- ಹುಟ್ಟು ಹಬ್ಬದ ಶುಭ ಆಶಯ - December 17, 2014
- ಹರಿಯೊಲ್ಮೆ ಅಜ್ಜಿ - September 5, 2014
- ಹುಟ್ಟುಹಬ್ಬದ ಶುಭಾಷಯಂಗೋ - May 17, 2014
ಒಪ್ಪಣ್ಣನ ಶುದ್ದಿಗಳಲ್ಲಿ ಎಡೆಡೇಲಿ “ಹರಿಯೊಲ್ಮೆ” ಮನೆಯ ಬಗ್ಗೆ ಬಂದ್ಸು ನಿಂಗೊಗೆ ನೆಂಪಿಕ್ಕು ಅಲ್ಲದೋ?
ಬಾಲ್ಯಂದಲೇ ಧಾರಾಳ ಹೋಗಿಂಡಿದ್ದ ನೆರೆಕರೆಯ ಆ ಮನೆ ಒಪ್ಪಣ್ಣಂಗೆ “ಮನೆಯಂತೇ”!
ಮನೆಯಂತೇ ಹೇಳಿ ಆಯೇಕಾರೆ ಅಲ್ಲಿಪ್ಪೋರುದೇ ಮನೆಯವರಂತೇ ಆಗೆಡದೋ? ಅಪ್ಪು.
ಅಲ್ಯಾಣ ಅಪ್ಪಚ್ಚಿ-ಚಿಕ್ಕಂದ್ರೂ ಮನೆಯೋರಂತೇ. ಆ ಪ್ರೀತಿ, ಆರ್ದ್ರತೆ ಎಂದಿಂಗೂ ಇರ್ತು. ಇದರ ನಮ್ಮ ರಂಜನಿಅಕ್ಕನೂ ಒಪ್ಪುಗು, ಬೆಂಗುಳೂರಿಲಿಪ್ಪ ಭಾಗ್ಯಕ್ಕನೂ ಒಪ್ಪುಗು; ಅಮೇರಿಕಲ್ಲಿಪ್ಪ ಸುಮನಕ್ಕನೂ ಒಪ್ಪುಗು!ಹರಿಯೊಲ್ಮೆ ಮನೆಲಿಪ್ಪ ವಾಣಿ ಚಿಕ್ಕಮ್ಮಂಗೆ ಬರೆತ್ತ ಅಭ್ಯಾಸ ಇಪ್ಪದು ಗುಟ್ಟಾಗಿ ಏನೂ ಒಳುದ್ದಿಲ್ಲೆ.
ಚೆಂದದ ಭಾವನೆಗಳ ಅಷ್ಟೇ ಚೆಂದದ ಅಕ್ಷರಲ್ಲಿ ಬರದ ಪದ್ಯಪುಸ್ತಕವ ಮೊನ್ನೆ ಮಾಷ್ಟ್ರುಮಾವಂಗೆ ತೋರ್ಸೆಂಡಿಪ್ಪಗ ಒಪ್ಪಣ್ಣಂಗೆ ಕಂಡಿತ್ತಿದ್ದು.
‘ಚೆಲಾ – ಹರಿಯೊಲ್ಮೆ ಚಿಕ್ಕಮ್ಮಂಗೆ ಪದ್ಯ ಬರವಲೂ ಬತ್ತೋ!’ ಒಂದರಿ ಆಶ್ಚರ್ಯ ಆದ್ದಪ್ಪು.
