Oppanna.com

ಹಪ್ಪಳಂಗೊ…

ಬರದೋರು :   ಬಂಡಾಡಿ ಅಜ್ಜಿ    on   27/05/2010    7 ಒಪ್ಪಂಗೊ

ಹಲಸಿನಕಾಯಿ ಬೆಳದ್ದು. ಒಳ್ಳೆ ಬೆಶಿಲುದೇ ಇದ್ದು. ಇನ್ನೆಂತ ಬೇಕು, ಹಪ್ಪಳ ಮಾಡುದೇ. ಅಲ್ಲದೋ…
ನಮ್ಮ ತೋಟದ ತಲೇಲಿಪ್ಪ ಹಲಸಿನ ಮರದ್ದು ಹೊರಿವಲೆ ಭಾರೀ ಲಾಯ್ಕಾವುತ್ತು. ಈಚ ಮೂಲೆಲಿಪ್ಪದರದ್ದು ಉಂಡ್ಳಕಾಳಿಂಗೆ ಒಳ್ಳೆದಾವುತ್ತು. ಹೇಳಿರೆ, ಅದರ ಸೊಳೆ ಉಪ್ಪಿಲಿ ಹಾಕಿಯಪ್ಪಗ ಅಂತಾ ಗಟ್ಟಿ ಏನೂ ಆವುತ್ತಿಲ್ಲೆ. ಹಾಂಗೆ ಕಡವಲೆ ಸುಲಾಬ ಆವುತ್ತು. ಮತ್ತೆ ಆಚೊಡೇಣ ಮರದ್ದರದ್ದು ಹಪ್ಪಳ ರುಚೀ ಅಕ್ಕು.
ಮೊನ್ನೆ ಕಾಳಪ್ಪು ಬಂದಿತ್ತಿದಾ.. ಒಳ್ಳೆ ಬೆಳದ ಎರಡು ಹಲಸಿನಕಾಯಿ ತೆಗೆಶಿದೆ. ಪುಳ್ಯಕ್ಕಳ ಎಲ್ಲ ಸೇರ್ಸಿಯೊಂಡು ಹಪ್ಪಳವೂ ಮಾಡಿ ಆತು. ನಿಂಗಳೂ ಮಾಡ್ತಿರೋ.. ವಿದಾನ ಗೊಂತಿದ್ದನ್ನೇ.. ಮರದು ಹೋಗಿದ್ದರೆ ಇದಾ ಇಲ್ಲಿದ್ದು:
ಹಲಸಿನಕಾಯಿ ಕೊರದು ಮೇಣ ತೆಗದು ಅಜಪ್ಪುದು. ಇದುವೇ ಒಂದು ದೊಡ್ಡ ಕೆಲಸ. ಮೇಣ ಮೇಣ ಹೇಳಿ ಅದರ ಮುಟ್ಳೇ ಹೋಗದ್ರೆ ಹಪ್ಪಳ ತಿಂಬಲೆ ಸಿಕ್ಕುತ್ತೋ… ಹೇಳಿದಾಂಗೆ ಒಪ್ಪಣ್ಣಂಗೆ ಹಲಸಿನಕಾಯಿ ಕೊರವದು ಹೇಳಿರೆ ಆತಡ (ಹಣ್ಣಾದರೆ ಮತ್ತೂ ಕುಶಿ, ತಿಂದೋಂಡು ಕೊರವಲಕ್ಕಿದಾ) . ಚೆಂದಕೆ ಕೂದೊಂಡು ಕೊರದು ಕೊಡುಗು. ಶಾಂತಕ್ಕ ಅವನತ್ತರೇ ಹೇಳುದಡ ಕೊರವಲೆ.
