- ಮಸರು ಕಡದು ಬೆಣ್ಣೆ ಕೂಡ್ತದಕ್ಕೆ ಗೌಜಿ ಮಾಡುದೆಂತಕೆ? - May 29, 2019
- ಒಪ್ಪಣ್ಣ ಪ್ರತಿಷ್ಠಾನಂದ ಇಸಿಜಿ ಯಂತ್ರ ಕೊಡುಗೆ - January 8, 2019
- ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ ಪ್ರದಾನ – ವರದಿ - April 29, 2015
ರಾಮಕಥೆ ಮುಗುದ ಕೆಲವೇ ಹೊತ್ತಿಲಿ ಬಂದ ಸಚಿತ್ರ – ಸಮಗ್ರ ವರದಿ..
ಕೆಲವು ಸರ್ತಿ ಹಾಂಗಪ್ಪದಿದ್ದು. ಹೇಂಗೆ ಬರವದು? ಎಂತರ ಬರವದು? ಎಲ್ಲಿಂದ/ ಹೇಂಗೆ ಶುರು ಮಾಡುದು ಹೇಳಿ ಗೊಂತಾವುತ್ತಿಲ್ಲೆ. ಅಕ್ಷರಂಗಳೂ ಸಿಕ್ಕುತ್ತಿಲ್ಲೆ. ಎನಗೆ ಹಾಂಗೆ ಅವುತ್ತಾ ಇದ್ದು ಈಗ. ಬರೇಕು ಹೇಳಿ ಮನಸು ಹೇಳಿದರೂ, ತನ್ಮಯತೆ, ಅನುಭಾವತೆ ಹೇಳ್ತದು ಆ ಎರಡು ಪದಂಗೊ ಮಾತ್ರ ಮತ್ತೆ ಮತ್ತೆ ಮನಸ್ಸಿಲ್ಲಿ, ಕೆಮಿಲಿ, ಕಣ್ಣಿಲ್ಲಿ ಅನುರಣಿಸುತ್ತಾ ಇದ್ದು, ಕುಣಿತ್ತಾ ಇದ್ದು.. ರಾಮ.. ರಾಮ.. ರಾಮ ರಾಮ...
ಇಂಥ ಅಪೂರ್ವ ಅವಕಾಶವ ಆನು ಕಳಕ್ಕೊಳ್ತಿತ್ತನ್ನೇ ಹೇಳಿ ಅನುಸುತ್ತಾ ಇದ್ದೀಗ. ಆ ರಾಮನೇ, ಅವನ ಜನ್ಮೋತ್ಸವದ ಚೈತ್ರಾವಳಿಯ, ಆ ಸಂಭ್ರಮವ ತೋರ್ಸಲೆ ಎನ್ನ ಅಲ್ಲಿಗೆ ಕಳುಸಿದ್ದು ಆದಿಕ್ಕು ಹೇಳಿ ಗ್ರೇಶಿಗೊಂಬಗ ರೋಮಾಂಚನ ಆವುತ್ತಾ ಇದ್ದು. ಅಂಥ ಅಭೂತಪೂರ್ವ, ಭಕ್ತಿ ಸಮ್ಮಿಳಿತ ದೃಶ್ಯಕಾವ್ಯ ಸೃಷ್ಟಿಸಿದ ಶ್ರೀಗುರುಗಳ ಕ್ಷಣ ಕ್ಷಣಕ್ಕೂ ನೆನೆಯದ್ದರೆ ಇಲ್ಲಿ ಬರೆದ ಪ್ರತಿ ಅಕ್ಷರಂಗೊಕ್ಕೆ ಮೌಲ್ಯ ಇರ್ತಿಲ್ಲೆ ಹೇಳಿದರೆ ಅದು ಉತ್ಪ್ರೇಕ್ಷೆ ಅಲ್ಲ.
ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರ. ಸೆಪ್ಟೆಂಬರ್ ೯, ಆದಿತ್ಯವಾರದ ಮಟ್ಟಿಂಗೆ ಅದು ಗಾಯತ್ರಿ ವಿಹಾರ ಅಲ್ಲ; ಅಯೋಧ್ಯೆಯೇ! ಪ್ರಭು ಶ್ರೀರಾಮ ಚಂದ್ರನ ಜನ್ಮೋತ್ಸವದ ಸಂಭ್ರಮ ಅಲ್ಲಿ. ನಂದನ ಚಾತುರ್ಮಾಸ್ಯದ ಅಂಗವಾಗಿ ಗುರುಗೊ ಬೆಂಗಳೂರಿಲ್ಲಿ ನಡೆಸಿಕೊಟ್ಟ ಮೂರನೇ ’ರಾಮಕಥಾ’ ಕಾರ್ಯಕ್ರಮದ ಅಕೇರಿಯಾಣ ದಿನ. ಇಡೀ ಗಾಯತ್ರಿ ವಿಹಾರವೇ ರಾಮ–ಭಕ್ತ, ಭಟ, ಸೇವಕರಿಂದಲೇ ತುಂಬಿತ್ತು! ಆ ‘ಕ್ಷಣ’ಕ್ಕೇ ಎಲ್ಲೋರು ಕಾದುಗೊಂಡಿತ್ತದವು ಹೇಳುದು ಅಲ್ಲಿ ಸೇರಿದ್ದವರ ಭಕ್ತಿ ತುಂಬಿದ್ದ ಕಣ್ಣುಗೊ ಹೇಳಿಗೊಂಡಿತ್ತಿದು.
ರಾಮ ಈ ಭೂಮಿಲಿ ಹುಟ್ಟುವ ದಿನ ಹೇಂಗಿತ್ತು. ಅಯೋಧ್ಯೆಲಿ ಕಂಡ ಸಂಭ್ರಮವಾದರೂ ಎಂತರ? ದೇವತೆಗೊ ಎಂತ ಮಾಡಿದವು?…. ಹೀಂಗೆ ಅಂದು (ರಾಮ ಹುಟ್ಟಿದ ದಿನ) ನಡೆದ
ಪ್ರತಿ ಘಟನೆಗೊ ಗಾಯತ್ರಿ ವಿಹಾರದ ರಾಮಕಥಾ ವೇದಿಕೆಲಿ ನಡದ್ದು ಎಲ್ಲೋರನ್ನೂ ಮೂಕವಿಸ್ಮಿತರನ್ನಾಗಿ ಮಾಡಿತ್ತು. ಇದರ ನಡುವೆಯೇ ರಾಮಂಗೆ ಕಾದ ಶಬರಿಯ ಕತೆಯೂ ಬಂತು. ಅದಕ್ಕೆ ಪೂರಕವಾಗಿ ಕೇಳಿ ಬಂದ ಪದ್ಯ, ಹೊಯಿಗೆಲಿ, ಬಣ್ಣಲ್ಲಿ ಮೂಡಿದ ಚಿತ್ರಂಗೊ ಕೆಮಿಗೆ, ಕಣ್ಣಿಂಗೆ ಇಂಪು, ತಂಪು ನೀಡಿದ್ದು ಮಾತ್ರಲ್ಲದ್ದೇ, ಮನಸ್ಸಿಲ್ಲಿ ಶಬರಿಯ ರಾಮಭಕ್ತಿಯ ಶಾಶ್ವತವಾಗಿ ಅಚ್ಚು ಒತ್ತಿತ್ತು.
