ಬೊಳುಂಬುಮಾವನ ಗುರ್ತ ಇದ್ದನ್ನೆ!ಅದಾ, ಕೊಡೆಯಾಲಲ್ಲಿ ಬೇಂಕಿಲಿರ್ತವು!! ಕುಶಾಲಿಲಿ ಎಲ್ಲೊರನ್ನುದೇ ನೆಗೆನೆಗೆಲಿ ಮಾತಾಡುಸಿಗೊಂಡು ಇಪ್ಪದು, ಒಪ್ಪಣ್ಣಂಗೆ ಅವರತ್ರೆ ಮಾತಾಡ್ಳೆ ಕೊಶೀ ಅಪ್ಪದು.ಇವು ಪೈಸೆ ಕೊಡ್ತಲ್ಲಿ ಕೂದಿದ್ದರೆ ‘ನಗದು’ ಹೇಳ್ತ ಬೋರ್ಡಿನ ತಿರುಗುಸಿ ‘ನಗುವುದು’ ಹೇಳಿ ಮಾಡ್ತವಡ. ಮೂಲ ಬೊಳುಂಬು ಆದರೂ, ಅವು ಕಾರ್ಯನಿಮಿತ್ತ ಅಂದೇ ಊರು ಬಿಟ್ಟಿದವು..!ಊರು ಬಿಟ್ರುದೇ ಊರ ನೆಂಪು ಬಿಟ್ಟಿದವಿಲ್ಲೆ, ಹಳ್ಳಿಕ್ರಮಂಗಳ ಬಿಟ್ಟಿದವಿಲ್ಲೆ! ಕೊಡೆಯಾಲದ ಪೇಟೆನೆಡುಕೆ ಇದ್ದರುದೇ, ಪ್ರತಿಒರಿಶ ಸೋಣೆತಿಂಗಳಿಲಿ ಬೇಳೆಹೋಳಿಗೆ ಇದ್ದೇ ಇಕ್ಕು.ಆ ದಿನ ಒಪ್ಪಣ್ಣನ ದಿನಿಗೆಳಿಯೇ ದಿನಿಗೆಳುಗು! ;-)ಬೇಂಕಿಲಿ ಪೈಸೆ ಎಣುಶುದರ ಒಟ್ಟೊಟ್ಟಿಂಗೇ ಅವಕ್ಕೆ ಕೆಲವೆಲ್ಲ ಒಯಿವಾಟುಗೊ ಇದ್ದು!ಪಟತೆಗವದೋ, ಪದ್ಯಕಟ್ಟುದೋ, ಪದ್ಯ ಹಾಡುದೋ, ಕತೆಬರವದೋ, ಶುದ್ದಿ ಓದುದೋ, ಆಟ ನೋಡುದೋ, ಪಾಟಮಾಡುದೋ - ಇನ್ನೂ ಏನೇನೋ!ಇವರ ಪಟತೆಗೆತ್ತ ಮರುಳು ಇದ್ದಲ್ದ, ಅದರ ಒಂದು ಮೆಚ್ಚೆಕ್ಕಾದ್ದೇ, ತುಂಬ ಚೆಂದಕೆ ತೆಗೆತ್ತವಡ - ಅಜ್ಜಕಾನ ಬಾವ ಹೇಳಿತ್ತಿದ್ದ!ಎಲ್ಲಿಗೇ ಹೋಗಲಿ, ಪಟ ತೆಗದು, ಚೆಂದಲ್ಲಿ ಮಡಿಕ್ಕೊಂಗು. ಅವರ ಮನೆ ಗೋಡೆಲಿಡೀ ಅವು ತೆಗದ ಪಟಂಗಳೇ ಅಡ.ಅತ್ತೆಗೆ ವಾರವಾರ ಉಡುಗುವಗ ಬಂಙ ಅಪ್ಪದಿದಾ!ಮೊನ್ನೆ ಬೆಡಿರಿಪೆರಿಗೆ ಹೇಳಿಗೊಂಡು ಕೊಡೆಯಾಲಕ್ಕೆ ಹೋಗಿತ್ತಿದ್ದೆ.ಬೊಳುಂಬುಮಾವ ಸಿಕ್ಕಿದವು, ಪಣಂಬೂರಿಂಗೆ ಹೆರಟವು.ಕೆಮರದ ಬೇಗು ಕಂಡಪ್ಪಗ ಪಕ್ಕನೆ ಕೇಳಿದೆ, ಈ ಪಟಂಗ ನಮ್ಮ ನೆರೆಕರೆಗುದೇ ಕಾಣಲಿಯೋ?ಹೇಳಿಗೊಂಡು! ‘ಅಕ್ಕಪ್ಪಾ, ಧಾರಾಳ!’ ಹೇಳಿದವು. ಅವು ತೆಗದ ಚೆಂದದ ಪಟಂಗಳ ಒಪ್ಪಣ್ಣನ ಬೈಲಿ ತೋರುಸುಲೆ ಕೊಶೀಲಿ ಒಪ್ಪಿದವು.ನೋಡುವ ಕೆಲಸ ನಮ್ಮದು! ಅದರೊಟ್ಟಿಂಗೆ ಪುರುಸೊತ್ತಪ್ಪಗ ಶುದ್ದಿಗಳನ್ನೂ ಹೇಳ್ತವು. ಓದಿ, ಒಪ್ಪ ಕೊಡುವೊ.