ಹ್ಮ್.. ಅಟ್ಟಿನಳಗ್ಗೆ ನೀರು ಹಾಕಿ, ಬಾಳೆ ಮಡುಗಿ ಅದರಲ್ಲಿ ಅಜಪ್ಪಿದ ಸೊಳೆ ಹಾಕಿ ಮುಚ್ಚಿ ಒಲೆಲಿ ಮಡುಗಿ ಲಾಯ್ಕ ಸೆಕೆ ಬರ್ಸುದು. ಒಂದು ಹತ್ತು ನಿಮಿಶಲ್ಲಿ ಬೇಯ್ತದು. ಮತ್ತೆ ಅದರ ಬೆಶಿ ಬೆಶಿ ಇಪ್ಪಾಗಳೇ  ಕಡವದು. ಕಡವಾಗ ಉಪ್ಪು, ಕೊತ್ತಂಬರಿ, ಮೆಣಸಿನ ಹೊಡಿ ಮತ್ತೆ ಬೇಕಾರೆ ಜೀರಿಗೆ ಎಲ್ಲ ಹಾಕಿ ಕಡೆಯೆಕ್ಕು. ಮದಲೆಲ್ಲ ಕಡವಕಲ್ಲಿಂಗೆ ಹಾಕಿ, ಉಜ್ಜೆರಿಲಿ ಮೆರುಕ್ಕೊಂಡಿದ್ದದು. ಈಗ ಉಜ್ಜೆರು ಎಲ್ಲಿದ್ದು ಬೇಕೆ… ಹಾಂಗೆ ಕಡವದೆ. ನೊಂಪಿಂಗೆ ಕಡದಾದ ಮತ್ತೆ ಕೈಗೆ ಎಣ್ಣೆ ಮುಟ್ಟುಸಿಗೊಂಡು ಉಂಡೆ ಮಾಡುದು. ಕೊಳಚ್ಚಿಪ್ಪು ಪುಳ್ಳಿ ಉಂಡೆ ಮಾಡುವಾಗ ಮೆಲ್ಲಂಗೆ ಹಿಟ್ಟು ತಿಂದೊಂಡಿತ್ತಿದ್ದಡ. ಮತ್ತೆ ಅಬ್ಬೆ ಬೈದು ಬೈದು ನಿಲ್ಲುಸಿದಡ.
ಇನ್ನು ಹಪ್ಪಳ ಒತ್ತುವ ಕೆಲಸ. ಒಂದು ಮಣೆ ಮಡುಗಿ, ಅದರ ಮೇಲೆ ಒಂದು ಪ್ಲೇಶ್ಟಿಕು ತುಂಡು ಮಡುಗಿ, ಅದಕ್ಕೆ ಎಣ್ಣೆ ಉದ್ದಿ, ಅದರ ಮೇಲೆ ಈ ಉಂಡೆ ಮಡುಗಿ, ಪುನಾ ಇನ್ನೊಂದು ಪ್ಲೇಶ್ಟಿಕು ಮಡುಗಿ, ಮತ್ತೊಂದು ಮಣೆಲಿ ಒತ್ತುದು. ಅಬ್ರಾಜೆ ಪುಳ್ಳಿಯಾಂಗೆ ರಜ ಗಟ್ಟಿಮುಟ್ಟಿಪ್ಪೋರಿಂಗೆ ಗಳಿಗ್ಗೆಲಿ ಅಕ್ಕು. ಉಮ್ಮ ಈಗ ಅದೆಂತದೋ ಹಪ್ಪಳ ಮಾಡ್ತ ಮುಟ್ಟು ಬಯಿಂದಡ, ಚಕ್ಕುಲಿಮುಟ್ಟಿನಾಂಗೆ. ಭಾರದ್ವಾಜದ ಶ್ರೀ ಹೇಳಿಗೊಂಡಿತ್ತು. ಅದರಲ್ಲಿ ಉಂಡೆ ಮಡುಗಿ ಒಂದು ಕೋಲಿನಾಂಗಿಪ್ಪ ಹೇಂಡ್ಳು ಬಗ್ಗುಸಿರೆ ಆತಡ. ಎಂತಾದರೂ ನಮ್ಮ ಮಣೆಲಿ ಒತ್ತಿದಾಂಗೆ ಒಂದೇ ಸಮ ತೆಳು ಆಗಪ್ಪ ಹಪ್ಪಳ.