ರಾಮ ಜನ್ಮ ತಳವಗ ಎಂತೆಲ್ಲಾ ಆತು, ನಡೆದತ್ತು…? ಅಲ್ಲಿ (ಅಂದು ಅಯೋಧ್ಯೆಲಿ) ಇಲ್ಲಿ (ಗಾಯತ್ರಿ ವಿಹಾರಲ್ಲಿ)
ಆ ದಿನ ಇಡೀ ಅಯೋಧ್ಯೆಗೆ ಸಂಭ್ರಮ. ಇಲ್ಲಿಯೂ ಇದ್ದ ಸಂಭ್ರಮ ಕಮ್ಮಿಯೇನಲ್ಲ. ಅಯೋಧ್ಯೆ ಪೂರ್ತಿ ‘ಹರೇ ರಾಮ’ ‘ಹರೇ ರಾಮ’ ಹೇಳ್ತ ಘೋಷಣೆಯ ರಿಂಗಣ. ಗಾಯತ್ರಿ ವಿಹಾರಲ್ಲೂ ಅದರ ಅನುರಣನ. ಆಕಾಶಂದ ದೇವತೆಗಳ ಪುಷ್ಪವೃಷ್ಟಿ. ಇಲ್ಲೂ ರಾಮ ಭಟರಿಂದ ವೇದಿಕೆ ತುಂಬಾ ಹೂವಿನ ಮಳೆ ಸೃಷ್ಟಿ. ಅಲ್ಲಿ ಒಂದು ಒಳ್ಳೆ ಮುಹೂರ್ತಲ್ಲಿ ರಾಮನ ಜನನ. ಇಲ್ಲಿ ವೈದಿಕರಿಂದ ಮಂತ್ರ ಪಠಣ.
ಮತ್ತೆಂತಾತು….?
ಆ ಶುಭ ಸಂದರ್ಭದಲ್ಲಿ ನಾಲ್ಕು ವೇದ ಘೋಷ (ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವ ವೇದ) ನಡೆದತ್ತು. ಇಲ್ಲೂ ತದ್ರೂಪಿಯಾಗಿ ನಾಲ್ಕೂ ವೇದಂಗಳಲ್ಲಿ ಮಂತ್ರ ಘೋಷ ಆತು. ಆಕಾಶಲ್ಲಿ ಅಪ್ಸೆರೆಯಾದಿಯಾಗಿ ದೇವತೆಗೊ ನೃತ್ಯ ಮಾಡಿ ರಾಮನ ಜನ್ಮದ ಸಂಭ್ರಮವ ಆಚರಿಸಿದವು. ಇಲ್ಲಿ ವಿಶೇಷವಾದ ವೇದಿಕೆಲಿ ಐದು ಜನ ನೃತ್ಯ ಕಲಾವಿದೆಗೊ ನರ್ತಿಸಿ ರಾಮ ಭಕ್ತರ ರಂಜಿಸಿದವು. ವಿಷ್ಣು ಭೂಮಿಲಿ ರಾಮ ಆಗಿ ಅವತಾರ ಎತ್ತಿದ ಸಂದರ್ಭದಲ್ಲಿ ದೇವತೆಗೊ ಶಂಖ ನಾದ ಮಾಡಿದವು. ರಾಮಕಥಾ ವೇದಿಕೆಲಿ ೧೦೦ ಜನ ರಾಮ ಭಟಂಗೊ ಶಂಖನಾದ ಮಾಡಿ ಎಲ್ಲರಿಂದಲೂ ಮೆಚ್ಚುಗೆ ಪೂರಕ ಚಪ್ಪಾಳೆಯ ಪಡಕ್ಕೊಂಡವು. ಅಂದು ರಾಮ ಜನನ ಕಾಲಲ್ಲಿ ಗಂಟಾನಾದ. ಇಲ್ಲೂ ಆತು ಅಂಥದ್ದೇ ನಿನಾದ. ಶ್ರೀಗುರುಗೊ ಸೇರಿ ಎಲ್ಲರೂ ಆ ಗಂಟಾನಾದಕ್ಕೆ ತಲೆತೂಗಿದವು.
