- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಹವ್ಯಕ ಭಾಷಾ ಸಾಹಿತ್ಯದ ಬೆಳವಣಿಗೆಗಾಗಿ ನಡೆಶಿದ “ವಿಷು ವಿಶೇಷ ಸ್ಪರ್ಧೆ 2013″ ಯಶಸ್ವಿಯಾಗಿ ಮೊನ್ನೆ ಕಳುದತ್ತು. ಸ್ಪರ್ಧಾ ವಿಜೇತರೆಲ್ಲರಿಂಗೂ, ಭಾಗವಹಿಸಿದ ಎಲ್ಲ ನೆರೆಕರೆಯ ಬಂಧುಗೊಕ್ಕೂ ಹಾರ್ದಿಕ ಅಭಿನಂದನೆಗೊ. ಸಾಹಿತ್ಯ ಸೇವೆ ಹೀಂಗೇ ಮುಂದುವರಿಯಲಿ. ಬರವಣಿಗೆ ನಿರಂತರವಾಗಿರಲಿ – ಹೇಳಿ ನಮ್ಮ ಆಶಯ.
ಸ್ಪರ್ಧೆಗೆ ಬಂದ ಸೊತ್ತುಗಳ ಬೈಲಿಲಿ ಪ್ರಕಟ ಮಾಡಿರೆ ಎಲ್ಲರಿಂಗೂ ಅದರ ಸವಿ ಸಿಕ್ಕುತ್ತು. ಹಾಂಗಾಗಿ, ಪ್ರತಿ ಐದು ವಿಭಾಗದ ಆಯ್ದ ಬರಹಂಗಳ ಇಲ್ಲಿ ಪ್ರಕಟ ಮಾಡ್ಳೆ ಆರಂಭ ಮಾಡಿದ್ದು. ಎಲ್ಲರುದೇ ಪ್ರೋತ್ಸಾಹಿಸೇಕಾಗಿ ವಿನಂತಿ.
ವಿಷು ವಿಶೇಷ ಸ್ಪರ್ಧೆ- 2013 ರ ಕವನ ಸ್ಪರ್ಧೆಲಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ ಬರಹ.
ಲೇಖಕಿ ಶ್ರೀಮತಿ ಶೈಲಜಾ ಕೇಕಣಾಜೆ,ಕೊ೦ಚಾಡಿ,ಮ೦ಗಳೂರು ಇವಕ್ಕೆ ಪ್ರತಿಷ್ಠಾನದ ಪರವಾಗಿ ಮನತು೦ಬಿದ ಅಭಿನ೦ದನೆಗೊ
ಮೇಲೆ ಸೂರ್ಯನ ಬೆಶಿಲ ಬೇಗೆಲಿ
ಜಾಲ ನೀರದು ಸೇರಿ ದಟ್ಟಕೆ
ನೀಲ ಬಾನಿಲಿ ಮೋಡವಪ್ಪದು ಸೃಷ್ಠಿ ನಂಬುವೆಯಾ |
ಮೂಲೆ ಮಾಡಿಂದುದುರುವ ಸಲಿಲ
ಮಾಲೆ ಮುತ್ತಿನ ಸುರುದು ಮಡಗಿದ
ಲೀಲೆ ದೇವನ ಕಾಲ ನೇಮದ ಕೋಲ ಕೇಳುವೆಯಾ ||
ತೋಡು ಕಣಿ ಕಸವೆಲ್ಲ ಬಳುಗುವ
ಬಾಡಿ ಬಚ್ಚಿದ ಸೆಸಿಯ ಚಿಗುಳುವ
ಮಾಡುದಾಟಿಲಿ ಬಪ್ಪ ಮುಂಗಾರಮಳೆಧಾರೆಯದೂ |
ಕಾಡು ಬೆಳಗಿಡಿ ಸೋಣೆ ತಿಂಗಳು
ಬೇಡಿ ತಿಂಗದ ಚಳಿಗೆ ಕೂಸದು
ಜಾಡಿ ತುಂಬಿದ ಹಪ್ಪಳ ಮಾಂಬ್ಳ ಹೊರುದ ಕಟುಕುಟುಗೊ ||
ಗಟ್ಟಿ ಸಂಕದಿ ಹೆಡಗೆ ಹಾಮಸು
ಮೆಟ್ಟೆ ತೋಡಿಲಿ ಜಾರೆ ಜಾಗ್ರತೆ
ಪುಟ್ಟ ಮಾಣಿಯ ಜುಟ್ಟು ಹಿಡಿವೊದು ತಪ್ಪುಲೆಡಿಯನ್ನೆ |
ಲೊಟ್ಟೆ ಪಟ್ಟಾಂಗವದು ಸೊಕ್ಕುಗು
ಕಟ್ಟೆ ಬೈಲಿನ ಜಟ್ಟಿ ಮಕ್ಕೊಗೆ
ತಟ್ಟೆ ತು೦ಬಿದ ಹೊರುದ ಸೊಳೆ ಹೊಟ್ಟೆಯನೆ ಕೆಡುಸನ್ನೆ ||
ಗುಡುಗ ಸಿಡಿಸಿಡಿ ಮೋರೆ ನೋಡಿದ
ನಡುಗಿ ಗಡಗಡ ಮೋಡ ಕೂಗಿದ
ರೊಡಲ ಬೆರಗಿನ ಕಣ್ಣ ಕಂಬನಿ ಬಾಳ ಜೀವಜಲ |
ಕಡಲ ಸೇರುಲೆ ಕೂಡಿ ಹನಿಹನಿ
ಬಿಡದೆ ಕೊಳೆ ಕಸ ಸಾರಿ ಹೇಳ್ತವು
ಜಡತೆ ಬಿಡುಬಿಡು ಸೇರಿ ದುಡಿದುಡಿ ಹೇಳ್ವ ಗುರು ಮಂತ್ರ ||
ಕವನ ಲಾಯ್ಕ ಆಯಿದು .ವಾಸ್ತವ , ಕಲ್ಪನೆ,ಸ೦ದೇಶ೦ಗಳ ಚೆ೦ದಕೆ ನೇಯ್ದ ರಚನೆ.
