Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಕೃಷ್ಣ ಜನ್ಮಾಷ್ಟಮಿಯ ದಿನ ಬೊ೦ಬಾಯಿಲಿ ಗೌಜಿಯೋ ಗೌಜಿ.ಪ್ರತಿ ಮಾರ್ಗಲ್ಲಿಯೂ ಮೊಸರು ಕುಡಿಕೆಯ ಸ೦ಭ್ರಮ. ಇದಾ,ಈ ಪಟಲ್ಲಿ ಕಾ೦ಬ ಹಾ೦ಗೆ.
ಈ ವಿಷಯದ ಮೇಲೆ ಒ೦ದು ಪದ್ಯ ಬರವ°,ಆಗದೋ?
ಚಿತ್ರಕೃಪೆ ಃ ಅ೦ತರ್ಜಾಲ
ಧನ್ಯವಾದಂಗೊ….
ಅತ್ತೆ, ಪಷ್ಟಾಯಿದು.
ನೇಲಿಸಿ ಮಡಗಿದ ಮಸರಿನ ಕುಡಿಕೆಯ
ಪಾಲಿಲಿ ಪಡವಲೆ ಯತ್ನವ ಮಾಡೊಗ
ಕಾಲೊನಿಲಿಪ್ಪವು ನಿಂದವು ಸುತ್ತಲು ಭಾರೀ ಹುರುಪಿಂದ ।
ಲೀಲಾಜಾಲದೆ ಮೇಗಂಗೇರುವ
ಕಾಲಿನಬಲದಾ ಮಾನವ ಕಂಬವ
ಕೀಲಿಸಿ ನೋಡುಗು ಬಾಯಿಯ ಬಿಟ್ಟೂ ಹೆದರಿಕೆಯಚ್ಚರಿಲಿ ॥
ಬಗ್ಗದ್ದೆ ಜಗ್ಗದ್ದೆ ಕುಗ್ಗದ್ದೆ ಹೆದರಿಕೆಲಿ
ನುಗ್ಗಿದರೆ ಧೈರ್ಯಲ್ಲಿ ಗುರಿತಲುಪುಲಕ್ಕು
ಒಗ್ಗಟ್ಟು ವಿಜಯಮಾಲೆಯ ತಪ್ಪಗಾ ಕುಶಿಲಿ
ಸಗ್ಗವೇ ಕಣ್ಮುಂದೆ ಕೊಣಿಗು ನೋಡಾ
ಮೂರು ಮಾಳಿಗೆಯೆತ್ತರಕ್ಕೆ ಕಟ್ಟಿದ ಕುಡಿಕೆ
ನೂರು ಕನಸುಗಳ ಪ್ರತೀಕ್ಷೆಲಿ ಯುವಕರು
ಜಾರಿ ಬೀಳದ್ದ ಹಾಂಗೆ ಮೇಗಂದ ನಿಂದೇ ಕಟ್ಟುತ್ತವು ಗೋಪುರವ
ಸೂರೆ ಮಾಡಿಯಪ್ಪಗ ಮಸರಿನ ಕುಡಿಕೆ ಕೈಲಿ
ಹಾರುತ್ತು ಹುರುಪೆಂಬ ಹಕ್ಕಿ ರೆಂಕೆಯ ಬಿಡುಸಿ
ಮೇರೆ ಮೀರಿ ಎತ್ತರಕೆ ಜೆನಂಗೊ ಬಾಯಿಬಾಯಿ ಬಿಟ್ಟೊಂಡಿದ್ದ ಹಾಂಗೆ
———–
ಉತ್ಸಾಹಿ ಜವ್ವನಿಗರೊಟ್ಟಿಂಗೆ ಸೇರಿ
ಆವುತ್ತು ಮನುಷ್ಯರ ಗೋಪುರ ತಯಾರಿ
ಮೇಗಾಣವ ಮಾಡುತ್ತ ಕುಡಿಕ್ಕೆಯ ಹೊಡಿ
ನೋಡುತ್ತವು ಜೆನಂಗೊ ಬೊಂಬಾಯಿ ಮಾಡಿ
ತುಂಬಾ ಲಾಯ್ಕಾಯ್ದು ಎರಡೂ ಪದ್ಯಗ.
“ಹಾರುತ್ತು ಹುರುಪೆಂಬ ಹಕ್ಕಿ ರೆಂಕೆಯ ಬಿಡುಸಿ” – ಇದಂತೂ ಅದ್ಭುತ ಕಲ್ಪನೆ. ಓದಿ ಕುಶಿಯಾತು.
ಅನೂ ಮೊನ್ನೆ ಮೊಸರು ಕುಡಿಕೆ ಒಡವದರ ಬಾಯಿ ಬಿಟ್ಟುಕೊಂಡು ನೋಡಿಕೊಂಡು ನಿಂದಿತ್ತಿದ್ದೆ. 🙂
ಕಟ್ಟೋಣದೆಡೆಲಿ
ಒಟ್ಟಾದ ಮನಸು
ಕಟ್ಟಿದ್ದು ಹೆಗಲ ಗೋಪುರವೊ
ಜಟ್ಟಿಪ್ಪ ಜನರು
ತಟ್ಟಿಕ್ಕಿ ಮಸರು
ಮುಟ್ಟಿಕ್ಕಲಿ ಬಾನೇರಿ ಗುರಿ ॥
ಚಿತ್ರಲ್ಲಿಪ್ಪ ಭಾವನೆಗಳ ಸಮರ್ಥವಾಗಿ ಹಿಡುದು, ಪದ್ಯಶರ ಬಿಟ್ಟಿದಿ.