- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಸಾಹಿತ್ಯದ ರಸಗ೦ಗೆ ಕನ್ನಡದ ಮಣ್ಣಿಲಿ “ತು೦ಬುಗನ್ನಡದ ಶತಾವಧಾನ“ದ ರೂಪಲ್ಲಿ ಹರುದತ್ತು,ಕನ್ನಡ ಸಾಹಿತ್ಯಾಸಕ್ತರ ಮನಸ್ಸು ತು೦ಬಿತ್ತು.ಬೈಲಿನ ನೆ೦ಟ್ರುಗೊ ಸುಮಾರು ಜೆನ ಒಟ್ಟು ಸೇರಿದವು,ಬಪ್ಪಲೆ ಎಡಿಯದ್ದವು ಅ೦ತರ್ಜಾಲಲ್ಲಿ ನೋಡಿ ಕೊಶಿ ಪಟ್ಟವು.
ಕಾರ್ಯಕ್ರಮದ ಆಯೋಜಕರಾದ “ಪದ್ಯಪಾನ” ದವು ಕೊಟ್ಟ ಸಮಸ್ಯಾಪೂರಣಲ್ಲಿ ಒಪ್ಪಣ್ಣನ ಬೈಲಿನವು ಆಸಗ್ತಿಲಿ ಭಾಗವಹಿಸಿದ್ದು ನವಗೆಲ್ಲಾ ಗೊ೦ತಿದ್ದು.
ಆ ಪೂರಣ೦ಗೊ ಹೀ೦ಗಿದ್ದು:
ಮುಳಿಯ ಭಾವ°:
ಪಾಡುತ ನೇಹದ ಸುಧೆಯೊಳ್
ತಾಡನ ಗೈಯುತಲಿರೇಕೆ ಗೀರುವೆ ನಖದಿಂ ?
ಕಾಡುತಲುರ್ಕುವ ಮಾರನ
ಬೀಡಿಗೆ ಸಿಗುರೇಟಿದೇನು ಸಾಟಿಯೆ ನೋಡಲ್
(ಬೀಡು = ಬಾಣ ಪ್ರಯೋಗ
ಸಿಗುರು = ಗೀರು)
ಪ್ರೇಮದ ಹೊಳೆಲಿ ಬಡಿದಾಡುವ ಹೊತ್ತಿಲಿ ಎನ್ಸಕ್ಕೆ ಉಗುರಿಲಿ ಗೀರುತ್ತೆ? ಉಕ್ಕುವ ಮನ್ಮಥ ಬಾಣ ಪ್ರಯೋಗದ ಎದುರು ನಿನ್ನ ಈ ಉಗುರಿನ ಪರಚುವ ಏಟು ಎಷ್ಟಕ್ಕೂ ಸಾಟಿಯಲ್ಲ ಓ ನಲ್ಲೇ…
ಮಹೇಶ:
(ಎರಡು ಪದ್ಯ೦ಗೊ)
ಒಂದು:
ಕಾಡಿಗೆ ಬಂಣದ ಕಲ್ಲಿನ
ಮಾಡೊಳ್ ಕಂಡಿರ್ದು ಭಗ್ನ ಶಿಲ್ಪದ ಸಾಲಂ |
ಮೋಡಿಯ ಸೆಳೆತವು ಈ ಹಳೆ-
ಬೀಡಿಗೆ ಸಿಗಿರೇಟಿದೇನು ಸಾಟಿಯೆ ನೋಡಲ್ ||
ಕಾಡಿಗೆಯ ಬಣ್ಣದ ಕಲ್ಲಿನ ಮ೦ಟಪದ ಒಳ ಶಿಲ್ಪ೦ಗಳ ಕ೦ಡತ್ತು.
ಧರ್ಮಾಂಧ೦ಗೊ ವಿಗ್ರಹ೦ಗಳ ಸಿಗಿದರೂ, ಹಳೆಬೀಡಿನ ಚೆ೦ದವೇನೂ ಹಾಳಾಯಿದಿಲ್ಲೆ !
