- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಪುತ್ತೂರು ಅಷ್ಟಾವಧಾನದ ಸಂಕ್ಷಿಪ್ತ ಪಕ್ಷಿನೋಟ:
ನಿಷೇಧಾಕ್ಷರಿ:
ಪೃಚ್ಛಕರು: ಡಾ | ಪಾದೇಕಲ್ಲು ವಿಷ್ಣು ಭಟ್ಟ
ಪ್ರಶ್ನೆ : ಸಂಧ್ಯೆಯ ವರ್ಣನೆ, ಸಂಧ್ಯಾ ನಮಸ್ಕಾರ
ಛಂದಸ್ಸು: ಮಹಾಸ್ರಗ್ಧರಾ ವೃತ್ತ
ಪರಿಹಾರ : (ಕರ್ಣದೊಳ ನಿಷೇಧದ ಅಕ್ಷರ)
ಸುತ್ತು 1:
ರಜ(ತ)ನೀ(ಕ)ಭಾ(ಸ)ವ್ಯಾ(ಪ)ಸ್ಯ(ನ)ಮೆ(ಲ)ನ್ದುಂ(ಸ)ನ(ಗ)ತಿ(ತ)ಗ(ಣ)ತಿ(ಗ)ಯೆ(ನ)ಡೆ(ಯ)ಗಂ (ಭ)ಸ(ಭ)ಲ್ವ(ಸ)ತಾ(ರ)ಣಂ(ನ)ಸ್ವ(ರ)ಭಾ(ವ)ನಂ
ಸುತ್ತು 2:
ಸ್ರಜೆ(ಯ)ಗಂ(ತ)ಮ(ತ)ಧ್ವ(ರ)ಧ್ವ(ಯ)ಪಾ(ಶ)ನ್ತಂ(ಪ)ಸ(ಕ)ರಿ(ದ)ವ(ಪ)ನ(ದ)ಯ(ನ)ದೆ(ನ)ತಾಂ (ಭ)ಸ(ತ)ರ್ವ(ಕ)ಥಾ(ಭ)ಸಾ(ಧ)ರೆ(ನ)ಸ(ತ)ಲ್ಗುಂ
ಸುತ್ತು 3:
ನಿಜ(ನ)ಮಾ(ಗ)ನ್ದ್ಯಾ(ದ)ನ್ಧ್ಯಾ(ನ)ರ್ಕ(ಪ)ಹೇ(ಗ)ಲಾ(ಪ)ಹಿ(ಮ)ತ(ಮ)ಕೆ(ತ)ಪ(ಕ)ಥ(ಕ)ಮಿ(ದ)ಹಾ (ಗ)ನ್ಯ(ತ)ರ್ಧಿ(ಭ)ಗೀ(ನ)ವಿ(ದ)ತ್ವ(ವ)ಮೀ(ಗ)ಡ್ಯಂ
ಸುತ್ತು 4:
ಪ್ರಜೆಗಳ್ ತಾಮಗ್ನಿಶೋಮೀಯದ ಪರಿಣತಿಗಂ ಸಂದಿರಲ್ ಸತ್ವಮಾಳ್ಗುಂ ||
ಪೂರ್ಣಪಾಠ:
ರಜನೀ ಭಾವ್ಯಾಸ್ಯಮೆಂದುಂ ನತಿಗತಿಯೆಡೆಗಂ ಸಲ್ವತಾಣಂ ಸ್ವಭಾನಂ
ಸ್ರಜೆಗಂ ಮಧ್ವಧ್ವಪಾಂತಂ ಸರಿವನಯದೆ ತಾಂ ಸರ್ವಥಾ ಸಾರೆ ಸಲ್ಗುಂ |
ನಿಜಮಾಂದ್ಯಾಂಧ್ಯಾರ್ಕ ಹೇಲಾಹಿತಕೆ ಪಥಮಿಹಾನ್ಯರ್ಧಿಗೀವಿತ್ವಮೀಡ್ಯಂ
ಪ್ರಜೆಗಳ್ ತಾಮಗ್ನಿಶೋಮೀಯದ ಪರಿಣತಿಗಂ ಸಂದಿರಲ್ ಸತ್ವಮಾಳ್ಗುಂ ||
ಸಂಧ್ಯೆಯಿಂದಾಗಿ ನಮ್ಮೊಳ ಸತ್ವ ವೃದ್ಧಿಯಾಗಲಿ.
