ಪೂರ್ಣಿಮಾ – ಹೇಳಿರೆ ಚಂದ್ರ° ಪೂರ್ತಿಯಾಗಿ ಕಾಂಬ ಸಮೆಯ.
ಅಮಾ-ಹೇಳಿತ್ತುಕಂಡ್ರೆ ಚಂದ್ರ ಇಲ್ಲದ್ದೆ ಅಪ್ಪದು ಹೇಳಿಗೊಂಡು! ಅಮಾವಾಸ್ಯಾ – ಹೇಳಿರೆ ಚಂದ್ರ° ಇಲ್ಲದ್ದೆ ಆದ ದಿನ ಇದಾ – ಮಾಷ್ಟ್ರುಮಾವ° ಹೇಳುಗು.
ಬಾನಲ್ಲಿ ಚಂದ್ರ° ಒಂದೇ ನಮುನೆ ಇರ್ತನಿಲ್ಲೆ. ಕೆಮ್ಕದ ಅಡಕ್ಕೆ ರೇಟಿನ ಹಾಂಗೆ – ಹೆಚ್ಚು ಕಮ್ಮಿ ಆವುತ್ತಾ ಇರ್ತ°.
ಆ ಬಗ್ಗೆ ನಾವು ಒಂದರಿ ಶುದ್ದಿ ಮಾತಾಡಿದ್ದು, ಅಲ್ಲದೋ?
ಪೂರ್ತಿ ಕತ್ತಲೆಯ ಅಮಾವಾಸೆಂದ ಚಂದ್ರ ಗೆರೆರೂಪಲ್ಲಿ ಬೆಳದು ಬೆಳದು – ತೋರ ಆಗಿ ಆಗಿ, ಉರುಟುರುಟು – ಶುಬತ್ತೆಯ ಹಾಂಗೆ – ಬೆಳಿಬೆಳಿಯ ಪೂರ್ಣಮಿಯ ವರೆಗೆ ಅವನ ಬೆಳವಣಿಗೆ ಕೇವಲ ಹದಿನೈದು ತಿತಿಲಿ ಆವುತ್ತು.
ಇದೊಂದು ಸೃಷ್ಟಿ ವೈಚಿತ್ರ್ಯವೇ ಅಲ್ಲದೋ?ಒರಿಷಪೂರ್ತಿ ಒಂದೊಂದು ದಿನ ಒಂದೊಂದು ವಿಶೇಷ ಇರ್ತು ಬಾರತಲ್ಲಿ!
ನಾಳ್ತು – ಆಯಿತ್ಯವಾರ ಬತ್ತ ಪೂರ್ಣಮಿಗುದೇ ಒಂದು ವಿಶೇಷ ಇದ್ದು. ಅದೆಂತರ?
ಅದುವೇ ಗುರುಪೂರ್ಣಿಮಾ..!!
~
ಮದಲಿಂಗೆ, ಶಂಬಜ್ಜ° ಒಂದು ಕತೆ ಹೇಳುಗು –
ಕೃಷ್ಣದ್ವೈಪಾಯನ ಋಷಿ ತಪಸ್ಸುಮಾಡಿಗೊಂಡಿಪ್ಪಗ ಅವಕ್ಕೆ cheap raybans sunglasses ಕೆಲವು ಋಕ್ಕುಗೊ ಕೇಳಿತ್ತಡ. ಋಕ್ಕು – ಹೇಳಿರೆ ಮಂತ್ರಗುಚ್ಛಂಗೊ.
ಕೇಳಿತ್ತಡ – ಹೇಳಿರೆ ಎಲ್ಲಿಂದ? ಆರು ಹೇಳಿದ್ದು?
ಆರು ಹೇಳದ್ದೆಯೂ ಕೇಳಿತ್ತು – ಬಂಡಾಡಿಅಜ್ಜಿಯ ರೇಡ್ಯಲ್ಲಿ ಕೇಳಿದಹಾಂಗೆ!!
ಆದರೆ ಅಂಬಗ ರೇಡ್ಯಲ್ಲಿ ಕೇಳಿದ್ದಲ್ಲ, ಬದಲಾಗಿ ದೇವಲೋಕಂದ ಕೇಳಿದ್ದು. ನಿಜವಾದ ಆಕಾಶವಾಣಿ.
ಅದರ ಹೇಳಿದ ಭಗವಂತ ಲೋಕಕ್ಕೇ ಗುರುಸ್ಥಾನಲ್ಲಿಪ್ಪ ಲೋಕಗುರು.
ಆ ಋಕ್ಕುಗೊ ಜ್ಞಾನನಿಧಿ ಆಗಿತ್ತಡ. ಅತ್ಯಂತ ಕ್ಲಿಷ್ಟವಾದ ಜೀವರಹಸ್ಯಂಗೊ ಸರಳವಾಗಿ ಆ ಋಕ್ಕುಗಳಲ್ಲಿ ಅಡಕವಾಗಿತ್ತಡ.
ಮನುಕುಲದ ಅಷ್ಟೂ ಜ್ಞಾನ ಅದರ್ಲಿತ್ತಡ.
’ವಿತ್’ – ಹೇಳಿರೆ ಜ್ಞಾನ ಹೇಳಿ ಅರ್ತ ಅಡ. ವಿದ್ಯೆ, ವಿದ್ಯಾವಂತ – ಹೇಳಿ ಅದೇ ಶಬ್ದದ ರೂಪ ಅಲ್ಲದೋ?!
ಹಾಂಗೆ, ವಿತ್ – ಜ್ಞಾನವೇ ಅದರಲ್ಲಿದ್ದ ಕಾರಣ ಅದರ ವೇದ ಹೇಳಿದವಡ ಋಷಿಗೊ.
ಆ ಋಕ್ಕುಗೊ ಒಟ್ಟಾಗಿ ಒಂದೇ ಆಗಿ ಕೇಳಿತ್ತು.
ಯಾವದೇ ಪ್ರಭೇದಂಗೊ, ವಿಂಗಡಣೆ ಇತ್ತಿಲ್ಲೆ, ಅಷ್ಟುದೇ ಋಕ್ಕುಗೊ ಒಂದೇ ಪುಸ್ತಕಲ್ಲಿ, ಒಂದೇ ಶಾಯಿಲಿ, ಒಂದೇ ಗೆರೆಲಿ ಬರದಿದ್ದ ನಮುನೆ..!
ಋಕ್ಕುಗಳ ಮನನ ಮಾಡಿಗೊಂಡು, ಅದರದರ ವಸ್ತುವಿನ ಅನುಗುಣವಾಗಿ ಕೃಷ್ಣದ್ವೈಪಾಯನ ಮಹರ್ಷಿ ಸರಳವಾದ ನಾಕು ತುಂಡು ಮಾಡಿದವಡ.
ಒಂದಾಗಿದ್ದ ವೇದವ ನಾಕು ತುಂಡುಮಾಡಿದ ಈ ಮಹಾಮುನಿಗೆ (ವೇದವ ತುಂಡುಮಾಡಿದವ) ವೇದವ್ಯಾಸ° ಹೇಳಿ ಹೆಸರಾತಡ.
ವ್ಯಾಸ ಹೇಳಿರೆ ಒಂದು ವೃತ್ತವ ತುಂಡುಮಾಡ್ತದಿದಾ – ನೆಕ್ಕರೆಯ ಗಣಿತಪಂಡಿತರು ಮದಲಿಂಗೇ ಹೇಳುಗು!
ಈ ವೇದವ ತುಂಡುಮಾಡುದುದೇ ಸುಲಬದ ಕೆಲಸ ಅಲ್ಲ! ಅರ್ತಬಪ್ಪ ಹಾಂಗೆ, ಯೇವದರದ್ದುದೇ ತೂಕ ಇಳಿಯದ್ದ ಹಾಂಗೆ ಮಾಡೆಕ್ಕು.
ಜೋಗಿಬೈಲಿನ ಹತ್ತರೆ ಹತ್ತೆಕ್ರೆಯ ಪಾಲುಮಾಡ್ಳೆ ಹತ್ತೊರಿಷ ಹಿಡುದ್ದು ನಿಂಗೊಗೆಲ್ಲ ಗೊಂತಿದ್ದನ್ನೆ – ಇಷ್ಟು ತೂಕದ ವೇದವ ಮನನ ಮಾಡಿಗೊಂಡು, ಕಂಠಸ್ಥ ಮಾಡಿಗೊಂಡು ಅದರ ಪಾಲುಮಾಡುದು ಎಷ್ಟು ಕಷ್ಟದ ಕೆಲಸ ನಿಂಗಳೇ ಯೋಚನೆ ಮಾಡಿಗೊಳ್ಳಿ!!
ಅಂತೂ ಮಾಡಿದವಡ, ಹೇಂಗೆ?