ಇನ್ನೊಂದು:
ಆಡುವ ಕುರುವಿನ ವೃಂದದಿ
ಸೇಡಿನ ಹೊಗೆಯೊಂದುಬಂದು ಬೆಳೆದುದು; ಕೇಳಲ್ –
ಚಾಡಿಯು ಕೌರವ-ಭೀಮೆಂ–
ಬೀಡಿಗೆ ಸಿಗರೇಟಿದೇನು ಸಾಟಿಯೆ ನೋಡಲ್!?{ಈಡಿಗೆ ಸಿಗರು = ಹೋಲಿಕೆಗೆ ಸಿಕ್ಕರು (ಈಡು = ಸಾಮ್ಯ)
ಏಟಿದೇನು ಸಾಟಿಯೆ? = ಭೀಮ-ಕೌರವರ ತುಲನೆ ಅಸಾಮ್ಯ
ಮಕ್ಕಳಾಟಲ್ಲಿ ಕುರು ವೃಂದಲ್ಲಿ ಚಾಡಿ ಮಾತುಗಳಿಂದಾಗಿ ಸೇಡಿನ ಹೊಗೆ ಬೆಳದತ್ತು.
ಆದರೆ, ನೂರು ಕೌರವರಿ೦ಗೆ – ಭೀಮ ಒಬ್ಬ°! ತುಲನೆ ಮಾಡ್ಲೆ ಸಾಧ್ಯವೇ?
ಟೀಕೆ ಮಾವ°:
ಗೂಡಿದು ನಮ್ಮರಮನೆಯೈ
ಮಾಡಿಕೊಳುವನಾನೆನುತಲಿ ಧನಿಕನ್ ಕೇಳಲ್
ಕೂಡದು ಪೋಗೆನುತೆಮ್ಮೀ
ಬೀಡಿಗೆ ಸಿಗುರೇಟಿದೇನು ಸಾಟಿಯೆ ನೋಡಲ್?
ಸಿಗುರು = ಘಾಸಿ ಮಾಡು
~*~
ಸೂ:
- “ಬೀಡಿಗೆ ಸಿಗರೇಟಿದೇನು ಸಾಟಿಯೆ ನೋಡಲ್”
ಇದೇ ಸಮಸ್ಯೆಗೆ ಬೈಲಿಲಿ ಕ೦ದ ಪದ್ಯ ರಚನೆಯ ಹೊಸ ಪ್ರಯತ್ನ೦ಗೊ ಮು೦ದುವರಿಯಲಿ.
(ಸಾಟಿಯೋ ಹೇಳಿ ನೋಡ್ಲೆ ಬೀಡಿ ಸಿಗರೇಟು ಬಲುಗುವ ಪ್ರಯತ್ನ ಮಾಡಿಕ್ಕೆಡಿ..!!) - ಕ೦ದ ಪದ್ಯದ ರಚನಾಕ್ರಮವ ”ಪದ್ಯಪಾನ”ಲ್ಲಿ ಚೆ೦ದಕ್ಕೆ,ಸುಲಾಭಲ್ಲಿ ಅರ್ಥ ಅಪ್ಪ ಹಾ೦ಗೆ ವಿವರ್ಸಿದ್ದವು.