ಇಡೀ ಅಯೋಧ್ಯೆಯೇ ಶ್ರೀರಾಮ ಜನ್ಮೋತ್ಸವಲ್ಲಿ ಭಾಗವಹಿಸಿತ್ತಿದು. ಅಂದು ಪ್ರತಿ ಮನೆ ಮನೆಲೂ ಸಂಗೀತ ಸುಧೆಯ ಇಂಪು ಮಾರ್ದನಿಸಿತ್ತಿದು. ಗಾಯತ್ರಿ ವಿಹಾರಲ್ಲೂ ಅದೇ ಆತು. ಒಟ್ಟು ನಾಲ್ಕು ಸಂಗೀತ ತಂಡಂಗೊ ಪ್ರತ್ಯೇಕ ಪ್ರತ್ಯೇಕವಾಗಿ ಇಂಪಾದ ಸ್ವರ ಸೃಷ್ಟಿಸಿ ಎಲ್ಲರನ್ನೂ ಸಂಗೀತ ಲೋಕಲ್ಲಿ ತೇಲುವಾಂಗೆ ಮಾಡಿದವು. ಅಕೇರಿಗೆ ‘ಎಂದರೋ ಮಹಾನುಭಾವುಲು….’ ಪದ್ಯ –ವೀಣೆ, ಕೊಳಲು, ಮೃದಂಗ, ಘಟಂ, ಡ್ರಮ್ಸ್, ಪ್ಯಾಡ್.. ಹೀಂಗೆ ಹಳೆ, ಹೊಸ ಸಂಗೀತ ಸಲಕರಣೆಲಿ ಮೂಡಿ ಬಪ್ಪಗ ಇಡೀ ಸಭೆಯೇ ಸಂಗೀತ ಸುಧೆಲಿ ತಲ್ಲೀನ. ಆನಂದ ಭಾಷ್ಪ ಗುರುಗಳ ಕಣ್ಣಿಲ್ಲಿ!. ಭಾವಪರವಶತೆ ಭಕ್ತರ ನೇತ್ರಲ್ಲಿ. ಕಾಕತಾಳೀಯವೋ ಅಥವಾ ಶ್ರೀರಾಮನ ಕೃಪೆಯೋ ಹೇಳ್ತಾಂಗೆ ಅದಕ್ಕೆ ಪೂರಕವಾಗಿ ಹೆರ ತುಂತುರು ಮಳೆಯ ಪನ್ನೀರಹನಿ!
ರಾಮನ ಜನನ ಕಾಲಲ್ಲಿ ಗಾಳಿಲಿ ಸುಗಂದ ದ್ರವ್ಯಂಗಳ ಕಂಪು ಹರಡಿತ್ತಿದು. ಗಾಯತ್ರಿ ವಿಹಾರಲ್ಲೂ ಸಾಂಬ್ರಾಣಿ, ಗೋಪಿ ಚಂದನ ಘಮ ಘಮ ಮೂಡಿ ಬಂತು. ಅಯೋಧ್ಯೆಲಿ ನಡೆಯುತ್ತಿಪ್ಪ ಸಂಭ್ರಮವ ನೋಡ್ಳೆ ಇಡೀ ಲೋಕಕ್ಕೆ ಬೆಣಚ್ಚು ಕೊಡ್ತಾ ಇಪ್ಪ ಸೂರ್ಯ ತುಂಬಾ ಹೊತ್ತು ಹಾಂಗೆ ನಿಂದನಡ. ಇಲ್ಲಿ ವೇದಿಕೆ ಹತ್ತರೆ ಮಾಡಿಲ್ಲಿ ಸೂರ್ಯನ ಚಿತ್ರದ ನಡೂಕೆ ಮಡುಗಿತ್ತಿದ ದೊಡ್ಡ ಸೋಡಿಯಂ ಬಲ್ಬು ಹೊತ್ತಿದ್ದು ಆ ನಿಂದ ಸೂರ್ಯನ ಚಿತ್ರಣವನ್ನೇ ನೀಡಿತ್ತದಾ. ಪ್ರಭುವಿನ ಜನ್ಮ ಅಪ್ಪಗ ಅಯೋಧ್ಯೆಯ ಜಾನಪದ ಜನಂಗೊ ಸುಮ್ಮನೆ ಕೂಯಿದವಿಲ್ಲೆ. ತಮ್ಮ ಜನಪದೀಯ ಪದ್ಯವ ಹಾಡಿ, ನೃತ್ಯಿಸಿ ಸಂಭ್ರಮಿಸಿದವು. ಇಲ್ಲೂ ಯುವ ನೃತ್ಯ ಕಲಾವಿದೆಗೊ ಕೋಲಾಟ ಆಡಿ ಎಲ್ಲೋರ ಮನಸ್ಸಿನ ತೃಪ್ತಿಪಡಿಸಿದವು.