ಸಮಗ್ರ ಜ್ಞಾನನಿಧಿ ಒಂದಿದ್ದದು – ಋಕ್-ಯಜುಃ-ಸಾಮ-ಅಥರ್ವ ಒಟ್ಟು ನಾಕು ವೇದಂಗೊ ಆತು.
ಒಂದೊಂದರಲ್ಲಿ ಒಂದೊಂದು ವಿಶೇಷ, ಋಗ್ವೇದ ಪಾರಾಯಣಕ್ಕೆ ವಿಶೇಷ, ಯಜುರ್ವೇದಲ್ಲಿ ತಂತ್ರ-ಪ್ರಯೋಗಂಗೊ ವಿಶೇಷ, ಸಾಮವೇದವ ಗಾನಕ್ಕೆ ವಿಶೇಷ, ಅಥರ್ವವೇದ ವಿಜ್ಞಾನಕ್ಕೆ ವಿಶೇಷ – ಬಪ್ಪ ಹಾಂಗೆ ವಿಂಗಡಣೆ ಮಾಡಿದವು ವೇದವ್ಯಾಸಮುನಿ.
ಎಲ್ಲ ಋಕ್ಕುಗಳ ಒಟ್ಟಾಗಿ ಕಲಿವದರಿಂದ ನಾಲ್ಕು ಸಣ್ಣಸಣ್ಣ ವೇದಂಗೊ ಕಲಿವದು ವಿದ್ಯಾರ್ಜನೆಗೂ ಅನುಕೂಲ ಆತಡ.
ಲೋಕಗುರು ಭಗವಂತನಿಂದ ಕೇಳಿದ ಋಕ್ಕುಗಳ ಮನುಕುಲಕ್ಕೆ ಬೇಕಾದ ಹಾಂಗೆ ವಿಂಗಡಣೆ ಮಾಡಿಕೊಟ್ಟ ವೇದವ್ಯಾಸ° ಕೃಷ್ಣದ್ವೈಪಾಯನ ಮುನಿ ಮನುಕುಲದ ಆದಿಗುರು ಆದವು.
ಇದೇ ಮಹರ್ಷಿಯೇ ಮುಂದೆ ಪಂಚಮವೇದ ಆದ ಮಹಾಭಾರತಕಾವ್ಯದ ರಚನೆಗೆ ಮುಖ್ಯಪಾತ್ರರಾದವು.
ಮಹಾಭಾರತಲ್ಲಿ ವರ ಕೊಟ್ಟು ಧೃತರಾಷ್ಟ್ರ- ಪಾಂಡುವಿನ ಜನನಕ್ಕೂ, ಕುರುವಂಶದ ಜನನಕ್ಕೂ, ಹಾಂಗೇ ಪೌರಾಣಿಕ ಭಾರತದ ವೃದ್ಧಿಗೂ ಕಾರಣರಾದವು ಈ ಆದಿಗುರುಗೊ.
ಶಂಬಜ್ಜ° ಹೇಳುದು ರಜ ರಂಗಾಗಿ ಇದ್ದರೂ; ಅದರ್ಲಿ ನಮ್ಮ ನಂಬಿಕೆಗೊ ಇದ್ದು.
~
ಅದೇ ಮಹಾಭಾರತದ ಚೌಕಟ್ಟಿಲಿ, ಅದೇ ದೈವತ್ವಲ್ಲಿ ಭೂಲೋಕ ಬೆಳಗಿಯೊಂಡು ಇತ್ತು.
ಹಿಂದೂ ಜೀವನಪದ್ಧತಿಲಿ ರಜ ರಜ ವಿತ್ಯಾಸ ಮಾಡಿಗೊಂಡು ಬೇರೆ ’ಧರ್ಮ’ ಹೇಳ್ತ ಲೆಕ್ಕಲ್ಲಿ ಬೌದ್ಧ, ಜೈನ ಪಂಗಡಂಗೊ ಉದಯ ಆತು.
ಉದಯ ಆದ್ದು ಮಾಂತ್ರ ಅಲ್ಲ ಅದ್ಭುತ ರೀತಿಲಿ ಪ್ರಸಾರ ಆತು.
ಶುದ್ಧ ಸಂಸ್ಕೃತಲ್ಲಿಪ್ಪ ವೇದಂಗ ಅರ್ತ ಮಾಡಿಗೊಂಬಲೆ ಎಡಿಯದ್ದ ಸಾಮಾನ್ಯಜನಂಗೊಕ್ಕೆ. ಅಂಬಗಾಣ ಆಡುಮಾತಿಲಿ ಇಪ್ಪ ಪಾಲಿ ಮಂತ್ರಂಗೊ ಹೆಚ್ಚು ಬೇಗ ಅರ್ತ ಆತು, ಹೆಚ್ಚು ಇಷ್ಟ ಆತು. ಕ್ರಮೇಣ ಈ ವೇದಂಗಳ ಮುಟ್ಟುವವೇ ಇಲ್ಲೆ – ಹೇಳ್ತ ಪ್ರಸಂಗ ಬತ್ತಿತೋ ಏನೋ!
ಅಂಬಗ ಬಂದವದಾ – ನಮ್ಮ ಶಂಕರಾಚಾರ್ಯರು.
ಜನಸಾಮಾನ್ಯರಿಂಗೆ ಅರ್ತ ಆಗದ್ದ ಹಾಂಗಿರ್ತ ಜಟಿಲ ಋಕ್ಕುಗೊಕ್ಕೆ ಸರಳ ವ್ಯಾಖ್ಯೆಗೊ ಬರದು, ಬಂಡಾಡಿ ಅಜ್ಜಿಯ ಉಂಡ್ಳಕಾಳಿನ ಹಾಂಗೆ ಗಟ್ಟಿಗಟ್ಟಿ ಇಪ್ಪದರ ಕಾನಾವಜ್ಜಿಯ ಗೋದಿಹಲುವದ ಹಾಂಗೆ – ಮೆಸ್ತಂಗೆ ಮೆಸ್ತಂಗೆ ಮಾಡಿದವು.
ರುಚಿ ಹಿಡುದವಂಗೆ ಎರಡುದೇ ಕೊಶಿ, ಆದರೂ – ಜೀರ್ಣಮಾಡಿಗೊಂಬ ಹಲ್ಲೇ ಇಲ್ಲದ್ದ ಸಾಮಾನ್ಯಜನರಿಂಗೆ ಇದು ಕೊಶಿಯೇ ಅಲ್ಲದೋ?
ಭಾರತಲ್ಲಿ ಮತ್ತೊಂದರಿ ಪರಿವರ್ತನೆ ಆತು.
ಮತ್ತೊಂದರಿ ನಮ್ಮ ಸಂಸ್ಕೃತಿ ಉಗಮ ಆತು. ವೇದ, ಸಂಸ್ಕಾರಂಗೊ, ವೈದಿಕ ಕ್ರಮಂಗೊ ಮತ್ತೊಂದರಿ ಉದಯ ಆತು.
ಬೆಳಗಿ ಪ್ರಚಾರಕ್ಕೆ ಬಂತು.
ಅದಕ್ಕೆಲ್ಲ ಕಾರಣ ಅದ್ವೈತಗುರು ಶಂಕರಾಚಾರ್ಯರು, ಆದಿ ಶಂಕರರು.
ಮಾಷ್ಟ್ರುಮಾವಂಗೆ ಈ ವಿಶಯಲ್ಲಿ ಇನ್ನೂ ಜಾಸ್ತಿ ಗೊಂತಿದ್ದು, ಒಪ್ಪಣ್ಣಂಗೆ ಅಷ್ಟು ಅರಡಿಯ.
~
ಅಷ್ಟರ ವರೆಗೆ ಸಮಾಜದ ಮಧ್ಯಲ್ಲಿ ಗುರುಗಳ ಆವಾಸ ಇತ್ತಿಲ್ಲೆಡ.
ಸಮಾಜ ಸರಿಯಾಗಿ ನೆಡೇಕಾರೆ ಧರ್ಮಗುರುಗೊ ನಮ್ಮ ಸಮಾಜದ ಮಧ್ಯಲ್ಲೇ ಬೇಕಾವುತ್ತು – ಹೇಳ್ತದರ ಶಂಕರಾಚಾರ್ಯರು ಮನಗೊಂಡವಡ. ಹಾಂಗಾಗಿ ಸಮಾಜದ ಮಧ್ಯಮಧ್ಯಲ್ಲಿ ಕೆಲವು ಧರ್ಮಪೀಠಂಗಳ ಸ್ಥಾಪನೆ ಮಾಡಿದವು.