ನಮಗೆ ಕ೦ದಪದ್ಯ ಮುಗುದ ನ೦ತರ ಬರೆದ ಸಾಲು ಓದಿರೆ ಮಾತ್ರ ಅರ್ಥ ಆಪ್ಪದು ಹೋಯ್.. ಕವಿಗಳ ಕಲ್ಪನೆಗೆ ಸಾಟಿಯು೦ಟೇ? ಮೂವರ ರಚೆನೆಯೂ ಕಲ್ಪನೆಗೂ ವಾಹ್ ವಾಹ್… ಅಭಿನ೦ದನೆಗಳು 🙂
ತುಂಬಾ ಖುಷಿಯ ಶುದ್ದಿ…
ಎಲ್ಲೋರಿನ್ಗೂ ಅಭಿನಂದನೆಗೋ ಹಾಂಗೂ ಶುಭ ಹಾರೈಕೆಗೋ… ಹರೇ ರಾಮ…
ತೋಡಿನ ದಾಸನ ಹೂಗಿನ
ಸೂಡಿದ ಬೈಲಿನ ಜನಗಳ ನೋಡಿಯೆ ನೆಗೆಯಾ
ಮಾಡಿರೆ ಬೆಶಿಬೆಶಿ ಸಾರೆ೦
ಬೀಡಿಗೆ ಸಿಗುರೇಟಿದೇನು ಸಾಟಿಯೆ ನೋಡಲ್
ಬೈಲಿನವು ದಾಸನ ಹೂಗಿನ ಪ್ರೇಮಿಗೋ ಹೇಳಿ ಆಧುನಿಕರು ನೆಗೆ ಮಾಡಿರೆ ‘ದಾಸನ ಹೂಗಿನ ಬೆಶಿಬೆಶಿ ಸಾರಿನ ಮಾಡಿ ಬಡುಸಿ ರುಚಿ ತೋರುಸಿ’ ಮಾತಿನ ಏಟಿನ್ಗೆ ಬೈಲಿನವು ಗುರಿಯಾಗವು ಹೇಳಿ ಬೈಲಿನ ಅಭಿಮಾನವ ಎತ್ತಿ ಹಿಡಿವ ಅರ್ಥಲ್ಲಿ ಬೈಲಿನ ಕಂದನ ಒಂದು ಕಿರು ಪ್ರಯತ್ನ…
ಅಕ್ಕಾ,
ಸೂಡಿದ ಬೈಲಿನ ಜನಗಳ ನೋಡಿಯೆ ನೆಗೆಯಾ
ಜನಗಳ ಹೇಳುವಲ್ಲಿ ’ಜಗಣ’ ಬರೆಕ್ಕಾತು.ಸರ್ವಲಘುವಾದರೆ ಜ ಆದ ಮೇಲೆ ಯತಿ ಬರೆಕ್ಕು.
ಸೂಡಿದ ಬೈಲಿನ ಜನ೦ಗೊ ಹೋಪದು ನೋಡಿಯೆ
ಮಾಡಿರೆ ನೆಗೆ ಬೆಶಿ ಸಾರೆ೦
ಹೇಳಿರೆ ಸರಿಯಾವುತ್ತು.
ಕಂದನ ಕಂದಲ್ಲಿಪ್ಪ ತೊಂದರೆ ನಿವಾರಿಸಿದ್ದಕ್ಕೆ ತುಂಬಾ ಧನ್ಯವಾದ ಮುಳಿಯದಣ್ಣ…
ತೋಡಿನ ದಾಸನ ಹೂಗಿನ
ಸೂಡಿದ ಬೈಲಿನ ಜನ೦ಗೊ ಹೋಪದು ನೋಡಿಯೆ
ಮಾಡಿರೆ ನೆಗೆ ಬೆಶಿ ಸಾರೆ೦
ಬೀಡಿಗೆ ಸಿಗುರೇಟಿದೇನು ಸಾಟಿಯೆ ನೋಡಲ್
ಪದ್ಯಂಗೊ ಒಂದರ ಒಂದು ಮೀರುಸುವ ಹಾಂಗೆ ಇದ್ದು.
