Latest posts by ಬೊಳುಂಬು ಮಾವ° (see all)
- ಉಪ್ಪುಸೊಳೆಯ ಸುತ್ತ - May 1, 2020
- ಮಂಗಳೂರು ಹವ್ಯಕ ಸಭೆಲಿ “ವಿಷು ಸಂಭ್ರಮದ ಸಂಗೀತ ಸೌರಭ” - May 1, 2017
- ಶಪಥಪರ್ವ – ಕ್ಯಾಮರಲ್ಲಿ - October 9, 2016
ಇಂದು ೩ನೇ ದಿನದ ಶ್ರೀರಾಮಕಥೆ.
ಇಂದ್ರಾಣ ವಿಶೇಷ ಎಂತ ಹೇಳಿರೆ, ನೀರ್ನಳ್ಳಿ ಗಣಪತಿಯವರ ಚಿತ್ರವುದೆ, ಚಂದ್ರಶೇಖರ ಕೆದ್ಲಾಯ ಅವರ ಗಾಯನವುದೆ ರಾಮಕಥೆಗೆ ಸೇರೆಂಡದು.
ನೀರ್ನಳ್ಳಿಯವರ ಸುಲಲಿತ ಚಿತ್ರಂಗೊ, ಕೆದ್ಲಾಯ ಅವರ ಕಂಚಿನ ಕಂಠ ಕಥೆಗೆ ಒಳ್ಳೆ ಮೆರುಗು ಕೊಟ್ಟತ್ತು.
ರೂಪಕಲ್ಲಿ ವಿಶೇಷವಾಗಿ ರಾವಣ ಅಣ್ಣ ವೈಶ್ರವಣ ಹತ್ರಂದ ಎಳದು ತಂದ ಪುಷ್ಪಕವಿಮಾನಲ್ಲಿ ಕೂದೊಂಡು ಬಪ್ಪದು, ಅದು ಕೈಲಾಸ ಪರ್ವತದ ಮೇಲೆ ಅರ್ಧಲ್ಲಿ ನಿಂದಪ್ಪಗ ರಾವಣ ಅದರಿಂದ ಇಳಿವದು, ನಂದೀಶನ ಶಾಪ, ರಾವಣ ಕೈಲಾಸವನ್ನೇ ಎತ್ತಲೆ ಹೆರಡುವದು, ಶಿವನ ಹೆಬ್ಬರಳಿಲ್ಲಿ ಒತ್ತಿ ಅಪ್ಪಗ ಅದರ ಕೈ ಪರ್ವತದಡಿಲಿ ಚೆರಕ್ಕುವದು (ಅಪ್ಪಚ್ಚಿ ಅಪ್ಪದು), ಶಿವನಿಂದ ಮತ್ತೂ ವರವ ತೆಕ್ಕೊಂಬದು ಎಲ್ಲವುದೆ ಇತ್ತು, ಸೂಪರ್ ಆಗಿತ್ತು..
ಕೆಲಾವು ಫೊಟೊಂಗೊ ಇಲ್ಲಿದ್ದು.
ಪಟಂಗ ಭಾರೀ ಲಾಯ್ಕ ಬೈಂದು..ನೂಡಿಯಪ್ಪಗಳೆ ಅದರ ಭಾವ ಅರಿವಾಗ್ತು..
ಬಪ್ಪಲಾಯಿದಿಲ್ಲೆನ್ನೆ ಹೇಳುವ ಬೇಜಾರ ಪಟ ನೋಡಿಯಪ್ಪಗ ರಜಾ ಕಡಮ್ಮೆ ಆತು.ಈ ಒ೦ದು ದೊಡ್ಡ ಉಪಕಾರ ಮಾಡಿದ ಬೊಳು೦ಬು ಮಾವ೦ಗೆ ಆತ್ಮೀಯ ಧನ್ಯವಾದ೦ಗೊ.ನಮಸ್ತೇ….
ರಾಮಕಥೆಯ ವೀದ್ಯಂಗ ಇಲ್ಲಿದ್ದು : http://hareraama.in/av/raamakatha-av/ http://hareraama.in/raamakatha/ LIVE
ನಿನ್ನಾಣ ರಾಮಕಥೆ ಅದೆಂತಕೋ ವಿಶೇಷವಾಗಿಯೇ ಲಾಯಕ ಆಗಿತ್ತು ಹೇಳಿ ಅನಿಸಿತ್ತು. ಪಟಂಗೊ ನೋಡಿ ಕೊಶಿಯಾತು. ಹರೇ ರಾಮ
ನಿನ್ನೆಯ ರಾಮಕಥೆ ತುಂಬಾ ವಿಶೇಷ ಅಪ್ಪಲೆ ಕಾರಣಂಗೊ ನೀರ್ನಳ್ಳಿ ಗಣಪತಿಯವರ ರೇಖಾ ಚಿತ್ರದ ವೈಖರಿ, ಕೆದ್ಲಾಯರ ಕಂಚಿನ ಕಂಠದ ಗಾಯನ, ಅತ್ಯದ್ಭುತವಾಗಿ ಮೂಡಿ ಬಂದ ರೂಪಕ, ಎಲ್ಲದಕ್ಕೂ ಮಿಗಿಲಾಗಿ ಶ್ರೀ ಗುರುಗಳ ಅಮೃತ ವಾಣಿಗೊ.