ಭಾರತಲ್ಲಿ ರಾಜ್ಯಭಾರ ಮಾಡುದು ಯೇವ ಕ್ಷತ್ರಿಯ ರಾಜನೇ ಆಗಿರಳಿ, ಆದರೆ ಸಮಾಜಕ್ಕೆ ಧರ್ಮಬೋಧೆ ಮಾಡುದು ಈ ಗುರುಗಳೇ ಆಗಿತ್ತಿದ್ದವಡ.
ಕೆಲವು ಧರ್ಮಪೀಠಂಗೊ ’ರಾಜಪೀಠ’ ಹೇಳಿಯೂ ಗುರುತಿಸಿಗೊಳ್ತಡ. ರಾಜರಿಂಗೇ ಧರ್ಮಪಾಠ ಮಾಡುದರಿಂದ ಹಿಡುದು, ಧರ್ಮಾಧರ್ಮ, ಜ್ಞಾನಾಜ್ಞಾನ, ಕರ್ಮಾಕರ್ಮ, ಸತ್ಯಾಸತ್ಯ – ವಿಚಾರಂಗಳ ತಿಳುಶುತ್ತ ಕಾರ್ಯ ಈ ಗುರುಗಳೇ ಮಾಡಿಗೊಂಡು ಇತ್ತಿದ್ದವಡ.
ಧರ್ಮಗುರುಗಳಲ್ಲಿ ವೆಗ್ತಿಯಷ್ಟೇ ಬೆಲೆ ಅವು ಇಪ್ಪ ಪೀಠ – ಧರ್ಮಪೀಠಂಗೊಕ್ಕೆ ಇದ್ದಡ.
ನಮ್ಮ ಧರ್ಮಪೀಠಲ್ಲಿ ಶಂಕರಾಚಾರ್ಯನಿಂದ ಮತ್ತೆ ಮೂವತ್ತೈದು ಜೆನ ಬಂದು, ಈಗ ಮೂವತ್ತಾರನೆಯ ಗುರುಗೊ ಇದ್ದವು, ನಮ್ಮಧರ್ಮಗುರುಗೊ.
ಅದ್ವೈತ ಗುರುಗೊ ಬರದ ಸರಳ ಸಂಸ್ಕೃತ ವ್ಯಾಖ್ಯಾನಂಗೊಕ್ಕೆ ಈಗಾಣ ಆಡುಮಾತಿಲಿ ಅರ್ತ ಕೊಟ್ಟು, ತನ್ಮೂಲಕವಾಗಿ ಈಗಾಣ ಜನಮಾನಸಕ್ಕೆ ಸೇರ್ತನಮುನೆಯ ಸಾಹಿತ್ಯ ಬೆಳವಲೆ ಕಾರಣೀಭೂತರಾಯಿದವು.
~
ಈ ಧರ್ಮಗುರುಗೊಕ್ಕೆ ಸಮಾಜದ ಎಲ್ಲಾ ದಿಕ್ಕೆ ಇಪ್ಪಲೆಡಿಗೊ?
ಹಾಂಗಾಗಿ ಒಂದೊಂದು ಸ್ಥಳೀಯ ಪ್ರದೇಶಂಗಳಲ್ಲಿ ಒಂದೊಂದು ವೈದಿಕ ಹಿರಿಯರ ಗುರುತಿಸಿ ಅವಕ್ಕೆ ವೇದಾಧ್ಯಯನ ಮಾಡ್ತ ಏರ್ಪಾಡು ಮಾಡಿ, ಊರಿಲಿ ಧರ್ಮಕಾರ್ಯಂಗಳ ನೆಡೆಶುತ್ತ ಅಧಿಕಾರ / ಕರ್ತವ್ಯ / ಹಕ್ಕಿನ ಕೊಟ್ಟು ಮಂತ್ರಾಕ್ಷತೆಕೊಟ್ಟವಡ.
ಅವು ಪೌರೋಹಿತ್ಯದ ಮೂಲಕ ನಮ್ಮ ಕುಲೋದ್ಧಾರದ ಕಾರ್ಯಲ್ಲಿ ಸಹಕರುಸುತ್ತ ಧರ್ಮಕಾರ್ಯ ಮಾಡ್ಳೆ ಸಹಕಾರ / ಸಹಯೋಗ ನಿರಂತರ ಕೊಟ್ಟೋಂಡು ಇರೆಕ್ಕಾವುತ್ತು.
ಧರ್ಮಗುರುಗಳತ್ರಂಗೆ ಹೋಪಗ ನಮ್ಮ ಪ್ರತಿನಿಧಿಯಾಗಿ, ನವಗೆ ಧರ್ಮಗುರುಗಳ ಪ್ರತಿನಿಧಿಯಾಗಿ – ನಮ್ಮೆಲ್ಲರ ಕುಲಂಗೊಕ್ಕೆ ಕುಲ ಗುರುಸ್ಥಾನಲ್ಲಿ ನಿಂದು ಆಶೀರ್ವಾದ ಮಾಡ್ತವೇ ನಮ್ಮ ಕುಲಗುರುಗೊ.
~
ಮದಲಿಂಗೆ ಗುರುಕುಲ ವಿದ್ಯಾಭ್ಯಾಸ ಇತ್ತು. ಮಾಣಿಗೆ ಉಪ್ನಾನ ಆದ ತಕ್ಷಣ ಶಾಲಗೆ ಕಳುಸುದು.
ಈಗ ಹೇಂಗೆ ಮಾತಾಡ್ಳೆ ಬಪ್ಪಗಳೇ ಶಾಲಗೆ ಕಳುಸುತ್ತವೋ – ಅದೇ ನಮುನೆ.. 😉
ಗುರುಕುಲಕ್ಕೆ ಹೋದರೆ ಅಲ್ಲಿ ಒಬ್ಬ ವಿದ್ಯಾಭ್ಯಾಸಕ್ಕೆ ಗುರುಗೊ ಇರ್ತವು. ವೇದ, ಸಂಸ್ಕೃತ, ಕೃಷಿ, ಜೀವನ – ಸಮಗ್ರ ವಿದ್ಯಾಭ್ಯಾಸ ಕೊಟ್ಟು ಜೀವನವ ಕಟ್ಟುವ ವೆಗ್ತಿತ್ವ ಆ ಗುರುಕುಲದ ಗುರುಗೊ.
ಮುಂದೆ ಕಾಲಕ್ರಮೇಣ ವಿದ್ಯಾಭ್ಯಾಸ ಪದ್ಧತಿ ಬದಲಾತು.
ಗುರುಗೊ ಇಪ್ಪಲ್ಲಿಗೆ ಮಕ್ಕೊ ಹೋಪದಲ್ಲ, ಮಕ್ಕೊ ಇಪ್ಪಲ್ಲಿಗೆ ಮಾಷ್ಟ್ರಂಗೊ ಓಡೋಡಿ ಬಪ್ಪ ನಮುನೆ ಆತು. ಬಾರದ್ದೆ ಆಗ ಇದಾ – ಟ್ರಾನ್ಸ್ವರು ಆವುತ್ತು!! ಅದಿರಳಿ.
ಅವುದೇ ಗುರುಗಳೇ! ಒಟ್ಟಾಗಿ ಹೇಳ್ತರೆ ನವಗೆ ಬದುಕ್ಕಲೆ ಆರೆಲ್ಲ ಸಕಾಯ ಮಾಡ್ತವೋ – ಅವೆಲ್ಲ ಗುರುಗಳೇ ಅಡ ಮಾಷ್ಟ್ರುಮಾವ° ಹೇಳುಗು. ನಿಂಗಳೂ ಗುರುಗಳೇ ಅಲ್ಲದೋ – ಹೇಳಿರೆ ನಾವು ಎಷ್ಟೋ ಜನಕ್ಕೆ ಗುರುಗೊ ಆಗಿರ್ತು, ಎಷ್ಟೋ ಜನ ನವಗೆ ಗುರುಗೊ ಆಗಿರ್ತು. ಅಧ್ಯಯನ, ಅಧ್ಯಾಪನ – ಒಂದೇ ಪಾವೆಲಿಯ ಎರಡು ಮೋರೆ – ಹೇಳಿದವು ಮಾಷ್ಟ್ರುಮಾವ°.
(ಈಗಾಣ ಪಾವೆಲಿಲಿ ಪುರ್ಬುಗಳ ಕ್ರೂಜು ಇದ್ದಡ ಅಪ್ಪೋ ಭಾವ? ಅದಿರಳಿ, ಇನ್ನೊಂದರಿ ಮಾತಾಡುವೊ°. )
~
ಜನ್ಮನಾ ಜಾಯತೇ ಜಂತುಃ – ಜಂತುವಿನ ಹಾಂಗೆ ಹುಟ್ಟಿದ ವೆಗ್ತಿಯ ಬೆಳೆಶುವ ಹಂತಲ್ಲಿ ಸಹಸ್ರಾರು ಗುರುಗಳ ಪಡಕ್ಕೊಳ್ತ°.
