Oppanna.com

ಅಜ್ಜಿಮದ್ದುಗೊ

ಬರದೋರು :   ಬಂಡಾಡಿ ಅಜ್ಜಿ    on   25/12/2009    0 ಒಪ್ಪಂಗೊ

ಈಗ ಅಂತೂ ಹೋವುತ್ತ ಬತ್ತ ಡಾಗುಟ್ರ°, ಆಸ್ಪತ್ರೆ ಇದ್ದರೂ, ಮದಲಿಂಗೆ – ಶಂಬಜ್ಜನ ಕಾಲಲ್ಲಿ – ಎಲ್ಲ ನಮ್ಮ ಊರಿಲಿ ಈ ನಮುನೆ ಇತ್ತಿಲ್ಲೆ. Ajjimaddu
ಜೆನಂಗೊ ಆರೋಗ್ಯವಂತರೂ, ಗಟ್ಟಿಮುಟ್ಟು ಆಳುಗಳೂ ಆಗಿತ್ತಿದ್ದವು. ಈಗಾಣ ಪೀಶಕತ್ತಿಗಳ ಹಾಂಗೆ ಎಳಬ್ಬೆ ಅಲ್ಲನ್ನೆ. ಮದ್ದುಗೊ ಈಗಾಣಷ್ಟು ಬೇಕೂ ಆಗ.
ಒಂದು ವೇಳೆ ಬೇಕಾದರೆ ಹೇಳಿಗೊಂಡು ಎಲ್ಲ ಮನೆ ಮನೆಗಳಲ್ಲಿ ಮದ್ದುಗೊ ಮಡಿಕ್ಕೊಂಡು ಇಕ್ಕು.
ಅದಕ್ಕೆ ಅಜ್ಜಿಮದ್ದುಗೊ ಹೇಳಿ ಸೂಕ್ಷ್ಮಲ್ಲಿ ಹೇಳುತ್ಸು.
ಕ್ರಮೇಣ ಇಂಗ್ಳೀಶು ಮದ್ದುಗೊ ಬಂತಲ್ದಾ, ಜೆನ್ಮದಾರಭ್ಯ ಅದರ ಕುಡಿವಲೆ ಸುರು ಮಾಡಿದವು. ಈಗೀಗಂತೂ ಸೆಮ್ಮ, ಶೀತ, ತಲೆಸೆಳಿತ್ಸು, ಕೆಮಿ ಬೇನೆ, ಅದು ಇದು ಎಲ್ಲದಕ್ಕೂ ಇಂಗ್ಳೀಶು ಮದ್ದೇ! ಹಾಂಗಾಗಿ ಈ ಅಜ್ಜಿಮದ್ದುಗೊ ಬಳಕೆಂದಲೇ ದೂರ ಆತು.
ದೂರ ಹೇಳಿರೆ ಪೂರ್ತಿ ದೂರ ಆಯಿದಿಲ್ಲೆ. ಕೆಲವೆಲ್ಲ ಅಜ್ಜಿಯಕ್ಕೊ ನಮ್ಮೊಟ್ಟಿಂಗೆ ಇದ್ದವಿದಾ, ಹಾಂಗಾಗಿ.!
ಪೂರ ದೂರ ಹೋಪ ಮೊದಲೇ ಅದರ ಮತ್ತೊಂದರಿ ಪ್ರಚಾರ ಮಾಡಿಗೊಂಬ. ಎಡಿಗಾದ್ದಷ್ಟಕ್ಕಾದರೂ ಅಜ್ಜಿಮದ್ದಿನ ಬಳಸಿಗೊಂಬ.
ಆರೋಗ್ಯವಂತ ಆಗಿಪ್ಪ.
ಹಾಂಗಾಗಿ, ಕೆಲವು ಹಳೇ ಕಾಲದ ಅಜ್ಜಿಮದ್ದುಗಳ ಈ ಪುಸ್ತಕಲ್ಲಿ ಬರೆತ್ತಾ ಹೋಪದು.
ನಿಂಗೊಗೆ ಗೊಂತಿಪ್ಪದರ ನಿಂಗಳೂ ಹೇಳಿಕ್ಕಿ. ಆತೋ?
ಹೇಂಗಕ್ಕು?
ಏ°?
ಸೂ: ಕಾಂಬು ಅಜ್ಜಿ ಮಾಡಿಗೊಂಡು ಇದ್ದಿದ್ದ ಕೆಲವೆಲ್ಲ ಮಾಂತ್ರ ಈಗ ಪಾತಿಅತ್ತೆಗೆ ನೆಂಪಿಪ್ಪದು.
ಮತ್ತೆ ಒಳುದ್ದರ ಬಂಡಾಡಿ ಅಜ್ಜಿಯತ್ರೋ ಮತ್ತೊ° ಕೇಳಿ ಆಯೆಕ್ಕಷ್ಟೆ!
ಕೇಳಿ ಕೇಳಿ ಬರೆತ್ತೆಯೊ°. ಆತೋ? )

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×