-ಕೊರೆಂಗು ಭಾವ°
ಹರೇ ರಾಮ; ” ಭದ್ರ೦ ಕರ್ಣೇಭಿ ಶೃಣುಯಾಮ ದೇವಾಃ”
ಅಮಮಾ ಏನಿದು ಅಚ್ಚರಿ! ತೋರಲ್
ಈ ಬಗೆ ಮನವನೆ ಪೊಕ್ಕುದು ನಿಮ್ಮೀ ಸಾಹಸ |
ಮೆಚ್ಚಿದೆ ತು೦ಬಿದ ಮನದಲಿ ತು೦ಬಿಹ
ಭಾವದಿ ಬೈಲಿನ ಭಾವರೆ ಶುಭವನು ಕೋರುವೆ. ॥
ನಿತ್ಯವುದೆ ಇ೦ಥಾ ಸುದ್ದಿ ನಮ್ಮ ಬೈಲಿಲ್ಲಿ ಕೇಳುವಾ೦ಗಾಗಲಿ – ಓ ದೇವರೇ…
ಮುಳಿಯದಣ್ನ ,ಭಾರೀ ಲಾಯಕ ಆಯಿದು. ಮುಳಿಯದಣ್ನನ’ ಕಂದ’ದೇಟಿದೇನುಸಾಟಿಯೆ ನೋಡಲ್?ಮೂರು ಜೆನಕ್ಕು ಅಭಿನಂದನೆಗೊ.
ಬೀಡಿಗೆ ಸಿಗರೇಟು ಸಾಟಿ ಇಲ್ಲೆ ಹೇಳ್ತದಕ್ಕೆ ಇನ್ನೊ೦ದು ಪೂರಣ –
ಬಾಡಿಗೆ ಮ೦ದಿಯ ತರಿಸುತ
ನಾಡೊಳು ಭಾಷಣವ ಬಿಗಿವ ನಾಯಕ ಕೇಳೈ
ಪಾಡಿ೦ತಾದೊಡೆ ಮತವೆ೦
ಬೀಡಿಗೆ ಸಿಗರೇಟಿದೇನು ಸಾಟಿಯೆ ನೋಡಲ್
ಬಾಡಿಗೆ ಜೆನ ತ೦ದು ಭಾಷಣ ಮಾಡುವ ನಾಯಕನ ಪಾಡು ಹೀ೦ಗೇ ಆದರೆ ಮತವೆ೦ಬ ಈಡು ( ಗುರಿ) ಗೆ ಆರೂ( ಸಿಗರು) ಸಿಕ್ಕವು, ಇ೦ಥಾ ಪೆಟ್ಟಿ೦ಗೆ ಸಾಟಿ ಇಲ್ಲೆ. ( ಮತವೆ೦ಬ ಈಡಿಗೆ ಸಿಗರು, ಏಟಿದೇನು ಸಾಟಿಯೆ?)
ಟೀಕೆ ಮಾವನ ಪೂರಣಲ್ಲಿ ಒ೦ದು ಸಣ್ಣ ಮಾತ್ರಾದೋಷ ಕಾಣುತ್ತು.
ಮಾಡಿಕೊ / ಳುವನಾ / ನೆನುತಲಿ ಧನಿಕನ್ ಕೇಳಲ್
ಇಲ್ಲಿ ನೆನುತಲಿ – ಹೇಳ್ತ ಗಣ ಸರ್ವ ಲಘು ಆದ ಕಾರಣ ನೆ ಆದ ಮತ್ತೆ ಯತಿ ಬರೆಕ್ಕಾತು.ಎನ್ನಅನಿಸಿಕೆ ಪ್ರಕಾರ
ಮಾಡಿಕೊ / ಳುವನಾ / ನೆನುತ್ತೆ ಹೇಳಿ ಮಾಡಿರೆ ಸರಿ ಆವುತ್ತು.
ಗೊ೦ತಿಪ್ಪವು ಅಭಿಪ್ರಾಯ ಹೇಳಿ.
ಅಪ್ಪು,
“ನೆನುತ್ತೆ” ಹೇಳುದು ವ್ಯಾಕರಣ ಶುದ್ಧಿ ಆವುತ್ತೋ ಹೇಳ್ತ ಸಂಶಯ ಬಂದು ‘ನೆನುತಲಿ” ಹೇಳಿ ಬದಲ್ಸಿ ಬರದ್ದು. ಮತ್ತೆ ನಾನೆನುತಲಿ -> ನಾನ್+ ಎನುತಲಿ ಅಪ್ಪ ಕಾರಣ ಅದನ್ನೆ ಯತಿ ಹೇಳಿ ತಿಳ್ಕೊಂಡು ಹಾಂಗೆ ಬರದು ಕೊಟ್ಟದು. ತಿಳುದವು ಹೇಳೆಕ್ಕಟ್ಟೆ.