ಛೆ..ಇಷ್ಟು ಬೇಗ ಮುಗುದತ್ತನ್ನೆ,ರಜಾ ಸಣ್ಣ ಆಗಿ ಹೋತೋ ಹೇಳಿ ಅನುಸಿತ್ತು.
ಅಭಿನ೦ದನೆಗೊ ಶೈಲಜಕ್ಕ.
ತಿದ್ದಿ, ಬೆನ್ನು ತಟ್ಟುವವಿಪ್ಪಗ ಬರವೋರ ಜಡ ಗುಡ್ಡೆ ಹತ್ತುಗು… ಧನ್ಯವಾದಂಗ ಅಣ್ಣಾ….
ಆಸ್ವಾದಿಸಿ ಪ್ರೋತ್ಸಾಹಿಸಿದ ಎಲ್ಲರಿಂಗೂ ಧನ್ಯವಾದಂಗೋ…..
ಕವನ ಲಾಯ್ಕ ಅಪ್ಪಲೆ ಒಂದು ಕಾರಣ ಕೊನೆ ದಿನಾಂಕದ ಹಿಂದಾಣ ಇರುಳು ಕೂದು ಬರದ್ದು.. 🙂
(ಪರೀಕ್ಷೆ ಹಿಂದಾಣ ದಿನ ಓದಿದ ಹಾಂಗೆ 🙂 )
ಪದ್ಯ ಲಾಯ್ಕಾಯ್ದಕ್ಕ. “ಗುಡುಗಿನ ಮೋರೆ ನೋಡಿ ಮೋಡ ಕೂಗುದು” ಒಳ್ಳೆಯ ಕಲ್ಪನೆ.
ಉತ್ತಮ ಕವನ.
ಶೈಲಜಕ್ಕಾ, ಮಳೆಗಾಲವ ಬಟ್ಟಿಯಿಳಿಸಿದ್ದು ಲಾಯ್ಕಾಯಿದು. ಅದರೊಟ್ಟಿಂಗೆ ಅಲ್ಲಲ್ಲಿ ದ್ವಿರುಕ್ತಿ ಪದಂಗಳ ಸೇರ್ಪಡೆಂದ ಕವನದ ಸೊಗಸು ಇನ್ನೂ ಹೆಚ್ಚಾತು. ಓದ್ತಾ ಇದ್ದಹಾಂಗೆ ಮಳೆಯೂ ಬಂತು- ಮಳೆಬಪ್ಪಾಗ ಹೊರುದ ಕಟುಕುಟು ತಿಂಬ ಕೊದಿ ಮಕ್ಕೊಗೆ ಮಾಂತ್ರ ಅಲ್ಲ ದೊಡ್ಡವಕ್ಕೆ ಇನ್ನೂ ಹೆಚ್ಚಕ್ಕು. ಪ್ರಕೃತಿಯ ಲೀಲೆಯ ಚೆಂದಕ್ಕೆ ಛಂದಲ್ಲಿ ಹೇಳಿದ ರೀತಿ ಇಷ್ಟ ಆತು. ಅಭಿನಂದನೆಗೊ.
ಲಾಯಿಕ ಆಯಿದು. ಪದ್ಯಕ್ಕೆ ಒಪ್ಪುವ ಸು೦ದರ ಪರಿಸರ– ಕಾಲ ದೇವನ ಲೀಲೆಲಿ ಸೃಸ್ಟಿಯ ನ೦ಬದ್ದೆ ಇಪ್ಪದಾರೂ ಹೇ೦ಗೆ ಶೈಲಕ್ಕಾ?
ಲಾಯ್ಕ ಇದ್ದು ಅಭಿನಂದನೆಗ
ಕವನ ಬರವಲೆ ನವಗರಡಿಯದ್ರೂ ಕವನ ಬಂದದರ ಓದಿ ಆಸ್ವಾದುಸಲೆ ಅರಡಿತ್ತಿದಾ. ನವಗೂ ಕವನ ಮೆಚ್ಚುಗೆ ಆಯ್ದು ಹೇಳಿತ್ತಿಲ್ಲಿಂದ.