ಮನೆಯೆ ಮೊದಲಪಾಟಶಾಲೆ ಅಡ – ಅಮ್ಮನೇ ಮೊದಲ ಗುರು ಅಡ. ಮತ್ತೆ ಮನೆಯ ಹಿರಿಯರು, ಅದಾದ ಮತ್ತೆ ಗುರುಕುಲದ ಗುರುಗೊ, ಅದಾಗಿ ಧರ್ಮಗುರುಗೊ, ಅದಾಗಿ ದೇವರು! – ಎಷ್ಟು ಗುರುಗೊ ಇರ್ತವು, ಇವೆಲ್ಲವೂ ಜೀವನವ ಹದಮಾಡುವ, ದೈಹಿಕವಾಗಿ- ಬೌದ್ಧಿಕವಾಗಿ ಬೆಳೆಸುವ ಕಾಯಕಮಾಡ್ತವು.
ಜೀವನಾಂತ್ಯದವರೆಗೂ ಒಬ್ಬ° ವೆಗ್ತಿ ಶಿಷ್ಯ ಆಗಿರ್ತ ಹೇಳಿತ್ತುಕಂಡ್ರೆ ಅವಂಗೆ ಗುರುವಿನ ಅವಶ್ಯಕತ ಎಷ್ಟುದ್ದು – ಹೇಳ್ತದರ ಯೋಚನೆ ಮಾಡಿ ಹೇಳಿದವು ಮಾಷ್ಟ್ರುಮಾವ°.
~
ಗು-ಹೇಳಿತ್ತುಕಂಡ್ರೆ ಕಸ್ತಲೆ ಅಡ. ಗುಮ್ಮೆ ಹಕ್ಕಿಗೆ ಆ ಹೆಸರು ಬಂದದು ಅದಕ್ಕೆಯೋ ಏನೋ! ಬಿಂಗಿ!!
ರು-ಹೇಳಿತ್ತುಕಂಡ್ರೆ ರಕ್ಷಣೆ / ಬೆಣಚ್ಚು – ಹೇಳ್ತ ಅರ್ತ ಇದ್ದಡ. ಜೀವನದ ಗಾಢಾಂಧಕಾರಂದ ಬೆಣಚ್ಚಿನ ಬೆಶ್ಚಂಗೆ ರಕ್ಷಣೆ ಕೊಡ್ತ ಕಾರ್ಯವನ್ನೇ ಮಾಡುದಲ್ಲದೋ – ಗುರುಗೊ, ಅವಕ್ಕೆ ಆ ಹೆಸರಡ.
~
ಆದಿಗುರು ವೇದವ್ಯಾಸರ ಜನನ ಆದ್ದದು ಆಷಾಡ ಮಾಸದ ಪೌರ್ಣಮಿಯ ದಿನಲ್ಲಿ ಅಡ.
ಆದಿಗುರುಗಳ ಜನ್ಮದಿನ ಪೌರ್ಣಮಿಯಂದು. ಆ ದಿನ ನಮ್ಮ ಎಲ್ಲಾ ಗುರುಗಳನ್ನೂ ನೆಂಪು ಮಾಡ್ಲೆ ಇಪ್ಪ ಸುದಿನ ಅಡ. ಅದಕ್ಕಾಗಿಯೇ ಆ ಆಷಾಡ ಪೂರ್ಣಿಮೆಯ ಗುರುಪೂರ್ಣಿಮೆ ಹೇಳಿಯೇ ಹೇಳುದಡ.
ಮೊದಲಿಂಗೆ ಆ ದಿನಂದ ಮತ್ತೆ ಅಂತರ್ಮುಖಿಯಾಗಿ, ಆತ್ಮೋದ್ಧಾರಕ್ಕಾಗಿ ಪ್ರತಿಯೊಬ್ಬನೂ ವ್ರತಲ್ಲಿ ಇದ್ದುಗೊಂಡು ಇತ್ತಿದ್ದನಡ.
ಚಂದ್ರ° ಮನೋಕಾರಕ ಅಡ, ಜೋಯಿಷಪ್ಪಚ್ಚಿ ಯೇವತ್ತೂ ಹೇಳುಗು. ಮನುಷ್ಯರ ಮನಸ್ಥಿತಿಯ ಮೇಗೆ ಚಂದ್ರನ ಸ್ಥಿತಿಯ ನೇರವಾಗಿ ಅವಲಂಬಿತವಾಗರ್ತಡ. ಹಾಂಗಾಗಿ ಚಂದ್ರ ಪೂರ್ಣವಾಗಿ ಹೊಳವ ದಿನ ಮನಸ್ಸೂ ಪೂರ್ಣವಾಗಿ ಹೊಳೆತ್ತು!!
ಆತ್ಮಚಿಂತನೆಗೆ ಆಷಾಡಪೂರ್ಣಿಮೆ ಸಕಾಲ ಅಡ – ಗುರುಪೀಠಲ್ಲಿಪ್ಪ ನಮ್ಮ ಗುರುಗಳೂ ಅದೇ ದಿನ ಆಂತರ್ಯಕ್ಕೆ ಹೋವುತ್ತವಿದಾ – ಹೇಳಿದ° ಎಡಪ್ಪಾಡಿಬಾವ°.
ಅಪ್ಪಡ, ಚಾತುರ್ಮಾಸ್ಯದ ವ್ರತದ ದಿನ, ವೇದವ್ಯಾಸನ ಮನಸಾ ಸ್ಮರಣೆಮಾಡಿಗೊಂಡು, ವ್ಯಾಸಪೂಜೆ ಮಾಡಿಕ್ಕಿ, ವ್ಯಾಸಮಂತ್ರಾಕ್ಷತೆಯ ಕೊಡುದಡ. ಅದಾದಮತ್ತೆ ಆಂತರ್ಯದ ಆತ್ಮಚಿಂತನೆಲಿ, ರಾಮಾಯಣದ ರಾಮಧ್ಯಾನಲ್ಲಿ ಚಾತುರ್ಮಾಸ್ಯಾಚರಣೆಯ ಮಾಡ್ತದಡ.
ಆದಿಗುರುಗಳ ಜನನದ ದಿನ ಪ್ರತಿಒರಿಶವೂ ಧರ್ಮಗುರುಗಳ ಚಾತುರ್ಮಾಸ್ಯ ಜನ್ಮತಳೆತ್ತಡ.
ಈ ಒರಿಶ ನಮ್ಮ ಧರ್ಮಗುರುಗಳ ಜನ್ಮದಿನವೂ ಅದೇ ದಿನ ಬತ್ತಡ – ಎಡಪ್ಪಾಡಿಬಾವ ಕೊಶೀಲಿ ಹೇಳಿದ.
ಚಾತುರ್ಮಾಸ್ಯ ನಾಳ್ತು ಗೋಕರ್ಣಲ್ಲಿ ಸುರು ಆವುತ್ತು ಹೇಳ್ತದು ಗೊಂತಿದ್ದು, ಅದಕ್ಕೆ ಬೈಲಿಂದ ಎಲ್ಲೊರುದೇ ಹೆರಡುದೂ ಗೊಂತಿದ್ದು.
ಆದರೆ ಅದರ ಹಿಂದೆ ಹೀಂಗೆಲ್ಲ ಇದ್ದು ಹೇಳ್ತದು ಒಪ್ಪಣ್ಣಂಗರಡಿಯ ಇದಾ..
~
ಇದೇ ಗುರುಪೂರ್ಣಿಮೆಯ ದಿನ ಸಂಘಲ್ಲಿಯೂ ಸುಮಾರು ಚಟುವಟಿಕೆಗೊ ಇದ್ದಡ.
ವಿಶೇಷವಾಗಿ ಗುರುಪೂಜಾ ಉತ್ಸವ ಹೇಳಿಯೂ ಮಾಡ್ತವಡ. ಗುರುರೂಪೀ ಭಗವಧ್ವಜಕ್ಕೆ ಪೂಜೆ ಮಾಡಿ, ಸಮಾಜಕ್ಕಾಗಿ ಸಮಾಜಂದ ತನು, ಮನ, ಧನವ ಅರ್ಪಿಸುವ ಸುಸಮಯಕ್ಕಾಗಿ ಆ ದಿನಕ್ಕೆ ಎಷ್ಟೋ ಸ್ವಯಂಸೇವಕರು ಕಾಯ್ತಾ ಇದ್ದವಡ – ಅಕ್ಷರದಣ್ಣ ಓ ಮೊನ್ನೆ ಕೊಡೆಯಾಲಲ್ಲಿ ಸಿಕ್ಕಿ ಹೇಳಿದವು. ವೆಗ್ತಿಪೂಜೆ ಇಲ್ಲದ್ದ ಸಂಘಲ್ಲಿ, ಸಾವಿರಗಟ್ಳೆ ಒರಿಶದ ನಮ್ಮ ಸಂಸ್ಕೃತಿಯ ಪ್ರತಿನಿಧಿ ಆದ ಕಾವಿವಸ್ತ್ರದ ಭಗವಧ್ವಜಕ್ಕೆ ಪೂಜೆ ಮಾಡುದಡ.