ಮಗ° ಹುಟ್ಟಿದ ಕಾರಣಕ್ಕೆ ದಶರಥಂಗೆ ಆದ ಸಂಭ್ರಮಕ್ಕೆ ಮಿತಿ ಇದ್ದಾ? ಖುದ್ದಾಗಿ ಅವನೇ ಕೊಶಿಂದ ಇಡೀ ಸಾಮ್ರಾಜ್ಯದ ಜೆನಕ್ಕೆ ಮುತ್ತು, ಹವಳ ಸಹಿತ ಬೆಲೆ ಬಾಳುವ ವಸ್ತುಗಳ ಹಂಚಿದ°. ಇಲ್ಲಿ ದಶರಥನ ಪಾತ್ರಧಾರಿ ಸಹ ಕಲಾವಿದರೊಟ್ಟಿಂಗೆ ವೇದಿಕೆಗೆ ಬಂದು ಆ ದೃಶ್ಯವ ಕಣ್ಣಿಂಗೆ ಕಟ್ಟುವಾಂಗೆ ಮಾಡಿ ತೋರಿಸಿದ°.
ಮಗ° ಹುಟ್ಟಿದ ಲೆಕ್ಕಲ್ಲಿ ಸಿಹಿ ಹಂಚೆಡದೋ? ದಶರಥನ ಮೂರು ಹೆಂಡತ್ತಿಯಕ್ಕೊ (ಕೌಸಲ್ಯೆ, ಸುಮಿತ್ರೆ, ಕೈಕೇಯಿ ) ರಾಮ ಹುಟ್ಟಿದ ಕೊಶಿಲಿ ಪಾಯಿಸ ಕುಡುದರೆ, ದಶರಥ ಊರ ಜೆನಕ್ಕೆ ಸಿಹಿ ಹಂಚಿಸಿದ°. ಆ ಸವಿಯ ಅನುಭೂತಿ ಅಯೋದ್ಯೆಗೆ ಮಾಂತ್ರ ಸೀಮಿತ ಆಯಿದಿಲ್ಲೆ. ರಾಮನ ಮೂಲಕ ಆ ಪಾಯಸದ ಸವಿ ಲೋಕ ಇಡೀ ಉಂಡತ್ತು ಹೇಳಿ ಶ್ರೀಗುರುಗೊ ಹೇಳಿ ಅಪ್ಪಗ ರಾಮ ಭಕ್ತರಾಗಿ ಹುಟ್ಟಿದ ಜನ್ಮ ಪಾವನ ಹೇಳಿ ಅನಿಸಿತ್ತು. ಗಾಯತ್ರಿ ವಿಹಾರಲ್ಲಿ ಅಷ್ಟೂ ಜೆನಕ್ಕೆ ಶ್ರೀಗುರುಗ ರಾಮ ಪ್ರಸಾದವಾದ ಸಕ್ಕರೆ ಕಾಯಿ (ಭರ್ಪಿ) ಹಂಚಿಸಿದವು. ಪ್ರಸಾದ ಹಂಚಿಕೆ ಆದ ನಂತರ ರಾಮನ ಅರ್ಚನೆಗಾಗಿ ಎಲ್ಲೋರ ಕೈಗೆ ಹೂಗು ಕೊಡುವ ವ್ಯವಸ್ಥೆಯೂ ಆತು. ರಾಮ ಎಲ್ಲೆಲ್ಲಿದ್ದ°? ರಾಮ ಆರು? ಹೇಳಿ ಗುರುಗೊ ಭಕ್ತರ ಬಾಯಿಂದ ಹೇಳ್ಸಿದ್ದು ಇಡೀ ಗಾಯತ್ರಿ ವಿಹಾರಲ್ಲಿ ವಿಹರಿಸಿತ್ತು!
