮೂರ್ನೇ ಸಾಲಿಲಿ.
  • ಆದಿಪ್ರಾಸಕ್ಕೆ ಸಲಹೆ: (ಆಟಿ)
    ಸುರುವಾಣ ಅಕ್ಷರ ಲಘು, ಎರಡ್ಣೇ ಅಕ್ಷರ “ಸ” ಕಾರ.
    ಮಸರು, ಕಸವು ಇತ್ಯಾದಿ.
  • ಕಳುದ ಸರ್ತಿ ಶರ ಷಟ್ಪದಿ ಸಮಸ್ಯೆ ಇಲ್ಲಿದ್ದು: https://oppanna.com/chodyango/samasye-4-aati-malegala-shara-shatpadi
  • ಹೆಚ್ಚಿನ ಮಾಹಿತಿಗೆ:
    https://oppanna.com/oppa/shara-kusuma-bhoga-bhamini-shatpadi
    http://padyapaana.com

19 thoughts on “ಸಮಸ್ಯೆ- 07: “ಕೆಸವಿನ ಪತ್ರೊಡೆ ರುಚಿಯಕ್ಕು”

  1. ನಮಸ್ಕಾರ ಭಾವ. ಆನು ಈ’ಅಚ್ಹಡಿ’ ಯಂತ್ರದ ಕ್ಲಾಸಿಂಗೆಲ್ಲ ಹೋಯಿದಿಲ್ಲೆ .ಎನ್ನಶ್ಟಕ್ಕೇ ಕಲ್ತದು. ಈಗ’ ಷ’ ಗೊಂತಾತು. ಹಾಂಗೇ ಇನ್ನೂ ಕೆಲವು ಗೊಂತಕ್ಕು ಹೇಳಿ ಕಾಣುತ್ತು. ಧನ್ಯವಾದಂಗೊ.

  2. ಮುಳಿಯದಣ್ಣ,ಆಗಲೇ ಹೇಳೆಕಾತು ,ಹಸರ ಪಾಚದ ನೆಂಪು ಮಾಡಿ ಬಾಯಿಲಿ ನೀರು ಅದಾ.. ಹರುದತ್ತು.ನಿಂಗಳ ಒಪ್ಪಕ್ಕೆ ಧನ್ಯವಾದ.

    ಎನಗೆ ಈ’ ಪಟ್ಟೆ ಶ’ ಅಚ್ಹಡಿ ಮಾಡಲೆ ಬತ್ತಿಲ್ಲೆನ್ನೆ.ಎನ್ಸ ಮಾಡುತ್ಸು ಬಾವಾ?

    1. sa – ಸ, sha – ಶ, Sha – ಷ

      ಬಲದ ಹೊಡೆಲಿ ಮೇಗೆ Type in language bar iddallada. adara hatre ? question mark iddu nodi. language select maadikki ? idara otti nodi. akshara henge baretsu hedu torsuttu alli ಬಾಲಣ್ಣ.

  3. ಪಿಸುರೆಂತಕೆ ಅದ!

    ಹಸಿ ಮೆಣಸಿತ್ತೋ!

    ಸೊಸೆ ಒಳದಿಕೆ ನೆಗೆಮಾಡಿತ್ತೋ/

    ಕಸವಿತ್ತೋ ಅದು

    ‘ವಿಶ’ವಲ್ಲನ್ನೇ

    ಕೆಸುವಿನ ಪತ್ರೊಡೆ ರುಚಿಯಕ್ಕು/೧/

    ಸೊಸೆ ಕೂಸಲ್ಲದೊ

    ‘ಕುಸುಮ’ನೆ ,ತಂದದು

    ಕೆಸವೆಲೆ ಲಾಯಕ ಹಸಿಯಿದ್ದು/

    ಹೊಸ ಬೆಲ್ಲದ ಜೆತೆ

    ‘ಸುಳಿ’ಯುದೆ ಸೇರಿರೆ

    ಕೆಸವಿನ ಪತ್ರೊಡೆ ರುಚಿಯಕ್ಕು/೨/

    ಮುಳಿಯ ಭಾವ, ಕಿಸೆ ಕಾಲಿಯಾದರೆಂತ? ವಿಶೇಶ ಅಸಲಿಲ್ಲದ್ದೆ ಕೆಸವಿನ ಪತ್ರೊಡೆ ಮಾಡಲಕ್ಕನ್ನೆ

    ಕುಮಾರಮಾವನ, ಚೆನ್ನೈ ಭಾವನ,ಎರಡು ಜೆನ ಗೋಪಾಲಣ್ಣಂದ್ರ ಪದ್ಯಂಗೊ ಎಲ್ಲ ಚೆಂದ ಆಯಿದು.

    1. ಕೆಸವಿನ ಪತ್ರಡೆ ನಿಜಕ್ಕೂ ರೈಸಿತ್ತು ಬಾಲಣ್ಣ.
      “ಕಸವಿತ್ತೊ?ಅದು ವಿಷವಲ್ಲನ್ನೆ” ಇಷ್ಟ ಆತೆನಗೆ. ಎಲೆ ಒ೦ದರಿ ಮನಾರಕ್ಕೆ ತೊಳದರಾತನ್ನೆ!