~*~
ಸಮಸ್ಯಾಪೂರಣ:
ಪೃಚ್ಛಕರು: ಕೆಕ್ಕಾರು ರಾಮಚಂದ್ರ, ಬೆಂಗಳೂರು
ಪ್ರಶ್ನೆ : ತಲೆದಿಂಬೊದ್ದೆಯದಾದುದಂ ತಿಳಿಯುತಂ ಕಣ್ಣೀರ ತಾ ಸೂಸುವಳ್
ಛಂದಸ್ಸು: ಮತ್ತೇಭವಿಕ್ರೀಡಿತ ವೃತ್ತ
ಪರಿಹಾರ:
ಲಲನಾಮಾನಿತೆ ಸೀತೆ ತಾಂ ನೆನೆಯುವಳ್ ವಾಲ್ಮೀಕಿ ಕುಟ್ಯಗ್ರದೊಳ್
ದಲಿತಾನಂದನ ನಂದುರಾಮನಳುಕುತ್ತುಂ ಕೊಂಡ ದುರ್ನಿರ್ಣಯ -|
ಚ್ಛಲಮಂ ಕಾಣದೆ ಕಾಡಿಗೇಗುವ ಚಣಂಗಳ್ ವೊಂದದಂ ಭಾವಿಸಲ್
ತಲೆದಿಂಬೊದ್ದೆಯದಾದುದಂ ತಿಳಿಯುತಂ ಕಣ್ಣೀರ ತಾ ಸೂಸುವಳ್ ||
ಸೀತಾ ಪರಿತ್ಯಾಗದ ಮತ್ತೆ ವಾಲ್ಮೀಕಿ ಆಶ್ರಮಲ್ಲಿ ಸೀತೆ ಆಲೋಚನೆ ಮಾಡುವಾಗ, ಆ ದಿನ ರಾಮನ ತಲೆದಿಂಬು ಚೆಂಡಿ ಆದ್ಸು ನೆಂಪಾವುತ್ತು.
ತನ್ನ ಕಳುಸುವಾಗ ರಾಮಂಗೆ ಬೇಜಾರಾಗಿತ್ತು – ಗ್ರೇಶಿ ಸೀತೆ ಕಣ್ಣೀರು ಸುರಿಸುತ್ತು.
~*~
ದತ್ತಪದಿ:
ಪೃಚ್ಛಕರು: ಅಂಬಾತನಯ ಮುದ್ರಾಡಿ
ಪಶ್ನೆ : ನಲ್ಗಾಡಿ, ಬೀಸು, ವಾಯ್ವಾಯ್, ಅವಧಾನಿ – ಶೃಂಗಾರ ಸಂದರ್ಭ
ಛಂದಸ್ಸು: ಸಾಂಗತ್ಯ
ಪರಿಹಾರ:
ಒಲುಮೆಯ ಜೋಡಿಯು ನಲ್ಗಾಡಿಯಿಂ ಸಾಗಲ್
ಎಲರತ್ತ ಬೀಸಿರಲ್ ಇರದಾ |
ಮಲರೀನ ಹುಡಿಯನ್ನು ಬಾಯ್ವಾಯ್ಗಳ್ ಒನಪಿಂದೆ
ತೊಳೆವವಧಾನಿಗಳ್ ಗೆಲ್ವರ್ ||
ನಲವಿಂದ ಜೋಡಿಯೊಂದು ಸೌಂದರ್ಯ ಆಸ್ವಾದನೆ ಮಾಡುವಾಗ ಗಾಳಿ ಬೀಸಿತ್ತು. ಪುಷ್ಪ ಪರಾಗ ಕಣ್ಣಿಂಗೆ ಬಿದ್ದತ್ತೋ ಹೇಳಿ ಗ್ರೇಶಿ ಇಲ್ಲದ್ದ ಧೂಳಿನ ನಿವಾರುಸುವ ಪ್ರಯತ್ನ ಮಾಡ್ತವು.