ರಾಮಕಥೆಯ ಕೊನೆಯ ಹಂತ:
ಕಣ್ಣು ಮುಚ್ಚಿ ಶ್ರೀ ರಾಮ ಧ್ಯಾನ, ಅವನ ನಾಮ ಧೇನಿಸುವ ಸಮಯ. ಎಲ್ಲೋರು ಕಣ್ಣು ಮುಚ್ಚಿ ರಾಮ ಜಪಲ್ಲಿ ಕೆಲ ಹೊತ್ತು ತಲ್ಲೀನರಾದವು. ನಂತರ ಗುರುಗೊ ಕುಸುಮ ಕೋಮಲ, ಮೇಘ ಶ್ಯಾಮಲ. ಶ್ಯಾಮ ಸುಂದರ.. ಜೈ ಹೇಳಿ ಕೈಲಿದ್ದ ಹೂ ದಳಂಗಳ ಚಿಮ್ಮುಸಿಯಪ್ಪಗ, ರಾಮಭಕ್ತರು ಎದ್ದು ನಿಂತು ತನ್ಮಯತೆಲಿ ಕುಸುಮ ಕೋಮಲ… ಹೇಳಿಗೊಂಡು ಕೈಲಿದ್ದ ಹೂಗಿನ ಹಾರ‍್ಸಿಯಪ್ಪಗ ಗಾಯತ್ರಿ ವಿಹಾರಲ್ಲಿ ಮೂಡಿದ ಆ ಚಿತ್ರಣ, ಅಭೂತಪೂರ್ವ. ಅದ್ಭುತ. ಅದರ ಕಂಡು ವೇದಿಕೆಲಿ ಪೀಠಲ್ಲಿದ್ದ ಗುರುಗಳ ಬಾಯಿಂದ ಬಂದ ಉದ್ಗಾರ – ರಾಮಕಥಾ ಸಾರ್ಥಕ. ಧನ್ಯ. ಪ್ರತಿಯಾಗಿ ಭಕ್ತರ ಬಾಯಿಲಿ ಬಂದ ಉದ್ಗಾರ– ಹರೇ ರಾಮ!
ತದ ನಂತರ ’ರಾಮಕಥಾ’ದ ಪದ್ಯಕ್ಕೆ ಮಕ್ಕಳಾದಿಯಾಗಿ ಹಿರಿ ಕಿರಿಯರು ಎಲ್ಲೋರು ಒಟ್ಟು ಸೇರಿ ಕೊಣಿವಾಗ ಇಡೀ ವಿಹಾರಕ್ಕೆ ಕಳೆ ಕಟ್ಟಿತ್ತು. ಇಡೀ ಭಕ್ತ ಸಮೂಹ ಮೂಕ ವಿಸ್ಮಿತ. ವರ್ಣನೆಗೆ ನಿಲುಕದ್ದ ಕಾರ್ಯಕ್ರಮಲ್ಲಿ ಭಾಗವಹಿಸಿದ ತೃಪ್ತಿ ಭಕ್ತ ಸಮೂಹದ ಮಂದ ಸ್ಮಿತ ಮೋರೆಲಿತ್ತಿದು.
ಇರುಳು ಗಂಟೆ ೧೦.೩೦. ವೇದಿಕೆಂದ ರಾಮದೇವರ ಮೂರ್ತಿ, ರಾಮಾಯಣ ಗ್ರಂಥದ ಮೆರವಣಗೆ ಹೆರಂಗೊರಗೆ ಬತ್ತಾ ಇತ್ತಿತು. ಗುರುಗಳೂ ಮೆರವಣಿಗೆಲಿ ಇತ್ತಿದವು. ಎದುರು ಭಜನೆ, ಚೆಂಡೆ ವಾದನ, ‘ಹರೇರಾಮ’ ಘೋಷ ಎಲ್ಲವೂ ಜೋರಾಗಿಯೇ ಆಗಿಯೊಂಡಿತ್ತಿದು.
ರಾಮಕಥೆ ಮುಗಿಶಿ ಶ್ರೀಗುರುಗೊ “ಶ್ರೀ ರಾಮಚಂದಿರನೆ ಶ್ರೀ ಲೋಲಸುಂದರನೆ” ಹೇಳುವ ಭಜನೆ ಮಕ್ಕೊ ಹಾಡಿ, ಕೋಲಾಟ ಮಾಡುವಾಗ ನಿರ್ಗಮನದ ಚಂದವ ನೋಡಿಯೇ-ಕೇಳಿಯೇ ಆಯೆಕ್ಕು.