ಹೂಗಿನ ಗೆಡುಗೊಕ್ಕೆ ನೀರು ಕೊಡುವಗ, ದನಗೊಕ್ಕೆ ಹುಲ್ಲು ಹಾಕುವಗ, ದೇವರ ಪೂಜೆಗೆ ಅಟ್ಟಣೆ ಮಾಡುವಗ, ಅಡಿಗೆ-ಒಗ್ಗರಣೆ ಮಾಡುವಗ – ಚಿಕ್ಕಮ್ಮನ ಮನಸ್ಸಿನೊಳ ಇಪ್ಪ ಮಾತೃಹೃದಯಲ್ಲಿ ನಿರಂತರವಾಗಿ ಚಿಂತನೆ ನೆಡೆತ್ತಲ್ಲದೋ – ಅದುವೇ ಪದ್ಯ ಆಗಿ, ಶುದ್ದಿ ಆಗಿ ರಚನೆ ಆಯಿದು. ಮಾಷ್ಟ್ರುಮಾವ°, ಗಣೇಶಮಾವ° ಎಲ್ಲೋರುದೇ ಒತ್ತಾಯಲ್ಲಿ “ಬೈಲಿಂಗೊಂದರಿ ಬನ್ನಿ ಚಿಕ್ಕಮ್ಮಾ” – ಹೇಳಿದ್ದಕ್ಕೆ, ಅಖೇರಿಗೆ ಹರಿಯೊಲ್ಮೆ ಅಪ್ಪಚ್ಚಿಯೂ ಹೇಳಿದ ಮತ್ತೆ – ರಜ ಪುರುಸೊತ್ತು ಮಾಡಿಗೊಂಡೇ ಬೈಲಿಂಗೆ ಬಂದವು.ಚಿಕ್ಕಮ್ಮ ಹೇಳ್ತ ಸಾಂಸಾರಿಕ, ಸಾಮಾಜಿಕ, ನೈತಿಕ ಶುದ್ದಿಗಳ ನಾವೆಲ್ಲೊರುದೇ ಕೇಳುವೊ°, ಚೆಂದದ ಶುದ್ದಿಗೊಕ್ಕೆ ಒಪ್ಪ ಕೊಡುವೊ°. ಚಿಕ್ಕಮ್ಮಂಗೆ ಶುದ್ದಿ ಹೇಳುಲೆ ಪ್ರೋತ್ಸಾಹ ಕೊಡುವೊ°.
ಅವರ ಶುದ್ದಿಗೊ ಬೈಲಿಲಿ ಅವರ ತೋಟದ ಕರೇಣ ಗೌರಿ ಹೊಳೆಯ ಹಾಂಗೆ ಹರಿಯಲಿ.
ಆ ಶುದ್ದಿಗಳ ಕೇಳ್ತ ಭಾಗ್ಯ ನವಗಿರಳಿ; ಶುದ್ದಿ ಹೇಳಿಂಡೇ ಬೈಲಿನೊಟ್ಟಿಂಗೆ ಅಖಿಲ ಸ್ನೇಹ ಬೆಳೆಯಲಿ.
ಒಳ್ಳೊಳ್ಳೆ ಶುದ್ದಿಗಳ ಅವರಕೈಂದ ಬರೆಶಲೆ ಗುರು-ದೇವರೂ, ಗುರು- ಗುಹನೂ ಅನುಕೂಲ ಮಾಡಿ ಕೊಡ್ಳಿ.
ಮನೆದೇವರಾದ ಷಣ್ಮುಖದೇವರು ಶುದ್ದಿ ಹೇಳುಲೆ ತಕ್ಕ ಸದವಕಾಶ ಕರುಣಿಸಿ ಕೊಡ್ಳಿ
– ಹೇದು ಬೈಲಿನ ಎಲ್ಲೋರ ಪರವಾಗಿ ಕೋರಿಕೆ.
~
ಒಪ್ಪಣ್ಣ
ಸ್ವ ಪರಿಚಯ:
ಎನ್ನ ಹೆಸರು ವಾಣಿ.ಮನೆ ಬೈಲಕರೆಯ ಹತ್ತರೆ ಹರಿಯೊಲ್ಮೆ.ಹುಟ್ಟಿದ್ದು ಕುಂಬಳೆಯ ಹತ್ತರೆಯ ನಾಯ್ಕಾಪು ಗೂಮೆ ಮೂಲೇಲಿ.
ಅಪ್ಪ ಶ್ಯಾಮ ಭಟ್ ಅಬ್ಬೆ ತಿರುಮಲೇಶ್ವರಿ.
ಎಂಗಳ ಬೆಳೆಶುಲೆ ಅಬ್ಬೆ ಅಪ್ಪ ತುಂಬಾ ಕಷ್ಟ ಪಟ್ಟಿದವು. ಅವರ ಕಠಿಣ ಪರಿಶ್ರಮ, ಕೆಲಸಲ್ಲಿ ಇಪ್ಪ ಶ್ರದ್ಧೆ, ಉತ್ಸಾಹ, ಛಲ ಇದರಿಂದಾಗಿ ಅವು ಒಳ್ಳೆಯ ನೆಲೆ ಕಂಡಿದವು.
ಎನಗೆ ಒಂದು ಅಕ್ಕ, ಒಬ್ಬ ಅಣ್ಣ, ಮೂರು ಜನ ತಮ್ಮಂದಿರು.