  4. ಕೆಸರಿಲಿ ಹುಟ್ಟಿದ
    ರಸಸೆಸಿಯಿದು ಕೊದಿ
    ಯೊಸರದೊ ಕಂಡರೆ ಸಾಕಿದರ
    ಹಸಿಕಾಯ್ ಬೆಲ್ಲ ಕೆ
    ರಸಿಯೊಗ್ಗರಿಸಿದ
    ಕೆಸವಿನ ಪತ್ರೊಡೆ ರುಚಿಯಕ್ಕು

    1. ಗೋಪಾಲಣ್ಣ,
      ಹಸಿಕಾಯ್ ಬೆಲ್ಲ ಕೆರಸಿದ ಮಾತ್ರಾಸ೦ಯೋಜನೆ ಲಾಯ್ಕಾಯಿದು.ಒಳ್ಳೆ ಸೀವಾತು ಪತ್ರೊಡೆ.

  5. ಹಸರಿನ ಪಾಯಸ
    ಹೆಸರಿನ ಹೇಳಿರೆ
    ಹೊಸ ಜವ್ವನವೊ೦ದರಿ ಬಕ್ಕು।
    ನಸು ಬೆಳಿ ಬೆಲ್ಲದ
    ಬೆಶಿ ರವೆ ಕೂಡಿರೆ
    ಕೆಸವಿನ ಪತ್ರೊಡೆ ರುಚಿಯಿಕ್ಕು।।

    ನಸುಕಿ೦ಗೆದ್ದರೆ
    ಹಸಿಮೆಣಸೆ೦ತಗೆ
    ಮೊಸರವಲಕ್ಕಿಯೆ ಸಾಕಕ್ಕು।
    ಬಸಳೆಯ ಕೊದಿಲಿನ
    ಎಸರಿ೦ಗದ್ದಿರೆ
    ಕೆಸವಿನ ಪತ್ರೊಡೆ ರುಚಿಯಿಕ್ಕು।।

    ಒಸರಿನ ಮೂಲದ
    ಕೆಸರಿನ ಕ೦ಡರೆ
    ಹಸಿ ನೀರೇ ಬೇಡದ್ದಕ್ಕು।
    ನುಸಿ ಪೆಟ್ಟಿದ್ದರು
    ಹೊಸ ತೋಟದ ಕರಿ
    ಕೆಸವಿನ ಪತ್ರೊಡೆ ರುಚಿಯಿಕ್ಕು।।

    ಕಿಸೆ ಕಾಲಿಯೊ?ಬಿಡು
    ಮಸೆ ಕತ್ತಿಯ ತಾ
    ಹಸುರಿನಯೆಲೆ ಕೆಳ ಜಾಲಿ೦ದ।
    ಹಸೆ ಹಿಡುದರು ಸೈ
    ಪಸೆಯೆಣ್ಣೆಗೆ ಬೆಶಿ
    ಕೆಸವಿನ ಪತ್ರೊಡೆ ರುಚಿಯಿಕ್ಕು।।

  6. ಬೆಶಿಲಿನ ಬಾಯಿಯ ಕೆಸವಿದು
    ಮಾಡಿರೆ ಪತ್ರೊಡೆ ಲಾಇಕಕ್ಕು
    ಎಣ್ಣೆ ಬೆಲ್ಲ ಸೇರಿರೆ ಇದಕ್ಕೆ
    ಪಾಕವು ಅಕ್ಕು ಬಲು ಒಪ್ಪ
    ಅಕ್ಕಿಯ ಬದಲು ಹಾಕುವ
    ನಾವು ಬೇಸನು ಹಿಟ್ಟು
    ಆವಗ ಅಕ್ಕು ಹೊಸ ರುಚಿಯು

    1. ಶ್ಯಾಮಣ್ಣ,
      ಹೊಸರುಚಿ ಲಾಯ್ಕ ಆದರೂ ಸಮಸ್ಯೆ ಹಾ೦ಗೆಯೇ ಒಳುದತ್ತನ್ನೆ !
      ಶರಷಟ್ಪದಿಲಿ “ಕೆಸವಿನ ಪತ್ರೊಡೆ ರುಚಿಯಕ್ಕು ” ಒ೦ದರಿ ಪ್ರಯತ್ನ ಮಾಡಿ,ಅದರ ರುಚಿ ಹಿಡುದರೆ ಪಕ್ಕಕ್ಕೆ ಬಿಡ !