ಮಾಷ್ಟ್ರುಮಾವನ ಮಗಂಗೆ ಈ ಒರಿಷ ಗುರುಪೂಜೆಗೆ ಬಪ್ಪಲೆಡಿತ್ತಿಲ್ಲೆ ಹೇಳಿ ಭಾರೀ ಬೇಜಾರಡ, ಕೊಳಚ್ಚಿಪ್ಪುಭಾವ ಓ ಮೊನ್ನೆ ಹೇಳಿದ.
~
ನಮ್ಮ ಶ್ರೀಮಂತ ಧಾರ್ಮಿಕ ಪರಂಪರೆಲಿದೇ ಹಾಂಗೆಯೇ – ಪರಿಪೂರ್ಣತೆಯ ಸಂಕೇತ ಆದ ಕಾವಿವಸ್ತ್ರಕ್ಕೆ ಮಹತ್ವ.
ಒಂದೋ ಕಾವಿವಸ್ತ್ರವ, ಅಲ್ಲದ್ರೆ ಆ ಕಾವಿವಸ್ತ್ರವನ್ನೇ ಧರಿಸಿಗೊಂಡ ನಮ್ಮ ಗುರುಪರಂಪರೆಯ ಆ ದಿನ ನೆಂಪುಮಾಡ್ತ ವೈಶಿಷ್ಟ್ಯ ತಲೆಮಾರುಗಳಿಂದ ನೆಡಕ್ಕೊಂಡು ಬಯಿಂದು.
ಶಂಕರಾಚಾರ್ಯರ ಒಂದು ಪಟಮಡಗಿ, ಅದಕ್ಕೆ ಗುರುಪರಂಪರೆಯ ಹೆಸರುಗಳ ಹೇಳಿಗೊಂಡು ಒಂದೊಂದೇ ತೊಳಶಿ ಅರ್ಚನೆಮಾಡ್ತ ಕಾರ್ಯಕ್ರಮ ನಮ್ಮ ಪೋಳ್ಯಮಟಲ್ಲಿ ಇದ್ದಡ, ಶಂಕರಿಅತ್ತೆ ನಿನ್ನೆ ಕೆದಿಲಲ್ಲಿ ಸಿಕ್ಕಿಪ್ಪಗ ಹೇಳಿದವು.
ಅದೊಂದು ಗುರುಪೂಜೆಯ ಕ್ರಮ.
ಗುರುಗಳೇ ಚಾತುರ್ಮಾಸ್ಯ ವ್ರತ ಆರಂಭ ಮಾಡಿ ನೇರವಾಗಿ ವ್ಯಾಸಮಂತ್ರಾಕ್ಷತೆ ಕೊಡುದುದೇ ಅದೇ ಸುದಿನಲ್ಲಿ.
~
ಇಷ್ಟೆಲ್ಲಾ ಮಾಡಿರೂ ಅಕೇರಿಗೆ ನಮ್ಮ ದಾರಿ ಪೂರ್ಣತೆಯ ಹೊಡೇಂಗೆಯೇ, ಅಲ್ಲದೋ?
ಮೋಕ್ಷವೇ ಪೂರ್ಣತೆ.
ಪೂರ್ಣತೆಯೇ ನಮ್ಮ ಜೀವನದ ಕೊನೆಯ ಬಿಂದು.
ಪರಿಪೂರ್ಣ ವೆಗ್ತಿ ನಾವಾಯೆಕಾರೆ ಪೂರ್ಣಗುರುಗೊ ನವಗೆ ಸಿಕ್ಕೇಕು.
ಪೂರ್ಣಗುರುಗೊ ಸಿಕ್ಕಿರೆ ಸಾಕೋ? – ಅವರ ಪೂರ್ಣಾಶೀರ್ವಾದವೂ ಸಿಕ್ಕೇಕು!
ನಾಳ್ದು ಬಪ್ಪ ಗುರುಪೂರ್ಣಿಮೆಯ ದಿನ ನವಗೆಲ್ಲೊರಿಂಗೂ ನಮ್ಮ ಗುರುಗಳ ಪೂರ್ಣತೆಯ ಅನುಭವ ಆಗಲಿ.
ಅವರ ಪೂರ್ಣಾಶೀರ್ವಾದ ಸಿಕ್ಕಲಿ..
ತನ್ಮೂಲಕವಾಗಿ ನಾವು ಪರಿಪೂರ್ಣರಾಗಿ ಬೆಳವಲೆ ಸಾಧ್ಯ ಆಗಲಿ..
… ಹೇಳುದೇ ಬೈಲಿನವರ ಆಶಯ..
ಒಂದೊಪ್ಪ: ನಮ್ಮನಮ್ಮ ಗುರಗಳ ಪೂರ್ಣಾನುಗ್ರಹ ಸಿಕ್ಕಿದವಂಗೆ ನಿತ್ಯವೂ ಪೂರ್ಣಮೆಯೇ, ಅಲ್ಲದೋ?
ಸೂ:
- ನಮ್ಮ ಗುರು ಪರಂಪರೆಯ ಮೂವತ್ತಾರು ಗುರುಗಳ ಹೆಸರುಗೊ ಈ ಪುಟಲ್ಲಿದ್ದು. – ನೋಡಿಕ್ಕಿ.
- ಗುರುಗಳ ಕುರಿತಾದ ಕೆಲವು ಶ್ಳೋಕಂಗಳ ಸಂಗ್ರಹ ಇಲ್ಲಿದ್ದು
- ಇಹಯಾತ್ರೆ ಮುಗಿಸಿದ ಬಲಿಪಜ್ಜ° - February 17, 2023
- ಯಕ್ಷಗಾನ ಪದಂಗೊ – ಉಂಡೆಮನೆ ಶ್ರೀಕೃಷ್ಣ ಭಟ್ - November 25, 2022
- ಒಪ್ಪಣ್ಣನ ಬೈಲಿಂಗೆ ಹನ್ನೆರಡು ಒರಿಶ - December 31, 2021
ತುಂಬಾ ಲಾಯ್ಕಿತ್ತು. ನೀನು ತುಂಬಾ ಅದೃಷ್ಟ ಮಾಡಿದ್ದೆ ಗುರುಗಳತ್ತರೆ ಇಂಥಾ ಆಶೀರ್ವಾದ ತೆಕ್ಕೊಂಬೊಲೆ.
ಒಳ್ಳೆ ವಿಚಾರಂಗಳ ತಿಳಿಸಿ ಕೊಟ್ಟಿದ ಒಪ್ಪಣ್ಣ. ಧನ್ಯವಾದಂಗೊ. ಗುರುಗಳ ಕೃಪೆ ನಮ್ಮೆಲ್ಲರ ಮೇಲಿರಲಿ.
ಸಕಾಲಿಕ; ಸಮರ್ಪಕ.
ಹರೇರಾಮ ಜಗದೀಶಣ್ಣಾ…
ಬೈಲಿಂಗೆ ಬಂದು ಶುದ್ದಿಗೆ ಒಪ್ಪ ಕೊಟ್ಟದು ಕೊಶೀ ಆತು.
ಬಂದೋಂಡಿರಿ, ಬಂದು ಬೈಲಿನ ಮಕ್ಕಳ ಶುದ್ದಿಗಳ ಓದಿಗೊಂಡಿರಿ, ಅವಕಾಶ ಅಪ್ಪಗ ಒಪ್ಪಕೊಟ್ಟೋಂಡಿರಿ..
ಕಾದೊಂಡಿರ್ತೆಯೊ°…
ನಮಸ್ತೇ..
Shri Gurubhyo Namha
Sakalika Lekhana . Navu Gurugala Maargadarshanalli. avara iccheyante munnadedare , aduve gurgokke naavu maaduva Guruvandane…………..
ಲೇಖನವನ್ನು ಎಳೆ-ಎಳೆಯಾಗಿ ಮನಮುಟ್ಟುವಂತೆ ವಿವರಿಸಿದ್ದೇರಿ. ಒಳ್ಳೆಯ ಲೇಖನ.
ನಮ್ಮ ಸಂಸ್ಕೃತಿಯಲ್ಲಿ ಮಾತ್ರವೇ ಈ ರೀತಿಯ ಆಚರಣೆಗಳು, ಮೌಲ್ಯಗಳು ಕಾಣಲು ಸಾಧ್ಯ. ಆ ಕಾರಣದಿಂದಲೇ ಗುರುಪರಂಪರೆ ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಯುತ್ತಿರುವುದು.