ಹಪ್ಪಳ ಒತ್ತಿ ಒತ್ತಿ ಹಸೆಗೆ ಹಾಕಿತ್ತು. ಮತ್ತೆ ಒಣಗುಲೆ ಮಡುಗಿ ಒಪ್ಪಣ್ಣನನ್ನೋ, ಒಪ್ಪಕ್ಕನನ್ನೋ(ಪರೀಕ್ಷೆ ಇಲ್ಲದ್ದರೆ) ಮಣ್ಣ ಕೂರ್ಸಿತ್ತು ಕಾವಲಿಂಗೆ. ಮರದಿನ ಎಲ್ಲ ಹಪ್ಪಳವನ್ನೂ ತಿರುಗುಸಿ ಹಾಕಿ ಒಣಗುಸುದು. ಹೀಂಗೆ ಒಳ್ಳೆತ ಒಣಗುವಲ್ಲಿಯೊರೇಂಗೆ ಒಣಗುಸಿ, ಬಾಳೆಬಳ್ಳಿಲಿ ಕಟ್ಟ ಕಟ್ಟಿ ಕೀಜಿ ಡಬ್ಬಿಲಿ ತೆಗದು ಮಡಿಗಿತ್ತು. ಒತ್ತುವಾಗ ಇದ್ದಷ್ಟೇ ಹಪ್ಪಳ ಕಟ್ಟಿಮಡುಗುವಗಳೂ ಇಕ್ಕೂಳಿ ಹೇಳ್ಳೆ ಬತ್ತಿಲ್ಲೆ. ಇಡೀ ಇದ್ದದು ಅರ್ದ ಆಗಿಪ್ಪದೂ ಇದ್ದು. ಎಲ್ಲ ಪುಳ್ಯಕ್ಕಳ ಪವಾಡ..!
ಹ್ಮ್.. ಅದಿರಳಿ. ಹಪ್ಪಳ ಹಸಿ ತಿಂಬಲುದೇ ರುಚಿಯೇ. ಮತ್ತೆ ಮಳೆಕಾಲಲ್ಲಿ ಹೊತ್ತೊಪ್ಪಾಗಣ ಹೊತ್ತಿಲಿ ಕಾಪಿಗೆ ಕುರುಕುರು ಮಾಡ್ಳೆ ಹಪ್ಪಳ ಹೊರುದು, ಕಾಯಿಯೊಟ್ಟಿಂಗೆ ತಿಂಬ ರುಚಿ ಬೇರೆ ಏವುದರಲ್ಲೂ ಸಿಕ್ಕ ಅಲ್ಲದೋ…
ಇದರ ಹಾಂಗೆಯೇ ಹಲಸಿನ ಹಣ್ಣಿನ ಹಪ್ಪಳವುದೇ ಮಾಡ್ಳಾವುತ್ತು. ಅದು ಕಡದಪ್ಪಾಗ ರೆಜಾ ನೀರ್‌ನೀರಿರ್ತದ. ಹಾಂಗೆ ಉಂಡೆ ಮಾಡ್ಳೆ ಬಾರ. ಅದರ ಸೀದ ಹತ್ಸುದು. ಹಸೆಗೆ ಬಾಳೆಲೆ ಹರಡಿಯೋ, ಅತವ ಪ್ಲೇಶ್ಟಿಕು ಹಾಕಿಯೋ ಮಣ್ಣ ಉರುಟುರುಟಿಂಗೆ ಹತ್ಸುದು ಹಪ್ಪಳ.