ಪದ್ಯಪಾನಲ್ಲಿ ಹೀಂಗಿರ್ಸ ದೋಷಂಗಳ ಪರಿಗಣಿಸುತ್ತವು. ಸಮಸ್ಯಾಪೂರಣಲ್ಲಿ ಕೊಟ್ಟ ಸಮಸ್ಯೆಗೆ ಪರಿಹಾರ ಕೊಡುದರೊಟ್ಟಿಂಗೆ ರಸವತ್ತಾಗಿ, ಅಲಂಕಾರದೊಟ್ಟಿಂಗೆ ಪದ್ಯ ಬರವದು ಅಪರೂಪ. ಆ ನಿಟ್ಟಿಲಿ ರಘುವಿನ ಪದ್ಯ ಸಿಕ್ಸರ್ ಹೊಡದ್ದು.
ತುಂಬಾ ಚೆನ್ನಾಗಿದ್ದು…
ಇಬ್ಬರಿಗೂ ಶುಭಾಶಯಗಳು. ಇನ್ನೂ ಹೆಚ್ಚು ಹೆಚ್ಚು ನಿಮ್ಮಿಂದ ಬರಲಿ ಎಂದು ಆಶಿಸುವಾ
ಹರೇರಾಮ.
ಹವ್ಯಕ ಸಂಸ್ಕಾರದ ಸಾರ ಹೀರಿ ಬೆಳದ ನಮ್ಮ ಬೈಲಿನ ಕೀರ್ತಿಶಿಖರಂಗಳೇ ಆದ ಎನ್ನ ಪ್ರೀತಿಯ ತಮ್ಮ ಮಹೇಶ°, ರಘು ಭಾವ°- ಶತಾವಧಾನದ ಘನವೇದಿಕೆಲಿ ಶತಾವಧಾನಿಗಳ ಕೈಲಿ ಸಮ್ಮಾನಿಸಿಗೊಂಡು, ಸೇರಿದೋರ ಎಲ್ಲರ ಕೈಚಪ್ಪಾಳೆಲಿ ಅಭಿನಂದಿತರಾಗಿ ಬೆಳಗಿ ಅಪ್ಪಗ ಆ ಕ್ಷಣ ತುಂಬಾ ತುಂಬಾ ರೋಮಾಂಚನ ಆಯಿದು. ಬೈಲಿನ ಕುಡಿಗ ಲೋಕಕ್ಕೆ ತೆರಕ್ಕೊಂಡಪ್ಪಗ ಮನಸ್ಸು ತುಂಬಿ ಬಯಿಂದು.
ರಘು ಭಾವ°, ತಮ್ಮ, ಟೀಕೆ ಮಾವ° ಬರದ ಕಂದ ಪದ್ಯಂಗಳ ಭಾವ, ಸಾರ ನೋಡಿ ತುಂಬಾ ಕೊಶಿ ಆತು. ಬಹು ಲಾಯಕಾಯಿದು ಬರದ್ದದು.
ಬೈಲಿನ ಮೂರು ಮುತ್ತುಗೊಕ್ಕೂ ಅಭಿನಂದನೆಗೊ…
ಸರಸ್ವತೀ ಸೇವೆಯ ನಿರಂತರ ಮಾಡುವ ಹಾಂಗೆ ಶ್ರೀಗುರು ಹಿರಿಯರು ಆಶೀರ್ವಾದ ಮಾಡಲಿ..
ಬೈಲಿನ ಹಿರಿತನವ ಹಲವು ದಿಕ್ಕೆ ಹಂಚಿ ಹರಡುವ ಕಾರ್ಯ ನಿಂಗಳಿಂದ ಯಾವಾಗಲೂ ನೆಡೆತ್ತಾ ಇರಲಿ…
ಹರೇರಾಮ.