ಹತ್ತರೆ ನಿಂದುಗೊಂಡಿದ್ದ ಬೆಂಗ್ಳೂರಿನ ಹೆಮ್ಮಕ್ಕೊ, ‘ಇದರ ನೋಡ್ಳೆ ಪುಣ್ಯ ಮಾಡಿರೆಕ್ಕು’ ಹೇಳಿ ಮತ್ತೊಂದು ಹೆಮ್ಮಕ್ಕಳತ್ತರೆ ಹೇಳಿಗೊಂಡಿತ್ತಿದು.
ಪ್ರತಿಯಾಗಿ ಆ ಹೆಮ್ಮಕ್ಕೊ, ‘ಅಪ್ಪಪ್ಪು ಅದ್ಭುತ ಕಾರ್ಯಕ್ರಮ’ ಹೇಳಿತ್ತು.
ರಾಮನ ಗುಂಗಿಲ್ಲೇ ಇದ್ದ ಎನಗೂ ಹಾಂಗೆ ಅನುಸಿ ಹೋತು…!
//ಹರೇರಾಮ//
ಸೂ:
ಹೆಚ್ಚಿನ ಪಟಂಗೊ: 9-Sep-2012: ಬೆಂಗಳೂರು ಅರಮನೆ ಮೈದಾನದಲ್ಲಿ ಸಮಾಪ್ತಗೊಂಡ ರಾಮಕಥೆ
ಹರೇ ರಾಮ..
ಕಾರ್ಯಕ್ರಮದಲ್ಲಿ ಭಾಗವಹಿಸದ ಬೇಜಾರು ಇದ್ದರೂ ,ಡೈಮ೦ಡು ಭಾವನ ನಿರೂಪಣೆಯಿ೦ದ ಕಾರ್ಯಕ್ರಮ ನೋಡಿದಾ೦ಗೇ ಆತು.
gayathri viharalli nadeda ‘ramakatha’ karyakrama athyadbutha.lekhana odi mathondari ramakatha nodidahange athu.
ಓಯಿ ಬಾವ , ಕಾರ್ಯಕ್ರಮ ಮುಗುಶಿ ಇರುಳ್ಹಿಡಿ ಕೂದು ಬರದ್ದು ಲಾಯಿಕಯಿದು ( ಪೆಪರಿಲಿ ಕೆಲಸ ಮಾಡುದು ಹೇಳಿ ಗೊಂತವುತು ) ಈಗ ಒದುವಗಲೂದೆ ಗಾಯತ್ರಿ ವಿಹಾರಲ್ಲಿ ಇದ್ದಂಗೆ ಅವುತು . ಭಾರಿ ಗವುಜಿ……
ಕಣ್ಣಾರೆ ಕಂಡು ಅನುಭವಿಸಲೆ ಆಗದ್ದರೂ , ಡೈಮಂಡ್ ಭಾವನ ನಿರೂಪಣೆಂದಾಗಿ ಓದುವಾಗ ಸಂತೋಷ ಕೊಟ್ಟತ್ತು
ಅಲ್ಲಿ ಶಂಖವಾದನ ಕಿಂಕರಲ್ಲಿ ನಾನೋ ಒಬ್ಬನಾಗಿಪ್ಪ, ಸಮಿತಿಯಲ್ಲಿ ಪ್ರಸಾರ ಮುದ್ರಣದ ಜವಾಬ್ದಾರಿಯ ಭಾಗ್ಯ ನನ್ನದಾಗಿತ್ತು, ಇಲ್ಲಿ ಹಂಚಿಕೊಂಬ್ಲೆ ಖುಷಿ ಆಗ್ತು.
ಕಾಂತಣ್ಣ,ಕಚ್ಚೆ ಪಂಚೆಲಿ ಬಾರಿ ಚೆಂದ ಕಾಣುತ್ತ ಇತ್ತಿ…………..
ಶುದ್ಧಿ ಲಾಯ್ಕ ಆಯಿದು…ಭಾಗ್ಯಲ್ಲಿ ಅಂತರ್ಜ್ಜಾಲಲ್ಲಿ ನಿನ್ನೆ ನೋಡುವ ಅವಕಾಶವೂ ಆಯಿದು..ಅದ್ಭುತ..