~*~
ಚಿತ್ರಕವಿತೆ:
ಪೃಚ್ಛಕರು: ಡಾ. ಆರ್. ಶಂಕರ್
ವಿಷಯ: ಶಿವಸ್ತುತಿ
ಛಂದಸ್ಸು/ ಬಂಧ: ಅನುಷ್ಟುಪ್ / ಯುಗಳ ಸರ್ಪಬಂಧ
ಕಲಾಧರ ಜಯಾರ್ಯೇಶ
ಕಲಾಪಧರ ಸೇವಿತ |
ವಿಲಾಸ ರಸ್ಯ ಯಾಗೇಶ
ಖಲಾಂತ್ಯ ಧರೆ ಸೇರಲೈ |
~*~
ಆಶುಕವಿತೆ:
ಪೃಚ್ಛಕರು: ಸೋಮಶೇಖರ ಶರ್ಮ
ಪ್ರಶ್ನೆ 1: ರಾಮಾಯಣದ ಮಂಥರೆ-ಶಬರಿಯ ತುಲನಾ ಪದ್ಯ
ಉತ್ತರ 1:
ರಾಮಾಯಣ ಮಧುವನದೊಳ್
ಪ್ರೇಮಾಯತನಂ ಪಯೋಜಮಾ ಶಬರಿಯದಲ್ |
ಕ್ಷೇಮ ಪ್ರಬೋಧ ಮಾರಣ
ಮೈಮೆವಲಂ ಮಂಥರಾಕ್ಕೆ ದತ್ತೂರವೆ ತಾಂ ||
ರಾಮಾಯಣವೆಂಬ ಉದ್ಯಾನವನದಲ್ಲಿ ಶಬರಿಯು ಕೋಮಲವಾದ ಕಮಲವಿದ್ದಂತೆ, ಮಂಥರೆ ಮಾದಕ,ವಿಷವಾದ ದತ್ತೂರವಿದ್ದಂತೆ.
~*~
ಕಾವ್ಯವಾಚನ:
ಪೃಚ್ಛಕರು: ಚಂದಶೇಖರ ಕೆದಿಲಾಯರು
- ಸೇಡಿಯಾಪು ಕೃಷ್ಣಭಟ್ಟರ – ಶಬರಿಯ ಕುರಿತ ಕಾವ್ಯ
- ಮುದ್ದಣನ ರಾಮಾಶ್ವಮೇಧ
- ರಾಮಾಯಣ ದರ್ಶನಂ – ಕುವೆಂಪು
- ಗೋಪಾಲಕೃಷ್ಣ ಅಡಿಗರ ಕಾವ್ಯ
~
ಸಂಖ್ಯಾಬಂಧ:
ಪೃಚ್ಛಕರು: ಡಾ.ಚಂದ್ರಶೇಖರ ದಾಮ್ಲೆ
ಸಂಖ್ಯೆ: 840 (Double 420)
~
ಅಪ್ರಸ್ತುತ ಪ್ರಸಂಗ:
ಪೃಚ್ಛಕರು: ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು
ಕೆಲವು ರಸನಿಮಿಷಂಗೊ:
ಅ.ಪ್ರ ಪ್ರಶ್ನೆ: ಇಡ್ಳಿ-ವಡೆಯ ದಾಂಪತ್ಯ ರಹಸ್ಯ?
