- ತೆಂಕಲಾಗಿಂದ ಹೇಳಿಕೆ ಬಂತು - November 5, 2012
- ಮಡಿಕೇರಿ ಆಕಾಶವಾಣಿಲಿ “ಇರ್ತಲೆ” ಬಗ್ಗೆ ಸುಭಗಣ್ಣನ ಸಂದರ್ಶನ - October 8, 2012
- ಈ ಪದ್ಯದ ಛಂದಸ್ಸು, ಆಶಯ ಗುರುತುಸಿ!! - February 29, 2012
ಬೈಲಿಲಿ ಬಹುಮುಖ ಪ್ರತಿಭೆಯ ಬಹುಸಂಖ್ಯಾತರೇ ಇದ್ದವು.
ಅದರ್ಲಿ ಒಬ್ಬರು ನಮ್ಮ ಸುಭಗಣ್ಣ.ಮನೆಲೇ ಇಪ್ಪಗ ಕೃಷಿಕಾರ್ಯ ಮಾಡಿಂಡು, ಪೇಟಗೆ ಹೋದಮತ್ತೆ ಎಕೌಂಟೆಂಟು ಹೇದು ಬೇಲೆನ್ಸು ಮಾಡಿಂಡು, ಜೆಂಬ್ರಕ್ಕೆ ಹೋದರೆ ಗುರುಸೇವೆಲಿ ಗುರಿಕ್ಕಾರ್ತಿಕೆ ಮಾಡಿಂಡು, ಆಟಕ್ಕೆ ಹೋದರೆ ಎಲೆತಿಂದೊಂಡು, ದೊಡ್ಡಜ್ಜನಲ್ಲಿಗೆ ಹೋದರ ಇಸ್ಪೇಟು ಆಡಿಂಡು ಇದ್ದರೂ
– ಇದೆಲ್ಲದರ ಎಡಕ್ಕಿಲಿ ಅವಕ್ಕೊಂದು ವಿಶೇಷ ಹವ್ಯಾಸ ಇದ್ದು. ಅದೆಂತರ?
ಬೈಲಿಂಗೆ ಗೊಂತಿಪ್ಪದೇ – “ಇರ್ತಲೆ”ಯ ಸಂಗ್ರಹದ ಬಗ್ಗೆ.
ನಮ್ಮ ಬೈಲಿಲಿ ಅದಾಗಲೇ ಇರ್ತಲೆಯ ಶುದ್ದಿ ಹೇಳಿದ್ದವು, ಗೊಂತಿದ್ದನ್ನೇ?
“ಗೆಣಂಗು ಸುಗುಣಂಗೆ” – ಸುರುವಾಣ ತುಂಡು (ಸಂಕೊಲೆ), ಎರಡ್ನೇ ತುಂಡು (ಸಂಕೊಲೆ) – ಹೇದು ಎರಡು ತುಂಡು ಮಾಡಿ ನಮ್ಮ ಬಾಯಿಗೆ ಹಾಕಿದ್ದವು.ಇದೇ ವಿಶಯಲ್ಲಿ ಅವರ ಸಂದರ್ಶನ ಮಾಡಿದ್ದವು, ಮಡಿಕೇರಿ ಆಕಾಶವಾಣಿಯೋರು.
ಯುವವಾಣಿಲಿ ದೀರ್ಘ ಅರ್ಧಘಂಟೆಯ ಸಂದರ್ಶನ ಬಂದದರ ನಮ್ಮ ಸಾರಡಿ ದೊಡ್ಡಪುಳ್ಳಿ ರಿಕಾರ್ಡು ಮಾಡಿ ಹೇಮಾರ್ಸಿ ಮಡಗಿತ್ತು.
ಸಾರಡಿ ಸಣ್ಣಪುಳ್ಳಿ ಅದರ ಹುಡ್ಕಿ ಓ ಮನ್ನೆ ಕೊಟ್ಟಿದ್ದತ್ತು. ಅಮೂಲ್ಯ ಸಂಗ್ರಹ ಕೊಟ್ಟ ಇಬ್ರಿಂಗೂ ಧನ್ಯವಾದಂಗೊ.
ಸುಭಗಣ್ಣನ ವಿಶೇಷ ಹವ್ಯಾಸವ ಗುರ್ತಹಿಡುದು ಆಕಾಶವಾಣಿ ಮೂಲಕ ಊರಿಂಗೇ ಗೊಂತುಮಾಡುಸಿದ್ದಕ್ಕೆ ಆಕಾಶವಾಣಿಯೋರಿಂಗೂ ಧನ್ಯವಾದಂಗೊ.~
ಗುರಿಕ್ಕಾರ°
ಬೈಲಿನೋರಿಂಗೆ ಕೇಳುಲೆ,
ಸುಭಗಣ್ಣನ ಸಂದರ್ಶನ “ಗತ ಪ್ರತ್ಯಾಗತ”ದ ಬಗ್ಗೆ, ಇಲ್ಲಿದ್ದು:
GaPraGa-Subhaga-Interview-MadikeriAIR
Download: (link)
~*~
ಸೂ:
- ಗೆಣಂಗು ಸುಗುಣಂಗೆ, ಒಂದನೇ ತುಂಡು: https://oppanna.com/lekhana/genangu-sugunange
- ಗೆಣಂಗು ಸುಗುಣಂಗೆ, ಎರಡ್ಣೇ ತುಂಡು: https://oppanna.com/lekhana/genangu-sugunange-part-2
ಆನು ಹೇಳುತ್ಸು ಇಶ್ತೇ ,ಲೇಖನಂದಲಾಗಿ ಎಲ್ಲೋರಿಂಗೂ”.ಭಲಾ ಬಂತು ತುಂಬ ಲಾಭ “
ಬಹುಮುಖ ಪ್ರತಿಭೆಯ ಸುಭಗಣ್ಣಂಗೆ ಅಭಿನಂದನೆಗೊ.
ಭಲೆ..ಸುಭಗಣ್ಣ. ನಿಂಗಳ ಈ ಹವ್ಯಾಸ ಇನ್ನಷ್ಟು ಬೆಳೆಯಲಿ.
ಮದೂರದೂಮ, ವಿಕಟಕವಿ..ಎಲ್ಲ ನಿಂಗಳ ಸಂಗ್ರಹಲ್ಲಿ ಹಳತ್ತಾಗಿಕ್ಕು,ಅಲ್ಲದೊ..? ಕೀಪ್ ಇಟ್ ಅಪ್..!
ಅರ್ಧ ಗಂಟೆ ನಿರರ್ಗಳವಾಗಿ “ಗತ ಪ್ರತ್ಯಾಗತ” ದ ಬಗ್ಗೆ ವಿವರಣೆ ಕೊಟ್ಟು, ಜೆನಂಗೊಕ್ಕೆ ಸ್ಪೂರ್ತಿ ಕೊಟ್ಟ ಕಾರ್ಯಕ್ರಮ.
ತುಂಬಾ ಕೊಶಿ ಆತು.
ಅಭಿನಂದನೆಗೊ ಸುಭಗ ಭಾವ. ಕೇಳಿದೆ.. ಒಳ್ಳೆ ಲಾಯಕ ಆಯ್ದು.