ರಾಮಕಥೆಯೇ ಅದ್ಭುತ. ರಾಮನ ಜನ್ಮವೂ ಅದ್ಭುತ.ಡೈಮಂಡು ಭಾವನ ವಿವರಣೆದೆ ಅದ್ಭುತ ಆಯಿದು.
ಹರೇ ರಾಮ,
ಡೈಮಂಡು ಭಾವನ ನಿರೂಪಣೆ ತುಂಬ ಚೆಂದ ಆಯಿದು.
ಕೊಶಿ ಆತು.
ಹರೇ ರಾಮ ।
ಮತ್ತೊಂದರಿ ಈ ಶುದ್ದಿ ಪ್ರಕಟಗೊಂಡ ಸಮಯವ ನೋಡಿಗೊಂಡೆ.
ನಿಂಗೊ ಧನ್ಯ ಭಾವ. ಹಾಂಗೇ ತೆ ಕು ಮಾವನಾಂಗೆ ಅವಕಾಶವ ಸದುಪಯೋಗಪಡಿಸಿಗೊಂಡವು.
ಶುದ್ದಿ ಓದಿಕ್ಕಿ ಹೇಳೇಕ್ಕಾದ್ದು ಎಂತರ? – ಡೈಮಂಡು ಭಾವ ಬರದ ಅಕೇರಿಯಾಣ ಮೂರು ಸಾಲು , ಅದೇ ಸೂಕ್ತ.
ಡೈಮಂಡ್ ಭಾವನ ನಿರೂಪಣೆ ತುಂಬಾ ಚೆಂದಕೆ ಬಯಿಂದು. ಅಯೋಧ್ಯೆಯನ್ನೂ ಗಾಯತ್ರಿ ವಿಹಾರದ ರಾಮಕಥೆಯನ್ನೂ ಒರ್ಮೈಸಿ, ಪ್ರತಿಯೊಂದು ವಿಚಾರವನ್ನು ಬೈಲಿಂಗೆ ತಿಳುಸಿ ಕೊಟ್ಟಿದ ಭಾವಯ್ಯ. ಒಟ್ಟಿಂಗೆ ಬಂದ ಗೌತಮನ ಫೊಟೋಂಗಳುದೆ ಕ್ಷಣ ಕ್ಷಣವ ತೋರುಸಿಕೊಟ್ಟತ್ತು. ರಾಮ ಹುಟ್ಟಿದ ಸಮಯಲ್ಲಿ ಅಯೋಧ್ಯೆಯ ಸಡಗರವ ಕಣ್ಣಾರೆ ಕಾಂಬ ಹಾಂಗೆ ಆತು. ಇದರ ನೋಡ್ಳೆ ಮಾಂತ್ರ ಅಲ್ಲ, ಇದರಲ್ಲಿ ಭಾಗವಹಿಸಲೆ ಪುಣ್ಯ ಮಾಡಿರೆಕು, ನಿಜ.
ಶ್ರೀ ರಾಮ ಜನ್ಮದ ಸಿಹಿ ಪ್ರಸಾದ ಹಂಚಿದ್ದರ ತೆಕ್ಕೊಂಬ ಭಾಗ್ಯ ಎನಗಿತ್ತಿಲೆ, ಆದರೂ ಪೂರ್ತಿ ಕಾರ್ಯಕ್ರಮವ ಸಕುಟುಂಬಿಕನಾಗಿ ಅಂತರ್ ಜಾಲಲ್ಲಿ ನೋಡಿ – “ನ ಭೂತೋ ನ ಭವಿಶ್ಯತಿ” ಹೇಳ್ತ ಹಾಂಗೆ ಶ್ರೀ ಗುರುಗೊ ನಡಶಿಕೊಟ್ಟ ಕಾರ್ಯಕ್ರಮವ ಆಸ್ವಾದಿಸುವ ಭಾಗ್ಯ ಎನಗೆ ಸಿಕ್ಕಿತ್ತು. – ಜೈ ಜೈ ರಾಮ ಕಥಾ
ಹರೇ ರಾಮ.