ಎನ್ನ ಬಾಲ್ಯವ ಜಾಲ್ಸೂರಿಂದ 3ಕಿ.ಮೀ ಮುಂದೆ ಅಡ್ಕಾರಿನ ಹತ್ತರೆ ಇಪ್ಪ ಗಬ್ಲಡ್ಕಲ್ಲಿ ಕಳುದ್ದೆ.
ಎನ್ನ ಪ್ರಾಥಮಿಕ ಶಿಕ್ಷಣ ಅಡ್ಕಾರಿಲಿ,ಹೈಸ್ಕೂಲು ನಮ್ಮ ಗುರುಗಳ ಶಾಲೆ ಸೀತಾ ರಾಘವ ವಿದ್ಯಾ ಸಂಸ್ಥೆ ಪೆರ್ನಾಜೆ ಲಿ ಆತು. ಆನು ಕಲ್ತ ಶಾಲೆಯ,ಗುರುಗಳ ಬಗ್ಗೆ ಎನಗೆ ಈಗ ಆ ಹೊಡೆ ಹೋದಪ್ಪಗ ಎಲ್ಲವೂ ನೆಂಪು ಆವ್ತು.
ಆನು ಸಣ್ಣದಿಪ್ಪಗ ಗಬ್ಲಡ್ಕಲ್ಲಿ ಗೆದ್ದೆ ಬೇಸಾಯ ಇತ್ತಿದ್ದು. ಎಂಗೊ ಮಕ್ಕೊ ಗೆದ್ದೆ ಹುಣಿಲಿ ಹಾರಿಯೊಂಡಿಪ್ಪ ಹಾತೆಗಳ ಹಿಡಿವದು, ಅದಕ್ಕೆ ಬಳ್ಳಿ ಕಟ್ಟಿ ಹಾರ್ಸುದು ಮತ್ತೆ ಮನೆ ಹತ್ತರೆ ಇಪ್ಪ ತೋಡಿಲಿ ಆಟ ಆಡಿಯೊಂಡು ಇತ್ತೆಯ.
ಗೆದ್ದೆಗೆ ಇರುಳು ಬಪ್ಪ ಹಂದಿಗಳ ಕಾವಲೆ ಹಂದಿಮಾಳ ಇತ್ತು. ಅದು ಹಗಲು ಎಂಗಳ ಆಟದ ಜಾಗೆ ಆಗಿತ್ತು.
ಬಾಲ್ಯ ಹೇಳುವಾಗ ಎನಗೆ ಅಜ್ಜನ ಮನೆ ಹೆಚ್ಚು ನೆಂಪಾವ್ತು.ಶಾಲಗೆ ರಜೆ ಸಿಕ್ಕಿದ ಕೂಡ್ಲೇ ಎನ್ನ ಪುಟ್ಟುಮಾವ (ತ್ರಿವಿಕ್ರಮ ಭಟ್~ ಯೇನಂಕೂಡ್ಳು) ಕರಕ್ಕೊಂಡು ಹೋಗಿ ರಜೆ ಇಡೀ ಅಲ್ಲಿ ಕೂರ್ಸಿಯೊಂಡು ಇತ್ತವು.
ಎಂಗೊ ಎನ್ನ ದೊಡ್ದಬ್ಬೆ, ಚಿಕ್ಕಮ್ಮಂದ್ರ ಮಕ್ಕೊ ಎಲ್ಲೋರು ಸೇರಿ ೧೦-೧೫ ಜನ ಅಲ್ಲಿ ಸೇರುಗು. ಎಂಗಳ ಪ್ರೀತಿಲಿ ಸುಲೋಚನ ಅತ್ತೆ ಉಪಚರಿಸುಗು.
೧೯೮೩ ನವೆಂಬರ್ ೨೧ಕ್ಕೆ ಅರ್ತ್ಯಡ್ಕ ವೆಂಕಟ್ರಮಣ ಭಟ್ ಮತ್ತು ಗೌರಮ್ಮ ಇವರ ೨ನೆ ಮಗ ಷಣ್ಮುಖ.
ಇವರ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲು ಮಡುಗುವ ಸೌಭಾಗ್ಯ ಬಂತು.
ಎಂಗೊ ಈಗ ಕೆಯ್ಯೂರು ಗ್ರಾಮದ ಹರಿಯೊಲ್ಮೆ ಹೇಳುವಲ್ಲಿ ವಾಸವಾಗಿದ್ದೆಯ. ಎಂಗೊಗೆ ಭಾಗ್ಯಶ್ರೀ,ಅಖಿಲಾ,ಶ್ರೀಗುಹ ಹೇಳಿ ಮೂರು ಜನ ಮಕ್ಕೊ.