ಸಂಘದಲ್ಲೂ ಈ ದಿನದಂದು ಅತ್ಯಂತ ಧನ್ಯತೆಯಿಂದ ಪ್ರತಿಯೊಬ್ಬ ಸ್ವಯಂಸೇವಕನೂ ತನ್ನ ಕರ್ತವ್ಯವನ್ನು ನಿಭಾಯಿಸುತ್ತಾನೆ.
ಭಗವೆ (ಭಗವಾಧ್ವಜ) ತು೦ಬಾ ಪ್ರಾಚೀನವಾದುದು. ವೇದಗಳಲ್ಲಿ ಅರುಣಕೇತು ಎ೦ಬ ಗುಣಗಾನವಿದೆ. ಅರುಣವರ್ಣವು ಸೂರ್ಯೋದಯದ, ಜ್ನಾನದ ಸ೦ಕೇತ. ನಮ್ಮ ಪೂರ್ವಜರು ತಮಸೋಮಾ ಜ್ಯೋತಿರ್ಗಮಯ ಎ೦ದು ಸ೦ಕಲ್ಪಿಸಿರುವರು. ಆ ಭಗವೆಯಲ್ಲಿ ಜ್ನಾನದ ಆರಾಧನೆಯನ್ನು ಭಗವೆ ಕಲಿಸಿಕೊಡುತ್ತದೆ. ಭಗವೆಯ ಕೇಸರಿ ಬಣ್ಣವು ನಮಗೆ ತ್ಯಾಗ ಮತ್ತು ಸಮರ್ಪಣೆಯ ಪ್ರೇರಣೆ ನೀಡುತ್ತದೆ.
ಇತಿಹಾಸ ಕಾಲದಲ್ಲಿ ಶಿವಾಜಿ ಹಿ೦ದವೀ ರಾಜ್ಯ ಕಟ್ಟಿದಾಗಲೂ, ರಾಣಾ ಸೋತು ಅಲೆದಾಡುತ್ತಿದ್ದಾಗಲೂ ಸಮಾನ ಪ್ರೇರಣೆಯಿತ್ತದ್ದು ಬಗವೆಯೇ. ಈ ಎಲ್ಲ ಉದ್ದೇಶದಿಂದಲೇ ಸಂಘದ ಗುರು ಭಗವಾಧ್ವಜ.
ಇಂದು ಸಮಾಜಕ್ಕೆ ಗುರು ಅತ್ಯಂತ ಆವಶ್ಯಕವಾಗಿ ಬೇಕೇ ಬೇಕು. ಗುರುವಿನ ಮಾರ್ಗದರ್ಶನ ಇಂದಿನ ಪೀಳಿಗೆಗೆ ಆವಶ್ಯಕವಾಗಿದೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ… ಈ ಸಾಲಲ್ಲಿ ಗುಲಾಮ ಅನ್ನುವ ಪದದ ಹಿಂದಿನ ಅರ್ಥ ಧರ್ಮಗುರುಗಳು ತೋರಿಸುತ್ತಿರುವ ಮಾರ್ಗದಲ್ಲಿ ನಡಿಯುವಂತಹ ಗುಲಾಮ ನಾವಾಗಬೇಕು. ಸಮಾಜದ ಬಗೆಗೆ ಗುರುಗಳಿಗೆ ಇರುವ ಕಾಳಜಿಯನ್ನು ಅರ್ಥ ಮಾಡಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಮೌಲ್ಯಗಳಿಗೊಂದು ಅರ್ಥ ಸಿಗುತ್ತದೆ.
ಧನ್ಯವಾದಂಗೊ.
ಗುರುರಕ್ಷೆ ನವಗೆಲ್ಲೊರಿಂಗೂ ಇರಲಿ..
ಒಪ್ಪಣ್ಣ, ಗುರು ಪೂರ್ಣಿಮೆಯ ಒಳ್ಳೆಯ ದಿನ ಎಲ್ಲೋರಿಂಗೂ ಒಳ್ಳೆದಾಗಲಿ ಹೇಳಿ ಒಳ್ಳೆಯ ಸಮಯಲ್ಲೇ ಶುದ್ದಿ ಬರದು ಎಲ್ಲೋರೂ ಧನ್ಯರಪ್ಪ ಹಾಂಗೆ ಮಾಡಿದ್ದೆ… ನಿನಗೆ ಧನ್ಯವಾದಂಗ… ವ್ಯಾಸ ಮಹರ್ಷಿಗ,ದೇವಲೋಕಂದ ಆಕಾಶವಾಣಿಲಿ ಕೇಳಿದ ಋಕ್ಕ್ ಗಳ ಚೆಂದಲ್ಲಿ ಮನನ ಮಾಡಿ ಅದರ ಭಾವಕ್ಕೆ ತಕ್ಕ ಹಾಂಗೆ ಬಿಡಿಸಿ ನಾಲ್ಕು ತುಂಡು ಮಾಡಿ ವೇದವ್ಯಾಸ ಆದ ಕತೆ ಲಾಯ್ಕಲ್ಲಿ ಹೇಳಿದ್ದೆ… ಅಪ್ಪು ಅದು ಹಾಂಗಿಪ್ಪ ದೇವತಾಸ್ವಾರೂಪಿಗಳಿಂದ ಮಾತ್ರವೇ ಕಠಿಣದ್ದದರ ಸುಲಾಬ ಮಾಡಲೇ ಎಡಿವದು… ಅವು ನಿಸ್ವಾರ್ಥಿಗ ಆಗಿ ಲೋಕಕ್ಕೆ ಒಳ್ಳೆದಾಗಲಿ ಹೇಳಿ ಮಾಡುದು.. ನೀನು ಹೇಳಿದ ಹಾಂಗೆ ಈಗ ನಮ್ಮ ಸಂಸ್ಥಾನ, ಸಂಸ್ಕೃತಲ್ಲಿಪ್ಪದರ ನಮ್ಮ ಆಡು ಮಾತಿಂಗೆ ತಂದು ನಾವುದೇ ಅದರ ಅರುತುಗೊಂಬ ಹಾಂಗೆ ಮಾಡಿದ್ದವು.. ಈ ಸರ್ತಿಗುರುಪೂರ್ಣಿಮೆ ಅರ್ಥವತ್ತಾಗಿ ಅತೋ ಹೇಳಿ ಅನಿಸಿತ್ತು…
ಒಪ್ಪಣ್ಣ, ವ್ಯಾಸ ಮಹರ್ಷಿ ವೇದ ಸಾರ ಜನಂಗೊಕ್ಕೆ ಸಿಕ್ಕಲಿ ಹೇಳಿ ತುಂಡು ಮಾಡಿದ್ದು ಋಕ್ಕ್ ಗಳ… ನಾವೆಲ್ಲ ಜಾಗೆಯ ತುಂಡು ಮಾಡುದು ಹೇಂಗೆ ಹೇಳಿ ನಮ್ಮ ಸುತ್ತಲೇ ಒಂದರಿ ನೋಡಿರೆ ಸಾಕು… ನಾವೆಲ್ಲ ನವಗೊಸ್ಕರ ಸ್ವಾರ್ಥಿಗಳಾಗಿ, ಅಣ್ಣ ತಮ್ಮಂದ್ರಲ್ಲೇ ಜಾಗೆ, ಪೈಸೆ ಹೇಳಿ ಹರ್ಕೊಮ್ಬದು… ಇನ್ನಾದರೂ ಎಲ್ಲೋರೂ ಒಗ್ಗಟ್ಟಿಲಿ ಬದುಕ್ಕುಲೆ ಎಲ್ಲಾ ಗುರುಗೋ ಅನುಗ್ರಹಿಸಿದರೆ ನಮ್ಮ ಸಮಾಜ ಒಳ್ಳೆದಕ್ಕು…
ಲಾಯಕ ಆಯಿದು ಒಪ್ಪಣ್ಣಾ…!! ಧನ್ಯವಾದಂಗೊ
Iಶ್ರೀ ಗುರುಭ್ಯೋ ನಮಃI
ಶ್ರೀ ಗುರುಗೊ ಒಪ್ಪಣ್ಣನ ಬೈಲಿಂಗೆ ಬಂದು ಆಶೀರ್ವಾದ ಮಾಡುವ ಮೂಲಕ, ಒಪ್ಪಣ್ಣ ಹಾಗೂ ನಮ್ಮೆಲ್ಲರ ಆಶಯದಂತೆ ಪೂರ್ಣಿಮೆಯ ದಿನಲ್ಲಿ ಗುರುಗಳ ಪೂರ್ಣಾನುಗ್ರಹ ನವಗಾತು…
ಧನ್ಯೋಸ್ಮಿ …
IIಹರೇ ರಾಮII
Hara Rama,
Indrana Punya Parvada dina Gurugala Anugraha nammella shishyara mele sadaa irali heli bediypmbadu mattu awaru haki konda prati karyakramalli sakriyavagi bhagawahisuva shakthi anugrahisali heli kelike, aste.