ಬಟಾಟೆ, ಗೆಣಂಗು, ಮರಗೆಣಂಗು, ದೀಗುಜ್ಜೆ, ಬಾಳೆಕಾಯಿ, ಬಾಳೆಹಣ್ಣು – ಇದರದ್ದೆಲ್ಲ ಹಪ್ಪಳ ಮಾಡ್ಳಾವುತ್ತು.
ಮಾಡ್ತ ಕ್ರಮ ಹೀಂಗೆಯೇ. ದೀಗುಜ್ಜೆಯ ಲಾಯ್ಕ ಚೋಲಿ ತೆಗದು ಬೆಂದಿಗೆ ಕೊರವಾಂಗೆ ಕೊರದು (ಬಾಗ ರಜ ದೊಡ್ಡ ಆದರೂ ಅಡ್ಡಿಲ್ಲೆ) ಸೆಕೆ ಬರ್ಸಿ ಮಾಡುದು.
ಬಾಳೆಕಾಯಿಯ ಚೋಲಿ ಸಮೇತ ಬೇಶುದು. ಮತ್ತೆ ಚೋಲಿ ತೆಗವದು. ಆ ಚೋಲಿಯ ದನಗೊಕ್ಕೆ ಕೊಟ್ರೆ ಬಾರೀ ಚೆಂದಲ್ಲಿ ತಿಂಗು. ಮತ್ತೆ ಹಲಸಿನ ಹಪ್ಪಳದ ಹಾಂಗೆಯೇ ಕಡದು, ಉಂಡೆ ಮಾಡಿ ಒತ್ತುದು. ಇದು ಮಾತ್ರ ಕಡವಲೆ ಗಟ್ಟಿ. ಮೆರಿವಲೆ ಸುಲಾಬ ಅಕ್ಕು. ಅಲ್ಲದ್ದೆ ಉಂಡೆ ಮಾಡುವಾಗ ಎಣ್ಣೆ ಜಾಸ್ತಿ ಬೇಕಾವುತ್ತು. ಇಲ್ಲದ್ರೆ ಕೈಗೆ ಹಿಡಿತ್ತು. ಬಾಳೆಹಣ್ಣನ್ನುದೇ ಮೊದಲು UGG Stiefeletten günstig ಚೋಲಿಯೊಟ್ಟಿಂಗೆ ಬೇಶಿಕ್ಕಿ ಮತ್ತೆ ಚೋಲಿ ತೆಗವದು.
ಈ ಹಪ್ಪಳಂಗೊಕ್ಕೆಲ್ಲ ಜೀರಿಗೆ, ಕೊತ್ತಂಬರಿ ಇತ್ಯಾದಿ ಹಾಕಿರೂ ಅಕ್ಕು, ಹಾಕದ್ರೂ ಅಕ್ಕು. ಬೇಕಾರೆ ರಜ ಇಂಗು ಹಾಕುಲಕ್ಕು. ಹಣ್ಣಿನ ಹಪ್ಪಳಂಗೊಕ್ಕೆ ಪರಿಮ್ಮಳಕ್ಕೇಳಿ ಎಂತದೂ ಹಾಕುದು ಬೇಡ. ಅದುವೇ ಒಂದು ಪರಿಮ್ಮಳ ಇರ್ತಿದಾ.
ವೈಶಾಕ ಮುಗಿವಂದ ಮೊದಲೇ ಬೇಕಾದಷ್ಟು ಹಪ್ಪಳ ಮಾಡಿಮಡಿಕ್ಕೊಳ್ಳಿ. ಎಂತಾರು ವಿಶೇಷ ಹಪ್ಪಳ ಮಾಡಿದ್ದಿದ್ದರೆ ಅಜ್ಜಿಗೂ ಕೊಟ್ಟಿಕ್ಕಿ ಆತೊ…