ಮಗಳಕ್ಕೊಗೆ ಮದುವೆ ಆಯಿದು; ದೊಡ್ಡ ಮಗಳಿಂಗೆ ಆಶಯ ಹೇಳಿ ಪುಳ್ಳಿ ಕೂಸು ಇದ್ದು – ಹಾಂಗೆ ಅಜ್ಜ ಅಜ್ಜಿ ಕೂಡ ಆದ ಸಂತೃಪ್ತ ಜೀವನ ಎಂಗಳದ್ದು.
ಎನಗೆ ಹೂಗಿನ ಕೃಷಿ ಹೇಳಿರೆ ತುಂಬಾ ಇಷ್ಟ.ನೆಟ್ಟಿಕಾಯಿ ಬೆಳೆಶುದು,ಹೊಲಿಗೆ,ಅಲಂಕಾರ ವಸ್ತುಗಳ ತಯಾರು ಮಾಡುದು ಎನ್ನ ಹವ್ಯಾಸ.ಶಾಸ್ತ್ರೀಯ ಸಂಗೀತ ಕೇಳುದು,ಸಾಂಸ್ಕೃತಿಕ ನಾಟಕ ಎಂಗಳ ಮನೆ ಹತ್ತರೆ ಇದ್ದರೆ ಹೋಗಿ ನೋಡುವ ಹವ್ಯಾಸ.
ಆನು ಮೊದಲು ಕವನ ಬರದ್ದದು ೨೫-೦೯-೨೦೧೦ ಹೊತ್ತೋಪಗ.ಕವನ ಬರೆಯೆಕ್ಕಾರೆ ನಮ್ಮ ಜೀವನಲ್ಲಿ ಅತೀ ಹತ್ತರೆ ಮನಸಿಂಗೆ ನಾಟುವಂತಹ ಘಟನೆಗೋ ಸ್ಫೂರ್ತಿ ಕೊಡುತ್ತು ಹೇಳಿ ಎನ್ನ ಅಭಿಪ್ರಾಯ.
ಇದು ನಮ್ಮ ಮನಸ್ಸಿನ ಬೆಳವಣಿಗೆಗೆ ಪೂರಕ ಶಕ್ತಿಯಾವ್ತು ಅಲ್ಲದೋ?ಹೆರಿಯೋರ ಹಿತವಚನ,ಆಶೀರ್ವಾದ,ಮನೆಯ ವಾತಾವರಣ ಸ್ಫೂರ್ತಿ ಕೊಟ್ಟಪ್ಪಗ ಪ್ರತಿಯೊಬ್ಬ ವ್ಯಕ್ತಿಯ ಒಳ ಇಪ್ಪ ಪ್ರತಿಭೆ ಹೇರ ಬತ್ತು.
ಇದರಿಂದ ಮನಸ್ಸಿಂಗೆ ಸಂತೋಷದ ಭಾವನೆ ಬತ್ತು.ಹಳ್ಳಿಲಿಯೇ ಹುಟ್ಟಿ,ಬೆಳದ ಎನಗೆ ಇಲ್ಲಿಯ ಜೀವನ ಮನಸ್ಸಿಂಗೆ ಮುದ ಕೊಟ್ಟಿದು.
ಹಾಂಗೆ ಒಪ್ಪಣ್ಣನ ಬೈಲಿಲಿ ಬಂದು ಎನಗೆ ಶುದ್ದಿ ,ಕವನ ಹೇಳುಲೆ ಅವಕಾಶ ಮಾಡ್ಲೆ ಎಡಿಗೋ ಹೇಳಿ ಮಾಷ್ಟ್ರುಮಾವನ ಹತ್ತರೆ ಕೇಳಿದೆ.
ಇನ್ನು ಮುಂದೆ ಎನಗೆ ಗೊಂತಾದ ಹಾಂಗೆ ಶುದ್ಧಿಯ ಹೇಳ್ತೆ.ಅದಕ್ಕೆ ನಿಂಗಳ ಎಲ್ಲೋರ ಪ್ರೋತ್ಸಾಹ,ಸಹಕಾರ,ಹೆರಿಯೋರ ಆಶೀರ್ವಾದ ಕೇಳುತ್ತೆ.