Kuloor Subbanna, Mumbai
ಇಂದು ಗುರುಪೂರ್ಣಿಮೆ…
ವ್ಯಾಸಪೂಜೆ ಮಾಡಿ, ಎಲ್ಲಾ ಎಲ್ಲಾ ಶಿಷ್ಯರ ಹರಸಿ ಆಶೀರ್ವಚನ ಮಾಡಿ, ವ್ಯಾಸಮಂತ್ರಾಕ್ಷತೆ ಕೊಟ್ಟಿಕ್ಕಿ ಈಗ.. ಒಪ್ಪಣ್ಣನ ಗುರುಪೂರ್ಣಿಮೆಯ ಒಪ್ಪಕ್ಕೆ ಪ್ರತಿಕ್ರಿಯೆ ಬರವಲೆ ಕೂದ್ದದು…
ಮೊದಲೇ ಬರೆಯೆಕ್ಕು ಹೇಳಿ ಇತ್ತಿದೆಯೊ…ಸಾಧ್ಯ ಆತಿಲ್ಲೆ…
ಆದರೆ ಅಪ್ಪದೆಲ್ಲಾ ಒಳ್ಳೆದಕ್ಕೇ..! ಗುರುಪೂರ್ಣಿಮೆಯ ಒಪ್ಪಕ್ಕೆ ಪ್ರತಿಕ್ರಿಯೆ ಬರವಲೆ ಇಂದಂದ…ಈಗಂದ.. ಒಳ್ಳೆ ಸಮಯ ಬೇರೆ ಇಪ್ಪಲೆ ಸಾಧ್ಯ ಇದ್ದಾ..?
ಒಪ್ಪಣ್ಣನ ಒಪ್ಪಂಗಳ ನೋಡುವಾಗ ಅವನೊಳ ಯಾವುದೋ ಗುರುವೇ ಪ್ರವೇಶ ಮಾಡಿ ಹೀಂಗೆಲ್ಲಾ ಬರೆಶುದಾ ಹೇಳುವ ಭಾವ ಬತ್ತು ಮನಸ್ಸಿನ ಒಳಂದ….
ಒಂದೇ ಮಾತಿಲಿ ಹೇಳೆಕ್ಕು ಹೇಳಿಯಾರೆ.. ನಮ್ಮ ಮಠದ, ಸಮಾಜದ ಆಸ್ತಿ ನೀನು ಒಪ್ಪಣ್ಣ…
ಸಮಾಜ-ಸಂಸ್ಕೃತಿ ಒಳಿಶುವ ಕೆಲಸ ನೀ ಮಾಡ್ತಾ ಇಪ್ಪದು..
ಚಿರಕಾಲ ನಿನ್ನ ನೆಂಪುಳಿಗು ಸಮಾಜಕ್ಕೆ…ಗುರುಪೀಠಕ್ಕೆ…
ನಿನಗೆಷ್ಟು ಆಶೀರ್ವಾದ ಮಾಡಿರೂ ಅದು ಕಡಮ್ಮೆಯೇ……..!
ಗುರುಗಳೇ,ಗುರು ಪೂರ್ಣಿಮೆಯ ಆಶೀರ್ವಾದ ಒಪ್ಪಣ್ಣ ನ ಬೈಲಿನ ಮೂಲಕ ಎಲ್ಲೋರಿಂಗೂ ಅನುಗ್ರಹಿಸಿ ಹೇಳಿ ಬೇಡ್ತಾ ಇದ್ದೆಯ.. ಹರೇ ರಾಮ…
ಹರೇರಾಮ ಗುರುಗಳೇ, ಹೊಡಾಡ್ತೆಯೊ°…
ಗುರುಪೂರ್ಣಿಮೆಯ ಗುರುಗಳ ಬಗೆಗಿನ ಶುದ್ದಿಯ ಓದಿ, ಗುರುತ್ವ ಶೆಗ್ತಿ ಇಪ್ಪ ಒಪ್ಪ ಆಶೀರ್ವಾದ ಕೊಟ್ಟಿ..
ತುಂಬಾ ತುಂಬಾ ಕೊಶಿ ಆತು ಗುರುಗಳೇ..
ಚಾತುರ್ಮಾಸ್ಯದ ಅನುಷ್ಟಾನದ ಅಂಬೆರ್ಪಿನ ಎಡೆಲಿಯುದೇ ಬೈಲಿಂಗೆ ಆಶೀರ್ವಾದ ಮಾಡಿದ್ದು ಕೊಶಿಯೇ ಕೊಶಿ!!
ನಿಂಗೊ ಎಷ್ಟು ಆಶೀರ್ವಾದ ಮಾಡಿರೂ ಇನ್ನೂ ಬೇಕು ಹೇಳಿಯೇ ಅನುಸುತ್ತು ಎಂಗೊಗೆ..
ಬತ್ತಾ ಇರಿ, ಎಂಗೊಗೆ ಗುರುಮಾರ್ಗದರ್ಶನ ಕೊಟ್ಟೋಂಡಿರಿ…
ಹರೇರಾಮ, ಹರೇರಾಮ, ಹರೇರಾಮ.. ||
ಮನಮೋಹಕ! ಗುರುಗಳ ಅನುಗ್ರಹ ಈ ದಿನ ಸಿಕ್ಕುದು ನಿಜವಾಗಲೂ ಅತ್ಯಂತ ಶ್ರೇಷ್ಟ. ನಾವು ಇಂದು ಹೀಂಗೆ ಈ ಸಮಾಜದಲ್ಲಿ ಇಪ್ಪದಕ್ಕೆ ಗುರುಗಳೇ ಕಾರಣ. ಗುರು ಪೂರ್ಣಿಮೆಯಂದು ಗುರುಗಳ ಅನುಗ್ರಹ ಸಮಾಜಕ್ಕೆ ಪೂರ್ಣಿಮೆ ಚಂದ್ರನ ಹಾಂಗೆ ಸಿಕ್ಕಲಿ ಅಲ್ದಾ ಒಪ್ಪಣ್ಣ? ಇಂತಹ ಸುಂದರ ಲೇಖನಕ್ಕೆ ತುಂಬಾ ಧನ್ಯವಾದ.!!! ಹರೇ ರಾಮ
[ಈಗಾಣ ಪಾವೆಲಿಲಿ ಪುರ್ಬುಗಳ ಕ್ರೂಜು ಇದ್ದಡ ಅಪ್ಪೋ ಭಾವ? ]
ಹೊಸ ಸುದ್ದಿ: ಚಿನ್ನದ ಬಣ್ಣದ 5 ರೂಪಾಯಿ ಪಾವಲಿಲಿ ಸಂತ ಆಲ್ಫೋನ್ಸ್ ನ ಚಿತ್ರ !!!
ಭರತ ಖಂಡದ ದಾರ್ಶನಿಕರು ಆರೂ ಸಿಕ್ಕಿದ್ದವಿಲ್ಲೆ ???
’ಭರತ’ಖಂಡದ ಶಿಷ್ಯರಿಂಗೆ ’ಇಳಿತ’ಖಂಡದ ಗುರುಗಳೋ?
ಚೆ ಚೆ!!
ನವಗೆ ನಮ್ಮವೇ ಆಯೇಕು!
oppanno olle lekhana…… Guruvina gulamanaguvatanaka doreyadanna mukuthi……. Idu aa kalada mathu……Andrana arthalli idu sari matte gouravisekada matheee ……..Aadre indingu adu satyaveee……..adara arthalli rajaa vyatyasa iddu…. aa kalada shala paddhtiye ondu reeti….indee bere……..haangagi aa badalavaneya ottingee guru helva shabdavude berebere artha padakkondidu helvadu viparyasa……Play school ninda hidudu universityvaregina gurugala holisi nodire GURU padada Artha Bheekara matte bhayanaka heli ansiddilyo………. ansadooo… Enta helthi????????
ನಿಜವಾಗಿಯೂ ತುಂಬಾ ಒಳ್ಳೆ ಲೇಖನ… ಮಾಹಿತಿಯುಕ್ತವಾದ್ದು…
ಹ್ಮ್.. ಈ ಗುರುಪೂರ್ಣಮೆಗಂತೂ ಒಪ್ಪಣ್ಣನ ಬೈಲಿಲಿ ಗೌಜಿಯೋ ಗೌಜಿ….
ಗುರುಗಳ ಆಶೀರ್ವಾದ ನಮ್ಮೆಲ್ಲೋರಾ ಮೇಲಿರಳಿ….
