- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಪತ್ರೊಡೆ ರೋಸ್ಟ್
ಬೇಕಪ್ಪ ಸಾಮಾನುಗೊ:
- 40-45 ತುಂಡು ಸುರುಳಿ ಪತ್ರೊಡೆ ಅಥವಾ ಪತ್ರೊಡೆ
- 2-3 ಹಸಿಮೆಣಸು
- 5-6 ಎಳೆ ಕೊತ್ತಂಬರಿ ಸೊಪ್ಪು
- ಚಿಟಿಕೆ ಇಂಗು
- 5-6 ಬೇನ್ಸೊಪ್ಪು
- 1 ಚಮ್ಚೆ ಎಳ್ಳು
- 1 ಚಮ್ಚೆ ಸಾಸಮೆ
- 1/2 ಚಮ್ಚೆ ಜೀರಿಗೆ
- 1-2 ಮುರುದ ಒಣಕ್ಕು ಮೆಣಸು
- 3-4 ಚಮ್ಚೆ ಎಣ್ಣೆ
ಮಾಡುವ ಕ್ರಮ:
ಪತ್ರೊಡೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ 1/2 ಇಂಚು ದಪ್ಪ, 1 ಇಂಚು ಉದ್ದಕೆ ಕೊರದು ಮಡುಗಿ. ಹಸಿಮೆಣಸಿನ ಉದ್ದಕೆ ಸಿಗುದು ಮಡುಗಿ. ಕೊತ್ತಂಬರಿ ಸೊಪ್ಪಿನ ಸಣ್ಣಕೆ ಕೊಚ್ಚಿ ಮಡುಗಿ.
ಕಾವಲಿಗೆ/ಪಾನ್ಲ್ಲಿ ಸಾಸಮೆ, ಜೀರಿಗೆ, ಎಳ್ಳು, ಒಣಕ್ಕು ಮೆಣಸು, ಎಣ್ಣೆ ಹಾಕಿ ಬೆಶಿ ಮಾಡಿ. ಒಗ್ಗರಣೆ ಹೊಟ್ಟುವಗ, ಇಂಗು, ಬೇನ್ಸೊಪ್ಪು, ಹಸಿಮೆಣಸು ಹಾಕಿ ರೆಜ್ಜ ಹೊತ್ತು ಬಾಡ್ಸಿ.
ಒಗ್ಗರಣೆಯ ಕಾವಲಿಗೆ ಮೇಲೆ ಲಾಯಿಕಲಿ ಹರಡಿ, ಕೊರದ ಪತ್ರೊಡೆಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಜೋಡ್ಸಿ.
ಪತ್ರೊಡೆಯ ಎಲ್ಲ ಹೊಡೆಯನ್ನೂ ಸಾಧಾರಣ 15 ನಿಮಿಷ ಸಣ್ಣ ಕಿಚ್ಚಿಲ್ಲಿ ರೋಸ್ಟ್ ಮಾಡಿ. ಇದಕ್ಕೆ ಕೊಚ್ಚಿದ ಕೊತ್ತಂಬರಿ ಸೊಪ್ಪು, ರೆಜ್ಜ ಸಕ್ಕರೆ, ಉಪ್ಪು ಮೇಲಂದ ಉದುರ್ಸಿ.
ಪುನಃ ಲಾಯಿಕಲಿ ತೊಳಸಿ, ಪತ್ರೊಡೆಯ ಎಲ್ಲ ಹೊಡೆಯನ್ನೂ ಸಾಧಾರಣ 15-20 ನಿಮಿಷ ಸಣ್ಣ ಕಿಚ್ಚಿಲ್ಲಿ ರೋಸ್ಟ್ ಮಾಡಿ. ಬೆಶಿ ಬೆಶಿ ತಿಂಬಲೆ ಕೊಡಿ.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ವೇಣಿಯಕ್ಕ ನಿಂಗ ಹೀಂಗೆ ಇಪ್ಪ ಪ್ರಯೋಗ ಮಾಡ್ವಾಗ ಎಂಗೊಗೆ ಒಂದು ಸುದ್ದಿ ಮೊದಲೇ ಹೇಳಿ ಎಂಗ ಬತ್ತೆಯ ರುಚಿ ನೊಡ್ಲೆ..ಆಗದಾ?