ಹರೇರಾಮ
~
ಹರಿಯೊಲ್ಮೆ ವಾಣಿ ಚಿಕ್ಕಮ್ಮ
08251-205511
ಸೂ:
- ಚಿಕ್ಕಮ್ಮ ಕನ್ನಡಲ್ಲಿ ಈಗಾಗಲೇ ಹಲವು ಕವನಂಗಳ ಬರದ್ದವು.
ಹರಿ(ಯೊಲ್ಮೆ ವಾ)ಣಿ ಕನ್ನಡಲ್ಲಿ ಕವನಂಗಳ ಬರವಗ ಹರಿಣಿ ಹೇಳುವ ಕಾವ್ಯನಾಮಲ್ಲಿ ಬರೆತ್ತವು. - ಶುದ್ದಿಗಳ ಸೀತ ಬೈಲಿಂಗೆ ಹೇಳುಲೆ ಈಗ ಅವಕಾಶ ಸಾಲದ್ದಕ್ಕೆ ಕಾಗತಲ್ಲಿ ಬರದು ಬೈಲಕರೆ ಗಣೇಶಮಾವನ ಮನಗೆ ಎತ್ತುಸುತ್ತವಾಡ.
ಅಪೂರ್ವ ಶುದ್ದಿಗೊ ಬೈಲಿಂಗೆ ಇಳಿಶಲೆ ಕೈಸಕಾಯ ಮಾಡ್ತ ಬೈಲಕರೆ ಗಣೇಶಮಾವಂಗೂ ಧನ್ಯವಾದಂಗೊ.
ವಾಣಿ ಚಿಕ್ಕಮ್ಮ,
ಆನು ನಿಶ, ಭಾಗ್ಯನ ಸ್ನೇಹಿತೆ. ಎನಗೆ ನಿಂಗೊ ಬರವದು ಗೊಂತಾಗಿ ಬಹಳ ಖೊಶಿ ಆತು. ಭಾಗ್ಯ ಹೆಳಿದ ಮೆಲೆ ಓದಿದೆ.. ಬರೆತ್ತಾ ಇರಿ. ಶುಭ ಹಾರೈಕೆಗೊ.
ಹೀಂಗಿಪ್ಪ ೧ ವೇದಿಕೆ ಕಲ್ಪಿಸಿದ್ದಕ್ಕೆ ಒಪ್ಪಣ್ಣಂಗೆ ಧನ್ಯವಾದಂಗೊ.
ಅಬ್ಬೆಗೆ ಸ್ವಾಗತ. ಎನ್ನ ಅಬ್ಬೆ ಕವನ,ಕಥೆ ಬರವದು ಎಲ್ಲರಿಂಗೆ ಗೊನ್ತಾದ್ದು ಈಗ ರಜ್ಜ ದಿನದ ಹಿಂದೆ. ಇದರ ಸುರು ಮಾಡಿದ ಮತ್ತೆ ಅಬ್ಬೆ ತುಂಬ ಖುಶಿಲಿ ಇರ್ತವು. ಜೀವನಲ್ಲಿ ಯಾವುದನ್ನು ಕಲಿವಲೆ ಎಡಿಗು ಹೇಳ್ತವು. ಎಂಗೊಗೆ ಎಲ್ಲ ಭಾರೀ ಸಂತೋಷ ಆವುತ್ತಾ ಇದ್ದು. ಆಬ್ಬೆ ನಿಂಗೊಗೆ ಒಳ್ಳೆದಾಗಲಿ. ಆಬ್ಬೆಯ ಬೆಳಕಿಂಗೆ ತಪ್ಪಲೆ ಸಹಕಾರ ಕೊಟ್ಟ ಅಪ್ಪ,ದೊಡ್ಡಪ್ಪ,ಮಾಷ್ತ್ರು ಮಾವ,ಒಪ್ಪಣ್ಣ,ಗಣೀಶ ಮಾವ ಎಲ್ಲರಿಂಗು ಎನ್ನ ಧನ್ಯವಾದಂಗೊ.
‘ಹರಿಯೊಲ್ಮೆ’ ಬೈಲಿಲಿ ಎಲ್ಲೋರಿ೦ಗೂ ಗೊ೦ತಿಪ್ಪ ಹೆಸರು.ಈಗ ಈ ಮನೆಯವರ,ಚಿಕ್ಕಮ್ಮನ ಪರಿಚಯ ಓದಿ ಕೊಶಿ ಆತು.
ಬೈಲಿನ ಬಳಗಕ್ಕೆ ಸ್ವಾಗತ,ಶುಭಾಶಯ೦ಗೊ.