ಅವಧಾನಿಗಳ ಉತ್ತರ: ಸಾಂ-ಭಾರ. ಪರಸ್ಪರ ಉತ್ತಮ ಭಾರ(ಕೃತಜ್ಞತೆ) ಇದ್ದಲ್ಲಿ ದಾಂಪತ್ಯ ಯಶಸ್ವಿಯಾಗುತ್ತದೆ.
ಪ್ರ: ಹೆಂಡತಿ ಶಬ್ದದಲ್ಲೇ ಹೆಂಡ ಇದೆ. ಹಾಗಿದ್ದಲ್ಲಿ “ಹೆಂಡ” ಬಿಡಿ ಎನ್ನುವುದು ತಪ್ಪಲ್ವೇ?
ಉ: ಹೆಂಡತಿಯಲ್ಲಿ ಹೆಂಡ ಕಾಣ್ತಿದ್ದರೆ ಗಂಡನಲ್ಲಿ ಯಮಗಂಡ ಇದೆಯೇ?
ಪ್ರ: ಹಗ್ಗ ಹಾಕಿಕೊಳ್ಳಲು ಹದಿನಾರು ಸೂತ್ರಗಳು?
ಉ: ಹದಿನಾರು ಬೇಕಾಗಿಲ್ಲ, ಒಂದೇ ಸಾಕು – ಮಾಂಗಲ್ಯ ಸೂತ್ರ.
ಪ್ರ: ಅವಧಾನಿಗಳೇ..
ಉ: ಹೇಳಿ..
ಪ್ರ: ಏನೂ ಇಲ್ಲ..
ಉ: ನಿಮ್ಮಲ್ಲಿ ಏನಿರುತ್ತೆ ಹೇಳಿ…
~*~*~
ನೇರಪ್ರಸಾರ ಮಾಡಿದ ವೀಡಿಯೋ:
(ಕೃಪೆ: ಹಳೆಮನೆ ತಮ್ಮ / ಚುಬ್ಬಣ್ಣ)
http://new.livestream.com/accounts/3676823/events/2039669/videos/16993103
~
ಸೂ:
ಪೂರ್ಣ ಅವಧಾನದ ನಾಲ್ಕೂ ಸುತ್ತುಗಳ ಮಾಹಿತಿ ಸದ್ಯಲ್ಲೇ ಬತ್ತು. ಈಗ ಅಂಬೆರ್ಪಿಂಗೆ ಇಷ್ಟಿದ್ದು. ವೀಡಿಯೋ ನೋಡಿರೆ ಸಂಪೂರ್ಣವಾಗಿದ್ದು.
ಹರೇರಾಮ
ಒಪ್ಪಣ್ಣ ನೆರೆಕೆರೆಯವರ ಆಯೋಜನೆ ಅದ್ಭುತವಾಗಿತ್ತು, ಪದ್ಯಪಾನತಾಣದಲ್ಲಿ ಛಂದೋಬದ್ಧ ಪದ್ಯರಚನೆಯಲ್ಲಿ ಭಾಗವಹಿಸಿ ಎಂದು ಕೇಳಿಕೊಳುತ್ತೇನೆ.
ಪೃಚ್ಛಕರಾಗಿ ಆಗಮಿಸಿ ಕಾರ್ಯಕ್ರಮವ ಚೆ೦ದಗಾಣಿಸಿ ಕೊಟ್ಟ ನಿಮ್ಮೀರ್ವರಿ೦ಗೆ ನಮನ.