ಮುಳಿಯ ಭಾವಯ್ಯನ ಪದ್ಯಲ್ಲಿ ಶೃಂಗಾರ ರಸ ಹರುದರೆ, ಒಪ್ಪಣ್ಣನ ಹಾಂಗಿಪ್ಪ ಮಹೇಶ, ಹಳೆ ಬೀಡಿನ ದುಸ್ಥಿತಿ, ಮಹಾಭಾರತಂಗಳ ಪದ್ಯದ ವಸ್ತುವಾಗಿ
ತೆಕ್ಕೊಂಡಿದ. ಬೀಡಿ, ಸಿಗರೇಟುಗಳ ಬೇರೆ ಬೇರೆ ಜೆನಂಗೊ ಎಳದಪ್ಪಗ ಅದರ ರಸಾಸ್ವಾದವೇ ಬೇರೆ. ಎಂತ ಹೇಳ್ತಿ ? ಕುಮಾರ ಮಾವನ ಪದ್ಯವುದೆ ಮೋಸ ಇಲ್ಲೆ. ನಾಕು ಪದ್ಯಂಗಳದ್ದುದೆ ಲೆವೆಲು ಒಳ್ಳೆತ ಮೇಲೆ ಇದ್ದು. ಲಾಯಕಾಯಿದು. ಅರ್ಥ ಹೇಳದ್ರೆ, ಬೇಗಕ್ಕೆ ಮಿನಿ ಎಂತ ಹೇಳಿ ಗೊಂತಾಗ. ಪದ್ಯಪಾನ ಮಾಡೆಕು ಹೇಳಿ ಗ್ರೇಶಿಯೊಂಡಿಪ್ಪಗ ನಮ್ಮ ಬೈಲಿಂಗೆ ಕಂದ ಪದ್ಯಂಗೊ ಬಂತು. ಒಳ್ಳೆದಾತು.
ಅಂತೂ ನಮ್ಮ ಬೈಲು ಶತಾವಧಾನಲ್ಲಿ ಕೈಜೋಡುಸಿ ಮನ್ನಣೆ ಪಡಕ್ಕೊಂಡದು ನವಗೆಲ್ಲಾ ತುಂಬಾ ಸಂತೋಷದ ಸಂಗತಿ. ಮುಳಿಯ ಭಾವ, ಮಹೇಶ, ಕುಮಾರ ಮಾವಂಗೆ ಅಭಿನಂದನೆಗೊ.
ಬೀಡಿಗೆ ಸಿಗಿರೇಟಿದೇನು ಸಾಟಿಯೆ ನೋಡಲ್। ಹೇಳುವಾಗ ಬೀಡಿ ಸಿಗರೇಟಿನ ಹೋಲಿಕೆಯೋ ಹೇಳಿ ಸಾಮಾನ್ಯರಿಂಗೆ ಕಂಡರೆ, ಇಲ್ಲಿ ಕವಿಗಳ ತಲೆ ಓಡಿದ ದಾರಿಯೇ ಬೇರೆ.
ವಾಹ್!!! ಅದ್ಭುತ ಕಲ್ಪನೆಗೊ.
ಅಭಿನಂದನೆಗೊ
ಎಂತ ಹೇಳೋದಪ್ಪ ಇದಕ್ಕೆ…..
ಮಾತೇ ಇಲ್ಲೆ., ಅತೀ ಉತ್ತಮವಾಯ್ದು. ಹರೇ ರಾಮ. ಮೂವರಿಂಗೂ ಶಬ್ದಾತೀತ ಅಭಿನಂದನೆಗೊ.
ನಮ್ಮ ಸಾಧಕರಿಂಗೆ ಅಭಿನಂದನೆಗೊ.ಮುಳಿಯ ಭಾವಂಗೂ ಒಪ್ಪಣ್ಣಂಗೂ ಬಹುಮಾನ ಬಂದದು ಬೈಲಿಂಗೆ ಹೆಮ್ಮೆಯ ವಿಷಯ.