ಶುಭಾಶಯಕ್ಕೆ ಧನ್ಯವಾದ
enna akkange bailinge swagatha.parichaya odi kushi athu.ottinge kannili neeru banthu.enna balyada nenapu kanna eduringe banthu.’harini’ kavyanama layka iddu.anu kavana odale kaytha idde.hechhechu kavana,kathe kalusu heli keligollutha idde.ella olledagali heli shubha haraisutha idde.
ಹೆಚ್.ಎಸ್ ನ ಮೋರೆ,ಬರವಣಿಗೆ ನೋಡಿ ಕುಶಿ ಆತು. ಎವತ್ತಾರದರೂ ಕಾ೦ಬೋ.ಸದ್ಯ ಬನ್ನಿ ಹೇಳಿತ್ತು.
ಪ್ರೀತಿಯ ಶುಭ ಹಾರೈಕೆಗೆ ಧನ್ಯವಾದ
ವಾಣಿ ಚಿಕ್ಕಮ್ಮ೦ಗೆ ಬೈಲಿ೦ಗೆ ಸ್ವಾಗತ. ಹೊಸ ಹೊಸ ಶುದ್ದಿಗೆ ಕಾಯ್ತಾ ಇದ್ದೋ…
ಒಪ್ಪಕ್ಕೆ ಧನ್ಯವಾದಂಗೋ
ಜಾಲ್ಸೂರು, ಗಬ್ಬಲಡ್ಕ, ಗೂಮೆಮೂಲೆಂದ ಬಾಲ್ಯದ ಶುದ್ದಿಗಳನ್ನೂ ಪರಿಚಯ ಮಾಡ್ಸಿಕ್ಕಿ.
ಬೈಲಿಂಗೆ ಸ್ವಾಗತಂ.
ಖಂಡಿತಾ ಇನ್ನುದೇ ನೆಂಪಾದ ಹಾಂಗೆ ಶುದ್ದಿ ಹೇಳ್ತೆಒಪ್ಪಕ್ಕೆ ಧನ್ಯವಾದ
ವಾಣಿ ಚಿಕ್ಕಮ್ಮಾ,,ಬೈಲಿಂಗೆ ಸ್ವಾಗತ
ವಾಣಿ ಅಕ್ಕಂಗೆ ಸ್ವಾಗತ.ಕವನ ಬರೆವದು ಸುರು ಮಾಡಿದ್ದದು ಕುಶಿ ಆತು.ನಮ್ಮಲ್ಲಿ ತಡವಾಗಿ ಬರೆವಲೆ ಸುರು ಮಾಡಿ ದೊಡ್ಡ ಹೆಸರು ಸಂಪಾದಿಸಿದ ಎಂ.ಕೆ.ಇಂದಿರಾ-ಇವರ ಉದಾಹರಣೆ ಇದ್ದು.ನಿಂಗೊಗೆ ಒಳ್ಳೆದಾಗಲಿ.ಯಾವಾಗಲಾದರೂ ಸುರತ್ಕಲಿಂಗೆ ಬಪ್ಪಾಗ ನಮ್ಮಲ್ಲಿಗೂ ಬನ್ನಿ.
ಖಂಡಿತಾ,ಒಪ್ಪಕ್ಕೆ ಧನ್ಯವಾದ
ಎನ್ನ ದೊಡ್ಡ ಚಿಕ್ಕಮ್ಮ (ಬೈಲಿಲಿ ಎಲ್ಲೋರ ವಾಣಿ ಚಿಕ್ಕಮ್ಮ) ಕವನ/ಕವಿತೆ ಬರೆತ್ತವೂಳಿ ಎನಗೆ ಗೊಂತಾದ್ದೆ ‘ಆಶಯ’ನ ಪುಣ್ಯಾಯದ ದಿನ. ತುಂಬಾ ಆಶ್ಚರ್ಯ ಆಗಿತ್ತು ಆ ದಿನ.
ಮತ್ತೊಂದು ದಿನ ಎನ್ನ ಅಪ್ಪ, ಅಬ್ಬೆ ಊರಿಂಗೆ ಆನು ಫೋನ್ ಮಾಡಿಪ್ಪಗ “ದೊಡ್ಡ ಚಿಕ್ಕಮ್ಮ ನ ಶುಧ್ಧಿಗೊ ಇನ್ನು ಒಪ್ಪಣ್ಣಲ್ಲಿ ಬತ್ತಡ” ಹೇಳುವಗ ತುಂಬಾ ಖುಷಿ ಆಗಿ ಕಾದುಗೊಂಡಿತ್ತಿದ್ದೆ.