ಸೋಮನಾಶುಕವಿತ್ವ
ರಾಮನ ಸಮಸ್ಯೆಗಾ
ಸ್ತೋಮ ನಿಬ್ಬೆರಗಾಗಿ ಮೈಯೆ ಕಿವಿಯಾಗೀ|
ಸಾಮರಸ್ಯದಲೆ೦ಟು
ಧಾಮದಲಿ ನವರಸದ
ಹೋಮ ಮಾಳ್ದವಧಾನಿಗಳಿಗೆ ನಮಿಸಿದರೂ||
ಒಪ್ಪವಾಗಿ ಕಾರ್ಯಕ್ರಮ ಆಯೋಜಿಸಿದ ಬಳಗಕ್ಕೆ ವಂದನೆಗಳು. ಪುತ್ತೂರಿನ ಆಸುಪಾಸಲ್ಲಿ ಅಷ್ಟೆಲ್ಲಾ ಕಾವ್ಯ ರಸಿಕರಿದ್ರಿ ಹೇಳೂದೇ ಹೆಮ್ಮೆಯ ವಿಷಯ. 🙂
ಹರೇ ರಾಮ , ಕಾರ್ಯಕ್ರಮ ಅಮೋಘ! ಪುತ್ತೂರಿಂಗೆ ಪುತ್ತೂರೇ ಸೇರಿದ್ದಲ್ಲಿ ಮಿನಿಯ! ಅಪ್ರಸ್ತುತ ಪ್ರಸಂಗದ ಪ್ರಶ್ನೆ ಅದಕ್ಕೆ ಅವಧಾನಿಗಳಿಂದ ಥಟ್ಟನೆ ಬಪ್ಪ ಉತ್ತರವಂತೂ ಕೇಳುಗರಿಂಗೆ ಒಂದು ಟಾನಿಕ್ಕು ಕುಡುದಹಾಂಗಾಗಿ ಹಾಸ್ಯಕ್ಕೊಂದು ಇಡೀಸಭೆಂದನೆಗೆಬುಗ್ಗೆಪಸರುಸುವಗ ಅದೊಂದು ಚೆಂದ ಅಲ್ಲದೋ!
ಹರೇ ರಾಮ;ಬಾರೀ ಲಾಯ್ಕಆಯಿದು ಕಾರ್ಯಕ್ರಮ ನದೆಶಿಕೊಟ್ಟ ನಮ್ಮ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ(ರಿ.)ದ ಸರ್ವರಿ೦ಗು ಧನ್ಯವಾದ೦ಗೊ.ನಮಸ್ತೇ.
ಅಷ್ಟಾವಧಾನ ಪ್ರಸಾರದ ವೀಡಿಯೋ ವ ಮರದಿನ ನೋಡಿ ಆನ೦ದಿಸಿದವರಲ್ಲಿ ಆನೂ ಒಬ್ಬಳು. ಚಿತ್ರೀಕರಣ ಲಾಯ್ಕಾಯಿದು.ಧನ್ಯವಾದ.
ಊರಿಂದ ಹೆರ ಇದ್ದರೂ ಕಾರ್ಯಕ್ರಮ ತಪ್ಪಿದ್ದಿಲ್ಲೆ. ಒಪ್ಪಣ್ಣಂಗೆ ಧನ್ಯವಾದ
ಇದಿದಾ ಬಿಸಿ ಬಿಸಿ ರೈಸಿದ್ದದಿಲ್ಲಿ..
ಹೋ…ಹು!
ಹರೇ ರಾಮ
ಪುನಃ ಮತ್ತೊಂದರಿ ಪದ್ಯಂಗಳ ಮೆಲುಕು ಹಾಕುವ ಹಾಂಗಾತು. ಧನ್ಯವಾದಂಗೊ.
ಅವಧಾನ ಕಾರ್ಯಕ್ರಮ ಲಾಯಕ ಅಯಿದು.
It was a nice time to listen Asthavadhana in Puttur. Hats off to the work shared by the youngsters of oppannana bailu. The smile, the regards, the respect, the concern u showed for the guests everything fine. U, the youngsters showed that u can do gigantic works. The care for hayvaka writings, the competitions u organised, the ambiance of the program . everything fine. Best program, well done. Good wishes for the future works.
Regards and respects to each of u . jayalaxmi. sneha. sullia.23.04.2013