pattangala noodi rama kathege hooda anubhava atu
ಬೊಳುಂಬು ಮಾವ ಶ್ರಮವಹಿಸಿ ಫೋಟೋ ತೆಗದು ಒಂದರಿ ಸವಿದ ಅಮೃತವ ಹಲವು ಬಾರಿ ನೆನಪುಸುಲೆ ಅವಕಾಶ ಮಾಡಿ ಕೊಡುತ್ತಾ ಇದ್ದವು… ಇದರ ಎಷ್ಟು ಸರ್ತಿ ನೋಡಿದರೂ ಸಾಕಾವುತ್ತಿಲ್ಲೇ…
ದೀಪಿಕಾನ ಬಗ್ಗೆ ಗುರುಗೋ… “ಎಳೆಯ ಗಾಯಕರ ತಂಡ ಅವ್ವವ್ವೆ ರಾಗ ಸಂಯೋಜನೆ ಮಾಡಿ ಹಾಡುತ್ತಾ ಇದ್ದವು… ಅವರಿಂದಾಗಿ ಎನ್ಗೊಗೆ ಇನ್ನೂ ಇನ್ನೂ ಉತ್ಸಾಹ ಹೆಚ್ಚುತ್ತಾ ಇದ್ದು…” ಹೇಳಿ ಹೊಗಳಿಕೆ ಕೇಳುವಗ ಒಂದರಿ ಕಣ್ನಿಲ್ಲಿ ಎನಗೊಂತಿಲ್ಲದ್ದೆ ಆನಂದ ಭಾಷ್ಪಂಗೋ ಬಂತು…
“ಪ್ರಸಿದ್ದ ಕಲಾವಿದರನ್ನು ಕರೆಸಿಕೊಂಡು ಆಮೇಲೆ ರಾಮನ ಮಹಿಮೆ” ಹೇಳಿ ಹೇಳುತ್ತವು ಹೇಳುವ ಪ್ರಶ್ನೆಗೆ ಉತ್ತರವಾಗಿತ್ತು ಈ ಮಕ್ಕಳ ಗಾಯನ... ಗುರುಗಳೇ ಹೊಗಳಿದ ಮೇಲೆ ನಾವೆಂತ ಹೊಗಳುದು ಈ ಮಕ್ಕಳ… ‘ಹರೇ ರಾಮ…’ ಅಷ್ಟೇ…
ಪಟಂಗಳ ನೋಡಿ ಸಂತೋಷ ಆತು
ನಿನ್ನೆಯ ಕಾರ್ಯಕ್ರಮ ತುಂಬಾ ಲಾಯಿಕಕೆ ಮೂಡಿ ಬಯಿಂದು
ಯುವ ಪ್ರತಿಭೆಗಳ ಗಾಯಕರುಗಳಾಗಿ ಪರಿಚಯಿಸಿದ್ದು, ಶ್ರೀ ಗುರುಗೊ ಮನತುಂಬಿ ಅವರ ಹರಸಿದ್ದು ವಿಶೇಷವೇ ಸರಿ. ದೀಪಿಕಾ ಹಾಡುಗಾರಿಕೆ ಉತ್ತಮ ಮಟ್ಟಲ್ಲಿ ಇತ್ತಿದ್ದು.
ನೀರ್ನಳ್ಳಿ ಗಣಪತಿಯವಕ್ಕೆ ಬಪ್ಪಲೆ ಎಡಿಗಾಗದ್ರೂ, ಪದ್ಯಕ್ಕೆ ಸರಿಯಾಗಿ ಅವರ ಈ ಮೊದಲಾಣ ಚಿತ್ರಕಲೆಯ ವೀಡ್ಯವ ಸಂದರ್ಭಕ್ಕೆ ಸರಿಯಾಗಿ ಹಾಕಿ, ಅವರ ಅನುಪಸ್ಥಿತಿ ಗೊಂತಾಗದ್ದೆ ಹಾಂಗೆ ಮಾಡಿದ್ದು ಕೂಡಾ ಕಾರ್ಯಕ್ರಮದ ಇನ್ನೊಂದು ವಿಶೇಷ.
ಬೈಲಿಲ್ಲಿ ಪಟಂಗಳ ಪ್ರಕಟ ಮಾಡಿದ ಬೊಳುಂಬು ಮಾವಂಗೆ ಧನ್ಯವಾದಂಗೊ
ಪಟದ ಮೂಲಕ ಉತ್ಸಾಹೀ ತಂಡವ ನೋಡಿ ಕೊಶಿ ಆತು. ಹರೇ ರಾಮ.
ಕಲಾವಿದರ ಬಳಗಲ್ಲಿ ನಮ್ಮ ಬೈಲಿನ ಹೆಮ್ಮೆಯ ಕೂಸು “ದೀಪಿಕಾ” ಹಾಡಿದ್ದದು ತುಂಬಾ ವಿಶೇಷ. ಸಂಗೀತ ತಂಡಲ್ಲಿ ಪ್ರೇಮಲತಾ ದಿವಾಕರ್ ಬದಲಿಂಗೆ ಹಾಡಿದ್ದದು ದೀಪಿಕಾ. ತುಂಬಾ ಲಾಯಕಿತ್ತು.
ಗುರುಗೊ ಪ್ರೀತಿಲಿ ಯುವ ಗಾಯಕ/ಗಾಯಕಿಯರ ಮನಸಾರೆ ಹರಸಿ ಹೊಗಳಿದವು ಹೇಳ್ತದು ಹೆಮ್ಮೆಯ ವಿಷಯ. ಇನ್ನು ನಾಲ್ಕ್ಲು ದಿನವುದೆ ಇವರ ಗಾಯನ ರೈಸಲಿದ್ದು, ದೀಪಿಕ, ಶ್ರೀಪಾದರ ಬಳಗಕ್ಕೆ ಅಭಿನಂದನೆಗೊ.