7 thoughts on “ಹಪ್ಪಳಂಗೊ…

  1. ಹಲಸಿನ ಹಣ್ಣಿನ ಗೆಣಸಲೆ ಮಾಡುದು ಹೇಂಗೆ ಹೇಳಿಯೊ ಬರದಿದ್ದರೆ ಒಳ್ಳೆದಿದ್ದತ್ತು ಅಜ್ಜೀ. ಮರದು ಹೋದ ತಿಂಡಿಗಳ ಒಂದಾರಿ ನೆಂಪು ಮಾಡ್ಸುವದು ಒಳ್ಳೆದಲ್ದಾ? ತೊಂದರೆ ಇಲ್ಲೆ, ಇನ್ನು ಬರವಗ ಅದನ್ನೇ ಬರೆಯಿ, ಆತಾ? ಅಷ್ಟಪ್ಪಗ ಹಲಸಿನ ಹಣ್ಣು ಎಲ್ಲಾ ಕಡೆ ಇರ್ತು ಅಲ್ಲದಾ?

  2. ನಿನ್ನೆ ಮಳೆ ಬಂತು ಹೇಳಿ, ಮನೇಲಿ ಕೂದುಗೊಂಡು ಹಲಸಿನಕಾಯಿ ಹಪ್ಪಳವ ಕಾಯಿಸುಳಿ ಸೇರಿಸಿ ತಿಂದಾತು.

  3. ಅಜ್ಜೀ, ಹಪ್ಪಳ ಮಾಡುದು ಹೇಂಗೆ ಹೇಳಿ ಹೇಳಿದ್ದು ಲಾಯಕ ಆಯಿದು.. ನಿಂಗ ಹೇಳಿದ ಹಾಂಗೆ ಹಪ್ಪಳ ಮಾಡಿದರೇ ರುಚಿ ಅಕ್ಕಷ್ಟೇ! ಈ ಸರ್ತಿ ಹಲಸಿನ ಕಾಯಿಯೇ ಇಲ್ಲೆ… ಹಾಂಗೆ ಈ ವರ್ಷ ಹಪ್ಪಳ ಇಲ್ಲೆ ಹೇಳಿ ಎಂಗಳ ಮಥುರದ ಅತ್ತೆ ಹೇಳಿಗೊಂಡಿತ್ತಿದ್ದವು.. ರಜೆಲಿ ಮಕ್ಕೊಗೆ ಅಜ್ಜನ ಮನೆಗೆ ಹೋದರೆ ಹಪ್ಪಳ ಮಾಡ್ಲೆ ಸಹಾಯ ಮಾಡುದು ಒಂದು ಉಮೇದಲ್ಲದಾ? ಈಗ ಎರಡು ವರ್ಷಂದ ಕೈರಂಗಳಲ್ಲಿ ಭಾರಧ್ವಾಜ ಪುಳ್ಳಿಯಕ್ಕಳುದೆ , ಉಪ್ಪಿನಂಗಡಿ ಪುಳ್ಳಿಯಕ್ಕಳುದೆ ಅಜ್ಜಿಗೆ ಹಪ್ಪಳ ಮಾಡ್ಲೆ ಕೂಡ್ತವಡ್ಡ .. ರಜೆ ಮುಗುದು ವಾಪಾಸು ಮನೆಗೆ ಹೆರಡುವಾಗ ಹಪ್ಪಳದ ಕಟ್ಟಂಗಳ ಅಜ್ಜೀ ಮರೆಯದ್ದೆ ಕೊಡ್ತವು… .!!! ಮಕ್ಕೋ ಎಂಗೋ ಮಾಡಿದ ಹಪ್ಪಳ ಹೇಳಿ ಸುಟ್ಟು ಹಾಕಿಯೋ, ಹೊರುದೋ ಕೊಶಿಲಿ ತಿಂತವು… ಮುಗಿವನ್ನಾರ…

    1. ಅಪ್ಪಪ್ಪ. ಅಜ್ಜಿ ಸಕಾಯ ಮಾಡಿದ ಪುಳ್ಯಕ್ಕೊಗೆಲ್ಲ ಒಂದೊಂದು ಕಟ್ಟು ಕೊಡ್ಳಿದ್ದು. ಕೊಟ್ಟಿದೆ, ಮುಗುದತ್ತೋ ಏನೊ.. ಬೇಕಾರೆ ಬರಳಿ, ಪುನಾ ಕೊಡುವೊ. ಆತೊ?

  4. ಹಪ್ಪಳ ತೆಕ್ಕೊಂಬಲೆ ಬಪ್ಪ ಕಾರ್ಯಕ್ರಮ ಮಡಗೆಕ್ಕಷ್ಟೆ.. ಹಪ್ಪಳ ರೆಡಿ ಆಯಿದು..

    1. ಓ! ಧಾರಾಳ ಬಪ್ಪಲಕ್ಕು. ಈ ಮಳೆಗೆ ಮನೆಹೆರಡ್ಳೆ ಮಾತ್ರ ಉದಾಸನ ಅಪ್ಪದಡ ಶ್ರೀ ಹೇಳಿಗೊಂಡು ಇತ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×