ನಿನ್ನೆ ಅಬ್ಬೆ ಫೋನ್ ಲಿ “ನಾಳೆ ಬತ್ತಡ ದೊಡ್ಡ ಚಿಕ್ಕಮ್ಮನ ಶುಧ್ಧಿ” ಹೇಳಿದ ಮೇಲೆ ಓದುವಲ್ಲಿವರೆಗೆ ತಡೆಯ ಎನಗೆ.
ಮಾಷ್ಟ್ರು ಮಾವನ ಸಣ್ಣ ಮಗಂದೆ ನಿನ್ನೆ ಮೋರೆಪುಟಲ್ಲಿ (ಫೇಸ್ ಬುಕ್ ಲಿ ) ಮೆಸೇಜ್ ಮಾಡಿ ಹೇಳಿದ್ದ ಚಿಕ್ಕಮ್ಮನ ಶುಧ್ಧಿ ಬಪ್ಪ ಬಗ್ಗೆ.
ಆದರೆ ಅದು ಬೈಲಿಲ್ಲಿ ಬಂದ ಕೂಡ್ಲೆ ಓದುಲೆ ಆತಿಲ್ಲೆ ಎನಗೆ.
ಇಲ್ಲಿ ಅಷ್ಟಪ್ಪಗ ನಡು ಇರುಳು ಹನ್ನೆರಡೂವರೆ ಆಗಿತ್ತು.
ಹಾಂಗೆ ಇಂದು ಈಗ ನೋಡಿ ಖುಷಿ ತಡೆಯ.
ಲಾಯಿಕಾಯಿದು ಚಿಕ್ಕಮ್ಮ ನಿಂಗಳ ಪರಿಚಯ. ನಿಂಗಳ ಸ್ವ-ಹಸ್ತಾಕ್ಷರ ನೋಡುವಗ ಅಂದು ನಾವು ಕಾಗದ ಬರಕ್ಕೊಂಡಿದ್ದದೆಲ್ಲ ನೆಂಪಾತು.
ನಿಂಗಳ ಕಾವ್ಯ ನಾಮ ‘ಹರಿಣಿ’ ಅಪ್ಪ ಹೇಳಿಯಪ್ಪಗ ಭಾರೀ ಚಂದ ಇದ್ದು ಹೇಳಿದ್ದೆ.
ಬೈಲಿಂಗೆ ಸ್ವಾಗತ…. ಲಾಯಿಕಲ್ಲಿ ಬರದ್ದರ ಓದುಲೆ ಕಾಯ್ತಾ ಇರ್ತೆಯೊ ಆನುದೆ ನಿಂಗಳ ಅಳಿಯಂದೆ, ಹಾಂಗೆ ಬೈಲಿನ ಎಲ್ಲೋರುದೆ….
ಗಣೇಶ ಮಾವಂಗೆ ಧನ್ಯವಾದ ಹೀಂಗೆ ಕಂಪ್ಯೂಟರ್ಲಿ ಎಲ್ಲರು ಓದುವ ಹಾಂಗೆ ಟೈಪು ಮಾಡಿದ್ದಕ್ಕೆ.
ಒಪ್ಪಣ್ಣ ಬೈಲಿನ ಮೂಲಕ ಚಿಕ್ಕಮ್ಮನ ಶುಧ್ಧಿ ಎಲ್ಲೋರು ಓದುಲೆ ಅವಕಾಶ ಅಪ್ಪದಕ್ಕೆ ಒಪ್ಪಣ್ಣ ಬೈಲಿಂಗೆ ಮತ್ತೆ ಒಪ್ಪಣ್ಣಂಗುದೆ ಧನ್ಯವಾದಂಗೊ.
ಅಪ್ಪನುದೆ ಹೀಂಗೆ ಶುಧ್ಧಿ ಹೇಳುಲೆ ಸುರು ಮಾಡ್ಲೆ ಒಪ್ಪಣ್ಣ, ಆನು ಅಪ್ಪನತ್ರೆ ಹೇಳಿದ್ದೆಯೊ.
ನೋಡ ಯಾವಾಗ ಬತ್ತು ಹೇಳಿ.