“ನಮ್ಮನಮ್ಮ ಗುರಗಳ ಪೂರ್ಣಾನುಗ್ರಹ ಸಿಕ್ಕಿದವಂಗೆ ನಿತ್ಯವೂ ಪೂರ್ಣಮೆಯೇ”, ಅಲ್ಲದೋ?ನಿತ್ಯ ಸತ್ಯ ಮಾತು ಒಪ್ಪಣ್ಣ. ಗುರುಪೂರ್ಣಿಮೆ ಬಗ್ಗೆ ಇಷ್ಟೊಂದು ವಿವರ ಕೊಟ್ಟದಕ್ಕೆ ತುಂಬು ಹೃದಯಂದ ಧನ್ಯವಾದಂಗೊ.
ಮದಾಲು ಋಕ್ಕ್ ಗೊ, ನಂತರ ವೇದಂಗೊ, ಅದರಲ್ಲಿ 4 ವಿಭಾಗಂಗೊ, ಶಂಕರಾಚಾರ್ಯರ ಆಗಮನ, ಧರ್ಮ ಪೀಠ ಸಂಸ್ಥಾಪನೆ, ಕುಲ ಗುರುಗಳಾಗಿ ವೈದಿಕರ ನೇಮಕ, ಆದಿಗುರು ವೇದವ್ಯಾಸರ ಜನ್ಮ, ಆ ದಿನವ ಗುರು ಪೂರ್ಣಿಮೆಯಾಗಿ ಆಚರಣೆ, ಸಂಘ ಶಾಖೆಗಳಲ್ಲಿ ಗುರುರೂಪೀ ಕೇಸರಿ ಭಗವಧ್ವಜಕ್ಕೆ ಪೂಜೆ. ಎಷ್ಟೊಂದು ವಿಶಯಂಗೊ !!!. ಓದಿಸಿಗೊಂಡು ಹೋತು, ಮನನ ಮಾಡ್ಸಿತ್ತು, ವಿಚಾರ ಮಾಡ್ಸಿತ್ತು.
“ಚಂದ್ರ ಪೂರ್ಣವಾಗಿ ಇಪ್ಪಗ ಮನಸ್ಸು ಪೂರ್ಣವಾಗಿ ಹೊಳೆತ್ತು.” ಖಂಡಿತಾ. ಶ್ರೀ ಗುರುಗಳ ಆಶೀರ್ವಾದ ಇಪ್ಪಗ ಮನಸ್ಸು ಯವಾಗಲೂ ಪರಿಪೂರ್ಣ ಹೊಳೆತ್ತು ಮತ್ತೆ ಯವಾಗಲೂ ಪೌರ್ಣಮಿಯೇ.
ಆದಿವ್ಯಾಸರ ಜನ್ಮ ದಿನವ ಗುರು ಪೂರ್ಣಿಮೆಯಾಗಿ ಆಚರಿಸುವ ಮತ್ವದ ಬಗ್ಗೆ ಒಪ್ಪಣ್ಣ ಬರದ್ದು ತುಂಬಾ ಮಾಹಿತಿಯುಕ್ತವಾಗಿ ಲಾಯಿಕ ಆಯಿದು. ಇದಕ್ಕೆ ಪೂರಕವಾಗಿ ಈ ವಾರ ಶ್ರೀ ದೇವಿ ಅಕ್ಕ ಕಳುಸಿದ ಗುರು ಪರಂಪರಾ ವಂದನೆ. ಒಟ್ಟಾರೆ ಗುರುಗಳ ಬಗ್ಗೆ ಲೇಖನ. ಎಷ್ಟು ಓದಿದರೂ ಮತ್ತೆ ಮತ್ತೆ ಓದೆಕ್ಕು, ಇನ್ನೂ ತಿಳಿಯೆಕ್ಕು ಹೇಳ್ತ ಹಾಂಗೆ ಮಾಡಿದ್ದು.
ಶ್ರೀ ಗುರುಗಳ ಆಶೀರ್ವಾದ ಸದಾ ನವಗೆ ಇದ್ದು ಹೇಳುವದರ ಸ್ಮರಿಸಿಗೊಂಡು ಒಳ್ಳೆ ರೀತಿಲಿ ಕಾರ್ಯ ಪ್ರವೃತ್ತರಪ್ಪೊ.ನಮ್ಮ ಪ್ರಯತ್ನಂಗೊಕ್ಕೆ ಶುಭ ಪಲಂಗಳೇ ಸಿಕ್ಕುಗು.
tumba kushi aatu oppanno neenu idara baraddu odi.
ondoppa antu soooper aidu.sanghadavude guru poornimeyandu full bcyada.
oppannana anna heludara kelidde.namma gurugala poornanugraha navage
avu kodtavu naavu padeyekku.
elldakku yoga bekallada oppanno…
gurugala poornaasheervada sikki naavu paripoornaragi baali namma desha bharatha bhoomi belagali.
ರಕ್ಸೆ ತಿಕ್ಕುಂಡತ್ತ.. ಅವು ಏಪೊ? ಗುರುಪೂಜೆಗ್ ಯಾನ್ ಪೋಪುಜ್ಜಿ
ಅಲ್ಲದಾ?
ಅವು ಬರ್ಪಿ ಸಿಂಗೊಳು ಬಟ್ಯಾ…..
ಈವೊಡು ಸೋಣ ಎಣ್ಮೆಗ್-ಪುಣ್ಣಮೆತಾನಿ ….
ಬಟ್ಯನ ಮೋಣೆ ಸರಿ ತೋಜುಜ್ಜಿ ಈ ಫೋಟೋಟ್… ಬೇತೆ ಫೋಟೋ ನಾಡೊಡು…
ಎನ್ನ ಮೋಣೆ ದಾಯೆ ಅಕ್ಕೆ?… ಅವು ಎಂಕ್ ಎಡ್ಡೆ ಆಪುಜ್ಜಿ.
ಗುರುಕುಲೆನ ಮೋಣೆ ಆಂಡ ಮಾಂತೆರೆಗುಲಾ ತೂವೋಡು
ಜನ್ಮನಾ ಜಾಯತೇ ಶೂದ್ರ: -ಹೇಳ್ತ ವಾಕ್ಯ ಆಮೇಲೆ “ಜನ್ಮನಾ ಜಾಯತೇ ಜಂತುಃ” ಹೇಳಿ ಆದ್ದಡ .ಸೇಡಿಯಾಪು ಕೃಷ್ಣಜ್ಜ ಅವರ “ತಥ್ಯ ದರ್ಶನ ” ಪುಸ್ತಕಲ್ಲಿ ಹೇಳಿದ್ದವು. ಗುರು ಪೂರ್ಣಿಮೆಯ ಬಗ್ಗೆ ಒಂದು ಒಳ್ಳೆ ಲೇಖನ.
ಗುರುವಿಂದ ಬಂಧುಗಳು| ಗುರುವಿಂದ ದೈವಗಳು| ಗುರುವಿಂದಲಿಹುದು ಪುಣ್ಯವದು ಜಗಕೆಲ್ಲ|ಗುರುವಿಂದ ಮುಕ್ತಿ ಸರ್ವಜ್ಞ ||
ಗುರುವಿನ ಬಗ್ಗೆ ಪೂರ್ಣ ವಿವರ ಕೊಡುವ ಲೇಖನ ಇದು.
ಗುರುವಿಲ್ಲದೆ ಬಂಧುಗ ಇಲ್ಲೆ. ಗುರುವಿಂದಲೇ ಈ ಜಗತ್ತಿಗೆ ಪುಣ್ಯ, ಗುರುವಿಂದಲೇ ಮುಕ್ತಿ ಹೇಳಿ ಸರ್ವಜ್ಞ ಹೇಳಿದ ಮಾತು ಎಷ್ಟು ಸತ್ಯ ಅಲ್ಲದೋ..
ಅವಿಚ್ಛಿನ್ನ ಪರಂಪರೆಯ ನಮ್ಮ ಧರ್ಮಗುರುಗಳ ಪೂರ್ಣಾನುಗ್ರಹ ನವಗೆ ಸದಾ ಇರಲಿ.
|| ತಸ್ಮೈ ಶ್ರೀ ಗುರವೇ ನಮ: ||
ಗುರುಪೂರ್ಣಿಮೆಯ ಪೂರ್ಣಾಶೀರ್ವಾದಂಗೊ ನಮ್ಮ ಒಪ್ಪಣ್ಣನ ಬೈಲಿನ ಎಲ್ಲೋರಿಂಗೂ……
ಗುರುಚರಣಲ್ಲಿ ಪ್ರಣಾಮಂಗೊ. ಧನ್ಯೋಸ್ಮಿ..
ಹರೇರಾಮ |
ಹರೇರಾಮ |
ಹರೇ ರಾಮ.. ||