    2. ನಮಸ್ಕಾರ,
      ನಿಂಗಳ ತಪ್ಪುಗಳ ಮಾಂತ್ರ ಎತ್ತಿ ಹಿಡಿತ್ತಾ ಇದ್ದೆ ಹೇಳಿ ಗ್ರೇಶೆಡಿ.
      ಪದ್ಯ “ಶರ ಷಡ್ಪದಿ” ಛಂದಸ್ಸಿಲಿ ಬರೆಯೆಕ್ಕಾತು. ಏವ ಛಂದಸ್ಸಿಲಿ ಸಮಸ್ಯೆಯ ಕೊಟ್ಟಿದೋ ಅದೇ ಛಂದಸ್ಸಿನ ಪಾಲಿಸುದು ಸಮಸ್ಯಾಪೂರಣದ ನಿಯಮ. ಅಕೇರಿಯಾಣ ಸಾಲು ” ಕೆಸನವಿನ ಪತ್ರೊಡೆ ರುಚಿಯಕ್ಕು” ಬಪ್ಪ ಹಾಂಗೆ, ನಿಂಗೊ ಮೇಲೆ ಬರದ ಭಾವನೆಗಳ ಛಂದೋಬದ್ಧವಾಗಿ ಬರವಲೆ ಪ್ರಯತ್ನ ಮಾಡಿ.

  7. ಹಶುವೊಂದಿದ್ದರೆ
    ಹೊಸರುಚಿಯೆಲ್ಲೊಂ
    ದುಸುರಿಲಿ ತಿಂದರೆ ಕೊಶಿಯಕ್ಕು ।
    ಹಶುವಾಗದ್ದರು
    ಬೆಶಿಲೊಗ್ಗರಿಸಿದ
    ಕೆಸವಿನ ಪತ್ರೊಡೆ ರುಚಿಯಕ್ಕು ॥

  8. ಯೇ ಭಾವ, ಮೊಸರು, ಮಜ್ಜಿಗೆ ಆಗದ್ದವಕ್ಕೆ ತೊರುಸುಗೋ ಅಂಬಗ. ಬೆಶಿಬೆಶಿ ( ಬಿಸಿಬಿಸಿ – ಇಪ್ಪದರ ಹಾಂಗೆ ಓದಿದೆ ಆನು ಅಕ್ಕನ್ನೆ) ತಿಂದಪ್ಪಗ ಕೊಶೀ ಆತು.

    1. ‘ಸ’ಕಾರಕ್ಕೆ ‘ಶ’ಕಾರ, ‘ಷ’ಕಾರ ಪ್ರಾಸವೂ ಬಪ್ಪಲಕ್ಕು, ಭಾವ.

  9. ವಸರಿನ ಜಾಗೆಲಿ
    ಕಸವಿನ ಎಡೆಲಿಯು
    ಅಸಲೇ ಹಾಕದೆ ಮಾಡ್ಳಕ್ಕು ।

    ಬಿಸಿಬಿಸಿ ಸಿಕ್ಕಿರೆ
    ಮಸರಿನ ಜತೆಲಿಯು
    ಕೆಸವಿನ ಪತ್ರೊಡೆ ರುಚಿಯಿಕ್ಕು ॥

  10. ಹಸುರಿನ, ತೊರುಸುವ
    ಕಸವಿನ ಕೊಟ್ಟಿಗೆ
    ಪಿಸುರಲಿ ತಿಂದರೆ ಹೇಂಗಕ್ಕು ।

    ಬಿಸಿಬಿಸಿ ಇದ್ದರೆ
    ಹಸಿವಿನ ಹೊಟ್ಟಗೆ
    ಕೆಸವಿನ ಪತ್ರೊಡೆ ರುಚಿಯಕ್ಕು ॥

    ಕೆಸರಿನ ಮಧ್ಯದ
    ಕಸವಿಲಿ ಬೆಳದಾ
    ನುಸುಲಿನ ಫಸಲಿನ ಸೊಪ್ಪಿಕ್ಕು ।

    “ಗಸಿ”ಜತೆ ತಿಂದುತೊ-
    ರುಸಿದರೆ ತೊರುಸಿರೆ
    ಕೆಸವಿನ ಪತ್ರೊಡೆ ರುಚಿಯಕ್ಕು ॥

    1. ಇಲ್ಲೆಪ್ಪ, ಪಿಸುರಿಲಿ ತಿಂದದಲ್ಲ, “ಗಸಿ’ಯೊಟ್ಟಿಂಗೆ ತಿಂದದು.ಪಷ್ಟಾಯಿದು.

  11. ಕಸಿವಿಸಿ ಎಂತಕೆ

    ಕೆಸರಿಲಿ ಬೆಳದರೆ

    ‘ಹೊಸರುಚಿ’ ತೆಗದದ ಮಡುಗಾಚೆ/

    ‘ಐಸಮ್ಮ’ ತಂದರೆ

    ಹಸಿಹಸಿ ಹಸಿರೆಲೆ

    ಕೆಸುವಿನ ಪತ್ರೊಡೆ ರುಚಿಯಿಕ್ಕು/

    1. ಯೇ ಬಾಲಣ್ಣ, ‘ಐಸಮ್ಮ” ತಂದು ಕೊಟ್ಟ ಕೆಸವಿನ ಸೊಪ್ಪಿನ ಪತ್ರೊಡೆ ತೊರ್ಸುದ್ದಿಲೆ ಇದಾ, ರುಚಿ ಆಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×