ಸುಮನಾ,
ನೀನು ಬರದ ಒಪ್ಪ ನೋಡಿ ತುಂಬಾ ಕೊಶಿ ಆತು.ಬರದ ಶೈಲಿಯೂ ಲಾಯಿಕ ಆಯಿದು.ಎನಗೂ ಮೊನ್ನೆ ನೆಂಪಾಗಿಗೊಂಡಿತ್ತು.ನಾವು ಕಾಗದ ಬರಕ್ಕೊಂಡು ಇದ್ದದು.ಆನು ಮಕ್ಕಳತ್ರೆ ಹೇಳಿದ್ದೆ.ಇನ್ನು ದೊಡ್ದಕ್ಕನವರತ್ರೆ ಮಾತಾಡುಲೆ ಬೈಲಿಂಗೆ ಹೋದರೆ ಆತು ಹೇಳಿ.ಎನಗೂ ಹರಿಣಿ ಹೇಳುವ ಹೆಸರು ಕೊಶಿ ಆಯಿದು.ನಿಂಗೋಗೆಲ್ಲ ಎಂಗಳ ಪ್ರೀತಿ,ಆಶೀರ್ವಾದ ತಿಳಿಶುತ್ತೆ.ಅಮೋಘಂಗೆ “ಹರಿಯೊಲ್ಮೆ” ಮನೆಯ ಎಲ್ಲೋರ ಕೊಂಡಾಟದ ಆಶೀರ್ವಾದಂಗೋ
ಚಿಕ್ಕಮ್ಮ ಸ್ವಾಗತ ನಮ್ಮ ಕಡೆಂದ..ಕಬವನಂಗಳೂ ಬರ್ತಾ ಇರಲಿ..
ಧನ್ಯವಾದಂಗೋ
ವಾಣಿ ಚಿಕ್ಕಮ್ಮಂಗೆ ಸ್ವಾಗತ…. ಚೆಂದದ ಕವನಂಗೊ ಎಲ್ಲ ಬರಲಿ..
ಧನ್ಯವಾದ
ವಾಣಿ ಚಿಕ್ಕಮ್ಮಂಗೆ ಬೈಲಿಂಗೆ ಸ್ವಾಗತ. 🙂
ಪರಿಚಯ ಲಯ್ಕಾಯ್ದು… 🙂
ಪದ್ಯಂಗಳ ಓದುಲೆ ಕಾಯ್ತಾ ಇರ್ತೆ.. 🙂
ಒಪ್ಪಕ್ಕೋ,,, ಧನ್ಯವಾದ.
ಚಿಕ್ಕಮ್ಮಂಗೆ ಬನ್ನಿ ಬನ್ನಿ ಹೇಳಿತ್ತು. ಶುದ್ದಿಗಳ ಕಾಯ್ತು.
ಧನ್ಯವಾದ.
ಅತ್ತಿಗೆ, ಎ೦ಗೋಗೆ ಈ ವಿಸ್ಯ ಗೊ೦ತ್ತೇ ಇತ್ತಿಲ್ಲೆ.ಇರಲಿ.ಮೊಕ್ತಾ ವಿಚಾರಣೆ, ಅಲ್ಲಿ ಬ೦ದು ಕಾಪಿ ಕುಡಿದು ಈ ಬಗ್ಗೆ.
ಈಗ ಬೈಲಿಲಿ ‘ಹರಿ’ವಾಣಲಿ ಕಲಶ ಸಮೇತ ಸುಸ್ವಾಗತ್೦ .
ನಿಂಗ ಯಾರು ಹೇಳಿ ಗೊಂತಾಯಿದಿಲ್ಲೇ..ಒಪ್ಪಕ್ಕೆ ಧನ್ಯವಾದ.
ಚೆಂದದ ಕೈಬರಹದ ಹರಿಯೊಲ್ಮೆ ಚಿಕ್ಕಮ್ಮಂಗೆ ಸ್ವಾಗತ. ಹರಿಣಿಯ ಕವನಂಗೊ ಶುದ್ದಿಗೊ ಬೈಲಿಂಗೆ ಹರಿದು ಬರಳಿ. ಅತ್ತೆ ಸೊಸೆಯ ಸುಮಧುರ ಕ್ಷಣಂಗೊ ಪದ್ಯ ರೂಪಲ್ಲಿ ಕಾಂಬಲೆ ಕಾಯ್ತಾ ಇದ್ದೆ.
ಖಂಡಿತಾ,ಪ್ರಯತ್ನ ಮಾಡ್ತೆ.ಧನ್ಯವಾದ..